ಉಳ್ಳಾಲ : ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಬೂಸಾಲಿ ಕಿನ್ಯ, ನಿರ್ದೇಶಕ ಉದಯಕುಮಾರ್ ಶೆಟ್ಟಿ ಕೊಂಡಾಣ ಗುತ್ತು, ಅರುಣ್ ಕುಮಾರ್.ಯು, ರಾಘವ ಆರ್ ಉಚ್ಚಿಲ್, ಶ್ರೀಮತಿ ಸುರೇಖಾ ಚಂದ್ರಹಾಸ, ಸಿಇಓ ಹರ್ಷವರ್ಧನ್ ಉಳ್ಳಾಲ್ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು ವ್ಯವಸ್ಥಾಪಕರಾದ ಲೋಕಯ್ಯ ಪನೀರ್ ಕಾರ್ಯಕ್ರಮ ನಿರ್ವಹಿಸಿದರು.
Author: UllalaVani
ಕುಂದಾಪುರ : ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಕಟ್ಬೆಲ್ತೂರು ಎಂಬಲ್ಲಿ ನಡೆದಿದೆ. ಮೃತರನ್ನು ಕಟ್ಬೆಲ್ತೂರು ಗ್ರಾಮದ ನಾಗರಾಜ(48) ಎಂದು ಗುರುತಿಸಲಾಗಿದೆ. ಇವರು ಮಳೆಗಾಲದಲ್ಲಿ ಕೆಲಸವಿಲ್ಲದೇ ಇರುವುದರಿಂದ ಆ.12ರಂದು ಬೆಳಗ್ಗೆ ಮೀನು ಹಿಡಿಯಲು ಹೋಗಿದ್ದು, ಸಂಜೆಯಾದರೂ ವಾಪಾಸು ಬಾರದೇ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಆ.13ರಂದು ಬೆಳಗ್ಗೆ ನಾಗರಾಜ ಅವರ ಮೃತದೇಹವು ಕಟ್ಬೆಲ್ತೂರು ಗ್ರಾಮದ ಸಿಗಡಿ ಕೆರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಪ್ರಪ್ರಥಮ ಬಾರಿಗೆ ಇಸ್ಕಾನ್ ಮಂಗಳೂರು ವತಿಯಿಂದ ಆ.15ರಂದು ಕೊಡಿಯಾಲ್ ಬೈಲ್ ಕಲಾಕುಂಜದ ಶ್ರೀ ಕೃಷ್ಣ ಬಲರಾಮ ಮಂದಿರ ಮಂಗಳೂರಿನಲ್ಲಿ ಅದ್ದೂರಿಯಾದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಮಾಡುತ್ತಿದೆ ಎಂದು ಅಧ್ಯಕ್ಷ ಗುಣಕರ ರಾಮದಾಸ್ ರವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧ್ಯಾಯ 1 – ಭಗವಾನ್ ಶ್ರೀಕೃಷ್ಣನ ದೈವಸ್ವರೂಪ ಅವತಾರಕ್ಕೆ ಸಮರ್ಪಿತ ಎರಡು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮಿಲಿತವಾದ ಹಬ್ಬ. ಭಕ್ತಿ, ಸಂಸ್ಕೃತಿ ಮತ್ತು ಕ್ರಿಯಾತ್ಮತೆಯ ಮೂಲಕ ಮಂಗಳೂರ ಜನತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಗರದಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ವಿನೋದಾವಳಿಗಳು, ಸ್ಪರ್ಧೆಗಳು, ಡಿಜಿಟಲ್ ಪ್ರಚಾರ, ಪವಿತ್ರ ಆಚರಣೆಗಳು ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉಳ್ಳಾಲ : ‘ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್” ಎಂಬ ಘೋಷಣೆ ಅಡಿಯಲ್ಲಿ ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಿಂದ 9 ರ ತನಕ ನಡೆಯಲಿರುವ ಯುವಜನ ಜಾಥಾದ ಯಶಸ್ವಿಗಾಗಿ ಮುಡಿಪು ವಲಯ ಮಟ್ಟದ ಸ್ವಾಗತ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸರಕಾರದ ಹಲವು ತಪ್ಪಾದ ನೀತಿಗಳಿಂದ ಭಾರತದ ಯುವ ಜನತೆ ನಿರುದ್ಯೋಗಿಗಳಾಗಿ ಬದಲಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಡೆಗಣಿಸುತ್ತಿವೆ. ಯುವ ಜನರಿಗೆ ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿ ಆಡಳಿತಕ್ಕೆ ಬಂದಿರುವ ಕೇಂದ್ರ ಸರಕಾರ ಯುವ ಜನತೆಗೆ ಮೋಸ ಮಾಡಿದೆ ಎಂದು ತಿಳಿಸಿದರು. ಮುಡಿಪುವಿನಲ್ಲಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ, ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಪುಂಡರಿಕಾಕ್ಷ, ಗೌರವ…
ಪೆರ್ಲ : ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಮರದಡಿಗೆ ತೆರಳಿದ ಚಾಲಕ ಮರದ ರೆಂಬೆ ಮುರಿದು ಬಿದ್ದು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ದ. ಕ. ಜಿಲ್ಲೆಯ ಬಂಟ್ವಾಳ ಪೆರಾಜೆ ಬಳಿಯ ಕುಡೇಲು ನಿವಾಸಿ ಕಾಂತಪ್ಪ ಗೌಡ – ಗೀತಮ್ಮ ದಂಪತಿಯ ಪುತ್ರ ಕೆ. ಜಗದೀಶ ಗೌಡ (50) ಮೃತ ವ್ಯಕ್ತಿಯಾಗಿದ್ದಾರೆ. ಬುಧವಾರ ಮುಂಜಾನೆ ಆರೂಕಾಲರ ವೇಳೆಗೆ ಪೆರ್ಲ- ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಈ ಘಟನೆ ನಡೆಯಿತು. ಮೂಡಬಿದಿರೆಯಿಂದ ಕಾಸರಗೋಡಿಗೆ ಪಶು ಆಹಾರ ಸಾಗಿಸುತ್ತಿದ್ದ ಲಾರಿಯಲ್ಲಿ ಜಗದೀಶ ಚಾಲಕನಾಗಿದ್ದರು. ವಿಟ್ಲ ದಾರಿಯಾಗಿ ಸೀತಾಂಗೋಳಿ ಮೂಲಕ ಕಾಸರಗೋಡಿಗೆ ಲೋಡ್ ಸಾಗಿಸುತ್ತಿದ್ದರು. ಬೆದ್ರಂಪಳ್ಳ ಬಳಿಯ ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸಿ ಮರದಡಿಯೊಂದರಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಮರದ ರೆಂಬೆ ಮುರಿದು ದೇಹಕ್ಕೆ ಬಿದ್ದು ಮರಣ ಸಂಭವಿಸಿತು. ಲಾರಿಯಲ್ಲಿ ಜತೆಗಿದ್ದ ಕ್ಲೀನರ್ ಮೊದಲಿಗೆ ವಿಷಯ ಅರಿತಿದ್ದು ಬಳಿಕ ದಾರಿ ಹೋಕರ ಸಹಾಯ ಪಡೆದು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಅಪಾಯದಿಂದ ಪಾರಾಗಿಸಲು…
ಮಂಗಳೂರು : ಸರ್ಕಾರದ ಅಧಿಸೂಚನೆ ಸಂಖ್ಯೆ ಹೆಚ್.ಡಿ/77/ಪಿ.ಓ.ಪಿ/2020 ರಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರು ಮತ್ತು ಅರ್ಕುಳ ಗ್ರಾಮಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮವನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರಕಾರದ ಅಧಿಸೂಚನೆಯಲ್ಲಿ ಆದೇಶಿಸಲಾಗಿರುತ್ತದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂದಿಸಿದಂತೆ ಪದವು ಗ್ರಾಮಕ್ಕೆ ಒಳಪಡುವ ಕುಲಶೇಖರ, ಸಿಲ್ವರ್‌ಗೇಟ್, ಡೈರಿ ಗೇಟ್, ಕುಲಶೇಖರ ಚೌಕಿ, ಪದವಿನಂಗಡಿ, ಗುರುನಗರ, ಮೇರಿಹಿಲ್ ವೆಂಕಟರಮಣ ದೇವಸ್ಥಾನ ರಸ್ತೆ, ಕೊಪ್ಪಲಕಾಡು, ಬಾಂದೋಟ್ಟು ಯೆಯ್ಯಾಡಿ, ದಂಡಕೇರಿ, ಶಕ್ತಿನಗರ, ನೀತಿ ನಗರ, ಪೊಲೀಸ್ ಲೇನ್, ಪ್ರೀತಿನಗರ, ಸಂಜಯ ನಗರ, ಮುಗೋಡಿ, ಕಾರ್ಮಿಕ ಕಾಲೋನಿ, ಕೆಹೆಚ್‌ಬಿ, ನಾಲ್ಯಪದವು, ಗಂಧಕಾಡು, ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯ, ರಾಜೀವ ನಗರ, ಮುತ್ತಪ್ಪ ಗುಡಿ, ಕಕ್ಕೆಬೆಟ್ಟು, ಮಂಜಡ್ಕ, ದತ್ತ ನಗರ,…
ಸುಳ್ಯ : ಕೇರಳದ ಕಾಞಂಗಾಡ್‌ನಿಂದ ಗಡಿ ಪ್ರದೇಶವಾದ ಬಂದಡ್ಕ ಮೂಲಕ ಸುಳ್ಯಕ್ಕೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಆ.14ರಿಂದ ಸಂಚಾರ ಆರಂಭಗೊಂಡಿದೆ. ಕಾಞಂಗಾಡ್ ಡಿಪೋದಿಂದ ಪೆರಿಯ, ಮೂನಾಂಕಡವ್ ಕುಂಡಕುಯಿ-ಬಂದಡ್ಕ-ಕನ್ನಡಿತೋಡ್-ಕೋಲ್ಕಾರ್ ಮೂಲಕ ಸುಳ್ಯಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲು ಕೇರಳ ಸರಕಾರ ಅನುಮತಿ ನೀಡಿದೆ. ಇಂದು ಬೆಳಿಗೆ ಕಾಞಂಗಾಡ್‌ನಿಂದ ಆರಂಭಗೊಂಡ ಬಸ್‌ಗೆ ಕುತ್ತಿ ಕೋಲಿನಲ್ಲಿ ಶಾಸಕ ಸಿ.ಎಚ್.ಕುಞಂಬು ಅವರ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಬಳಿಕ ಶಾಸಕರು ಬಸ್ ಓಡಾಟಕ್ಕೆ ಚಾಲನೆ ನೀಡಿದರು. ಪಡ್ಪು, ಬಂದಡ್ಕಗಳಲ್ಲಿ ಗಡಿನಾಡ ಕನ್ನಡಿಗರ ಸಂಘ, ಬಂದಡ್ಕ ಗೌಡ ಗ್ರಾಮ ಸಮಿತಿ ವತಿಯಿಂದ ಗಡಿನಾಡ ಕನ್ನಡಿಗರ ಸಂಘದ ಅಧ್ಯಕ್ಷ ಪುರುಷೋತ್ತಮ ಬೊಡ್ಡನ ಕೊಚ್ಚಿ, ಹಾಗೂ ಮತ್ತಿತರ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು. ಗಡಿ ಪ್ರದೇಶವಾದ ಕೋಲ್ಕಾರ್‌ನಲ್ಲಿಯೂ ಬಸ್‌ಗೆ ಸ್ವಾಗತ ನೀಡಲಾಯಿತು. ಕಾಞಂಗಾಡ್‌ನಿಂದ ಸುಳ್ಯಕ್ಕೆ ಬಸ್ ಬೆಳಿಗ್ಗೆ 7ಕ್ಕೆ ಹೊರಟು 9.10 ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯದಿಂದ 9.20ಕ್ಕೆ ಹೊರಟು11.30ಕ್ಕೆ ಕಾಞಂಗಾಡ್ ತಲುಪುತ್ತದೆ, ಕಾಂಞಂಗಾಡ್ ಮಧ್ಯಾಹ್ನ 12.10 ಹೊರಟು, 2.25ಕ್ಕೆ ಸುಳ್ಯ ತಲುಪುತ್ತದೆ,…
ಉಳ್ಳಾಲ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಒಬ್ಬ ರೈತ ಮತ್ತು ಓರ್ವ ರೈತ ಮಹಿಳೆಗೆ (ಅರ್ಜಿದಾರರ ಹೆಸರಿನಲ್ಲಿ ಪಹಣಿ ಇರುವುದು ಕಡ್ಡಾಯ) ಜಿಲ್ಲಾಮಟ್ಟದ ರೈತ ಪ್ರಶಸ್ತಿಯನ್ನು ನೀಡಲಿದ್ದಾರೆ. ಪ್ರಶಸ್ತಿಯನ್ನು ಅಕ್ಟೋಬರ್‌ನಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ನೀಡಲಾಗುವುದು. ಆಸಕ್ತ ರೈತ, ರೈತ ಮಹಿಳೆಯರಿಂದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ, ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ ಮಂಗಳೂರು ಅಥವಾ ಜಂಟಿ ಕೃಷಿ ನಿರ್ದೇಶಕರ ಕಛೇರಿ. ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ ಕಟ್ಟಡ. ಮೊದಲನೆ ಮಹಡಿ, ಮಂಗಳೂರು ಇಲ್ಲಿ ಲಭ್ಯವಿರುವ ಅರ್ಜಿಯನ್ನು ಪಡೆದು ಭರ್ತಿಮಾಡಿ ಸ.15 ರ ಒಳಗೆ ಈ ಮೇಲಿನ ಕಚೇರಿಗೆ ನೀಡಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9480838970, 8794706468, 8277931060
ಹೊಸದಿಲ್ಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಸುಪ್ರೀಂ ಕೋರ್ಟ್ ಗುರುವಾರ (ಆ.14) ಜಾಮೀನು ರದ್ದು ಮಾಡಿ ಆದೇಶ ಪ್ರಕಟಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಬಿ.ಪರ್ದಿವಾಲಾ ಮತ್ತು ಮಹದೇವನ್ ಅವರ ವಿಭಾಗೀಯ ಪೀಠ ಗುರುವಾರ ದರ್ಶನ್ ಆ್ಯಂಡ್ ಗ್ಯಾಂಗ್‌ನ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದೆ. ಕಳೆದ ಕೆಲ ದಿನಗಳಿಂದ ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಗುರುವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ಸಾಕ್ಷಿಗಳ ಬೆದರಿಕೆ ಮತ್ತು ಇತರ ಅಕ್ರಮಗಳನ್ನು ಸಮರ್ಪಕವಾಗಿ ಪರಿಗಣಿಸದೆ ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿದೆ ಎಂದು ಪೀಠ ಹೇಳಿದೆ. ಹೈಕೋರ್ಟ್ ಆದೇಶವನ್ನು “ವಿಕೃತ” ಮತ್ತು “ಸಂಪೂರ್ಣವಾಗಿ ಅನಗತ್ಯ” ಎಂದು ಕರೆದರು. “ಜಾಮೀನು ನೀಡಲು ಯಾವುದೇ ಕಾನೂನು ಕಾರಣವಿಲ್ಲ” ಎಂದು ಹೇಳಿದ ಪೀಠ, ದರ್ಶನ್ ಅವರ ಸ್ವಾತಂತ್ರ್ಯವು “ನ್ಯಾಯದ ಅಡಳಿತವನ್ನು ಹಳಿತಪ್ಪಿಸುವ ಅಪಾಯವನ್ನುಂಟುಮಾಡಿದೆ” ಎಂದು ಹೇಳಿದರು. ಕಾನೂನಿಗಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ, ಕಾನೂನಿಗೆ…
ಉಳ್ಳಾಲ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಿಂದಾಗಿ ಜನ ಹಳ್ಳಿ ಸಂಸ್ಕೃತಿಯ ಸೊಬಗನ್ನು ಕಡಿಮೆ ಮಾಡಿಕೊಂಡು ಜೀವನ ನಡೆಸಲಾಗುತ್ತಿದೆ. ಆದರೆ ತುಳು ಸಂಸ್ಕೃತಿಯಡಿ ಹುಟ್ಟಿ ಬೆಳೆದವರು ಹಿರಿಯರ ಆದರ್ಶ ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಸದುದ್ದೇಶದಿಂದ ಹಾಗೂ ಮುಂದಿನ ಪೀಳಿಗೆಯಲ್ಲಿ ಕೃಷಿ ಸಂಸ್ಕೃತಿಯನ್ನು ಜ್ವಲಂತವಾಗಿಡಲು ವಿದ್ಯಾರತ್ನ ಶಾಲೆಯ ಕಾರ್ಯಕ್ರಮ ಪೂರಕವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.ಅವರು ಹರೇಕಳ ಗ್ರಾಮದ ಮಂಜಲಗುತ್ತು ಮನೆಯ ಮುಂಭಾಗದಲ್ಲಿರುವ ಹಡಿಲು ಬಿದ್ದ ಮಡ್ಡೆಲ್ ಮಾರ್ ಗದ್ದೆ ಸೇರಿ ಒಟ್ಟು 16 ಗದ್ದೆಯಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಸಾಂಕೇತಿಕ ನಾಟಿ ಕಾರ್ಯಕ್ರಮ ಮತ್ತು ಕೆಸರುಗದ್ದೆಯಲ್ಲಿ ಆಟೋಟಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ತುಳುನಾಡು ಕೃಷಿಗೆ ಪೂರಕವಾದ ಫಲವತ್ತಾದ ಮಣ್ಣು ಹೊಂದಿದ್ದು, ಹಿಂದೆ ಧರ್ಮಬೇಧ, ವರ್ಗಬೇಧವಿಲ್ಲದೇ ಗದ್ದೆಗಳಲ್ಲಿ ಕೃಷಿ ಮಾಡಿದವರು. ಇದರಿಂದ ಜೀವನೋತ್ಸಾಹದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಸದ್ಯದ ಕಾಲಘಟ್ಟದಲ್ಲಿ ಕೃಷಿಯಿಂದ ದೂರ ಹೋಗುತ್ತಿದ್ದೇವೆ, ಶಿಕ್ಷಣದ ವ್ಯವಸ್ಥೆಯಿಂದಾಗಿ…

