ಉಳ್ಳಾಲ : ಪ್ರಸ್ತುತ ದಿನಗಳಲ್ಲಿ ಬೆಳ್ಳಿಯ ಅಣಿ, ಚಿನ್ನದ ಮೊಗದ ಮೂಲಕ ದೈವದ ಚೆಂದ ನೋಡುವ ಅಭಿಲಾಷೆ ಎಲ್ಲರದ್ದಾಗಿದೆ. ಆದರೆ ಅಂದು ಗುಡ್ಡೆಯ ಹೂ, ತೋಟದ ಗಿಡಗಳಿಂದ ಸಿರಿಸಿಂಗಾರವಾಗುತ್ತಿದ್ದ ಕಾಲವಿತ್ತು, ಅಂದು ಆರಾಧಿಸುವವರ ಮನಸ್ಸು ಚಿನ್ನದಂತಿತ್ತು. ಕ್ಷಣಮಾತ್ರದಲ್ಲಿ ಪ್ರಾರ್ಥಿಸಿದಾಗಲೇ ಫಲಗಳು ದೊರೆಯುತಿತ್ತು ಎಂದು ಧರ್ಮದರ್ಶಿ ಶ್ರೀ ಉಳ್ಳಾಲ್ತಿ ಧರ್ಮರಸು ಕ್ಷೇತ್ರ ಉಳಿಯದ ದೇವು ಮೂಲ್ಯಣ್ಣ ಹೇಳಿದರು.

ಅವರು ಚೆಂಬುಗುಡ್ಡೆಯ ಶ್ರೀ ಕೊರಗ ತನಿಯ ಸೇವಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 48ನೇ ವಾರ್ಷಿಕ ಕೋಲ ಹಾಗೂ ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಖಂಡಭಾರತವಾಗಿ ಮೆರೆಯಲು ಯುವಜನರಿಂದ ಸಾಧ್ಯ. ಜಿಲ್ಲೆ ಪವಿತ್ರವಾದ ಕ್ಷೇತ್ರ. ದೈವ-ದೇವರುಗಳ ತವರೂರು, ತುಳುನಾಡಿನಲ್ಲಿ ಹೆಚ್ಚಾಗಿ ದೈವ ಕಾರಣಿಕ ತೋರಿಸಿದೆ. ಕೊರಗ ತನಿಯನೂ ಹಾಗೆ. ನಾಲ್ಕು ದಿಕ್ಕಿನಲ್ಲಿ ದೈವ ದೇವರುಗಳು ಕಾಪಾಡುತ್ತಿದ್ದಾರೆ ಪ್ರಕೃತಿ ವಿಕೋಪಗಳು ಖಂಡಿತವಾಗಿಯೂ ಬಂದಿಲ್ಲ. ಮಳೆ, ಕೃಷಿ ಸರಿಯಾದ ಸಮಯದಲ್ಲಿ ಆಗಲು ದೈವ ದೇವರುಗಳೇ ಕಾರಣ. ಯುವಜನ ಎದುರುಬಂದಾಗ ಸೇವಾ ಸಮಿತಿಗಳು ಉದ್ಧಾರವಾಗಲು ಸಾಧ್ಯ ಎಂಬುದಕ್ಕೆ ಚೆಂಬುಗುಡ್ಡೆಯ ಕೊರಗ ತನಿಯ ಸೇವಾ ಸಮಿತಿಯೇ ಉದಾಹರಣೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೈರಂಗಳ ಶಾರದಾಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿನಗರ ಸಂಚಾಲಕ ಟಿ.ಜಿ.ರಾಜಾರಾಂ ಭಟ್ ಮಾತನಾಡಿ, ಕೆರೆಬೈಲಿನಂತಹ ಯುವಕರ ತಂಡವನ್ನು ಮೋದಿಯವರಿಗೆ ಪರಿಚಯಿಸಿದಲ್ಲಿ ದೇಶ ವೇಗವಾಗಿ ಬಲಿಷ್ಠವಾಗಲು ಸಾಧ್ಯ. ಸಮಾಜದಲ್ಲಿ ವಿಶ್ವಾಸದ ಕೊರತೆಯಿದೆ. ಅದನ್ನು ಬುದ್ಧಿವಂತಿಕೆಯಿಂದ ನೀಗಿಸಬೇಕಿದೆ ತುಳುನಾಡು ದೇವರ ಸ್ವಂತ ನಾಡು, ಮಣ್ಣು, ಕಲ್ಲು ಎಲ್ಲವನ್ನೂ ಆರಾಧಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ, ಎಲ್ಲರಿಗೂ ಕಾಣುವಂತೆ ಕೊರಗ ತನಿಯ ಸೇವಾ ಸಮಿತಿ ಯೋಜನೆ ಬೆಳೆದುನಿಲ್ಲಲಿ. ಯಾವುದೇ ಕೆಲಸಕ್ಕೆ ಕುಂದು ಕೊರತೆ ಬಾರದಂತೆ ಮುಂದುವರಿಯಲಿ. ಚೆಂಬುಗುಡ್ಡೆಯದ್ದು ಧರ್ಮ ಸಂಸ್ಕಾರ ಕ್ಷೇತ್ರ ಕಲೆ ಕಾರಣಿಕ ಹೊಂದಿರುವ ಕ್ಷೇತ್ರವಾಗಿದೆ ಎಂದರು.
ಈ ಸಂದರ್ಭ ಉದ್ಯಮಿ ಲಾಂಚುಲಾಲ್ ಕೆ.ಎಸ್, ಪಿಲಾರು ಶ್ರೀ ಪಂಜಂದಾಯ ಬಂಟ ವೈದ್ಯನಾಥ ಸೇವಾ ಸಮಿತಿ ಕೋಶಾಧಿಕಾರಿ ಸದಾಶಿವ ಶೆಟ್ಟಿ ದೇಲಂತಬೆಟ್ಟು ಪಿಲಾರು , ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ‍್ಯದರ್ಶಿ ದಯಾನಂದ ತೊಕ್ಕೊಟ್ಟು, ದಂತ ವೈದ್ಯೆ ಡಾ.ಮೋಕ್ಷಾ , ಚೆಂಬುಗುಡ್ಡೆ ರಾಷ್ಟ್ರೋತ್ಥಾನ ಶಾಲೆ ಕಾಯಾಧ್ಯಕ್ಷ ಪ್ರಖ್ಯಾತ್ ರೈ , ಭಾರತೀಯ ತೀಯ ಸಮಾಜ ಉಳ್ಳಾಲ ವಲಯ ಅಧ್ಯಕ್ಷ ಜಯಂತ್ ಕೊಂಡಾಣ, ತೆರಿಗೆ ಸಲಹೆಗಾರರಾದ ತಾರಾನಾಥ ಕಣ್ವತೀರ್ಥ, ಓವರ್ ಬ್ರಿಡ್ಜ್ ಗಣೇಶನಗರದ ಶ್ರೀ ಗಣೇಶ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಗಟ್ಟಿ, ಶ್ರೀ ಕೊರಗ ತನಿಯ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ರೈ, ಉಳ್ಳಾಲ ನಗರಸಭೆ ಸದಸ್ಯ ರಾಜೇಶ್ ಯು.ಬಿ, ಪ್ರಧಾನ ಕರ‍್ಯದರ್ಶಿ ಸಂದೀಪ್, ಕೋಶಾಧಿಕಾರಿ ರಾಜ ಮೆಸ್ಕಾಂ, ಉಪಾಧ್ಯಕ್ಷ ನಾಗೇಶ್ ಕುಮಾರ್, ಕಾರ‍್ಯದರ್ಶಿ ಪ್ರದೀಪ್, ಜತೆ ಕಾರ‍್ಯದರ್ಶಿಗಳಾದ ದಯಾನಂದ ಸಾಲ್ಯಾನ್, ಧನರಾಜ್, ವಿಕ್ರಂ ಸನಿಲ್, ನಾಗೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಅಗೆಲು ಅಡುಗೆ ನಡೆಸುತ್ತಾ ಬಂದಿರುವ ಹಿರಿಯರಾದ ವಾರಿಜಾ ಅವರನ್ನು ಸನ್ಮಾನಿಸಲಾಯಿತು. ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರನ್ನು ಅಭಿನಂದಿಸಲಾಯಿತು.

