ಉಡುಪಿ, ನ. 26 :ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಶ್ರೀ ಕೃಷ್ಣ ಮಠ ಭೇಟಿ ನೀಡುವ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸೂಚನೆ ನೀಡಿದ್ದಾರೆ. ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಅಲ್ಲದೆ ಪ್ರಧಾನಿಗಳು ಸಂಚರಿಸುವ ಮಾರ್ಗದ ಇಕ್ಕೆಲಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಲಾಗಿದೆ.ನವೆಂಬರ್ 28 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿ ಮುಚ್ಚುವಂತೆ ಡಿಸಿ ಸೂಚಿಸಿದ್ದಾರೆ. ಇನ್ನು ನವಂಬರ್ 26 ಬೆಳಿಗ್ಗೆ 6ಗಂಟೆಯಿಂದ ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಉಳಿದಂತೆ ಪ್ರಧಾನಿಗಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಹಲವು ಸೂಚನೆಗಳನ್ನು ಕೂಡ ನೀಡಲಾಗಿದೆ.ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್ಸ್, ಬಲೂನ್ಸ್ ,ಪಟಾಕಿ, ಲೂಸ್ ಪಾಲಿಥಿನ್ ತರುವುದು ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿದವರ…
Author: UllalaVani
ಕುಂದಾಪುರ, ನ. 26: ಖ್ಯಾತ ಯಕ್ಷಗಾನ ಪ್ರಸಂಗಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಅವರು ನವೆಂಬರ್ 26 ಬುಧವಾರ ಬೆಳಗ್ಗೆ ನಿಧನರಾದರು. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರದಲ್ಲಿ 1936 ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ ಮತ್ತು ಕಂದಾವರ ಪುಟ್ಟಮ್ಮ ದಂಪತಿಗಳಿಗೆ ಜನಿಸಿದ ರಘುರಾಮ ಶೆಟ್ಟಿ, ಕಂಡ್ಲೂರಿನ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ ಮತ್ತು ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಅವರ ಸೇವಾ ಅವಧಿಯಲ್ಲಿ ‘ಮಾದರಿ ಶಿಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಯಕ್ಷಗಾನ ಕ್ಷೇತ್ರದಲ್ಲಿ ‘ಕಂದಾವರ’ ಎಂಬ ಹೆಸರಿನಿಂದ ಚಿರಪರಿಚಿತರಾದ ರಘುರಾಮ ಶೆಟ್ಟಿ ಅವರು ಅರ್ಥಧಾರಿ, ವೇಷಧಾರಿ, ನಾಟಕ ಕಲಾವಿದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಗೌರವಾನ್ವಿತ ಪ್ರಸಂಗಕರ್ತರಾಗಿ ವಿಶಿಷ್ಟ ಗುರುತನ್ನು ಪಡೆದವರು. ಮಕ್ಕಳ ಯಕ್ಷಗಾನದಲ್ಲಿ ಅವರ ವಿದ್ಯಾರ್ಥಿ ದಿನಗಳಲ್ಲಿ ಯಕ್ಷಗಾನದೊಂದಿಗಿನ ಅವರ ಸಂಬಂಧ ಪ್ರಾರಂಭವಾಯಿತು. ನಂತರ ಅವರು ಕುಂದಾಪುರದ ಪ್ರಸಿದ್ಧ ವಕೀಲರು ಮತ್ತು ಯಕ್ಷಗಾನ ಮೇಳದ ಪೋಷಕರಾದ ದಿವಂಗತ ಎಂಎಎಂ…
ಉಳ್ಳಾಲ; ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಾರುತಿ ಜನಸೇವಾ ಸಂಘ(ರಿ.), ಮಾರುತಿ ಯುವಕ ಮಂಡಲ (ರಿ.) ಉಳ್ಳಾಲ ಇವರ 40ನೇ ವರ್ಷಾಚರಣೆಯ ಪ್ರಯುಕ್ತ ವೃದ್ಧಾಶ್ರಮಕ್ಕೆ ನೆರವು ನೀಡಿದ್ದಾರೆ. ಉಳ್ಳಾಲದ ಪಶ್ಚಿಮ್ ಚಾರಿಟೆಬಲ್ ಟ್ರಸ್ಟ್ ಇವರ ವೃದ್ಧಾಶ್ರಮದಲ್ಲಿರುವ ಹಿರಿಜೀವಗಳಿಗೆ ಒಂದಿಷ್ಟು ನೆರವಾಗುವ ಹಿನ್ನಲೆ ಈ ಮಹತ್ವದ ಕಾರ್ಯವನ್ನು ಮಾಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕರಾದ ರೋಹಿತ್.ಸ್ಯಾಂಕ್ಟಸ್ ಮಾತನಾಡಿ, ಪಶ್ವಿಮ್ ಚಾರಿಟೇಬಲ್ ಸ್ಥಾಪಿಸಲು ಕಾರಣ ಅಸೌಖ್ಯದಲ್ಲಿದ್ದಂತಹ ತಂದೆ-ತಾಯಿ. ಅನಾರೋಗ್ಯದ ಸಂದರ್ಭದಲ್ಲಿ ನನ್ನ ತಂದೆ-ತಾಯಿ ಕಷ್ಟಪಡುತ್ತಿರುವುದನ್ನು ನೋಡುತ್ತಿದ್ದೆ. ಕೆಲಸದಿಂದ ವಾಪಸ್ಸಾಗುವ ವೇಳೆ ಪುಟ್ಟ ಮಕ್ಕಳಂತೆ ಕಾಯುತ್ತಿದ್ದರು. ಮಾತು ನಿಂತೂ ಹೋಗಿದ್ದರೂ ಅವರ ಮೊಗದಲ್ಲಿ ಪ್ರೀತಿ, ಕಾಳಜಿ ಕಾಣಿಸುತ್ತಿತ್ತು. ಅವರನ್ನು 24 ಗಂಟೆಯು ಒಟ್ಟಿಗೆ ಇರಿಸಿಕೊಳ್ಳುವ ಎಂಬ ಅಲೋಚನೆಯಲ್ಲಿ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ನ್ನು ಸ್ಥಾಪಿಸಿದೆ. ತಂದೆ-ತಾಯಿ ಇಂದು ಜೊತೆಗೆ ಇಲ್ಲದಿದ್ದರೂ ಆಶ್ರಮದಲ್ಲಿರುವ ಹಿರಿಜೀವಗಳಲ್ಲಿ ಅವರನ್ನು ಕಾಣುತ್ತಿದ್ದೇನೆ. ಇಂದು ಮಾರುತಿ ಸಂಘಟನೆ ತಾನು ಸಂಪಾದಿಸಿದ ಹಣವನ್ನು ತಮಗೆ ಉಪಯೋಗಿಸಿಕೊಳ್ಳದೇ ಸಮಾಜದ ಹಿತಕ್ಕಾಗಿ ಉಪಯೋಗಿಸಿಕೊಳ್ಲುತ್ತಿರುವುದು…
ಪುತ್ತೂರು,ನ. 26 : ನವೆಂಬರ್ 24 ರಂದು ಸಂಜೆ 34 ನೆಕ್ಕಿಲಾಡಿ ಸುಭಾಷ್ ನಗರದಲ್ಲಿರುವ ಜನತಾ ಕಾಲೋನಿಯಲ್ಲಿ ಹೊಸದಾಗಿ ಬಾಡಿಗೆಗೆ ಪಡೆದಿದ್ದ ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಭಾರಿ ಅನಾಹುತ ತಪ್ಪಿದೆ. ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಜಬ್ಬಾರ್ ನಂದಾವರದ ಇಲ್ಯಾಸ್ ಎಂಬುವರಿಗೆ ಬಾಡಿಗೆಗೆ ನೀಡಿದ್ದ ಮನೆಗೆ ಕುಟುಂಬವು ಇತ್ತೀಚೆಗೆ ಸ್ಥಳಾಂತರಗೊಂಡಿತ್ತು. ಮುಂಜಾನೆ, ಕುಟುಂಬವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತ್ತು ಮತ್ತು ಸಂಬಂಧಿಕರು ಒಟ್ಟುಗೂಡಿದ್ದರು. ಸಂಜೆ, ಅಡುಗೆಮನೆಯಲ್ಲಿ ಹಬ್ಬದ ಸಿದ್ಧತೆಗಳು ನಡೆಯುತ್ತಿದ್ದವು.ಬಾಡಿಗೆ ಮನೆಯ ಹಿಂದೆ, ಎತ್ತರದ ಪ್ರದೇಶದಲ್ಲಿ, ಬೆಂಗಳೂರಿನಲ್ಲಿ ವಾಸಿಸುವ ಸುಶೀಲಾ ಅವರಿಗೆ ಸೇರಿದ ಮನೆ ಇದೆ. ಕಳೆದ 10 ದಿನಗಳಿಂದ ಅಲ್ಲಿ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು.ನವೆಂಬರ್ 24 ರಂದು ಸಂಜೆ 5 ಗಂಟೆ ಸುಮಾರಿಗೆ, ಗೋಡೆ ಕುಸಿಯುವ ಹಂತದಲ್ಲಿದ್ದನ್ನ ಮೇಸ್ತ್ರಿ ಗಮನಿಸಿದರು. ಅಪಾಯವನ್ನು ಅರಿತ ಅವರು, ಕೆಳಗಿದ್ದ ನಿವಾಸಿಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ಹೇಳಿದರು. ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದವರು…
ಥೈಲ್ಯಾಂಡ್‌ನಲ್ಲಿ (woman wakes up coffin) ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಶವಪೆಟ್ಟಿಗೆಯಲ್ಲಿ ಎಚ್ಚರಗೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿದೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿ ಪ್ರಾಂತ್ಯದಲ್ಲಿರುವ ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ನಲ್ಲಿ ನಡೆದಿದೆ. ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾದ ಬಿಳಿ ಶವಪೆಟ್ಟಿಗೆಯಲ್ಲಿ ಮಹಿಳೆ ಮಲಗಿರುವ ವೀಡಿಯೊವನ್ನು ದೇವಾಲಯವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಮಹಿಳೆಯ ತೋಳುಗಳು ಮತ್ತು ತಲೆ ಸ್ವಲ್ಪ ಅಲುಗಾಡಿದೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ದೇವಾಲಯದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಪೈರತ್ ಸೂದ್‌ಥೂಪ್ ಸೋಮವಾರ ಎಪಿ ನೀಡಿದ ಮಾಹಿತಿ ಪ್ರಕಾರ, “ಅರವತ್ತೈದು ವರ್ಷದ ಮಹಿಳೆಯನ್ನು ಆಕೆಯ ಸಹೋದರ ಫಿಟ್ಸಾನುಲೋಕ್ ಪ್ರಾಂತ್ಯದಿಂದ ಅಂತ್ಯಕ್ರಿಯೆಗಾಗಿ ಕರೆತಂದಿದ್ದಾರೆ. ಸಿಬ್ಬಂದಿಗಳು ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ವೇಳೆ ಶವಪೆಟ್ಟಿಗೆಯಿಂದ ಶಬ್ದ ಬಂದಿದೆ. ನನಗೆ ಸ್ವಲ್ಪ ಆಶ್ಚರ್ಯವಾಯಿತು,…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಂಗಳೂರು ತಾಲೂಕು ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರಿನಲ್ಲಿ 455 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸರು ಮತ್ತು ಅಧೀಕ್ಷಕರು ಆದ ಡಾ| ಶಿವ ಪ್ರಕಾಶ್ ಡಿ. ಎಸ್ ಹಾಗೂ ಡಾ. ಸದಾನಂದ ಪೂಜಾರಿ( HOD & Proffessor Urology) ಮತ್ತು ಡಾ. ಅವಿನಾಶ್ ಸಹಾಯಕ ಪ್ರಾಧ್ಯಪಕರು Urology ಮತ್ತು ಡಾ. ಅಭಿಷೇಕ್, ಡಾ| ಸುಬ್ರಮಣ್ಯ, ಪಿ ಆರ್ ಓ ನಿಕೇಶ್ ಕುಮಾರ್, ಡಾ| ರಾಘವೇಂದ್ರ ಪ್ರಕಾಶ್ ಕಾರಂತ್ ಮಾಜಿ ಗವರ್ನರ್ ರೋಟರಿ ಕ್ಲಬ್ ಮಂಗಳೂರು , ಆಶಿಕ್ ಕುಮಾರ್ ಜೈನ್ ಕೂಳೂರು ಬೀಡು, ರತ್ನಾಕರ ಜೈನ್ ಅಧ್ಯಕ್ಷರು ಜೈನ್ ಮಿಲನ್ ಮಂಗಳೂರು, ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಸಿ ಟ್ರಸ್ಟ್ (ರಿ) ದ.ಕ -1 ಜಿಲ್ಲಾ…
ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಎಂಬ 25 ವರ್ಷದ ಯುವತಿ ಹಲವು ವರ್ಷಗಳಿಂದ ಅಪರೂಪದ ಹಾಗೂ ಗುಣಪಡಿಸಲಾಗದ ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದಾರೆ. ಇದೀಗ ಈ ರೋಗದಿಂದ ಬೇಸತ್ತು ದಯಾಮರಣಕ್ಕೆ ಮುಂದಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅವರಿಗೆ 18ನೇ ವಯಸ್ಸಿನಲ್ಲಿ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ಇರುವುದು ಪತ್ತೆಯಾಯಿತು. ಈ ಕಾಯಿಲೆ ಇರುವ ಜನರಲ್ಲಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ನರಕೋಶಗಳ ಮೇಲೆ ದಾಳಿಯನ್ನು ಮಾಡಿ. ಹೃದಯ ಬಡಿತ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕೊನೆಗೆ ಇದು ನರವೈಜ್ಞಾನಿಕ ರೋಗಕ್ಕೆ ಕಾರಣವಾಗುತ್ತದೆ. ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ತಮ್ಮ ಬಾಲ್ಯದ ಬಹುಪಾಲು ಆಸ್ಪತ್ರೆಗಳಲ್ಲಿ ಕಳೆದಿದ್ದಾರೆ. ವೈದ್ಯರು ಅವರಿಗೆ ಇರುವ ರೋಗದ ಬಗ್ಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಅಪರೂಪದ ರೋಗದಿಂದ ಸ್ಥಿತಿ ಹದಗೆಟ್ಟಿತು, ಅಡಿಲೇಡ್ ಅವರು ನಿರಂತರ ನೋವು, ವಾಕರಿಕೆ, ದಿನನಿತ್ಯ ವಾಂತಿ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ, ಅವರು ಸಂಪೂರ್ಣವಾಗಿ ಪ್ಯಾರೆನ್ಟೆರಲ್ ಪೌಷ್ಟಿಕಾಂಶವನ್ನು (TPN)…
ಉಡುಪಿ,ನ. 25 ;ಗಂಗೊಳ್ಳಿಯ ಆಲೂರು ಮಾವಿನಗುಳಿ ಎಂಬಲ್ಲಿ ನ.23ರಂದು ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ದಿವಾಕರ(56), ಗಣೇಶ್(40), ಗಣೇಶ್(29), ಪ್ರಶಾಂತ್(37), ಎಚ್.ಬಾಬು(55) ಬಂಧಿತ ಆರೋಪಿಗಳು. ಜಯಶೀಲ ಶೆಟ್ಟಿ ಹಾಗೂ ಇತರರು ಪೊಲೀಸ್ ದಾಳಿ ವೇಳೆ ಸ್ಥಳದಿಂದ ಓಡಿ ಹೋಗಿದ್ದಾರೆ. 7 ಹುಂಜ, 5 ಕೋಳಿಬಾಳು ಹಾಗೂ 2400ರೂ. ನಗದು, ಏಳು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ನ. 25 ವಿಮಾನ ನಿಲ್ದಾಣದಿಂದ ದಮಾಮ್‌ಗೆ ಶನಿವಾರ ರಾತ್ರಿ ಹೊರಡಬೇಕಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರದ್ದಾದ ಬಗ್ಗೆ ವಿಮಾನಯಾನ ಸಂಸ್ಥೆ ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿದ ಪರಿಣಾಮ ಪ್ರಯಾಣಿಕರು ತೊಂದರೆಗೀಡಾದರು. ರಾತ್ರಿ 11.10ಕ್ಕೆ ನಿಗದಿಯಾಗಿದ್ದ ವಿಮಾನವನ್ನು 11.45ಕ್ಕೆ, ಅನಂತರ 1.40 ಕ್ಕೆ ಮುಂದೂಡಲಾಯಿತು. ಕೊನೆಗೆ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂಬ ಸಂದೇಶ ನೀಡಲಾಯಿತು. ನಿಲ್ದಾಣದಲ್ಲಿ ಸಿಬಂದಿ ಸಹಾಯ ಮಾಡಿಲ್ಲ. ನೀರು ಇಲ್ಲ, ಆಹಾರ ಇಲ್ಲ, ಮಾರ್ಗದರ್ಶನ ನೀಡಲಿಲ್ಲ. ತುಂಬಾ ಸಮಯದವರೆಗೂ ಪ್ರಯಾಣಿಕರನ್ನು ಮನೆಗೆ ಬಿಡಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ಮಂಗಳೂರು, ನ. 25 : ಅಲ್ಲಲ್ಲಿ ಮಾನವ-ಆನೆ ಸಂಘರ್ಷ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಾಚರಣೆ ಪಡೆ(ಇಟಿಎಫ್-ಎಲಿಫೆಂಟ್ ಟಾಸ್ಕ್ ಫೋರ್ಸ್)ಯನ್ನೇ ಅಂತಿಮಗೊಳಿಸುವುದು ನಿಶ್ಚಯಗೊಂಡಿದೆ. ಆನೆ ಕಾರ್ಯಪಡೆ ಹಾಗೂ ಆನೆ ಶಿಬಿರ ಈ ಎರಡು ಯೋಜನೆಗಳಿಗೂ ಅರಣ್ಯ ಇಲಾಖೆ ಪ್ರಸ್ತಾವ ಕಳುಹಿಸಿತ್ತು, ಆದರೆ ಆನೆ ಶಿಬಿರಕ್ಕೆ ದೊಡ್ಡ ಮೊತ್ತದ ಬಂಡವಾಳ ಬೇಕಾಗಬಹುದು ಅಲ್ಲದೆ ಈಗಿನ ಪ್ರಸ್ತಾವಿತ ಗುಂಡ್ಯ ಪ್ರದೇಶದಲ್ಲಿ ಜನರಿಂದ ವಿರೋಧವೂ ಇರುವ ಹಿನ್ನೆಲೆಯಲ್ಲಿ ಸುಳ್ಯ ಹಾಗೂ ಗುಂಡ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಆನೆ ಕಾರ್ಯಪಡೆ ಸ್ಥಾಪನೆ ಶೀಘ್ರ ಅನುಮೋದನೆ ಪಡೆಯುವ ನಿರೀಕ್ಷೆ ಇದೆ.ಪ್ರಸ್ತುತ ಇದು ಸಂಪುಟ ಅನುಮೋದನೆ ಪಡೆದಿದ್ದು, ಹಣಕಾಸು ಇಲಾಖೆಯ ಪರಿಶೀಲನೆ ಹಂತದಲ್ಲಿದೆ, ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಮೊದಲೇ ಅಂತಿಮ ಅನುಮೋದನೆ ಪಡೆಯುವ ಸಾಧ್ಯತೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

