Author: UllalaVani

Kannada News From Coastal Karnataka

ಮಂಗಳೂರು : ನೂರ ಹದಿಮೂರು ವರ್ಷಗಳ ಸಮರ್ಪಿತ ಸೇವೆಯ ಪರಂಪರೆಯನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಎಂಸಿಸಿ ಬ್ಯಾಂಕ್‌ನ ಆಶ್ರಯದಲ್ಲಿ ಎನ್‌ಆರ್‌ಐ ಸಮಾವೇಶ ಮಂಗಳೂರಿನ ಅತ್ತಾವರದಲ್ಲಿರುವ ದಿ ಅವತಾರ್ ಹೋಟೆಲ್‌ನಲ್ಲಿ ರವಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಇತ್ತೀಚಿನ ಆವಿಷ್ಕಾರಗಳು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿವೆ ಮತ್ತು ಬ್ಯಾಂಕಿನ ನಿರಂತರ ಬೆಳವಣಿಗೆಯಲ್ಲಿ ಅನಿವಾಸಿ ಭಾರತೀಯರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿವೆ ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಕಂಕನಾಡಿಯ ಎಫ್‌ಎಂಸಿಐ ನಿರ್ದೇಶಕ ವಂ. ಫೌಸ್ಟಿನ್ ಲೋಬೊ ಉದ್ಘಾಟಿಸಿ ಮಾತನಾಡಿ ನಿರಂತರವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವ ಮಹತ್ವವನ್ನು ವಿವರಿಸಿದರು. ಎನ್‌ಆರ್‌ಐಗಳು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು. ರಿಲಯೆಬಲ್ ಫೆಬ್ರಿಕೇಟರ್ಸ್ ಎಲ್‌ಎಲ್‌ಸಿ ಮಾಲಕ ಜೇಮ್ಸ್ ಮೆಂಡೋನ್ಸಾ, ಅಬುಧಾಬಿ ಅಮಿಗೋ ಆಟೋಮೊಬೈಲ್ ಸರ್ವೀಸಸ್ ಎಸ್‌ಪಿ ಎಲ್‌ಎಲ್‌ಸಿ ಆಡಳಿತ ನಿರ್ದೇಶಕ ಲಿಯೊ ರೊಡ್ರಿಗಸ್ ಮತ್ತು ಲಿಯೊ ರೊಡ್ರಿಗಸ್ ಪತ್ನಿ ಲವೀನಾ ರೋಡ್ರಿಗಸ್ ,ಡೈಜಿವರ್ಲ್ಡ್ ಮೀಡಿಯಾ…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಪ್ರಧಾನ ಕಛೇರಿಯಲ್ಲಿ ನಡೆದ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ನಿವೃತ್ತ ಯೋಧ ನಾಯಕ್ ಜಗದೀಶ್ ಎಮ್. ರವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಸೇನೆಯ ಸೇವೆಯಲ್ಲಿರುವಾಗ ತಾವು ಪಾಲ್ಗೊಂಡಿದ್ದ ಕಾರ್ಯಚರಣೆ ಬಗ್ಗೆ ಪ್ರಸ್ತಾಪಿಸಿದರು. ದೇಶ ಸೇವೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೇಶ ಸೇವೆಯ ಕಾಯಕದ ಜೊತೆಗೆ ತಮ್ಮ ಭವಿಷ್ಯವನ್ನು ಕೂಡ ಕೆಲಸದ ಭದ್ರತೆಯೊಂದಿಗೆ ಗಟ್ಟಿ ಗೊಳಿಸಬಹುದು. ದೇಶವನ್ನು ಬಲಿಷ್ಟಗೊಳಿಸುವ ಜವಾಬ್ದಾರಿ ಪ್ರಜೆಗಳದ್ದು, ಕರಾವಳಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಸಂಘದ ಅಧ್ಯಕ್ಷರಾದ “ಸಹಕಾರ ರತ್ನ” ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆಗೈದ ಯೋಧರನ್ನು ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ಬರುತ್ತಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ನಮ್ಮ ಕರಾವಳಿಯ ಹೆಮ್ಮೆಯ ನಿವೃತ್ತ ಯೋಧ ನಾಯಕ್…

Read More

ಉಳ್ಳಾಲ : ಮುನ್ನೂರು ಯುವಕ ಮಂಡಲ (ರಿ ) ಕುತ್ತಾರು ರು ಇದರ ವತಿಯಿಂದ 79ನೇ ಸ್ವಾತಂತ್ರ್ಯ ಕಾರ್ಯಕ್ರಮವನ್ನು ಶ್ರೀ ರಾಮ ಭಜನಾ ಮಂದಿರ ಇದರ ಮಾಜಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕುತ್ತಾರ್‌ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ಮುಂಡೋಳಿ, ಸಲಹೆಗಾರರಾದ ಕೃಷ್ಣಪ್ಪ ಸಾಲಿಯಾನ್, ಗೌರವ ಅಧ್ಯಕ್ಷರಾದ ಶಶೀಂದ್ರ ಕುಕ್ಕ್ಯಾನ್‌, ಕಾರ್ಯದರ್ಶಿ ರಕ್ಷಿತ್‌ ಕುತ್ತಾರ್‌ ಹಾಗೂ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.

Read More

ತೊಕ್ಕೊಟ್ಟು : 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಶೈಕ್ಷಣಿಕ ವರ್ಷ 2024-2025ರ ಸಾಲಿನಲ್ಲಿ ನಡೆದ SSLC ಪರೀಕ್ಷೆಯಲ್ಲಿ ಕುಮಾರಿ ರೆನಿಶಾ ಸ್ವೀಟಿ ಡಿಸೋಜ ಹಾಗೂ ಕುಮಾರಿ ಆತ್ಮಿಕ ಕೊಟ್ಟಾರಿ, ಪಿಯುಸಿ ಪರೀಕ್ಷೆಯಲ್ಲಿ, ಕುಮಾರಿ ತ್ರಿಷಾ ಕೆ. ಗಟ್ಟಿ ಹಾಗೂ ಕುಮಾರಿ ನೇಹಾ ಗಂಡಿ ಇವರನ್ನು ವಿಜಯ ಮಿತ್ರ ಮಂಡಲ ಮುಡಿಪೋಡಿ ಕಲ್ಲಾಪು ಇದರ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅತಿಥಿಯಾಗಿ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ರೇಣುಕಾ, ಶಿಕ್ಷಕಿ ವಿನಯ, ಪುರುಷೋತ್ತಮ ಕಲ್ಲಾಪು ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ವಿ.ಕೆ, ಗೌರವ ಅಧ್ಯಕ್ಷರಾದ ಸಂಜೀವ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಕಾಯಂಗಳ, ಕೋಶಾಧಿಕಾರಿಯಾದ ಪುರುಷೋತ್ತಮ ಮೇಲಂಟ, ಉಪಾಧ್ಯಕ್ಷರಾದ ಜಾನ್ ಆಪೋಸ್, ಜೊತೆಕಾರ್ಯದರ್ಶಿಯಾದ ಸಂಜಯ್, ಕ್ರೀಡಾಕಾರ್ಯದರ್ಶಿಯಾದ ಜ್ಞಾನೇಶ್, ಸದಸ್ಯರಾದ, ಗಿರೀಶ್, ಮುಕೇಶ್, ಸಂತೋಷ ಶೆಟ್ಟಿ, ರಾಜೇಶ್, ಯೋಗಿಶ್, ಸದಾನಂದ, ಬಾಲಕೃಷ್ಣ,ಯೋಗಿಶ್ ಆಚಾರ್ಯ, ಭಾವಿತ್, ಲೋಕೇಶ್, ರವೀಂದ್ರ, ಹರೀಶ್ ಕೊಟ್ಟಾರಿ, ಶರತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Read More

ಉಳ್ಳಾಲ : ನಗರ ಸಭೆ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಶಶಿಕಲಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಪೌರಾಯುಕ್ತ ನವೀನ್ ಹೆಗ್ಡೆ, ಕೌನ್ಸಿಲರ್ ಖಲೀಲ್ , ಇಸ್ಮಾಯಿಲ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ರೋಹಿನಾಥ್, ತೆರಿಗೆ ವಿಭಾಗದ ನಿರೀಕ್ಷಕ ಚಂದ್ರ ಹಾಸ್, ಇಂಜಿನಿಯರ್ ತುಳಸಿ ದಾಸ್, ಕೌನ್ಸಿಲರ್ ಜಬ್ಬಾರ್, ಅಸ್ಗರ್, ಮುಸ್ತಫಾ, ಅಝೀಝ್, ಗೀತಾ ಬಾಯಿ, ರಮೀಝ್ ಮತ್ತಿತರರು ಉಪಸ್ಥಿತರಿದ್ದರು.

Read More

ಉಳ್ಳಾಲ : ನಾಟೆಕಲ್‌ನ ಉಳ್ಳಾಲದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಪ್ರಶಾಂತ್ ಪಟೇಲ್ ಧ್ವಜಾರೋಹಣಗೈದರು. ಈ ಸಂದರ್ಭ ಕಂದಾಯ ನಿರೀಕ್ಷಕ ಪ್ರಮೋದ್ ಕುಮಾರ್, ಕಿರಣ್ ಕುಮಾರ್, ಆಹಾರ ನಿರೀಕ್ಷಕರಾದ ಮೊಹಮ್ಮದ್ ರಫೀಕ್ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

Read More

ಹರೇಕಳ : ಈ ದಿನವು ನಮ್ಮ ದೇಶದ ಏಕತೆ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುವ ದಿನವಾಗಿದೆ. ಮುಖ್ಯವಾಗಿ ಈ ಸಂದರ್ಭದಲ್ಲಿ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಟ್ಟುಕೊಳ್ಳಬೇಕು ಮತ್ತು ಅವರ ಆಶಯಗಳನ್ನು ಈಡೇರಿಸಲು ಶ್ರಮಿಸಬೇಕು ಎಂದು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಕೆ ಎನ್ ಆಳ್ವ ಹೇಳಿದರು. ಇವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಪಾವೂರು ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಶೆಟ್ಟಿ ಮಂಚವುದಡಿ, ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರು ದುರ್ಗಾಪ್ರಸಾದ್ ರೈ ಕಲ್ಲಾಯಿ, ಸಮಾಜ ಸೇವಕರಾದ ನರಸಿಂಹ ನಾಯ್ಕ್ ಪಂಜಿಲಗುರಿ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಂದ ಭಾಷಣ ಸ್ಪರ್ಧೆ, ದೇಶಭಕ್ತಿ ಸ್ಪರ್ಧೆ ಹಮ್ಮಿ ಕೊಂಡು ವಿಜೇತರಿಗೆ ಬಹುಮಾನ ನೀಡಿ…

Read More

ತಲಪಾಡಿ : ತಲಪಾಡಿಯ ಸ್ವಾಮಿ ಕೃಪಾ ಶ್ರೀ ವೀರಾಂಜನೇಯ ವ್ಯಾಯಾಮಶಾಲೆ (ರಿ) ಹಾಗೂ ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ತಲಪಾಡಿ ಇದರ ಜಂಟಿ ಆಶ್ರಯದಲ್ಲಿ ತಲಪಾಡಿಯ ದಿವಂಗತ ಐತಪ್ಪ ರೈ ವೇದಿಕೆಯಲ್ಲಿ 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು. ಧ್ವಜಾರೋಹಣವನ್ನು ನಿವೃತ್ತ ಸೇನಾನಿ ಕ್ಯಾಪ್ಟನ್ ಮಾಧವ ಶೆಟ್ಟಿ ತಲಪಾಡಿ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ತಲಪಾಡಿ ವ್ಯಾಯಾಮ ಶಾಲಾ ಅಧ್ಯಕ್ಷರಾದ ಅಶೋಕ್ ಕೆ ,ಸಿ ರೋಡ್ ,ಹ್ಯೂಮನ್ ವೆಲ್ಫೇರ್ ತಲಪಾಡಿಯ ಅಧ್ಯಕ್ಷ ಸಂಶುದ್ದೀನ್ ತಲಪಾಡಿ ,ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಖಾದರ್ ಬಿ.ಎಸ್ ,ಇಸ್ಮಾಯಿಲ್ ತಲಪಾಡಿ, ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿದ್ದಿಕ್ ತಲಪಾಡಿ, ದುಬೈ ಉದ್ಯಮಿ ಮೊಹಮ್ಮದ್ ಹಸ್ಸನ್, ಶ್ರೀ ಮಾತಾ ಮಹಿಳಾ ಮಂಡಳಿ ತಲಪಾಡಿ ಇದರ ಅಧ್ಯಕ್ಷೆ ಶ್ರೀಮತಿ ಶ್ವೇತ ಕಿರಣ್, ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ಶ್ರೀಮತಿ ಶೋಭಾ ಶೇಖರ್ ಶೆಟ್ಟಿ , ವ್ಯಾಯಾಮಶಾಲಾ ಮಾಜಿ ಅಧ್ಯಕ್ಷರುಗಳಾದ ಯಥೀರಾಜ್ ಶೇಣವ ದೊಡ್ಡಮನೆ ,ರಾಜೇಶ್ ಕೊಟ್ಟಾರಿ ,ಸತೀಶ್ ಕುದ್ರು ತಲಪಾಡಿ ಇವರುಗಳು…

Read More

ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸೇರಿದಂತೆ ಅನೇಕ ರೀತಿಯ ಬದಲಾವಣೆಗಳಾಗಿವೆ. ಯಾವುದೇ ಸಮಾಜ, ಸಂಸ್ಥೆಯೊಳಗೆ ಗಡಿರೇಖೆಗಳು ಅಪಾಯಕಾರಿ, ಜಾತಿ ಧರ್ಮಗಳ ಮೂಲಕ ಕಂದಕ ಸೃಷ್ಡಿಯಾಗಬಾರದು. ನಾವು ಸ್ವತಃ ಆತ್ಮಾವಲೋಕನ ಮಾಡುವುದರೊಂದಿಗೆ ಸೌಹಾರ್ದತೆಯ ಸಮಾಜ ನಿರ್ಮಿಸಬೇಕಿದೆ ಎಂದರು. ಕುಲಸಚಿವ ಕೆ.ರಾಜು ಮೊಗವೀರ ಅವರು ಮಾತನಾಡಿ, ಸ್ವಾತಂತ್ರ್ಯದ ಶುಭದಿನದಲ್ಲಿ ತ್ಯಾಗ ಬಲಿದಾನದ ಮಾಡಿದ ಮಹಾತ್ಮರನ್ನು ನೆನಪಿಸಿಕೊಳ್ಳುತ್ತಾ ಶಾಂತಿ, ಸಮಾನತೆ, ಸಹಬಾಳ್ವತೆಯೊಂದಿಗೆ ಬಾಳುವುದರೊಂದಿಗೆ ದೇಶ ಕಟ್ಟುವ ಕೆಲಸ ಮಾಡೋಣ ಎಂದರು. ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಡಾ.ಸಂತೋಷ್ ಜೆರಾಲ್ಡ್ ಡಿಸೋಜ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಡಾ.ಪ್ರಸನ್ನ ಅವರು…

Read More

ಉಳ್ಳಾಲ : ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಉಳ್ಳಾಲ ವಲಯ ಇವುಗಳ ಆಶ್ರಯದಲ್ಲಿ ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮಾಜಿ ಶಾಸಕ ಸ್ವಾಗತ ಅಧ್ಯಕ್ಷ ಜಯರಾಮ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಉಳ್ಳಾಲ ವಲಯ ಫೊಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಪ್ರವೀಣ್ ಬೀರಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಗೈದರು. ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ ಪರಿಸರ ಉಳಿಸುವ ಬಗ್ಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷ ಆಲಿಯಬ್ಬ, ಚಿದಾನಂದ, ಸಿದ್ದೀಕ್ ದೇರಳಕಟ್ಟೆ, ಮಾಧವ ಉಳ್ಳಾಲ, ಸರ್ಫರಾಜ್ ಉಳ್ಳಾಲ, ಪೊಟೋಗ್ರಾಫರ್ ಸಂತೋಷ್ , ಸದಾನಂದ ಬಂಗೇರ, ಶಶಿಕಾಂತಿ, ಜಬ್ಬಾರ್ , ಅಸ್ಗರ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿ, ವಂದಿಸಿದರು.

Read More