ಕೋಟೆಕಾರು: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ ಬೀರಿ ಇದರ 53ನೇ ವರ್ಷದ ಸಾರ್ವಜನಿಕ ಬೀರಿ ಗಣೇಶೋತ್ಸವವು ಸ.7ರಿಂದ 9ರ ತನಕ ಶ್ರೀ ಗಣೇಶ ಭಜನಾ ಮಂದಿರ ಆವರಣದಲ್ಲಿ ವಿವಿಧ ವೈದಿಕ , ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಸ.7ರಂದು ಬೆಳಿಗ್ಗೆ 6.30ಕ್ಕೆ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ರೀತಿಯ ಭಕ್ತಿ ಗೀತೆ ಸ್ಪರ್ಧೆ, ಭಾಷಣ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಏಕಾಪಾತ್ರಾಭಿನಯ ಸ್ಪರ್ಧೆ, ಚೀಟಿ ಎತ್ತಿ ಅಭಿನಯ ಸ್ಪರ್ಧೆ ನಡೆಯಲಿದೆ.ಸಂಜೆ 6ರಿಂದ ನಡೆಯಲಿರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದ.ಕ ಮಾಜಿ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಬಾಲಂಭಟ್ ಮನೆತನದ ಡಾ. ಸತ್ಯಕೃಷ್ಣ ಭಟ್ ನಡೆಸಲಿದ್ದಾರೆ.ಸ.8ರಂದು ಮಧ್ಯಾಹ್ನ 2.30ರಿಂದ ದಿ.ಜಲಂಧರ್ ರೈ ಸ್ಮರಣಾರ್ಥ ಶ್ರೀ ಕೃಷ್ಣ ಸಂಧಾನ ಪ್ರಸಂಗದ ಯಕ್ಷಗಾನ ತಾಳ ಮದ್ದಳೆ…
Author: UllalaVani
ಪಾವೂರು: ಕುಸಿದುಬಿದ್ದ ಮಹಿಳೆಯನ್ನು ಬಸ್ಸಿನಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ ಖಾಸಗಿ ಬಸ್ ಚಾಲಕ ಸವಾದ್ ಹರೇಕಳ ನಿವಾಸಿಯಾಗಿದ್ದು, ಇವರ ಮಾನವೀಯತೆಯ ಕಾರ್ಯಕ್ಕೆ ಹರೇಕಳ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮರ್ಸಿ ಬಸ್ ನಿರ್ವಾಹಕ ಯಾಕೂಬ್ , ಮಹಿಳೆ ಕುಸಿದುಬಿದ್ದಿರುವುದನ್ನು ಗಮನಿಸಿ ಚಾಲಕ ಸವಾದ್ ಬಳಿ ಹೇಳಿದ್ದಾರೆ. ತಕ್ಷಣವೇ ಮುಡಿಪುವಿನಿಂದ ನೇರವಾಗಿ ನಾಟೆಕಲ್ ಕಣಚೂರು ಆಸ್ಪತ್ರೆಯತ್ತ ಬಸ್ಸನ್ನು ಕೊಂಡೊಯ್ದ ಚಾಲಕ ಸವಾದ್ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಸಿಬ್ಬಂದಿ ಇಬ್ಬರ ಮಾನವೀಯತೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಹರೇಕಳ ನಿವಾಸಿ ಸವಾದ್ ಅವರಿಗೆ ಹರೇಕಳ ನಿವಾಸಿಗಳು ಸೇರಿದಂತೆ ಹರೇಕಳ ಗ್ರಾ.ಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಸ್ಮಾನ್ ಅಲ್ತಾಫ್ ತೊಕ್ಕೊಟ್ಟು : ಖಾಸಗಿ ಬಸ್‌ನ ನೌಕರರನ್ನು ಗುರಿಯಾಗಿಸಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ ತಮ್ಮ ಮಾನವೀಯತೆಯನ್ನು ಎತ್ತಿ ತೋರಿಸುವಲ್ಲಿ ಮರ್ಸಿ ಬಸ್ ಚಾಲಕ ಮತ್ತು ನಿರ್ವಾಹಕ ಯಶಸ್ವಿ ಯಾಗಿದ್ದಾರೆ ಎಂದು ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ ಪೂರ್ವ ವಲಯ ಮಂಗಳೂರು ಇದರ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ತಿಳಿಸಿದ್ದಾರೆ.ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಸದಸ್ಯರಾದ ಮೆರ್ಸಿ ಬಸ್ಸಿನ ಚಾಲಕರು ಆಗಿರುವ ಸವಾದ್ ಮತ್ತು ನಿರ್ವಾಹಕರಾದ ಯಾಕೂಬ್ ರವರು ಸೆ. 2 ರಂದು ಮಧ್ಯಾಹ್ನ 2:15 ರ ಹೊತ್ತಿಗೆ ವಿಟ್ಲ ಕಡೆಯಿಂದ ಮಂಗಳೂರು ಕಡೆ ಸಂಚರಿಸುತ್ತಿರುವಾಗ ಬಸ್ ನಲ್ಲಿದ್ದ ಪ್ರಯಾಣಿಕೆ ಅಸ್ವಸ್ಥಗೊಂಡು ಬಸ್ಸಿನ ಸೀಟಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಅವರು ತಕ್ಷಣ ಬಸ್ಸನ್ನು ಕಣಚೂರು ಆಸ್ಪತ್ರೆಯ ಒಳಗೆ ಪ್ರವೇಶಿಸಿ ಪ್ರಯಾಣಿಕೆ ಮಹಿಳೆಗೆ ಚಿಕಿತ್ಸೆ ನೀಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಈ ನಿಟ್ಟಿನಲ್ಲಿ ರಾಣಿ ಅಬ್ಬಕ್ಕ ಬಸ್ ನೌಕರರ ಪರವಾಗಿ ಚಾಲಕ ಸವಾದ್ ಮತ್ತು ನಿರ್ವಾಹಕ ಯಾಕೂಬ್…
ಉಳ್ಳಾಲ: ಬಸ್ಸಿನಲ್ಲಿ ಕುಸಿದುಬಿದ್ದ ಮಹಿಳೆಯನ್ನು ಬಸ್ ಸಿಬ್ಬಂದಿ ನಾಟೆಕಲ್ ಕಣಚೂರು ಆಸ್ಪತ್ರೆಗೆ ಬಸ್ಸಿನಲ್ಲಿಯೇ ಕರೆತಂದು ಮಗದೊಮ್ಮೆ ಮಾನವೀಯತೆ ಮರೆದಿರುವ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಸೆ.೨ ರಂದು ನಡೆದಿದೆ.ವಿಟ್ಲ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಮರ್ಸಿ ಟ್ರಾವೆಲ್ಸ್ ಬಸ್ಸಿನಲ್ಲಿ ಮುಡಿಪು ಟಿಕೆಟ್ ಪಡೆದುಕೊಂಡಿದ್ದ ಮಹಿಳೆ ಮುಡಿಪು ತಲುಪಿದರೂ ಇಳಿಯುವುದು ಕಾಣಲಿಲ್ಲ. ಇದರಿಂದ ನಿರ್ವಾಹಕ ಯಾಕೂಬ್ ಎಂಬವರು ಮಹಿಳೆ ಸಮೀಪ ತೆರಳಿದಾಗ ಸಹಪ್ರಯಾಣಿಕರೊಬ್ಬರು, ಆಕೆ ಅಸ್ವಸ್ಥಳಾಗಿ ಕುಸಿದುಬಿದ್ದರೆಂದು ತಿಳಿಸಿದ್ದಾರೆ. ತಕ್ಷಣ ಕರ‍್ಯಪ್ರವೃತ್ತರಾದ ಚಾಲಕ ಸವಾದ್ , ನಿರ್ವಾಹಕ ಯಾಕೂಬ್ ೧೦ ಕಿ.ಮೀ ಉದ್ದಕ್ಕೆ ಬಸ್ಸನ್ನು ತಂದು ನಾಟೆಕಲ್ ಕಣಚೂರು ಆಸ್ಪತ್ರೆಯೊಳಕ್ಕೆ ಕೊಂಡೊಯ್ದು ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ. ಘಟನೆ ಕುರಿತ ವೀಡಿಯೋ ಕಣಚೂರು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿರುವುದಾಗಿ ಬಸ್ ಸಿಬ್ಬಂದಿ ತಿಳಿಸಿದ್ದಾರೆ.ಮಂಗಳೂರು ನಗರದಲ್ಲಿ ಇದೇ ಮಾದರಿಯಲ್ಲಿ ಎರಡು ಘಟನೆಗಳು ಮಾನವೀಯತೆಗೆ ಸಾಕ್ಷಿಯಾಗಿದ್ದರೆ, ಉಡುಪಿಯಲ್ಲೂ ವಾರದ ಹಿಂದೆ ಇಂತಹದ್ದೇ ಘಟನೆ ನಡೆದಿದ್ದು, ಇದೀಗ ಮುಡಿಪು ಭಾಗದಲ್ಲಿ ಖಾಸಗಿ ಬಸ್…
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಕಠಿಣಕ್ರಮ ಜರುಗಿಸುವ ಕುರಿತು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಬಾಹಿರಚಟುವಟಿಕೆಗಳು ನಡೆಯುತ್ತಿದ್ದು ಡ್ರಗ್ಸ್ ಮಾಫಿಯಾದ ಹಾವಳಿಯೂ ಹೆಚ್ಚಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಇದರ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ,ಡಕಾಯತಿ ಇತ್ಯಾದಿ ಗಂಭೀರ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವಿವಿಧ ಮಾದ್ಯಮಗಳಲ್ಲಿವರದಿಯಾಗುತ್ತಿದೆ. ಹೀಗಾಗಿ ರಾಜ್ಯ ಗೃಹ ಇಲಾಖೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.ಕರಾವಳಿ ಭಾಗದಲ್ಲಿ ಮಾದಕ ವ್ಯಸನದಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಆಕ್ರಮ ಚಟುಚಟಿಕೆಗಳಾದ ಇಸ್ಪೀಟು, ಮಟ್ಕಾ ಇತ್ಯಾದಿಗಳ ಹಾವಳಿ ಹೆಚ್ಚಾಗಿರುತ್ತದೆ. ಆದ್ದರಿಂದ ಕರಾವಳಿ ಭಾಗದಲ್ಲಿ ಮಾದಕ ವ್ಯಸನ ಸಹಿತ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳನ್ನು, ಅಪರಾಧ ಪ್ರಕರಣಗಳನ್ನು…
ಮಂಗಳೂರು: ಹೆಣ್ಣು ಮಗು ಇಲ್ಲವೆಂದು ಎರಡೂವರೆ ವರ್ಷದ ಹೆಣ್ಣು ಮಗು ವನ್ನು ಅಪಹರಣ ಮಾಡಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೇರಳದ ಎರ್ನಾಕುಲಂ ಜಿಲ್ಲೆಯ ಅನೀಶ್ ಕುಮಾರ್ (49) ಬಂಧಿತನಾಗಿದ್ದು ಈತ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ. ದಿನಗಳ ಹಿಂದೆ ಎರಡೂವರೆ ವರ್ಷದ ಹೆಣ್ಣು ಮಗು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರಿಂದ ಹುಡುಕಾಟ ಶುರುವಾಗಿತ್ತು. ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವೃದ್ಧನೋರ್ವ ಮಗುವೊಂದನ್ನು ಕರೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು.ನಂತರ ರೈಲ್ವೇ ಸ್ಟೇಷನ್ ಸಿಸಿಟಿವಿ ಪ್ರಕಾರ ಕೇರಳ ಕಡೆಗೆ ರೈಲಿನ ಹೋದ ಮಾಹಿತಿ ಕಲೆಹಾಕಿದ ಪೊಲೀಸರು ಕೊನೆಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಮಗುವಿನೊಂದಿಗೆ ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 24 ಗಂಟೆಯೊಳಗೆ ಪ್ರಕರಣ ಭೇದಿಸಿ ಪಿ.ಎಸ್.ಐ.ಶಿವಕುಮಾರ್ ಮತ್ತು ಸಿಬ್ಬಂದಿ ರೈಲ್ವೆ ಪೊಲೀಸರಿಂದ ಅರೋಪಿ ವಶಕ್ಕೆ ಪಡೆದು ಹೆತ್ತವರಿಗೆ ಮಗುವನ್ನು ಒಪ್ಪಿಸಲಾಗಿದೆ. ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಮಗುವನ್ನು ನೋಡಿ ಅಪಹರಣ ಮಾಡಿದ್ದು ತನಗೂ…
ಮಂಜಿನಾಡಿ: ಎಲ್ಲಾ ಸಂಪತ್ತು ಗಿಂತಲೂ ಶಿಕ್ಷಣವೇ ಅತೀ ದೊಡ್ಡ ಸಂಪತ್ತು, ಶಿಕ್ಷಣವನ್ನು ಪಡೆದಷ್ಟು ನಾವು ಬಲಿಷ್ಠ ರಾಗುತ್ತೇವೆ.ನಾವು ಪಡೆದ ಶಿಕ್ಷಣವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ.ಹಾಗಾಗಿ ವಿದ್ಯಾರ್ಥಿಗಳ ಭಾವೀ ಭವಿಷ್ಯಕ್ಕೆ ಶಿಕ್ಷಣವೇ ಪ್ರಧಾನವಾಗಿರುತ್ತದೆ. ಮಕ್ಕಳು ಕಡ್ಡಾಯವಾಗಿ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ಉತ್ತಮ ಪ್ರಜೆಯಾಗಿ ಮೂಡಿಬರಬೇಕು ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ಬ್ರೈನ್ ಪಿಂಟೋ ಅಭಿಪ್ರಾಯ ಪಟ್ಟರು. ಇವರು ಸರಕಾರಿ ಹಿರಿಯ ಪ್ರಾಥಮಿಕ ಊರುಮಣೆ ಮಂಜಿನಾಡಿ ಇಲ್ಲಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್ಸ್ ಪುಸ್ತಕ ವಿತರಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಕಾರ್ಯದರ್ಶಿ ರಾಜೇಶ್ ಸೀತಾರಾಮ್, ಪದಾಧಿಕಾರಿಗಳಾದ ಸಂತೋಷ್ ಶೇಟ್ , ಸಾಯಿ ರಾವ್ , ರಾಜಗೋಪಾಲ್ ರೈ, ರಾಜೇಶ್ ಶೆಟ್ಟಿ, ಡಾ. ದೇವದಾಸ್ ರೈ, ಜಗನ್ನಾಥ ಶೆಟ್ಟಿ ಮತ್ತು ಎಸ್.ಡಿ.ಎ.ಸಿ. ಸದಸ್ಯರು ಮತ್ತು ಶಾಲಾ ಸಹಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ಲೋಕಪ್ಪ ಬಿದರಗಡ್ಡಿ ನಿರೂಪಿಸಿದರು. ವನಜಾಕ್ಷಿ ಸಿ. ಎಸ್ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಗೀತಾ ಪಿ ವಂದಿಸಿದರು.
ಮಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಬಿಜೆಪಿ ಮುಖಂಡ ಅರುಣ್ ಪುತ್ತಿಲ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. 2023 ರ ಜೂನ್ ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ ನಲ್ಲಿ 47 ವರ್ಷದ ಮಹಿಳೆಯಿಂದ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನಲೆ ಎಫ್ ಐಆರ್ ದಾಖಲಿಸಲಾಗಿದೆ. ದೌರ್ಜನ್ಯದ ಫೋಟೊ, ಸೆಲ್ಫಿ, ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಲಾಗಿದೆ.ಪುತ್ತೂರು ವಿಧಾನಸಭಾ ಚುನಾವಣೆಗೆ ಹಿಂದುತ್ವದ ಹೆಸರಿನಲ್ಲಿ ಪುತ್ತಿಲ ಬಂಡಾಯ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ಠಕ್ಕರ್ ಕೊಟ್ಟು ಬಂಡಾಯ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು.ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಗ ಫಿದಾ ಆಗಿರುವ ಬಗ್ಗೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಇದೀಗ ಮಹಿಳೆ ದೂರಿನಡಿ ಪುತ್ತಿಲ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಪುತ್ತಿಲ ಮತ್ತು ಮಹಿಳೆಯೊಬ್ಬರ ಆಡಿಯೋ ಕೂಡ ಆಗಿತ್ತು. ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ IPC 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಪಲ: ಧಾರ್ಮಿಕತೆಯ ಅಡಿಪಾಯದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಶಕ್ತಿಯುತ ಕಾರ್ಯವನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಮಾಡಿದೆ, ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಯಶಸ್ಸು ಖಂಡಿತ ಸಾಧ್ಯ ಅದಕ್ಕೆ ಮಂದಿರವನ್ನು ಸ್ಥಾಪಿಸಿದ ಸತೀಶ್ ಕುಂಪಲರೇ ಇಲ್ಲಿ ಉದಾಹರಣೆ. ಶ್ರೀಕೃಷ್ಣ ನ ಸಾರ್ವಕಾಲಿಕ ಸಂದೇಶಗಳು ಹಿಂದೂ ಸಮಾಜಕ್ಕೆ ಶ್ರೀರಕ್ಷೆಯಾಗಲಿ ಎಂದು ದ.ಕ ಜಿಲ್ಲಾ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು. ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆದ ವಿಜೃಂಭಣೆಯ ಕುಂಪಲಾಷ್ಟಮಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರಬದಲ್ಲಿ ಮಂದಿರದ ಪರವಾಗಿ ಸಂಸದರನ್ನು ಸನ್ಮಾನಿಸಲಾಯಿತು. ಕುಂಪಲ ಎಂಬ ಗ್ರಾಮೀಣ ಪ್ರದೇಶವು ಇಂದು ಜಿಲ್ಲೆಯಾದ್ಯಂತ ಪ್ರಸಿದ್ದಿಗೆ ಬರಲು ಕುಂಪಲ ಶ್ರೀ ಬಾಲಕೃಷ್ಣ ಮಂದಿರವೇ ಪ್ರೇರಣೆ, ಕುಂಪಲಾಷ್ಟಮಿ ನಾಡಹಬ್ಬದ ಮೂಲಕ ಊರಿನ 30 ಕ್ಕೂ ಅಧಿಕ ಸಂಘ ಸಂಸ್ಥೆಗಳು ಒಟ್ಟಾಗಿ ಊರಿನ ಉತ್ಸವದ ಯಶಸ್ಸಿನಲ್ಲಿ 27 ವರ್ಷಗಳಿಂದ ಕೈಜೋಡಿಸಿದೆ ಈ ಮೂಲಕ ಹಿಂದೂ ಸಮಾಜ ಒಗ್ಗಟ್ಟಿಗೆ ಬುನಾದಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು, ಮಂದಿರದ ಅಧ್ಯಕ್ಷರಾದ ಸತೀಶ್…
ಕೊಣಾಜೆ: ಆ ಮಹಿಳೆ ಕೂಡು ಕುಟುಂಬದ ಜೊತೆಗೆ ಬಾಳಿ ಬದುಕಿದ್ದವರು. ಒಂದೇ ಮನೆಯಲ್ಲಿ ಕುಟುಂಬಿಕರ ಜೊತೆ ಸಂತಸದ ಬದುಕು ಕಳೆದವರು. ಆದರೆ ಕ್ರಮೇಣ ಮನೆಯಲ್ಲಿದ್ದವರೆಲ್ಲಾ ದೂರವಾದ ಮೇಲೆ ಅವರು ಒಬ್ಬಂಟಿಯಾದರು. ಒಪ್ಪೊತ್ತಿನ ಊಟಕ್ಕೂ ಏಕಾಂಕಿಯಾಗಿ ಕಷ್ಟ ಪಟ್ಟರು. ಈ ಹೊತ್ತಲ್ಲಿ ಕೈಯ್ಯಲ್ಲಿ ಕಾಸಿಲ್ಲದೇ ವಿದ್ಯುತ್ ಬಿಲ್ ಕೂಡ ಪಾವತಿಸಲು ಸಾಧ್ಯವಾಗದ ಹಂತಕ್ಕೆ ಅವರ ಇಡೀ ಬದುಕೇ ಸಂಕಷ್ಟಕ್ಕೆ ಸಿಲುಕಿತು. ಕೊನೆಗೆ ಮೆಸ್ಕಾಂನವರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಕಾರಣ ಅವರ ಮನೆಯಿಡೀ ಕತ್ತಲು ಆವರಿಸಿತು. ಆದರೀಗ ಹಲವು ವರ್ಷಗಳ ಬಳಿಕ `ಉಳ್ಳಾಲ ವಾಣಿ’ ಮೂಲಕ ಅವರ ಬದುಕಲ್ಲಿ ಗೃಹಜ್ಯೋತಿ ಬೆಳಗಿಸಿದೆ. ಇದು ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದ ದಾಸರಮೂಲೆ ಮನೆಯ ಒಂಟಿ ಮಹಿಳೆ ವೀಣಾರ ಕರುಳು ಹಿಂಡುವ ಕಥೆ. ಒಂದು ಕಾಲದಲ್ಲಿ ಕೂಡು ಕುಟುಂಬದಲ್ಲಿದ್ದ ವೀಣಾ ಕ್ರಮೇಣ ಎಲ್ಲರನ್ನೂ ಕಳೆದುಕಂಡು ಒಂಟಿಯಾದರು. ಆ ಬಳಿಕ ದಾಸರಮೂಲೆಯ ಮನೆಯಲ್ಲಿ ಬೀಡಿ ಕಟ್ಟಿಕೊಂಡು ಏಕಾಂಗಿಯಾಗಿ ಬದುಕಲು ಆರಂಭಿಸಿದರು. ಈ ಹೊತ್ತಿಗೆ ತುತ್ತು ಅನ್ನಕ್ಕೂ…

