Author: UllalaVani

Kannada News From Coastal Karnataka

ಉಳ್ಳಾಲ ವಲಯ ಬಿಲ್ಲವರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ, ಗುರು–ಗಾಂಧಿ ಸಂವಾದದ 100ನೇ ವರ್ಷದ ಅಂಗವಾಗಿ ‘ಶತಮಾನದ ಮಹಾಪ್ರಸ್ಥಾನ – ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ’ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗುರುವಾರ ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ–ಸೋಮೇಶ್ವರ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಉಳ್ಳಾಲ ವಲಯ ಬಿಲ್ಲವರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಟಿ. ಸುವರ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶತಮಾನೋತ್ಸವದ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಕುಂಪಲ, ಗುರು–ಗಾಂಧಿ ಸಂವಾದ ಶತಮಾನೋತ್ಸವ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ, ಶ್ರೀ ನಾಗಬ್ರಹ್ಮ ದೇವಸ್ಥಾನದ ಆಡಳಿತ ಮೊಕೇಸರ ಶ್ರೀ ಭಾಸ್ಕರ ಐತಾಳ್, ಬಂಟರ ಸಂಘ (ರಿ.) ಉಳ್ಳಾಲ ವಲಯದ ಅಧ್ಯಕ್ಷ ಶ್ರೀ ರವೀಂದ್ರ ರೈ ಕಲ್ಲಿಮಾರ್ ಸೇರಿದಂತೆ ಹಲವು ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಶುಭ ಹಾರೈಸಿದರು. ಮೊಗವೀರ, ತೀಯ, ಗಾಣಿಗ,…

Read More

ಬಂಟ್ವಾಳ, ನ. 27 : ಸಜೀಪನಡು ಗ್ರಾಮದ ದೇರಾಜೆಯ ದೀಕ್ಷಿತ್ ಅವರ ಮನೆಗೆ ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳನೋರ್ವ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ನಡೆದಿದೆ. ಮನೆಯಲ್ಲಿ ಸರೋಜಿನಿ ಎನ್ನುವ ಮಹಿಳೆಯನ್ನು ನಿಲ್ಲಿಸಿ ಮನೆಮಂದಿ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಮಧ್ಯಾಹ್ನ 2-3 ರ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಆಗಮಿಸಿ ದೀಚು (ದೀಕ್ಷಿತ್) ಅವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ತಿಳಿಸಿದ್ದಾರೆಂದು ಹೇಳಿದನು. ಸತ್ಯವೆಂದು ನಂಬಿದ ಸರೋಜಿನಿ ಆತನನ್ನು ಒಳಗೆ ಬಿಟ್ಟಿದ್ದರು.ಆತ ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿದ್ದಾನೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ: ಪಕ್ಷ, ಧರ್ಮ, ರಾಜಕೀಯರಹಿತವಾಗಿ ಆಚರಿಸುವ ಕಾರ್ಯಕ್ರಮ ಕೊಣಾಜೆಯ ಮಣ್ಣಿನಲ್ಲಿ ನಡೆಯಲಿದೆ. ರಾಜ್ಯಮಟ್ಟದ ಸಮಿತಿಯ ನಿರ್ದೇಶನದಂತೆ ತಳಮಟ್ಟದಲ್ಲಿ ತನ್ನ ಕ್ಷೇತ್ರದ ಜನತೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಮಹಾನ್‌ ಚೇತನರ ಕಾರ್ಯಕ್ರಮಗಳನ್ನು ಯಶಸ್ಸುಗೊಳಿಸಿರಿ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು. ಡಿ.3 ರಂದು ಕೊಣಾಜೆ ಮೈದಾನದಲ್ಲಿ ಶಿವಗಿರಿ ಮಠ, ವರ್ಕಳ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ಜರಗಲಿರುವ ಶತಮಾನ ಮಹಾಪ್ರಸ್ಥಾನ ಶ್ರೀ ನಾರಾಯಣ ಗುರು-ಗಾಂಧೀಜಿ ಸಂವಾದ ಶತಮಾನೋತ್ಸವ ಕುರಿತು ಡಿಸಿಸಿ ಸದಸ್ಯೆ ದೇವಕಿ ಆರ್‌ ಉಳ್ಳಾಲ್‌ ಇವರ ಬಂಡಿಕೊಟ್ಯದಲ್ಲಿರುವ ಸ್ವರ್ಣ ಕುಂಭ ಮನೆಯಲ್ಲಿ ಜರಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯಮಟ್ಟದಲ್ಲಿ ಬಿ.ಕೆ.ಹರಿಪ್ರಸಾದ್‌, ಪಿ.ವಿ.ಮೋಹನ್‌ ರಂತಹ ಮುಖಂಡರು ಅಹರ್ನಿಶಿ ದುಡಿದು ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ತಳಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಜನತೆಯೂ ಭಾಗವಹಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿಸಿಕೊಳ್ಳುವ ಮೂಲಕ ಐತಿಹಾಸಿಕ ಕಾರ್ಯಕ್ರಮದ ಭಾಗವಾಗಿರಿ. ಅತ್ಯಂತ ಯಶಸ್ವಿ ಉತ್ಸವದ ಕಾರ್ಯಕ್ರಮವಾಗಿ ಪರಿವರ್ತಿಸುವ ಜವಾಬ್ದಾರಿಯಾಗಿದೆ. ಬೆಳಿಗ್ಗೆ ೧೦ ಕ್ಕೆ ಎಲ್ಲರೂ…

Read More

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಕಾರ್ಯಕ್ರಮವು ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ವಿಜ್ರಂಭಣೆಯಿಂದ ಶ್ರದ್ಧಾಭಕ್ತಿಯೊಂದಿಗೆ ಜರಗಿತು. ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಿತು. ದೇವಸ್ಥಾನಕ್ಕೆ ಬೆಂಗಳೂರಿನ ಉದ್ಯಮಿ ನಾಗೇಶ್ ರಾವ್ ಅತ್ತಾಳ ಇವರಿಂದ ಹೂವಿನ ಅಲಂಕಾರ ಸೇವೆಯನ್ನು ಮಾಡಿಸಿದರು. ಇವರಿಗೆ ವ್ಯವಸ್ಥಾಪನ ಸಮಿತಿಯಿಂದ ಶಾಲು ಪ್ರಸಾದ ನೀಡಿದರು. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವರ ಸೇವೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನದ ಬಳಿಯಲ್ಲಿಯೇ ಹಣ್ಣುಕಾಯಿ ಅಂಗಡಿ ಹಾಗೂ ಹರಕೆಯ ಬೆಳ್ಳಿ ಆಭರಣಗಳ ಅಂಗಡಿಯು ತೆರೆದು ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು. ವರ್ಷಂಪ್ರತಿ ಶ್ರೀ ಕ್ಷೇತ್ರದಲ್ಲಿ ಗೊನೆ ಮುಹೂರ್ತದಿಂದ ಹಿಡಿದು ಷಷ್ಠಿ ಮಹೋತ್ಸವದ ತನಕ ಶ್ರೀ ದೇವರ ಸನ್ನಿಧಿಯಲ್ಲಿ ಶ್ರದ್ಧಾಭಕ್ತಿಯ…

Read More

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ರವರು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರ ಮನೆಗೆ ಬೇಟಿ ನೀಡಿ ಜಾಗತಿಕ ಬಿಲ್ಲವರ ಕ್ರೀಡೋತ್ಸವಕ್ಕೆ ಸಹಕಾರ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ರವರಿಗೆ ಶಾಲು, ಪುಷ್ಪಗುಚ್ಛ ಮತ್ತು ದಾಮೋದರ ಆರ್.ಸುವರ್ಣ ರವರ ಜೀವನಾಧರಿತ ಶತಮಾನದ ಶಕಪುರುಷ ಪುಸ್ತಕ ನೀಡಿ ಯೂನಿಯನ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು ಗೌರವಿಸಿದರು. ಡಿಸೆಂಬರ್ ೨೧ ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯುವ ದಾಮೋದರ ಆರ್.ಸುವರ್ಣ ಟ್ರಸ್ಟ್ ನ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಮತ್ತು ಜನವರಿ ೧೮ ರಂದು ಯೂನಿಯನ್ ವತಿಯಿಂದ ಮಂಗಳೂರಿನಲ್ಲಿ ನಡೆಯುವ ಜಾಗತಿಕ ಬಿಲ್ಲವರ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಯಿತು. ಮತ್ತು ಕ್ರೀಡೋತ್ಸವಕ್ಕೆ ಸಿ.ಆರ್.ಎಸ್. ನಿಧಿ ಯಿಂದ ಆರ್ಥಿಕ ಸಹಕಾರ ನೀಡಲು ಮನವಿ ನೀಡಲಾಯಿತು. ಈ ಸಂದರ್ಭ ಬಿಲ್ಲವರ ಮಹಿಳಾ ಸಂಘದ…

Read More

ತಮಿಳುನಾಡು, ನವೆಂಬರ್ 27: ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ. ಹೀಗಾಗಿ ಕೆಲವರು ಮೈ ದಂಡಿಸಿ ದುಡಿಯದೇ ಕಳ್ಳತನದ (theft) ಹಾದಿ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನು ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ (Tirunelveli District of Tamil Nadu) ವಿಚಿತ್ರ ಘಟನೆಯೊಂದು ನಡೆದಿದೆ. ಪಲಯಪೆಟ್ಟೈ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ ಕಳ್ಳನು ಕದಿಯಲು ಏನು ಸಿಗದ ಕಾರಣ ನಿರಾಸೆಗೊಂಡಿದ್ದಾನೆ. ಕೊನೆಗೆ ಮನೆಮಾಲೀಕರಿಗೆ ಪತ್ರ ಬರೆದಿಟ್ಟು ಹೋಗಿದ್ದು, ಈ ಪತ್ರವು ವೈರಲ್ ಆಗಿದೆ. ಮನೆಗೆ ನುಗ್ಗಿದ ಕಳ್ಳನು ಹಣ, ಆಭರಣದ ಹುಡುಕಾಟದಲ್ಲಿದ್ದಾಗ ಹುಂಡಿಯಲ್ಲಿದ್ದ 2,000 ರೂ ಮಾತ್ರ ಸಿಕ್ಕಿದೆ. ಇದರಿಂದ ಹತಾಶೆಗೊಂದು ಮನೆಮಾಲೀಕರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾನೆ. ಈ ಮನೆಯಲ್ಲಿ ಒಂದು ರೂಪಾಯಿ ಕೂಡ ಇಲ್ಲ, ಮುಂದಿನ ಬಾರಿ ಯಾರಾದರೂ ಕದಿಯಲು ಬಂದಾಗ, ಅವರು ಮೋಸ ಹೋಗದಂತೆ ಹಣವನ್ನು ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾನೆ. ಈ ಮನೆಯ ಭದ್ರತಾ ವ್ಯವಸ್ಥೆಯನ್ನು ಟೀಕಿಸಿದ್ದು, ಒಂದೇ ಒಂದು ರೂಪಾಯಿ…

Read More

ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ. ಮಾತಿನಲ್ಲಿ ತೂಕ ಹಾಗೂ ಜೀವನದ ಅನುಭವವನ್ನು ಹೇಳುತ್ತ ತಮ್ಮ ದುಡಿಮೆಯಲ್ಲಿ ಖುಷಿ ಕಾಣುತ್ತಿರುವ ಹಿರಿ ಜೀವವಿದು . 72ರ ಇಳಿ ವಯಸ್ಸಿನಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿರುವ ಇದು ಗೋವಿಂದಣ್ಣನ ಬದುಕಿನ ಕಥೆ. ಇವರ ಕಾಯಕ ಮಾತ್ರವಲ್ಲ, ಇವರ ಪ್ರತಿಯೊಂದು ಮಾತು ಕೂಡ ಎಲ್ಲರಿಗೂ ಸ್ಫೂರ್ತಿ ನೀಡುವಂತಿದೆ. ಶ್ರಮಜೀವಿಯ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ಮೆಚ್ಚಿಕೊಂಡಿದ್ದಾರೆ. Uppukari786 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಲಾರಿ ಓಡಿಸುತ್ತಾ ತಮ್ಮ ಬದುಕಿನ ಕೆಲ ವಿಚಾರಗಳನ್ನು ಹೇಳುವುದನ್ನು ನೋಡಬಹುದು. ಜಾತಿ ಭೇದ ಮಾಡಬಾರದು, ನನಗೆ ಎಲ್ಲರೂ ಬೇಕು ಎನ್ನುತ್ತಾ, ತಮ್ಮ ಬದುಕಿನ ಒಂದೊಂದೇ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಎರಡು ವರ್ಷ ಬಾಡಿಗೆ ಮನೆಯಲ್ಲಿದ್ರೂ ಬಾಡಿಗೆ ಕೊಡಲಿಲ್ಲ, ದಿನಸಿ ಸಾಲ ತರ್ತಿದ್ದೆ. ಆದರೂ ಹಣ ಕೊಡು ಅಂತ ಯಾರು ಕೇಳಿಲ್ಲ. ನಾನು ಸುಮ್ಮನೆ ಕೂರುವುದಿಲ್ಲ. ಲಾರಿ ಓಡಿಸುವುದಲ್ಲದೇ, ಗದ್ದೆ ಉಳುಮೆ, ಭತ್ತ ಕಟಾವು ಹೀಗೆ ಕೃಷಿ…

Read More

ಕೊಲ್ಕತ್ತಾ, ನವೆಂಬರ್ 27: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್‌ನ ಒಂದು ಕುಟುಂಬದ 6 ಜನರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಅವರೆಲ್ಲರೂ ಮನೆಯಲ್ಲಿ ತಿಂದ ಊಟ. ಆ ಮನೆಯ ಮಹಿಳೆ ನೀರು ಎಂದು ಭಾವಿಸಿ ಆ್ಯಸಿಡ್ ಹಾಕಿ ಅಡುಗೆ ಮಾಡಿದ್ದರು. ಅದನ್ನು ಊಟ ಮಾಡಿದವರ ಸ್ಥಿತಿ ಗಂಭೀರವಾಗಿದೆ. ಈ ವಿಚಿತ್ರ ಘಟನೆ ಕೇಳಿ ಆಸ್ಪತ್ರೆಯ ವೈದ್ಯರು ಹಾಗೂ ಪೊಲೀಸರು ದಂಗಾಗಿದ್ದಾರೆ. ಈ ಘಟನೆ ನವೆಂಬರ್ 23ರಂದು ಘಾಟಲ್‌ನ ಮನೋಹರ್‌ಪುರ I ಗ್ರಾಮ ಪಂಚಾಯತ್ ವ್ಯಾಪ್ತಿಯ ರತ್ನೇಶ್ವರಬತಿ ಪ್ರದೇಶದಲ್ಲಿ ನಡೆದಿದೆ. ನೀರಿನ ಬದಲು ಆಸಿಡ್ ಬಳಸಿ ಬೇಯಿಸಿದ ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ 6 ಜನರು ಅಸ್ವಸ್ಥರಾಗಿದ್ದಾರೆ. ಮೂವರು ಮಕ್ಕಳು ಸೇರಿದಂತೆ 6 ಜನರನ್ನೂ ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಂಧು ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಅವರು ಬೆಳ್ಳಿ ಆಭರಣಗಳನ್ನು ತಯಾರಿಸುವ…

Read More

ಉಳ್ಳಾಲ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನಾಭರಣವನ್ನು 22 ಕ್ಯಾರೇಟಿನ ಚಿನ್ನವೆಂದು ನಂಬಿಸಿ ಅಡಮಾನ ಇಡುವ ಮೂಲಕ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಟ್ಟು 9 ಕ್ಯಾರೇಟಿನ 141 ಗ್ರಾಂ ನಕಲಿ ಚಿನ್ನಾಭರಣಗಳು, 6 ಮೊಬೈಲ್ ಫೋನ್‌ಗಳು ಹಾಗೂ ₹47,000 ನಗದು ವಶಪಡಿಸಿಕೊಳ್ಳಲಾಗಿದೆ. ನ.22 ರಂದು ಆರೋಪಿ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ತೊಕ್ಕೊಟ್ಟು ದ್ವಾರಕ ಕಾಂಪ್ಲೆಕ್ಸ್‌ನ ಗುರು ರಾಘವೇಂದ್ರ ಫೈನಾನ್ಸ್ & ಇನ್‌ವೆಸ್ಟ್ಮೆಂಟ್ ಸಂಸ್ಥೆಯಲ್ಲಿ 9 ಕ್ಯಾರೇಟಿನ 41 ಗ್ರಾಂ ಚಿನ್ನಾಭರಣವನ್ನು 22 ಕ್ಯಾರೇಟಿನಂತೆ ತೋರಿಸಿ ಝಹೀಮ್ ಅಹ್ಮದ್ ಹೆಸರಿನಲ್ಲಿ ₹3,55,000 ಸಾಲ ಪಡೆದಿದ್ದರು. ಬಳಿಕ ನ 24 ರಂದು ಆರೋಪಿ ಇಮಿತಿಯಾಜ್ ಕೂಡ ಇದೇ ರೀತಿಯ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಲು ಬಂದಾಗ ಸಂಸ್ಥೆಗೆ ಅನುಮಾನ ಉಂಟಾಗಿ ಚಿನ್ನಾಭರಣವನ್ನು ಪರಿಶೀಲಿಸಿದ್ದು ಅದು ನಕಲಿ ಚಿನ್ನ ಎನ್ನುವುದು ಬಹಿರಂಗವಾಯಿತು. ಇದನ್ನು ಆಧರಿಸಿ ನ. 25ರಂದು ಉಳ್ಳಾಲ ಠಾಣೆಯಲ್ಲಿ…

Read More

ಮಂಗಳೂರು, ನ. 25 : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಎಲ್ಲವೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯ. ಬಂಟ ಸಮಾಜಕ್ಕೆ ರಾಜ್ಯವನ್ನು ಆಳುವ ಸಾಮರ್ಥ್ಯವಿದೆ. ನಮ್ಮ ಬಂಟರು ವಿಶ್ವದೆಲ್ಲೆಡೆ ಇದ್ದಾರೆ ಅವರೆಲ್ಲ ಒಗ್ಗೂಡಿದರೆ ರಾಷ್ಟ್ರ ಸುಭದ್ರವಾಗುತ್ತದೆ” ಎಂದರು.ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, “ಜಿಲ್ಲೆಯ ಬೇರೆಲ್ಲಾ ಸಂಘಗಳಿಗೆ ಮಾದರಿಯಾಗಿ ನಮ್ಮ ಜಿಲ್ಲೆಗೆ ಗೌರವ ತಂದ ಸಂಘ ಏನಾದರೂ ಇದ್ದರೆ ಅದು ಬಂಟರ ಸಂಘ. ಬಂಟ ಸಮಾಜದ ಜೊತೆಗೆ ಎಲ್ಲ ಸಮಾಜವನ್ನು ಜೊತೆಗೆ ಕೊಂಡೊಯ್ಯುವ ತಾಕತ್ತು ಈ ಸಂಘಕ್ಕಿದೆ. ಭಿನ್ನಾಭಿಪ್ರಾಯ ಇದ್ದಾಗ ಎಲ್ಲ…

Read More