Author: UllalaVani

Kannada News From Coastal Karnataka

ಮಂಗಳೂರು, ಡಿ. 02 : ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಬಂಧಿತ ವ್ಯಕ್ತಿ.ತೂರಾಡಿಕೊಂಡು ಹೋಗುತ್ತಿದ್ದ ಆತನನ್ನು ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಉಳ್ಳಾಲ : ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಇಲ್ಲಿ ಪ್ರತಿವಾರ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ನ. 26 ವಾರ್ಷಿಕ ಕಾರ್ಯಕ್ರಮ ನವೆಂಬರ್ 30 ರವಿವಾರ ಸಂಜೆ 7 ಗಂಟೆಗೆ ಮಸೀದಿ ಅಧ್ಯಕ್ಷ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ಜರಗಿತು. ಹಮೀದ್ ಫೈಝಿ ಖತೀಬರು 407,ಜುಮಾ ಮಸೀದಿ ಉಚ್ಚಿಲ ಉದ್ಘಾಟಿಸಿದರು ಮುನೀರ್ ಸಖಾಫಿ ಕೆ ಸಿ ರೋಡ್ ಪ್ರಾಸ್ತಾವಿಕ ಭಾಷಣ ಮಾಡಿದರು, ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಮಾತನಾಡಿದರು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಸ್ವಲಾತ್ ನೇತೃತ್ವ ಹಾಗೂ ಮುಖ್ಯ ಬಾಷಣ ಮಾಡಿದರು, ವೇದಿಕೆಯಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ನೌಫಲ್ ಅಹ್ಸನಿ ಮದರಸ ಸದರ್, ಶಕೂರ್ ಸಅದಿ ಮಹಧ್ಸಿನ್, ಫಾರೂಕ್ ಸಅದಿ ಕೊಮರಂಗಳ, ಉಮರಬ್ಬ ಮಂಗಳೂರು, ಎನ್ ಎಸ್ ಉಮರ್ ಮಾಸ್ಟರ್, ಅಬ್ಬಾಸ್ ಹಾಜಿ…

Read More

ಮುಡಿಪುವಿನ ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯ ವಾರ್ಷಿಕ ಅಥ್ಲೆಟಿಕ್ ಮೀಟ್‌ನ್ನು 27-11-25 ರಂದು ಹೂಹಾಕುವಕಲ್ಲು ಮೈದಾನದಲ್ಲಿ ಭವ್ಯವಾಗಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಿ. ರಾಜೇಶ್ ಹಾಗೂ ಅಂತರಾಷ್ಟ್ರೀಯ ಅಥ್ಲೀಟ್ ಸರಸ್ವತಿ ಕಾಮತ್ ಹಾಜರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾದ ಮಜೀದ್ ಎಂ ಎ , ಕರಸ್ಪಾಂಡೆಂಟ್ ನಹದ ಎಂ , ಆಡಳಿತಾಧಿಕಾರಿ ಮೊಯಿದೀನ್, ವಕೀಲರಾದ ಮಹಮ್ಮದ್ ಅಸ್ಗರ್, ಮುಖ್ಯೋಪಾಧ್ಯಾಯಿನಿ ಸಫೂರಾ, ಪಿಟಿಎ ಅಧ್ಯಕ್ಷ ಹನೀಫ್ ಹಾಗೂ ಹಿತೈಷಿ ಹಸನ್ ಉಪಸ್ಥಿತರಿದ್ದರು. ಮಕ್ಕಳು ವಿವಿಧ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಓಟ, ಲಾಂಗು ಜಂಪ್, ಥ್ರೋ ಬಾಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮೆರೆದಿತ್ತು . ಪಾಲಕರಿಗಾಗಿ ಆಯೋಜಿಸಿದ ಮನರಂಜನಾ ಆಟಗಳು ಮತ್ತು ಹಳೆಯ ವಿದ್ಯಾರ್ಥಿಗಳ ಅಲ್್ಯೂಮಿನಿ ಪಂದ್ಯಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಹೆಚ್ಚಿಸಿವೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಸಹಕರಿಸಿದರು.

Read More

ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಇನ್ನೋವೇಷನ್ ಕೌನ್ಸಿಲ್ ಅವರ ಆಶ್ರಯದಲ್ಲಿ, ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ವಿಭಾಗಗಳ ಜಂಟಿ ಸಂಘಟನೆಯಲ್ಲಿ ನಾಲ್ಕು-ದಿನಗಳ ಐಐ ಮತ್ತು ರೋಬೋಟಿಕ್ಸ್ ತರಬೇತಿ ಕಾರ್ಯಕ್ರಮವನ್ನು ನವೆಂಬರ್ 20 ರಿಂದ 25 ರ ವರೆಗೆ ಮ್ಯಾಜಿಸ್ ಬ್ಲಾಕ್’ನ ಕಾನ್ಫರೆನ್ಸ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ಸಮನ್ವಯಕರಾಗಿದ್ದ ಡಾ. ಅನ್ನಿ ಸಿರಿಯನ್, ಶ್ರೀ ಪ್ರೇಮ್ ಮತ್ತು ಶ್ರೀ ಅರ್ರನ್ ಇವರು, ಡೀನ್ ಡಾ. ಬೋಜಮ್ಮಾ, ರೆ। ಫಾ। ಡೆನ್ಝಿಲ್ ಮತ್ತು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತಿ ಅವರ ಶೈಕ್ಷಣಿಕ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ತಿಂಕ್‌ಪ್ರೋ ಅಕಾಡೆಮಿಯ ಬೋಧಕರಾದ ತರುಣ್ ಶರ್ಮಾ ಅವರು ನಡೆಸಿದ ಉದ್ಘಾಟನಾ ಸಭೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತರಬೇತಿಯ ಉದ್ದೇಶಗಳು, ರಚನೆ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಅವರು ಮುಂದಿಟ್ಟರು. ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್’ನ ಮೂಲಭೂತ ಪರಿಕಲ್ಪನೆಗಳೊಂದಿಗೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಮಾರ್ಗದರ್ಶನದೊಂದಿಗೆ ಪ್ರಾಯೋಗಿಕ ಕೋಡಿಂಗ್…

Read More

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್, ಮಲೇರಿಯಾ ಪತ್ತೆ ಹಾಗೂ ತಡೆ ಕಾರ್ಯಗಳಲ್ಲಿ ಆರೋಗ್ಯ ಇಲಾಖೆಗೆ ಬೆಂಬಲ ನೀಡುವ ಉದ್ದೇಶದಿಂದ 100 ಟಾರ್ಚ್‌ಗಳನ್ನು ವಿತರಿಸುವ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಜಸಿಂತ ಡಿಸೋಜಾ ಉಪಸ್ಥಿತರಿದ್ದು, ರೋಹನ್ ಕಾರ್ಪೊರೇಶನ್‌ನ ಸೇಲ್ಸ್ ಮ್ಯಾನೇಜರ್ ಶ್ರೀ ಸವಿಲ್ ಅವರು ಆರೋಗ್ಯ ಇಲಾಖೆಗೆ ಟಾರ್ಚ್‌ಗಳನ್ನು ಹಸ್ತಾಂತರಿಸಿದರು. ರಾತ್ರಿ ಸಮಯದಲ್ಲಿ ನಡೆಯುವ ಕ್ಷೇತ್ರ ಪರಿಶೀಲನೆ, ಕೀಟಜನ್ಯ ಉತ್ಪತ್ತಿ ತಾಣಗಳ ಪತ್ತೆ ಹಾಗೂ ಮಲೇರಿಯಾ ನಿಯಂತ್ರಣ ಕಾರ್ಯಗಳಿಗೆ ಈ ಟಾರ್ಚ್‌ಗಳು ಆರೋಗ್ಯ ಸಿಬ್ಬಂದಿಗಳಿಗೆ ಮಹತ್ವದ ಸಹಕಾರ ನೀಡಲಿವೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಜಸಿಂತ ಡಿಸೋಜಾ, “ಮಲೇರಿಯಾ ಪತ್ತೆ ಮತ್ತು ತಡೆ ಕಾರ್ಯಗಳಲ್ಲಿ ಕ್ಷೇತ್ರ ಮಟ್ಟದ ಪರಿಶೀಲನೆ ಅತ್ಯಂತ ಪ್ರಮುಖವಾಗಿದೆ. ಇಂತಹ ಸಂದರ್ಭಗಳಲ್ಲಿ…

Read More

ಮುಡಿಪು: ನಾಲ್ಕೈದು ಖಾಸಗೀ ಮೆಡಿಕಲ್ ಕಾಲೇಜುಗಳಿರುವ ಉಳ್ಳಾಲ ತಾಲೂಕಲ್ಲಿ ವೈದ್ಯಕೀಯ ಅಧಿನಿಯಮದ ಪ್ರಕಾರ ಒಂದು ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗದಿರೋದು ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆ. ಜನಪ್ರತಿನಿಧಿಯ ಬೇಜವಾಬ್ದಾರಿ ನಡೆಯಿಂದ ತಾಲೂಕಿನ ಜನತೆ ಸರಕಾರಿ ಆಸ್ಪತ್ರೆಗಳಿಂದ ವಂಚಿತರಾಗಿದ್ದಾರೆ. ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಇನ್ನೆಷ್ಟು ಸಮಯ ಬೇಕೆಂದು ಶಾಸಕರು ಉತ್ತರಿಸಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಡಿವೈಎಫ್ಐ ಮುಡಿಪು ವಲಯ ಸಮಿತಿ ನೇತೃತ್ವದಲ್ಲಿ ಉಳ್ಳಾಲದಲ್ಲಿ 100 ಬೆಡ್ ಗಳ ತಾಲೂಕು ಆಸ್ಪತ್ರೆಗಳ ಸಹಿತ ಮುಡಿಪುಗೆ ಸಮುದಾಯ ಆಸ್ಪತ್ರೆ ಸಹಿತ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕಿದ್ವಾಯಿ, ಜಯದೇವ ಸರಕಾರಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲು ಒತ್ತಾಯಿಸಿ ಮುಡಿಪು ಜಂಕ್ಷನ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಆಸ್ಪತ್ರೆಯ ಕಡೆಗಣನೆಯಿಂದ ಖಾಸಗೀ ಆಸ್ಪತ್ರೆಗಳು ಚಿಕಿತ್ಸೆಯ ಹೆಸರಲ್ಲಿ ಜನಸಾಮಾನ್ಯರ ಸುಲಿಗೆ ನಡೆಸುತ್ತಿದೆ. ಸಣ್ಣ…

Read More

ಕರ್ನಾಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ “ಸುವರ್ಣ ಮಹೋತ್ಸವ” ಈ ಕಾರ್ಯಕ್ರಮದ ಪ್ರಯುಕ್ತ ಕುತ್ತಾರ್ ಪದವು ಅಂಗನವಾಡಿ ಯಲ್ಲಿ LKG UKG ತರಗತಿಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ, ಇಲಾಖೆಗೆ ನೀಡಿದ ಆದೇಶದ ಅನ್ವಯ, ಇವತ್ತು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನ್ನೂರು ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪೆಲಿಮಾರ್ ವಹಿಸಿದ್ದು ಉದ್ಘಾಟಕರಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಕಾಂತ್ ಸಂಪಿಗೇರ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಕಿಶೋರ್, ವನಿತಾ,ಶಾಲಾ ಮುಖ್ಯಶಿಕ್ಷಕಿ ಪ್ರಮೀಳಾ ಡಿಸೋಜ, ಪಂಚಾಯತ್ ಕಾರ್ಯದರ್ಶಿ ಶಾಂತಿ, ಪೆರ್ಮನ್ನೂರು ವಲಯದ ಮೇಲ್ವಿಚಾರಕಿ ಶಂಕರಿ, ಪಂಚಾಯತ್ ಮಾಜಿ ಅಭಿವೃದ್ಧಿ ಆಧಿಕಾರಿ ರವೀಂದ್ರ ರಾಜೀವ್ ನಾಯಕ, ಬಾಲವಿಕಾಸ ಅಧ್ಯಕ್ಷೆ ಚಾಂದಿನಿ ಕಾರ್ಯಕ್ರಮದ ನಿರೂಪಣೆ ಅಂಗನವಾಡಿ ಕಾರ್ಯಕರ್ತೆ ಸುನೀತಾ ಗಟ್ಟಿ ಮಾಡಿದರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಶಂಕರಿ ಇವರು ನೆರವೇರಿಸಿದರು.ಕಾರ್ಯಕ್ರಮಕ್ಕೆ ಮುನ್ನೂರಿನ ಕಾರ್ಯಕರ್ತೆಯರಾದ ಶಕುಂತಲಾ, ವನಿತಾ, ತೆರೆಸಾ, ಯಶೋದ ಹಾಗೂ ಆಶಾ ಕಾರ್ಯಕರ್ತೆ ಅನಿತಾ ಉಪಸ್ಥಿತರಿದ್ದರು.

Read More

ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಂಟ್ವಾಳ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯರಾಗಿ ಜನಪ್ರಿಯರಾಗಿದ್ದ ಸೋಮಪ್ಪ ಕೋಟ್ಯಾನ್ ತುಂಬೆ ಅವರು ನಿಧನ ಹೊಂದಿದ್ದಾರೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ ಸೋಮಪ್ಪ ಹುಟ್ಟು ಹೋರಾಟಗಾರರಾಗಿ, ಬಿಜೆಪಿ ಜಿಲ್ಲಾ ಮಂಡಲದ ವಿವಿಧ ಜವಾಬ್ದಾರಿಯನನು ನಿಭಾಯಿಸಿದವರು. ಅನೇಕ ಸಂಘಸAಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರು ಕಳೆದ 25 ವರ್ಷಗಳಿಂದ ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿಯಾಗಿ, ಬಿಲ್ಲವ ಸಮಾಜದ ಗುರಿಕಾರರಾಗಿ ಯುವ ಸಮುದಾಯದ ಮಾರ್ಗದರ್ಶಕರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಎರಡು ಗಂದು, ಒಂದು ಹೆಣ್ಣು ಮಕ್ಕಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

Read More

ಉಳ್ಳಾಲ;ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್ ಪ್ರದಾನ ರಾಜಭವನದಲ್ಲಿ ನಡೆಯಿತು. ಬೆಂಗಳೂರು ವಿ.ವಿಯ ಕುಲಾದಿಪತಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿ.ವಿ ಉಪಕುಲಪತಿ ಡಾ| ಜಯಕರ ಎಸ್.ಎಂ ಕುಲಸಚಿವೆ ಕೆ.ಟಿ ಶಾಂತಾಳಾ ಮತ್ತಿತರರು ಉಪಸ್ಥಿತರಿದ್ದರು. ಬಿಎ, ಎಲ್.ಎಲ್.ಬಿ ಪದವೀಧರರಾಗಿರುವ ಅವರು ಉಳ್ಳಾಲದ ಮಾಜಿ ಶಾಸಕ ದಿ| ಯು.ಟಿ.ಫರೀದ್ ಅವರ ಪುತ್ರ. ಎನ್.ಎಸ್.ಯು.ಐ ಯುವ ಕಾಂಗ್ರೆಸ್ ಹಾಗೂ ಸೇವಾದಳಗಳ ಮೂಲಕ ಸಾರ್ವಜನಿಕರ ಜೀವನ ಪ್ರವೇಶಿಸಿದ ಖಾದರ್ ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರವನ್ನು ಸತತ ಐದು ಬಾರಿ ಶಾಸಕರಾಗಿ ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದಲ್ಲಿ ಆರೋಗ್ಯ, ಆಹಾರ, ವಸತಿ ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿದ್ದ ಅವರು 2023ರಿಂದ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Read More

ಮಂಗಳೂರು, ನ. 28; ಪಣಂಬೂರು ಬೀಚ್‌ನಲ್ಲಿ ವರದಿಯಾಗಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ 24 ರಂದು ಕಳುವಾಗಿದ್ದ 3.33 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ನವೆಂಬರ್ 24 ರಂದು, ಸ್ವಾತಿ ನಂದಿಪಲ್ಲಿ (24) ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ಜೊತೆ ಪಣಂಬೂರು ಬೀಚ್‌ಗೆ ಭೇಟಿ ನೀಡಿದ್ದರು. ಈಜಲು ಸಮುದ್ರಕ್ಕೆ ಇಳಿಯುವ ಮೊದಲು, ಅವರು ತಮ್ಮ ವಸ್ತುಗಳನ್ನು ಕಪ್ಪು ಚೀಲದಲ್ಲಿ ಹಾಕಿ ಸಮುದ್ರ ದಡದಲ್ಲಿ ಇರಿಸಿ, ನೀರಿನಲ್ಲಿ ಈಜಾಡಲು ಸಮುದ್ರಕ್ಕೆ ಇಳಿದಿದ್ದು, ನಂತರ ಬೆಳಿಗ್ಗೆ 11.50 ರ ಸುಮಾರಿಗೆ ಅವರು ಹಿಂತಿರುಗಿದಾಗ ಬ್ಯಾಗ್ ಕಾಣೆಯಾಗಿತ್ತುಆ ಚೀಲದಲ್ಲಿ ಆಕೆಯ 12 ಗ್ರಾಂ ತೂಕದ ಚಿನ್ನದ ಸರ, 2 ಗ್ರಾಂ ಚಿನ್ನದ ಪೆಂಡೆಂಟ್, ತಲಾ 2 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು, 4 ಗ್ರಾಂ ತೂಕದ ಒಂದು ಜೋಡಿ ಚಿನ್ನದ ಕಿವಿಯೋಲೆಗಳು, ಆಕೆಯ ಒಂದು ಮೊಬೈಲ್ ಫೋನ್…

Read More