ಮಂಗಳೂರು : ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು ಸಂಚಾರ ಸೌಲಭ್ಯವನ್ನು ಕಲ್ಪಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ತಮ್ಮ ಮನವಿ ಮೇರೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಘೋಷಿಸಿದ್ದು, ಚೌತಿಯ ಮುನ್ನಾದಿನದಂದು ಊರಿಗೆ ವಾಪಸಾಗಲು ಅನುಕೂಲವಾಗುವಂತೆ ಪ್ರಯಾಣಿಕರಿಗಾಗಿ ಎರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಲು ಅನುಕೂಲವಾಗುವಂತೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿಕೊಟ್ಟ ರೈಲ್ವೆ ಸಚಿವರಾದ ಅಶ್ವಿನ ವೈಷ್ಣವಿ ಮತ್ತು ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
Author: UllalaVani
ಉಳ್ಳಾಲ: ಮಾ.29 ರಂದು ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯಿಂದ ಕಳವಿಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ವೆಲ್ಲರಿಕುಂಡು ಜಿಲ್ಲೆಯ ಮಂಡಿಯಾನ್ ನಿವಾಸಿ ಅಬ್ದುಲ್ ಲತೀಫ್ ಯಾನೆ ಲತೀಫ್ (47) ಬಂಧಿತ.ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಹೂಟರ್ ನ ಕೇಬಲ್ ಅನ್ನು ತುಂಡು ಮಾಡಿ ಪೈನಾನ್ಸ್ ಕಂಪನಿಯಲ್ಲಿ ಕಳವು ಮಾಡಲು ಮೂವರು ಆರೋಪಿಗಳು ಪ್ರಯತ್ನಿಸಿದ್ದರು. ಪ್ರಕರಣ ಸಂಬಂಧ ಸ್ಥಳೀಯರ ಸಹಕಾರದೊಂದಿಗೆ ಕೊಣಾಜೆ ಪೊಲೀಸರು ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಞಂಗಾಡ್ ನ ಆರ್ಷದ್ ಎಂಬವರನ್ನು ಬಂಧಿಸಿದ್ದರು. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ ನಂ: 42/2025 ಕಲಂ: 331[40], 305, 62, 13 BNS ರಂತೆ ಪ್ರಕರಣ ದಾಖಲಾಗಿತ್ತು. ಇದೀಗ ಆರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಈ ಹಿಂದೆ ಕೇರಳದ ರಾಜಧಾನಿ ಜ್ಯುವೆಲ್ಲರಿ ಅಂಗಡಿಯಿಂದ 20 ಕೆಜಿ ಚಿನ್ನ ಹಾಗೂ ಕೇರಳದ ವಿಜಯ ಬ್ಯಾಂಕ್‌ನಿಂದ 15.80 ಕೆಜಿ…
ಮಂಗಳೂರು : ಈ ಬಾರಿ ಅಧಿಕ ಮಳೆ, ಕೊಳೆರೋಗದಿಂದ ಶೇ 50ಕ್ಕಿಂತ ಅಧಿಕ ಅಡಿಕೆ ನಷ್ಟವಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.ಸಂಘವು ಈ ಬಗ್ಗೆ ಆನ್‌ಲೈನ್-ಮೂಲಕ ಸಮೀಕ್ಷೆ ನಡೆಸಿತ್ತು. ದಕ್ಷಿಣ ಕನ್ನಡ ಉಡುಪಿ, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಕೃಷಿಕರು ಕೊಳೆರೋಗದ ಬಗ್ಗೆ ಮಾಹಿತಿ-ನೀಡಿದ್ದಾರೆ. ಒಟ್ಟು 503 ಕೃಷಿಕರ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಮಾಹಿತಿ -ಪ್ರಕಾರ, ಶೇ 95 ಕೃಷಿಕರ ಅಡಿಕೆ ತೋಟದಲ್ಲಿ ಕೊಳೆರೋಗ ಕಂಡು ಬಂದಿದ್ದು ಶೇ 50ಕ್ಕಿಂತ ಅಧಿಕ ಬೆಳೆ ನಷ್ಟವಾಗಿದೆ ಎಂದು ಸಂಘ ತಿಳಿಸಿದೆ. ಮಳೆಯ ಕಾರಣದಿಂದ ಶೇ 84ರಷ್ಟು ಕೃಷಿಕರಿಗೆ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ. ಶೇ 47ರಷ್ಟು ಕೃಷಿಕರಿಗೆ ಒಂದು ಬಾರಿ ಔಷಧ ಸಿಂಪಡಣೆ ಸಾಧ್ಯವಾಗಿದೆ. ಶೇ 40ರಷ್ಟು ಜನರು ಎರಡು ಬಾರಿ ಔಷಧ ಸಿಂಪಡಣೆ ಮಾಡಿದ್ದಾರೆ. ಬಹುತೇಕ ಕೃಷಿಕರು ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೊ…
ಅಮರಾವತಿ : 121 ಕೆ.ಜಿ. ಚಿನ್ನವನ್ನು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ದೇಣಿಗೆಯಾಗಿ ನೀಡಲು ಭಕ್ತರೊಬ್ಬರು ಮುಂದೆ ಬಂದಿದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಂಗಳವಾರ ತಿಳಿಸಿದ್ದಾರೆ. ತಮ್ಮ ಉದ್ಯಮವು ಯಶಸ್ವಿಯಾಗಿರುವ ಕಾರಣಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಸುಮಾರು ₹140 ಕೋಟಿ ಮೌಲ್ಯದ ಈ ಚಿನ್ನವನ್ನು ಅವರು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಮಂಗಳಗಿರಿಯಲ್ಲಿ ನಡೆದ ‘ಬಡತನ ನಿರ್ಮೂಲನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯ್ಡು, ‘ಕಂಪನಿಯೊಂದನ್ನು ಸ್ಥಾಪಿಸಲು ಬಯಸಿದ್ದ ಭಕ್ತರೊಬ್ಬರು, ಅದನ್ನು ಪ್ರಾರಂಭಿಸಿ ಉದ್ಯಮದಲ್ಲಿ ಯಶಸ್ವಿಯಾದರು. ಹಾಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ದೇಣಿಗೆ ನೀಡುತ್ತಿದ್ದಾರೆ’ ಎಂದಿದ್ದಾರೆ. ದೇಣಿಗೆ ನೀಡಲಿರುವ ಭಕ್ತ ಅನಾಮಧೇಯರಾಗಿ ಉಳಿಯಲು ಬಯಸಿದ್ದಾರೆ ಎಂದು ಹೇಳಿದ ಅವರು, ‘ತಮ್ಮ ಕಂಪನಿಯ ಶೇ 60ರಷ್ಟು ಷೇರುಗಳನ್ನು ಮಾರಿ ಸುಮಾರು ₹6 ಸಾವಿರದಿಂದ ₹7 ಸಾವಿರ ಕೋಟಿ ಗಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದ್ದಾರೆ.
ನವದೆಹಲಿ : ಚೀನಾ ದೇಶದಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿದೆ. ಅದರ ಪರಿಣಾಮ ಬ್ಯಾಡ್ಮಿಂಟನ್ ಕ್ರೀಡೆಯ ಮೇಲಾಗುತ್ತಿದೆ. ಹೌದು; ಚೀನಾದಲ್ಲಿ ಹಂದಿ ಮಾಂಸ ಖಾದ್ಯಗಳ ಸೇವನೆ ಹೆಚ್ಚುತ್ತಿದ್ದು, ಬಾತುಕೋಳಿಗಳ ಖಾದ್ಯಗಳ ಬೇಡಿಕೆ ಕುಸಿದಿದೆ. ಇದರಿಂದಾಗಿ ಬಾತುಕೋಳಿಗಳ ಪುಕ್ಕಗಳ ಲಭ್ಯತೆ ಗಣನೀಯವಾಗಿ ಕುಸಿದಿದ್ದು, ಬ್ಯಾಡ್ಮಿಂಟನ್ ಆಟದಲ್ಲಿ ಬಳಸಲಾಗುವ ಶಟಲ್ ಕಾಕ್‌ಗಳ ತಯಾರಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಫ್ರೆಂಚ್ ಸುದ್ದಿ ಪತ್ರಿಕೆ ‘ಲಾ ಎಕ್ವಿಪ್’ ಈಚೆಗೆ ವರದಿ ಮಾಡಿದೆ. ಬಾತುಕೋಳಿ ಅಥವಾ ಇನ್ನಿತರ ಪ್ರಾಣಿ, ಪಕ್ಷಿಗಳಿಂದ ಶಟಲ್ ತಯಾರಿಕೆಯ ಕಚ್ಚಾವಸ್ತುಗಳ ಮೇಲೆ ಅವಲಂಬಿತರಾಗುವುದನ್ನು ಬಿಡುವ ಕಾಲ ಇದು. ಅದಕ್ಕಾಗಿ ಈಗ ಪರ್ಯಾಯ ಮಾರ್ಗ ಹುಡುಕಬೇಕು ಎಂದು ಭಾರತದ ಶಟಲ್ ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ‘ಈಗ ಅಥವಾ ಮುಂದಿನ ದಿನಗಳಲ್ಲಿ ಪುಕ್ಕಗಳ ಬಳಕೆಯನ್ನು ಬಿಟ್ಟು ಬೇರೆ ಮಾರ್ಗದತ್ತ ನಾವು ಸಾಗಬೇಕಿದೆ. ನಮ್ಮ ಕ್ರೀಡೆಯು ಅಗಾಧವಾಗಿ ಬೆಳೆದಿದೆ. ಚೀನಾ, ಇಂಡೊನೇಷ್ಯಾ ಮತ್ತು ಭಾರತ ದೇಶಗಳು ಶಟಲ್‌ಗಳ ಬಳಕೆಯಲ್ಲಿ ಸಿಂಹಪಾಲು ಹೊಂದಿವೆ’ ಎಂದು ಭಾರತದ ರಾಷ್ಟ್ರೀಯ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ.’ಶಟಲ್‌ಗಳ ಕೊರತೆಗೆ…
ಮಂಗಳೂರು: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಗ್ರಹಣ ಸಮಾರಂಭ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ನಗರ ಅಧ್ಯಕ್ಷೆಯಾಗಿ ಮಾಜಿ ಕಾರ್ಪೊರೇಟರ್ ಕುಮಾರಿ ಅಪ್ಪಿ ಹಾಗೂ ಗ್ರಾಮಾಂತರ ಅಧ್ಯಕ್ಷೆಯಾಗಿ ಉಷಾ ಅಂಚನ್ ಅವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು. ರಾಜ್ಯ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಮಿತಾ ಡಿ ರಾವ್ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಝೀನತ್ ಅವರನ್ನು ನೇಮಕ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾಜಿ ಸಚಿವ ರಮಾನಾಥ.ರೈ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪದ್ಮರಾಜ್ ಪೂಜಾರಿ, ಸದಾಶಿವ ಉಳ್ಳಾಲ್ ಮಮತಾ ಗಟ್ಟಿ, ಶಾಲೆಟ್ ಪಿಂಟೊ, ಮಂಜುಳ ನಾಯಕ್, ಶಕುಂತಲಾ ಕಾಮತ್, ನಮಿತಾ.ಡಿ.ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾಸರಗೋಡು : ಬೇಕಲ ಸಮೀಪದ ಕೋಟಿಕುಳಂ ಎಂಬಲ್ಲಿನ ಜನವಾಸವಿಲ್ಲದ ಮನೆಯ ಕೊಠಡಿಯಲ್ಲಿ ಭಾರೀ ಪ್ರಮಾಣದ ಪ್ರಾಚ್ಯ ವಸ್ತು ಪತ್ತೆಯಾಗಿದೆ. ಕಂಚಿನ ಪಾತ್ರೆಗಳು, ಕಾಲ್ಗೆಜ್ಜೆ , ಖಡ್ಗ ಗಳು ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ. ಕೆಲ ಸಾಮಾಗ್ರಿಗಳಲ್ಲಿ ಅರಬಿ ಅಕ್ಷರಗಳನ್ನು ಪತ್ತೆ ಹಚ್ಚಲಾಗಿದೆ. ಪೊಲೀಸರು ಪ್ರಾಚ್ಯ ವಸ್ತು ಇಲಾಖೆಗೆ ಮಾಹಿತಿ ನೀಡಿದ್ದು, ತನಿಖೆಯ ಬಳಿಕ ನೈಜ ಸ್ಥಿತಿ ಅರಿವಾಗಲಿದೆ. ಮನೆಗೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.
ಕಡಬ : ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಕುರಾನ್ ನ 30 ಕಾಂಡಗಳನ್ನು ಕೈಯಲ್ಲಿ ಬರೆದು ಗಮನ ಸೆಳೆದಿದ್ದಾರೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿಯ ಪುತ್ರಿ ಸಜ್‌ಲ ಅವರು ಈ ಸಾಧನೆ ಮಾಡಿದ್ದಾರೆ. ಕುರಾನ್ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದ ಅವರು 2025ರ ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಸಜ್‌ಲ ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಅವರು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿದ್ದಾರೆ. ಆಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದಿಸಲಾಗಿದೆ. ಈ ಕೃತಿಯು ಸುಮಾರು 14 ಕೆ.ಜಿ. ತೂಕ ಇದೆ. “ಒಂದು ಪುಟ ಬರೆಯಲು ನನಗೆ ಸುಮಾರು ನಾಲ್ಕು ಗಂಟೆ ಬೇಕಾಗುತ್ತಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ…
ಮಂಗಳೂರು : “ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಐಟಿಐನಲ್ಲಿದ್ದಾರೆ. ಅಂದರೆ ಇದರರ್ಥ ನೀವು ಜೀವನದಲ್ಲಿ ವಿಫಲರಾಗಿದ್ದೀರಿ ಎಂದಲ್ಲ. ಒಂದು ವಿಷಯದಲ್ಲಿ ಮಾತ್ರ ವಿಫಲರಾಗಿದ್ದೀರಿ ಎಂದಷ್ಟೇ ಅರ್ಥ. ನಿಮ್ಮ ಆಸಕ್ತಿಯನ್ನು ಅನುಸರಿಸಿ, ಆಗ ನೀವು ಯಶಸ್ಸನ್ನು ಕಂಡುಕೊಳ್ಳುತ್ತೀರಿ. ನಾವು ಯಾರನ್ನೂ ಕಡಿಮೆ ಎಂದು ಅಂದಾಜು ಮಾಡಬಾರದು. ಪಠ್ಯಕ್ರಮಕ್ಕೆ ಅಂತ್ಯವಿರಬಹುದು, ಆದರೆ ಜೀವನದಲ್ಲಿ ಕಲಿಕೆಗೆ ಅಂತ್ಯವಿಲ್ಲ. ನಿಮ್ಮ ಕೌಶಲ್ಯವನ್ನು ಯಶಸ್ಸಿನತ್ತ ನಿಮ್ಮ ಇಚ್ಛಾಶಕ್ತಿಯೊಂದಿಗೆ ಸಂಯೋಜಿಸಿದರೆ, ನೀವು ಯಶಸ್ವಿ ವ್ಯಕ್ತಿಯಾಗುತ್ತೀರಿ” ಎಂದು ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಹೇಳಿದರು. ಸೇಂಟ್ ಅಲೋಶಿಯಸ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಸೋಮವಾರ ನಡೆದ 2025-26ರ ಹೊಸ ಶೈಕ್ಷಣಿಕ ವರ್ಷ ಮತ್ತು ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ಸೇಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ…
ಉಡುಪಿ : ಬ್ರಹ್ಮಾವರದ ಮುಂಕಿಂಜಡ್ಡು ಮೂಲದ ಯುವ ಹಾಗೂ ಬಹುಮುಖ ಪ್ರತಿಭೆಯ ವಿದುಷಿ ದೀಕ್ಷಾ ವಿ ಅವರು 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತಮ್ಮ ಹೆಸರನ್ನು ದಾಖಲಿಸಲು ಸಜ್ಜಾಗಿದ್ದಾರೆ. ‘ನವರಸ ದೀಕ್ಷಾ ವೈಭವಂ’ ಶೀರ್ಷಿಕೆಯ ಈ ಒಂಬತ್ತು ದಿನಗಳ ಸಾಧನೆಯು ಆಗಸ್ಟ್ 21ರಿಂದ ಆಗಸ್ಟ್ 30ರವರೆಗೆ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಕಾಲೇಜಿನ ಪಿಜಿ ಆಡಿಟೋರಿಯಂನಲ್ಲಿ ನಡೆಯಲಿದೆ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದುಷಿ ದೀಕ್ಷಾ, “ಮೊದಲಿಗೆ ಏನು ಮಾಡಬೇಕೆಂದು ನನಗೆ ಗೊಂದಲವಿತ್ತು, ಆದರೆ ನನ್ನ ಗುರುಗಳು ಮೊದಲು ವಿದ್ವತ್ ಮುಗಿಸಿ ನಂತರ ಈ ಗುರಿಯನ್ನು ಬೆನ್ನಟ್ಟುವಂತೆ ಸಲಹೆ ನೀಡಿದರು. ನಂತರ ವಿದ್ವಾನ್ ಯಶ್ವಂತ್ ಎಂ.ಜಿ. ಅವರು 24 ಗಂಟೆಗಳ ಕಾಲ ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದಾಗ, ನಾನೂ ಕೂಡ ಒಂದು ದಾಖಲೆ ಮಾಡಲು ಪ್ರೇರೇಪಿತನಾದೆ. ಅವರ ಮಾರ್ಗದರ್ಶನದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದೆ. ನನ್ನ ವಿದ್ವತ್…

