ಉಳ್ಳಾಲ: ಉಳ್ಳಾಲ ನಗರ ಸಭೆ ಯ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಗುರುವಾರ ನಡೆಯಿತು.
ಅಧ್ಯಕ್ಷ ರಾಗಿ ಕಾಂಗ್ರೆಸ್ ನ ಶಶಿ ಕಲಾ, ಉಪಾಧ್ಯಕ್ಷ ರಾಗಿ ಸಪ್ನಾ ಹರೀಶ್ ಆಯ್ಕೆ ಆದರು .
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿ ಕಲಾ ಬಿಜೆಪಿಯಿಂದ ಭವಾನಿ ,ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸಪ್ನಾ ಹರೀಶ್, ಬಿಜೆಪಿ ಯಿಂದ ನಮಿತ , ಎಸ್ ಡಿಪಿಐ ಯಿಂದ ಝರೀನ ರವೂಫ್ ನಾಮಪತ್ರ ಸಲ್ಲಿಸಿದ್ದರು.





ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿಕಲಾ ಪರ 23 ಮತಗಳು, ಬಿಜೆಪಿ ಯ ಭವಾನಿ ಪರ 6 ಮತಗಳು ಚಲಾವಣೆ ಆಗಿದ್ದು, ಇಬ್ಬರು ತಟಸ್ಥ ರಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಗಳು ಇಳಿದಿದ್ದ ಕಾಂಗ್ರೆಸ್ ನ ಸಪ್ನಾ ಹರೀಶ್ 17 ಎಸ್ ಡಿಪಿಐ ಯ ಝರೀನ ರವೂಫ್ ಪರ ಆರು ಬಿಜೆಪಿಯ ನಮಿತ ಪರ ಆರು ಮತಗಳು ಚಲಾವಣೆ ಆದವು.ಇಬ್ಬರು ಜೆಡಿಎಸ್ ಕೌನ್ಸಿಲರ್ ಗಳು ತಟಸ್ಥ ರಾದರು.
23 ಮತ ಪಡೆದ ಶಶಿಕಲಾ ಅಧ್ಯಕ್ಷ ರಾಗಿ,17 ಮತಗಳು ಪಡೆದ ಕಾಂಗ್ರೆಸ್ ನ ಸಪ್ನಾ ಹರೀಶ್ ಉಪಾಧ್ಯಕ್ಷೆಯಾಗಿ ಆಯ್ಕೆ ಆದರು.
ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನ ಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಎಸ್ ಡಿಪಿಐ 6 ಹಾಗೂ ಇಬ್ಬರು ಪಕ್ಷೇತರರು ಸ್ಥಾನ ಪಡೆದಿದ್ದಾರೆ.
ಈ ಪೈಕಿ ಜೆಡಿಎಸ್ ನ ನಾಲ್ವರು ಸದಸ್ಯ ರ ಪೈಕಿ ಮೂವರು ಜೆಡಿಎಸ್ ಗೆ ರಾಜೀನಾಮೆ ನೀಡಿದ್ದು, ಇವರಲ್ಲಿ ಇಬ್ಬರು ಕಾಂಗ್ರೆಸ್ ಗೆ ಸೇರಿದ್ದರು.
ಸಹಾಯಕ ಆಯುಕ್ತ ಹರ್ಷವರ್ಧನ್ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಉಳ್ಳಾಲ ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ ಸಿ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ಎ ಮಹಿಳೆಗೆ ಮೀಸಲಾತಿ ಪ್ರಕಟವಾಗಿತ್ತು.
ಉಳ್ಳಾಲ ನಗರ ಸಭೆ ಮೊದಲು ಹಂತದ ಅಧ್ಯಕ್ಷ, ಉಪಾಧ್ಯಕ್ಷ ರ ಅಧಿಕಾರಾವಧಿ ,2023 ಮೇ ತಿಂಗಳಲ್ಲಿ ಮುಗಿದಿತ್ತು.


