Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಗುಳಿಗ ದೈವದ ಮುನಿಸು: ಸ್ಮಾರ್ಟ್ ಸಿಟಿ ಗುತ್ತಿಗೆದಾರನಿಗೆ ಅನಾರೋಗ್ಯ, ಆರ್ಕಿಟೆಕ್ಟ್ ಗೆ ಅಪಘಾತ: ಕೊನೆಗೂ ದೈವಕ್ಕೆ ಹರಕೆ ಹೇಳಿದ ಕುಟುಂಬ!

UllalaVaniBy UllalaVaniAugust 27, 2024Updated:August 27, 2024No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವ ಮುನಿದ ಸ್ಪೋರಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಕಾಮಗಾರಿ ಗುತ್ತಿಗೆದಾರ ಹಾಗೂ ಆರ್ಕಿಟೆಕ್ಟ್ ಬದುಕಿನಲ್ಲಿ ಅವಘಡದ ಬೆನ್ನಲ್ಲೇ ಅವರ ಕುಟುಂಬ ಎಚ್ಚೆತ್ತುಕೊಂಡಿದೆ.

ಕೊನೆಗೂ ಗುಳಿಗ ದೈವದ ಮೊರೆ ಹೋದ ಗುತ್ತಿಗೆದಾರ ಮತ್ತು ಆರ್ಕಿಟೆಕ್ಟ್ ಕುಟುಂಬ ಗುಳಿಗ ದೈವಕ್ಕೆ ಕೋಲ ಕೊಡುವ ಹರಕೆ ಹೊತ್ತುಕೊಂಡಿದೆ. ಇಬ್ಬರೂ ಗುಣಮುಖರಾಗುವಂತೆ ಪ್ರಾರ್ಥಿಸಿ ಕೋಲದ ಹರಕೆ ಪ್ರಾರ್ಥನೆ ಮಾಡಿದೆ. ದೈವದ ಮಾತು ದಿಕ್ಕರಿಸಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರನಿಗೆ ಅನಾರೋಗ್ಯ ಎದುರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶರವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ್ದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿತ್ತು. ಸರಣಿ ಅವಘಡದ ಬೆನ್ನಲ್ಲೇ ಎಚ್ಚೆತ್ತ ಕುಟುಂಬಸ್ಥರಿಂದ ಅ.16ರಂದು ದೈವದ ಮೊರೆ ಹೋಗಿದ್ದಾರೆ. ತಮ್ಮ ಆರೋಗ್ಯ ಶೀಘ್ರ ಚೇತರಿಕೆಗಾಗಿ ಶರವು ಮಹಾಗುಳಿಗ ದೈವಕ್ಕೆ ಮೊರೆ ಹೋಗಿದ್ದಾರೆ. ಸದ್ಯ ಮುಂದಿನ ಕೋಲದಲ್ಲೇ ಅಭಯ ನೀಡುವ ಬಗ್ಗೆ ಕುಟುಂಬಸ್ಥರಿಗೆ ದೈವ ನುಡಿದಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವದ ಮುನಿಸು ಯಾಕೆ?

ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡಿತಾ ಇದೆ. ಆದ್ರೆ ಮಂಗಳೂರಿನ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣ ಇದ್ದ ಸ್ಥಳದಲ್ಲಿ ಕಳೆದ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ. ಬಹು ಅಂತಸ್ಥಿನ ಕಾರ್ ಪಾರ್ಕಿಂಗ್ ಕಾಮಗಾರಿಯ ಈಗಿನ ಈ ಸ್ಥಿತಿಗೆ ಕಾರಣ ಇಲ್ಲೇ ಸಮೀಪದಲ್ಲಿ ಇರುವ ಶರವು ಮಹಾ ಗುಳಿಗ ದೈವ ಅನ್ನೋದು ಸದ್ಯ ಚರ್ಚೆಯ ವಿಷಯ. ಇತ್ತೀಚೆಗೆ ಶರವು ಮಹಾಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಗಾರಿ ವಿಚಾರವಾಗಿ ತನ್ನ ಕೋಪವನ್ನು ಹೊರಹಾಕಿದೆಯಂತೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಾತನ ನಿರ್ಲಕ್ಷ್ಯದ ಬಗ್ಗೆ ಶರವು ಮಹಾ ಗುಳಿಗ ಕೋಪದಿಂದಲೋ ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ. ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ತಡೆಗೋಡೆಯೊಂದು ಧರಾಶಾಹಿಯಾಗಿದೆ. ಕಾಮಗಾರಿ ಆರಂಭಿಸುವ ಮೊದಲೇ ಇಲ್ಲಿನ ಗುಳಿಗನಿಗೆ ಪೂಜೆ ಸಲ್ಲಿಸಿ ತಿಂಗಳ ಸಂಕ್ರಮಣದಂದು ಅಗೇಲು ನೀಡಲು ಗುತ್ತಿಗೆದಾರ ಕಂಪೆನಿಗೆ ಸಲಹೆ ನೀಡಲಾಗಿತ್ತು. ಆದ್ರೆ ದೈವದ ಬಗ್ಗೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ರಾಕೇಶ್ ಶೆಟ್ಟಿ ದೈವಕ್ಕೆ ಕೊಡಬೇಕಾದ ಸೇವೆ ಕೊಡಲಿಲ್ಲ ಒಂದೆಡೆಯಾದ್ರೆ ಕನಿಷ್ಟ ದೈವಕ್ಕೆ ಕೈಮುಗಿದು ಕೆಲಸ ಆರಂಭಿಸಿಲ್ಲ. ಇದೇ ಕಾರಣದಿಂದ ಇದೀಗ ಆತನಿಗೆ ಅನಾರೋಗ್ಯ ಕೂಡಾ ಕಾಡಿದೆ ಅನ್ನೋ ವಿಚಾರ ಕೂಡಾ ಚರ್ಚೆಯಲ್ಲಿದೆ. ಇನ್ನೂ ಆತನ ಬದಲಿಗೆ ಗುಳಿಗನ ಕೋಲಕ್ಕೆ ಬಂದ ಆತನ ಮ್ಯಾನೇಜರ್‌ಗೆ ದೈವ ಆತನನ್ನೇ ಕರೆದುಕೊಂಡು ಬಾ ಎಂದು ಹೇಳಿದೆಯಂತೆ. ಈ ಗುಳಿಗನ ಕೋಪದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ಎದ್ದಿರೋದು ಬಿಟ್ರೆ ಬಹುಅಂತಸ್ತಿನ ಕಾರು ಪಾರ್ಕಿಂಗ್ ಕಟ್ಟಡ ಮೇಳೆ ಏಳೆಲೆ ಇಲ್ಲ.

ಇದು ಥೇಟ್ ಕಾಂತಾರ ಸಿನಿಮಾ ಹೋಲುವ ದೈವ ಪವಾಡದ ಸ್ಟೋರಿಯಂತಿದ್ದು,’ಇದು ಅವನ ಮತ್ತು ನನ್ನ ಲೆಕ್ಕ’ ಅಂತ ದೈವ ಎಚ್ಚರಿಕೆ ಕೊಟ್ಟಿದೆ. ಕಾಂತಾರದ ‘ಕೋರ್ಟಿಗೆ ಹೋಗ್ತಿ’ ದೃಶ್ಯದ ಮಾದರಿಯಲ್ಲೇ ಗುಳಿಗ ದೈವ ಎಚ್ಚರಿಕೆ ಕೊಟ್ಟಿದೆ. ಇದು ಅವನ ಮತ್ತು ನನ್ನ ಲೆಕ್ಕ, ಅವನು ಬರದಿದ್ರೆ ಲೆಕ್ಕ ನಾನು ನೋಡ್ತೀನಿ’ ಅಂತ ಗುತ್ತಿಗೆದಾರನ ವಿರುದ್ದ ಮುನಿದಿದೆ ದೈವ. ಶರಾವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿದ್ದು, ಮೂರು ವರ್ಷ ಕಳೆದರೂ 10% ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ರಿಟೈನಿಂಗ್ ವಾಲ್ ಕುಸಿತ, ಮಣ್ಣು ಕುಸಿತ ಹಾಗೂ ಮಳೆ ನೀರು ತುಂಬಿಕೊಂಡು ಅವಘಡ ಎದುರಾಗಿದೆ.‌ ಇನ್ನು ಕಾಮಗಾರಿ ಅವೈಜ್ಞಾನಿಕವಾಗಿದ್ದು, ಭೂಕುಸಿತವಾಗುವ ಭೀತಿ ಇದ್ದ ಕಾರಣ ಸುತ್ತಮುತ್ತಲ ವ್ಯಾಪಾರಿಗಳು, ಕಟ್ಟಡದ ಮಾಲೀಕರಿಂದಲೂ ದೈವದ ಬಳಿ ದೂರಿಕೊಂಡಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ 70 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಇದಾಗಿದ್ದು, 6 ಅಂತಸ್ತಿನ 800 ವಾಹನ ಪಾರ್ಕ್ ಮಾಡುವ ಸಾಮಾರ್ಥ್ಯವಿರುವ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಇದಾಗಿದೆ. ಕೇವಲ ಪಿಲ್ಲರ್ ಕೆಲಸ ಆಗಿದ್ದು ಬಿಟ್ಟರೆ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಕಾರ್ ಸ್ಟ್ರಕ್ಚರ್ ಎಂಬ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ವಹಿಸಲಾಗಿದೆ. ಕಾಮಗಾರಿ ಆರಂಭದಲ್ಲೇ ದೈವದ ಅಭಯ ಕೇಳದ ಕಾಮಗಾರಿ ಗುತ್ತಿಗೆದಾರನ ವಿರುದ್ದ ಮುನಿಸಿಕೊಂಡು ಎಚ್ಚರಿಕೆ ಕೊಟ್ಟಿದೆ ದೈವ. ಆದರೂ ಕಳೆದ ಮೂರು ವರ್ಷಗಳಲ್ಲಿ ದೈವ ಸಾನಿಧ್ಯಕ್ಕೆ ಬಾರದ ಗುತ್ತಿಗೆದಾರ ಬರೋವರೆಗೂ ಗಂಡಾಂತರದ ಭವಿಷ್ಯ ನುಡಿದಿತ್ತು.‌ ಇನ್ನು ಗುಳಿಗ ದೈವದ ಮುನಿಸಿನಿಂದ ಗುತ್ತಿಗೆದಾರನಿಗೆ ಅನಾರೋಗ್ಯ ಕಾಡಿದೆಯಂತೆ. ಈ ಬಗ್ಗೆ ಸ್ವತ: ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದರು. ಗುತ್ತಿಗೆದಾರನ ಅನಾರೋಗ್ಯದ ಕಾರಣದಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತವಾಗಿದೆ ಅಂದಿದ್ದರು. ಸ್ಮಾರ್ಟ್ ಸಿಟಿ ವತಿಯಿಂದ ಪಿಪಿಪಿ ಆಧಾರದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ಕೆಲಸ ನಡೀತಿದೆ. ಕಾರ್ ಇನ್ಫ್ರಾ ಎಂಬ ರಾಕೇಶ್ ಶೆಟ್ಟಿ ಪಾಲುದಾರಿಕೆಯ ಕಂಪೆನಿ ಅದು. ಈಗಾಗಲೇ ಕೆಲಸ ವಹಿಸಿ ಎರಡು ವರ್ಷವಾದರೂ ಕೆಲಸ ಆಗಿಲ್ಲ.‌ ಅವರು ಮೂರು ವರ್ಷದ ಅವಧಿಯಲ್ಲಿ ಕೆಲಸ ಮುಗಿಸಬೇಕಿತ್ತು. 70 ಕೋಟಿ ಪ್ರಾಜೆಕ್ಟ್ ಅದು, ಅವರು 30 ವರ್ಷದ ಒಪ್ಪಂದ ಮಾಡಿದ್ದಾರೆ. ಅಲ್ಲಿ ಪಾರ್ಕಿಂಗ್ ನಲ್ಲಿ ಬರೋ ಆದಾಯದಲ್ಲಿ ಪ್ರತೀ ವರ್ಷ 3 ಕೋಟಿ ಕಟ್ಟಬೇಕು. ಆದರೆ ಎರಡು ವರ್ಷದಲ್ಲಿ ಕೇವಲ ಹತ್ತು ಶೇ. ಮಾತ್ರ ಕೆಲಸ ಆಗಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಸಭೆಯಲ್ಲೂ ಬಹಳ ಚರ್ಚೆ ಆಗಿದೆ. ಆ ಗುತ್ತಿಗೆದಾರನಿಗೆ ಟರ್ಮಿನೇಷನ್ ಪತ್ರ ಕೊಡಲು ಸ್ಮಾರ್ಟ್ ಸಿಟಿ ಚೇರ್ ಮೆನ್ ಸೂಚಿಸಿದ್ದಾರೆ. ಆದರೆ ಅವರನ್ನ ಮಾತನಾಡಿಸಲು ಯತ್ನಿಸಿದಾಗ ಅವರು ಅನಾರೋಗ್ಯಕ್ಕೀಡಾಗಿರೋದು ಗೊತ್ತಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದಾರೆ. ಹಾಗಾಗಿ ನಾವು ಅವರಿಗೆ ನೋಟೀಸ್ ಕೊಟ್ಟಿದ್ದೇವೆ, ಉತ್ತರ ಬಂದ ಬಳಿಕ ಕ್ರಮ. ಅನಾರೋಗ್ಯದ ಕಾರಣ ಅಲ್ಲಿ ಸಂಪೂರ್ಣ ಕೆಲಸ ಸ್ಥಗಿತ ಆಗಿದೆ. ಹೀಗಾಗಿ ಅವರ ಉಳಿದ ಪಾಲುದಾರರನ್ನ ಕರೆದು ಮಾತನಾಡಲು ಹೇಳಿದ್ದೇನೆ. ಆ ಬಳಿಕ ಹೊಸ ಟೆಂಡರ್ ಕರೆಯೋ ಬಗ್ಗೆ ಚಿಂತಿಸಲಾಗಿದೆ ಎಂದಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಎಚ್ಚರಿಸಿದ್ದ ಉಳ್ಳಾಲವಾಣಿ ;ಈಗ ವರದಿ ಸತ್ಯವಾಗಿದೆಯೇ?

June 20, 2026

ಸಂತ ಅಲೋಶಿಯಸ್ ಉರ್ವಾದಲ್ಲಿ ಶಾಲಾ ಪಾಲಕರ ದಿನಾಚರಣೆ

June 20, 2026

ಎಂ.ಆರ್.ಜಿ. ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್, ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

June 19, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಹಿರಿಯ ಸಾಹಿತಿ–ಪತ್ರಕರ್ತ ಪರಮಾನಂದ ಸಾಲ್ಯಾನ್ ಅವರಿಗೆ “ರಂಗಭಾಸ್ಕರ–2026 ” ಪ್ರಶಸ್ತಿ ಪ್ರದಾನ

By UllalaVaniJune 22, 20260

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಪರವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು…

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸೋಮೇಶ್ವರ ಇದರ ಅಧ್ಯಕ್ಷರಾಗಿ ರಾಘವ ಆರ್ ಉಚ್ಚಿಲ್ ಆಯ್ಕೆ

June 22, 2026

ಎಚ್ಚರಿಸಿದ್ದ ಉಳ್ಳಾಲವಾಣಿ ;ಈಗ ವರದಿ ಸತ್ಯವಾಗಿದೆಯೇ?

June 20, 2026

ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

June 20, 2026
1 2 3 … 1,976 Next
Automatic YouTube Gallery

ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ

ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿ

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯ ಅನಾವರಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ
Now Playing
ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ
ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ...
ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿ

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯ ಅನಾವರಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಣಾಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ
Now Playing
ಕೊಣಾಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ
ಯುವ ಮಿತ್ರ ಬಳಗ ಕೊಣಾಜೆ ವತಿಯಿಂದ ; ಕೊಣಾಜೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ...
ಯುವ ಮಿತ್ರ ಬಳಗ ಕೊಣಾಜೆ ವತಿಯಿಂದ ; ಕೊಣಾಜೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಮುಂದಿನ ವರ್ಷ ಇನ್ನಷ್ಟು ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕ ಗಳಿಸಲಿ: ಅಬ್ದುಲ್ ಖಾದರ್ ಕೋಡಿಜಾಲ್


📍 Ullal | Dakshina Kannada | ...
Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version