ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಸಮುದ್ರ ತೀರದ ಮಳೆ ನೀರಿನ ಚರಂಡಿಗೆ ತ್ಯಾಜ್ಯ ಎಸೆದ ಗುಜರಿ ಅಂಗಡಿ ಮಾಲೀಕನಿಗೆ ಪುರಸಭೆ ಆಡಳಿತ ರೂ. 20,000 ದಂಡ ವಿಧಿಸಿದೆ.

ಬೀರಿ ಎ.ಆರ್ ಟ್ರೇಡರ್ಸ್ ನ ಗುಜರಿ ಅಂಗಡಿ ಮಾಲೀಕ ಸಯ್ಯದ್ ಸಂಶೀರ್ ಎಂಬವರ ವಿರುದ್ಧ ದಂಡ ಹಾಕಲಾಗಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ ಪರಿಸರದಲ್ಲಿ ಮಳೆ ನೀರಿನ ಚರಂಡಿಗೆ ತ್ಯಾಜ್ಯವಸ್ತುಗಳನ್ನು ಎಸೆದು ಪರಿಸರ ಮಾಲಿನ್ಯಗೊಳಿಸಿರುವುದು ಕಂಡು ಬಂದಿತ್ತು. ಅದರಂತೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ 15 ಕಡೆಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದ್ದು,ತ್ಯಾಜ್ಯ ಎಸೆಯುವವರ ಮೇಲೆ ನಿಘಾ ವಹಿಸಲಾಗಿತ್ತು. ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಎಚ್ಚರಿಸಿದ್ದರು.



