ಕೋಟೆಕಾರು: ಚುನಾವಣೆ ಪೂರ್ವ ಸೇತುವೆ ಬೇಡಿಕೆಯನ್ನಿಟ್ಟು ಬೆಂಬಲಿಸುವ ವಿಶ್ವಾಸವನ್ನಿಟ್ಟದ್ದರು. ಅದರಂತೆ ಉಚ್ಚಿಲ- ಅಜ್ಜಿನಡ್ಕ ಸಂಪರ್ಕಿಸುವ ಜನರಿಗೆ ಸಹಕಾರವಾಗುವಂತೆ ಸೇತುವೆಯನ್ನು ನಿರ್ಮಿಸಲಾಗಿದ್ದು, ಇದು ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಅವರು ಕೋಟೆಕಾರು ಪಟ್ಟಣ ಪಂಚಾಯತ್ ೨೦೨೩-೨೪ನೇ ಸಾಲಿನ ಪಟ್ಟಣ ಪಂಚಾಯತ್ ನಿಧಿಯಡಿ ವಾರ್ಡ್ ಸಂಖ್ಯೆ ೮ ಉಚ್ಚಿಲ ಬಳಿ ರೂ.೩೫ ಲಕ್ಷ ಅಂದಾಜು ಮೊತ್ತದಲ್ಲಿ ನಿರ್ಮಿಸಲಾದ ಸೇತುವೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರದೇಶದ ಸೇತುವೆ, ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ನೂತನ ಸೇತುವೆ ಪ್ರದೇಶದ ಅಭಿವೃದ್ಧಿಗೆ ದೊಡ್ಡ ಮಟ್ಟಿನ ವೇದಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಉಚ್ಚಿಲದ ಅಭಿವೃದ್ಧಿಯನ್ನು ಊಹಿಸಲು ಅಸಾಧ್ಯ. ಒಟ್ಟು ಜನರ ಸಹಕಾರದಿಂದ ಉತ್ತಮ ಗುಣಮಟ್ಟದ ಸೇತುವೆಯ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭ ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ತಾ.ಪಂ ಮಾಜಿ ಅಧ್ಯಕ್ಷ ಮುಸ್ತಾಫ ಹರೇಕಳ , ಮಂಗಳೂರು ಮಂಡಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಜಿ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ಕೌನ್ಸಿಲರುಗಳಾದ ಅಹಮ್ಮದ್ ಬಾವಾ ಅಜ್ಜಿನಡ್ಕ , ಅಹಮ್ಮದ್ ಇಸಾಕ್ ಜಿ.ಐ, ಹಾಗೂ ಜಮಾಲ್ ಅಜ್ಜಿನಡ್ಕ , ಹಿರಿಯ ಜೀವಾನಂದ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಸೋಮೇಶ್ವರ ಪುರಸಭೆ ಸದಸ್ಯ ಸಲಾಂ ಉಚ್ಚಿಲ್, ಎಂ.ಎಲ್.ಎ ಮೊಯ್ದೀನ್ ಬಾವಾ, ಸುಭಾಷ್ ಶೆಟ್ಟಿ, ಬೋಳಾರ ಮಸೀದಿಯ ಎ.ಕೆ ಇಬ್ರಾಹಿಂ ಮುಸ್ಲಿಯಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಜೆ.ಕಾರಗಿ ಕೋಟೆಕಾರು ಪ.ಪಂ ಮುಖ್ಯಾಧಿಕಾರಿ ಮಾಲಿನಿ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಸೋಮೇಶ್ವರ ಪ್ರಬಂಧಕ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್, ಅವರ ಆಪ್ತಸಹಾಯಕ ಲಿಬ್ಝತ್, ಕೌನ್ಸಿಲರುಗಳಾದ ಇಸಾಕ್ ಜಿ.ಐ, ಅಹಮ್ಮದ್ ಬಾವಾ, ಗುತ್ತಿಗೆದಾರ ಜಮಾಲ್ ಅವರನ್ನು ಅಭಿನಂದಿಸಲಾಯಿತು.


