Author: UllalaVani

Kannada News From Coastal Karnataka

ತಲಪಾಡಿ : ತಲಪಾಡಿಯ ಶಾರದ ವಿದ್ಯಾನಿಕೇತನ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2024-25ನೇ ಸಾಲಿನ ಇಂಟರ್ಯಾಕ್ಟ್ ಸಂಘದ ಅಧ್ಯಕ್ಷನಾಗಿ ವಿದ್ಯಾರ್ಥಿ ಪ್ರತಿನಿಧಿ ಧರ್ಮಾದಿತ್ಯ ಆಯ್ಕೆಗೊಂಡಿದ್ದು, ಪದಗ್ರಹಣದ ಸವಿನೆನಪಿಗಾಗಿ ನೂತನ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ವಿಶೇಷ ಸಂದೇಶ ನೀಡಿದರು.ರೋಟರಿ ಕ್ಲಬ್‍ನ ಮಂಗಳೂರು ವಿಭಾಗದ ಅಧ್ಯಕ್ಷರಾದ ರೋ. ದೇವರಾಜ್ ಫೆರ್ನಾಂಡಿಸ್ ನೂತನ ಅಧ್ಯಕ್ಷರ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಕೆವಿನ್ ವಾಸ್, ರೊ. ಪಾರ್ವತಿ, ಶಾಲಾ ಪ್ರಾಂಶುಪಾಲ ಮೋಹನ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಇಂಟರಾಕ್ಟ್ ಸಂಘದ ಸಂಯೋಜಕಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಹರ್ಷಿತಾ ಶೆಟ್ಟಿ ವಂದಿಸಿದರು.

Read More

ಉಳ್ಳಾಲ: ಕುಂಪಲದ ಜನಪ್ರಿಯ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲು ಆಯೋಜನೆಯಾಗಿದ್ದ ಕಿರುತೆರೆ ಸ್ಟಾರ್ ಗಳ ಅದ್ದೂರಿ ಕಾರ್ಯಕ್ರಮ ಕೊನೆಗೂ ಶಿಫ್ಟ್ ಆಗಿದೆ. ಭಾರೀ ವಿವಾದದ ಬೆನ್ನಲ್ಲೇ ಕಾರ್ಯಕ್ರಮದ ವಿರುದ್ದ ಕೇಳಿ ಬಂದ ಅಪಸ್ವರದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನ ಕುಂಪಲ ಶಾಲಾ ಮೈದಾನದ ಬದಲಾಗಿ ಕುಂಪಲ ಅದಿಶಕ್ತಿ ದೇವಸ್ಥಾನದ ವಠಾರಕ್ಕೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ತೆರೆಮರೆಯಲ್ಲಿ ನಡೀತಿದ್ದ ಕುಂಪಲಾಷ್ಟಮಿ ಠಕ್ಕರ್ ಕಾರ್ಯಕ್ರಮಕ್ಕೆ ಒಂದು ಹಂತದ ಬ್ರೇಕ್ ಬಿದ್ದಿದೆ. ಕಾಂಗ್ರೆಸ್-ಬಿಜೆಪಿ ಹೆಸರಿನಲ್ಲಿ ಇಂದು ನಡೆಯಲಿರೋ ಕುಂಪಲಾಷ್ಟಮಿ ಸಂಭ್ರಮಕ್ಕೆ ಠಕ್ಕರ್ ಕೊಡಲು ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಹೆಸರಿನಲ್ಲಿ ಹುಲಿವೇಷ ಸ್ತಬ್ಧ ಚಿತ್ರದ ಊದು ಇಡುವ ಅದ್ದೂರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಕನ್ನಡದ ಪ್ರಖ್ಯಾತ ಸೀರಿಯಲ್ ಕಲಾವಿದರ ಆಕರ್ಷಣೆಯೊಂದಿಗೆ ಕುಂಪಲಾಷ್ಟಮಿ ಮೊಸರು ಕುಡಿಕೆ ಶೋಭಾಯಾತ್ರೆಯ ದಿನವಾದ ಇಂದು ಸಂಜೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ‌ಕುಂಪಲಾಷ್ಠಮಿಗೆ ಠಕ್ಕರ್ ಕೊಡಲೆಂದೇ ಕುಂಪಲ ಸರ್ಕಾರಿ ಶಾಲಾ ವಠಾರದಲ್ಲೇ ಕಾರ್ಯಕ್ರಮ ನಡೆಯಬೇಕಿತ್ತು. ಅದರಂತೆ ಕುಂಪಲ ಸೇರಿ ಹಲವೆಡೆ ಇದರ ಬ್ಯಾನರ್ ಗಳನ್ನ ಹಾಕಲಾಗಿತ್ತು. ಅದರೆ ಇದೀಗ…

Read More

ಉಳ್ಳಾಲ: ಹಬ್ಬಗಳು ಜನರ ಮನಸ್ಸನ್ನ ಕಟ್ಟಬೇಕು, ಭಾವನೆಗಳನ್ನ ಬೆಸೆಯಬೇಕು ಅಂತಾರೆ. ವರ್ಷಕ್ಕೊಮ್ಮೆಯಾದ್ರೂ ಜನರನ್ನ ಒಟ್ಟು ಸೇರಿಸಿ ಸಂಭ್ರಮ ಪಡೋಕ್ಕಾದ್ರೂ ಹಬ್ಬಗಳು ಆಚರಣೆಯಲ್ಲಿರಬೇಕು. ಆಗ ಮಾತ್ರ ಒಂದು ಗ್ರಾಮ ಒಟ್ಟಾಗಿ ಸಂಭ್ರಮಿಸಿ ಉತ್ಸವಗಳ ಆಚರಣೆಯ ಜೊತೆಜೊತೆಗೆ ಮನಸ್ಸುಗಳು ಬೆಸೆಯಲು ಸಾಧ್ಯ. ಈ ಕಾರಣಕ್ಕಾಗಿಯೇ ಶ್ರೀಕೃಷ್ಣ ಜನ್ಮಾಷ್ಟಮಿ ನೆಪದಲ್ಲಿ ನಡೆಯೋ ಮೊಸರು ಕುಡಿಕೆ ಉತ್ಸವಗಳು ಆಯಾ ಗ್ರಾಮಗಳ ಜನರ ಸಂಭ್ರಮದ ಕೇಂದ್ರಬಿಂದುವಾಗಿ ನಿಂತಿದೆ. ಆದರೆ ಇಂಥ ಸಂಭ್ರಮಗಳ ಮಧ್ಯೆ ಕೆಲವೊಮ್ಮೆ ಸಣ್ಣಗೆ ತೂರಿಕೊಳ್ಳುವ ರಾಜಕೀಯ ಎಂಬ ತೆಳುರೇಖೆಗಳು ಸದ್ದಿಲ್ಲದೇ ಆ ಭಾಗದ ರಾಜಕೀಯ ವೈಮನಸ್ಸುಗಳತ್ತ ಬೆಳಕು ಚೆಲ್ಲುತ್ತವೇ. ಅಸಲಿಗೆ ಇಷ್ಟೆಲ್ಲಾ ಹೇಳೋಕೆ ಕಾರಣವಾಗಿದ್ದು ಉಳ್ಳಾಲದ ಜನಪ್ರಿಯ ಕುಂಪಲಾಷ್ಟಮಿ ಸಡಗರದ ಮಧ್ಯೆ ಭಾರೀ ಚರ್ಚೆ ಹುಟ್ಟು ಹಾಕಿರೋ ಠಕ್ಕರ್ ಪಾಲಿಟಿಕ್ಸ್. ಅಷ್ಟಕ್ಕೂ ಕುಂಪಲಾಷ್ಟಮಿ ಮಧ್ಯೆ ಇದೆಂಥಾ ಠಕ್ಕರ್ ಪಾಲಿಟಿಕ್ಸ್ ಅನ್ನೋ ಚರ್ಚೆಗೆ ವೇದಿಕೆ ಒದಗಿಸಿದ್ದು ಕುಂಪಲದ ಮುಖ್ಯ ರಸ್ತೆಗಳಲ್ಲಿ ರಾರಾಜಿಸ್ತಿರೋ ಬ್ಯಾನರ್ ಗಳು…! ಗ್ರಾಮದ ಹಬ್ಬದಲ್ಲಿ ಇದೆಂಥಾ ವಿಭಜನೆ? ಸೋಮವಾರ ಕುಂಪಲಾಷ್ಟಮಿ ಸಂಭ್ರಮ. ಪ್ರತೀ ವರ್ಷದಂತೆ…

Read More

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನಡೆಯಿತು. ಉಳ್ಳಾಲ : ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭತ್ತ ಕೃಷಿ ಕ್ಷೀಣಿಸುತ್ತಿರುವ ಸಂದರ್ಭ ಕೋಟೆಕಾರು ಬ್ಯಾಂಕ್ ರೈತರನ್ನು ಪ್ರೋತ್ಸಾಹಿಸುವ ಕಾರ್ಯದೊಂದಿಗೆ, ಶೈಕ್ಷಣಿಕ ಸಾಧನೆಗೆ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ದ ಮೂಲಕ ಹುರಿದುಂಬಿಸುವ ಕಾರ್ಯ ಶ್ಲಾಘನೀಯ ಎಂದು ದೇಯಿ ಬೈದದಿ ಕೋಟಿ ಚೆನ್ನಯ್ಯರ ಮೂಲಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ಮೊಕ್ತೇಸರರಾದ ಚಂದ್ರಶೇಖರ್ ಉಚ್ಚಿಲ್ ಹೇಳಿದರು.ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕೋಟೆಕಾರು ಬೀರಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರಗಿದ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲೆಯಲ್ಲಿ ರಾಷ್ತ್ರೀಕೃತ ಬ್ಯಾಂಕುಗಳ ಉದಯಿಸುವ ಮೊದಲು ಕೃಷಿ ಮತ್ತು ವ್ಯವಹಾರಗಳಿಗೆ ನೆರವಾಗುವ ಉದ್ದೇಶದಿಂದ ಸಹಕಾರಿ ಸಂಘಗಳ ಸ್ಥಾಪನೆಯಾಗಿದೆ. ಸುಬ್ಬಣ್ಣಾಯ ಅವರು ಧರ್ಮಾರ್ಥವಾಗಿ ಸ್ಥಳದಾನಗೈದು ಕೋಟೆಕಾರು ಬ್ಯಾಂಕ್ ಸ್ಥಾಪಿಸಿದ ಫಲವಾಗಿ ಇಂದು ಸಾಮಾಜಿಕವಾಗಿ ಸಹಕರಿಸುತ್ತಾ ಬ್ಯಾಂಕ್ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಅವರ ತ್ಯಾಗವನ್ನು ಸ್ಮರಿಸಿ ಬ್ಯಾಂಕ್ ಸಾಮಾಜಿಕ ಕಾರ್ಯಗಳಲ್ಲಿ…

Read More

ತೊಕ್ಕೊಟ್ಟು: ಇಲ್ಲಿನ ಒಳಪೇಟೆಯ ಅಲೇಕಳ ರಸ್ತೆಯಲ್ಲಿ ೨,೮೦೦ ಚದರ ಅಡಿಯ ಖಾಲಿ ಕಟ್ಟಡ ಬಾಡಿಗೆಗೆ ಲಭ್ಯವಿದ್ದು, ಟ್ಯೂಷನ್, ಕೋಚಿಂಗ್, ನೃತ್ಯ ತರಬೇತಿ, ಕರಾಟೆ ಹೀಗೆ ಯಾವುದೇ ತರಬೇತಿಗಳನ್ನು ನಡೆಸಿಕೊಳ್ಳಲು ಯೋಗ್ಯವಾಗಿದೆ.ತೊಕ್ಕೊಟ್ಟು ಒಳಪೇಟೆಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸಮೀಪದಲ್ಲೇ ಕಟ್ಟಡ ಕರ‍್ಯಾಚರಿಸುತ್ತಿದ್ದು, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಆಸಕ್ತರು ತಕ್ಷಣವೇ 9008522305 ಅನ್ನು ಸಂಪರ್ಕಿಸಬಹುದಾಗಿದೆ.

Read More

ತೊಕ್ಕೊಟ್ಟು : ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಜರಗಿದ ಹೋಬಳಿ ಮಟ್ಟದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಉಚ್ಚಿಲಗುಡ್ಡೆ ಪಿ.ಎಂ.ಶ್ರೀ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಬ್ಬಡ್ಡಿ ಮತ್ತು ಥ್ರೋಬಾಲ್ ಪಂದ್ಯಾಟದಲ್ಲಿ ಅದೇ ಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

Read More

ಉಳ್ಳಾಲ: ಆಳಸಮುದ್ರ ಮೀನುಗಾರಿಕೆಗೆ ತೆರಳಿರುವ ಮೀನುಗಾರಿಕಾ ಬೋಟ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಸಮುದ್ರ ಮಧ್ಯಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ದೋಣಿಯೊಳಗೆ ಹಲವು ಮೀನುಗಾರರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಕೇರಳ ಭಾಗದಿಂದ ಮೀನುಗಾರಿಕೆಗೆ ತೆರಳಿರುವ ಬೋಟ್‌ ನಲ್ಲಿ ಅವಘಢ ಸಂಭವಿಸಿರುವುದಾಗಿ ತಿಳಿದುಬವಂದಿದ್ದು, ಜೀವರಕ್ಷಕ ಸಂಘದ ಸದಸ್ಯರು ಪೊಲೀಸ್‌ ಇಲಾಖೆ, ಜಿಲ್ಲಾಡಳಿತ, ಬಂದರು ಇಲಾಖೆಯ ಗಮನಕ್ಕೆ ತಂದಿದ್ದಾರೆ.ಉಳ್ಳಾಲವಾಣಿಯೂ ಜಿಲ್ಲಾಧಿಕಾರಿಗಳ ಕೇಂದ್ರ ಕಚೇರಿ ಕಂಟ್ರೋಲ್‌ ರೂಮಿಗೆ ಮಾಹಿತಿಯನ್ನು ನೀಡಿದ್ದು, ರಕ್ಷಣಾ ಕಾರ್ಯ ಶೀಘ್ರವೇ ಕೈಗೊಳ್ಳುವ ಮಾಹಿತಿಯನ್ನು ಪತ್ರಿಕಾ ಕಚೇರಿಗೆ ನೀಡಿದೆ.

Read More

ಮಂಗಳೂರು: ಒಲಿಂಪಿಕ್ ಕ್ರೀಡೆಯಲ್ಲಿ ಮೂರು ಬಾರಿ ದೇಶವನ್ನು ಪ್ರತಿನಿಧಿಸಿರುವ ಹೆಮ್ಮೆಯ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರಿಗೆ ಗೌರವ ಸಮ್ಮಾನ ಕಾರ್ಯಕ್ರಮ ಶನಿವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ರೇಷ್ಮಾ ಉಳ್ಳಾಲ್ ಅವರು, “ಒಲಿಂಪಿಕ್ ನಲ್ಲಿ ಪಾಲ್ಗೊಳ್ಳುವುದೇ ಒಂದು ದೊಡ್ಡ ಸಾಧನೆ. ಈ ಬಾರಿ ಪದಕ ವಿಜೇತರಷ್ಟೇ ಕುಸ್ತಿಪಟು ವಿನೇಶ್ ಪೊಗಟ್ ಅವರ ಸಾಧನೆಯೂ ಗಮನಾರ್ಹವಾದುದು. ಎಂ.ಆರ್. ಪೂವಮ್ಮ ಅವರ ಕ್ರೀಡಾ ಜೀವನದ ಕುರಿತು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಎಳವೆಯಲ್ಲೇ ಕ್ರೀಡಾಸ್ಫೂರ್ತಿಯನ್ನು ಹೊಂದಿರಬೇಕು“ ಎಂದರು. ಬಳಿಕ ಮಾತಾಡಿದ ಎಂ.ಆರ್. ಪೂವಮ್ಮ ಅವರು, “ನಾನು ಆರನೇ ಕ್ಲಾಸ್ ನಲ್ಲಿದ್ದಾಗಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಎಲ್ಲ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ನನ್ನ ತಂದೆ ಬಜ್ಪೆ ಏರ್ ಪೋರ್ಟ್ ನಲ್ಲಿ ಉದ್ಯೋಗದಲ್ಲಿದ್ದ ಕಾರಣ ನನಗೆ ಅಲ್ಲಿ ಗ್ರೌಂಡ್ ಸಾಕಾಗುತ್ತಿರಲಿಲ್ಲ. ಹೀಗಾಗಿ ನನ್ನ ತಂದೆ ಮನೆಯನ್ನು ಮಂಗಳೂರಿಗೆ ಶಿಫ್ಟ್ ಮಾಡಿದ್ರು. ನಾನು ಏನೇ ಸಾಧನೆ ಮಾಡಿದ್ರು ಅದರಲ್ಲಿ ನನ್ನ ಮನೆಯವರ…

Read More

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದಿಂದ ನಡೆಯುವ 18 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಂಟ್ಸ್ಹಾಸ್ಟೇಲ್ ನ ಗೀತಾ ಎಸ್ ಎಂ ಶೆಟ್ಟಿ ಸಭಾಭವನದಲ್ಲಿ ಜರಗಿತು.ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಸೆ.7ರಿಂದ 9ರ ವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, 20 ವರ್ಷಗಳ ಹಿಂದೆ ಆರಂಭಗೊಂಡ ಇಲ್ಲಿನ ಗಣೇಶೋತ್ಸವ ದೇವರ ಆಶೀರ್ವಾದ, ಹಾಗೂ ನೂರಾರು ಕಾರ್ಯಕರ್ತರ ಸಹಕಾರದಿಂದ ಜಿಲ್ಲೆಯ ಮಾದರಿ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿಯ ಗಣೇಶೋತ್ಸವವೂ ಎಂದಿನಂತೆ ಶೃದ್ದಾ -ಭಕ್ತಿಯಿಂದ ಜರಗಲಿದ್ದು ಯಶಸ್ವಿಯಾಗಿ ನಡೆಯಲು ಸರ್ವರ ಸಹಕಾರ ಯಾಚಿಸಿದರು. ಶ್ರೀ ಸಿದ್ದಿ ವಿನಾಯಕ ಪ್ರತಿಷ್ಟಾನದ ಟ್ರಸ್ಟಿ ಡಾ.ಆಶಾಜ್ಯೋತಿ ರೈ ಅವರು 3 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು. …

Read More

ಮಂಗಳೂರು: “ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ ಮಂಗಳೂರು ವಿಶ್ವ ವಿದ್ಯಾನಿಲಯದ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾನಿಲಯದ ಕಡೆಯಿಂದ ದೊರಕಬೇಕಾದ ಭೌತಿಕ ಅಂಕಗಳನ್ನುಹೊಂದಿದ ಅಂಕಪಟ್ಟಿ ದೊರೆಯುತ್ತಿರಲಿಲ್ಲ. ಪ್ರಸ್ತುತ ಅಂಕಪಟ್ಟಿ ಗಳನ್ನು ಸರಕಾರದ ಹಲವಾರು ದಾಖಲೆಗಳನ್ನುಹೊಂದಿರುವ, ಪಡೆದುಕೊಳ್ಳಲುಬಳಸುವ ಡಿಜಿಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾನಿಲಯಸೂಚಿಸುತ್ತಿತ್ತು. ಆದರೆ ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಸಂಕ್ಷಿಪ್ತ ಅಂಕಗಳು, ಭಾವಚಿತ್ರ ಸಂಬಂದಪಟ್ಟ ಅಧಿಕಾರಿಗಳ ಹಸ್ತಾಕ್ಷರ, ಪಠ್ಯ ವಿಷಯಗಳು ಮತ್ತು ಪ್ರೊಜೆಕ್ಟ್ ವಿಷಯಗಳು, ಮತ್ತು ಉತ್ತೀರ್ಣ-ಅನುತ್ತೀರ್ಣತೆಯ ಮಾನದಂಡಗಳನ್ನು ಹೊಂದಿಲ್ಲದೇ, ಡಿಜಿಟಲ್ ಅಂಕಪಟ್ಟಿಗಳುಕೇವಲ ಆನ್ ಲೈನ್ ವ್ಯವಹಾರಗಳಿಗೆ ಸೀಮಿತವಾಗಿದೆ ಎಂಬ ಸೂಚನೆಯನ್ನೂಹೊಂದಿದೆ.ಇಂತಹ ಹತ್ತು ಹಲವು ದೋಷಗಳನ್ನು ಒಳಗೊಂಡ ಡಿಜಿಟಲ್ಅಂಕಪಟ್ಟಿ ಗಳನ್ನು ಯಾವುದೇ ಕಂಪನಿಗಳು ಉದ್ಯೋಗಕ್ಕೆ ಸಂಬಂಧಿಸಿದ ಪರಿಶೀಲನೆ ವೇಳೆ ಮಾನ್ಯ ಮಾಡುತ್ತಿಲ್ಲ,ವಿಶೇಷವಾಗಿ ಹೊರದೇಶಗಳಲ್ಲಿ ಕೆಲಸಕ್ಕಅರ್ಜಿ ಸಲ್ಲಿಸಲು ಭೌತಿಕ ಅಂಕಪಟ್ಟಿ ಹಾಜರುಪಡಿಸುವುದು ಕಡ್ಡಾಯವಾಗಿದ್ದು ಈ ವೇಳೆ ವಿದ್ಯಾರ್ಥಿಗಳಿಗೆ ಬಹಳಷ್ಟುತೊಂದರೆಯಾಗುತ್ತಿತ್ತು. ಈ ಬಗ್ಗೆ ಸಭಾಧ್ಯಕ್ಷ ಯು ಟಿ ಖಾದರ್ ರವರ ಬಳಿ ಇಲಾಖೆಯ ಉನ್ನತ ಮಟ್ಟದ…

Read More