ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ. ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧಮ೯ದಶಿ೯ ಡಾ. ರವಿ.ಎನ್ ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಳಿಯ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸಲಿದ್ದಾರೆ. ಶ್ರೀ ಧಾಮ ಮಾಣಿಲ, ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಸಂಸ್ಥಾನದ ಮಹಾರಾಜರಾದ ಯಧುವೀರ್ ಒಡೆಯರ್, ಸಂಸದ ಕ್ಯಾಪ್ಟನ್ ಬ್ರಿಜೇಶ್…
Author: UllalaVani
ದೇರಳಕಟ್ಟೆ : ಉಳ್ಳಾಲ ಕ್ಷೇತ್ರದ ಹೆಮ್ಮೆಯ ಜನನಾಯಕ ಯು.ಟಿ.ಖಾದರ್ ಅವರ ದೂರದೃಷ್ಠಿಯ ಫಲವಾಗಿ ಇಂದು ಅವರ ಕಲ್ಪನೆಯ ದೇರಳಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಕಣಚೂರು `ಕ್ಲಾಕ್ ಟವರ್ ವೃತ್ತ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಾಮಾಜಿಕವಾಗಿ 25 ವರ್ಷಗಳಿಂದ ತನ್ನದೇ ಆದ ಆರೋಗ್ಯ, ಶಿಕ್ಷಣವನ್ನು ನೀಡುತ್ತಾ ಬಂದಿರುವ ಕರಾವಳಿಯ ಹೆಮ್ಮೆಯ ಸಂಸ್ಥೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳದಲ್ಲೂ ಉಚಿತ ಆರೋಗ್ಯ ಶಿಬಿರಗಳಂತಹ ಸಾಮಾಜಿಕ ಸೇವೆಗಳನ್ನು ಮಾಡುತ್ತಿದೆ. ಆ ಮೂಲಕ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಈಗ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ಅಭಿಲಾಷೆಯನ್ನು ಕೈಗೆತ್ತಿಕೊಂಡು ಸುಂದರವಾದ ಕ್ಲಾಕ್ ಟವರ್ ನಿರ್ಮಿಸುವುದರ ಮೂಲಕ ಉಳ್ಳಾಲ ಕ್ಷೇತ್ರಕ್ಕೆ ಕಣಚೂರು ಕೊಡುಗೆಯನ್ನು ನೀಡಿದೆ ಎಂದರೆ ತಪ್ಪಗಲಾರದು. ಈ ಸಂದರ್ಭ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ವಸತಿ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ: ಮಸೀದಿಗೆಂದು ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪುತ್ರಿ ದೂರು ದಾಖಲಿಸಿದ್ದಾರೆ. ಅಬ್ದುಲ್ ಆಸೀಫ್ (೪೭) ನಾಪತ್ತೆಯಾದವರು. ವಿದೇಶದಲ್ಲಿ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ೮ ದಿನಗಳ ಹಿಂದೆ ಮನೆಗೆ ಬಂದು ಮನೆಯಲ್ಲಿದ್ದವರು ನ.೨೮ ರಂದು ದಾರಂದಬಾಗಿಲು ಮಸೀದಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪುತ್ರಿ ರೀಮಾ ಫಾತಿಮ ಎಂಬವರು ನೀಡಿರುವ ದೂರಿನ ಆಧಾರದಡಿ ನಾಪತ್ತೆ ದೂರು ದಾಖಲಾಗಿದೆ. ಇಬ್ಬರು ಪುತ್ರಿಯರು ಹಾಗೂ ಪತ್ನಿ ಜೊತೆಗೆ ಅಬ್ದುಲ್ ಆಸೀಫ್ ವಾಸಿಸುತ್ತಿದ್ದರು.
ಉಳ್ಳಾಲ: ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ ಸಿ ರೋಡ್ ಕೋಟೆಕಾರ್, ಇಲ್ಲಿ ಮಾಸಿಕ ನಡೆಯುವ ಧ್ಸಿಕ್ರ್ ಹಲ್ಕಾ ಮಜ್ಲಿಸ್, ಇದರ 35 ನೇ ವಾರ್ಷಿಕೋತ್ಸವ ಹಾಗೂ 7 ದಿನಗಳ ಧಾರ್ಮಿಕ ಕಾರ್ಯಕ್ರಮ ಡಿ 8 ರಿಂದ 14 ರ ವರೆಗೆ ಅಲ್ ಮುಬಾರಕ್ ಜುಮಾ ಮಸ್ಜಿದ್ ವಠಾರದಲ್ಲಿ ಮಸೀದಿ ಅಧ್ಯಕ್ಷ ಎ ಎಂ ಅಬ್ಬಾಸ್ ಹಾಜಿ ಕೊಮರಂಗಳ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಡಿ, 8 ರಂದು ರಾತ್ರಿ 7 -45 ಕ್ಕೆ ಝೈನುಲ್ ಉಲಮಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ದುವಾ ಮಾಡುವರು, ಶೌಖತ್ ಅಲಿ ಮುಸ್ಲಿಯಾರ್ ವೆಳ್ಳಮುಂಡಾ ಮುಖ್ಯ ಬಾಷಣ ಮಾಡುರು, ಡಿ 9 ರಂದು ಬಹು ಮುನೀರ್ ಸಖಾಫಿ ಸಾಲೆತ್ತೂರು ಮುಖ್ಯ ಬಾಷಣ ಮಾಡುವರು,ಡಿ 10 ರಂದು ಬಹು ಹಂಝ ಮಿಸ್ಬಾಹಿ ಓಟಪದವು ಮುಖ್ಯ ಬಾಷಣ ಮಾಡುವರು, ಡಿ 11 ರಂದು ಬಹು ಅಶ್ಪಾಕ್ ಫೈಝಿ ನಂದಾವರ ಮುಖ್ಯ ಬಾಷಣ ಮಾಡುವರು,…
ಮಂಗಳೂರು: ಅಶೋಕ ನಗರದ ಸ್ಕೇಟ್ ಸಿಟಿಯಲ್ಲಿ ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟದ ಮೂರನೇ ಸಮ್ಮಿಲನ `ಒರ್ಮೆಪ್ಪಾಡ್’ ಕಾರ್ಯಕ್ರಮವು ನಡೆಯಿತು. ಶಮೀಮಾ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಝಲೈಕಾ ಮುಮ್ತಾಝ್ ಕಾರ್ಯಕ್ರಮ ಉದ್ಘಾಟಿಸಿದರು. ರಮೀಝಾ ಎಂ.ಬಿ, ರಹ್ಮತ್ ಪುತ್ತೂರು, ಹಸೀನಾ ಮಲ್ನಾಡ್, ಅಸ್ಮತ್ ವಗ್ಗ ನಸೀಮಾ ಸಿದ್ದಕಟ್ಟೆ ನಸೀಬಾ ಗಡಿಯಾರ್, ಮುನೀರಾ ತೊಕ್ಕೊಟ್ಟು, ಕಲಂದರ್ ಬೀವಿ, ಸಲ್ಮಾ ಮೈಕಾಲ ಕವನ ವಾಚಿಸಿದರು. ಡಾ. ಜುವೇರಿಯ ಮುಫೀದ ಕವಿಗೋಷ್ಠಿಯನ್ನು ಸಂಯೋಜಿಸಿದರು. ಮರ್ಯಂ ಇಸ್ಲಾಯಿಲ್, ಝಲೇಖಾ ಮುಮ್ತಾಝ್ , ಮಿಸ್ರಿಯ ಪಜೀರ್, ಸಾರಾ ಅಲಿ ಪರ್ಲಡ್ಕ ಹಾಸ್ಯ ಲೇಖನಗಳನ್ನು ವಾಚಿಸಿದರು. ಹಸೀನಾ ಮಲ್ನಾಡ್ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಆಯಿಶಾ ಪೆರ್ನೆ ಗಿಫ್ಟ್ ಎಕ್ಸ್ಚೇಂಜ್ ಮನೋರಂಜನೆ ಆಟ ಸಂಯೋಜಿಸಿದರು. ಪುರಾತನ ವಸ್ತುಗಳ ಪ್ರದರ್ಶನ ಏರ್ಪಾಡು ಮಾಡಲಾಗಿತ್ತು. ಕಲಂದರ್ ಬೀವಿ ಕೈಕಂಬ ಕಿರಾಅತ್ ಪಠಿಸಿದರು. ಆಯಿಶಾ ಯುಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಶ್ಮಾ ಎಸ್.ಐ ವಂದಿಸಿದರು. ಅಸ್ಮತ್ ವಗ್ಗೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ, ಡಿ. 02 : ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ ಕಬ್ಬಡಿ ವಿಶ್ವಕಪ್- ಪಂದ್ಯಾಟದಲ್ಲಿ ಚಾಂಪಿಯನ್ ಆದ ಭಾರತ ತಂಡವನ್ನು ಪ್ರತಿನಿಧಿಸಿ ವಿಜಯಗಳಿಸಿದ ಮೂಲತಃ ಕಾರ್ಕಳ ಮಿಯ್ಯಾರು ಗ್ರಾಮದವರಾದ, ಪ್ರಸ್ತುತ ಸುರತ್ಕಲ್ ಗುಡ್ಡೆಕೊಪ್ಪದ ನಿವಾಸಿ ಧನಲಕ್ಷ್ಮೀ ಅವರನ್ನು ವಿಕಾಸ ಜನಸೇವಾ ಕಛೇರಿಯಲ್ಲಿ ಬಿಜೆಪಿ ಪ್ರಮುಖರೊಂದಿಗೆ ಶಾಸಕ ವಿ. ಸುನಿಲ್ ಕುಮಾರ್ ಅವರು ಸನ್ಮಾನಿಸಿದರು. ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಗಳ ಪುತ್ರಿ ಧನಲಕ್ಷ್ಮೀ ಅವರನ್ನು ಶಾಸಕ ವಿ. ಸುನಿಲ್ ಕುಮಾರ್ ರವರು ಅಭಿನಂದಿಸಿ, ಮುಂದೆ ಇನ್ನಷ್ಟು ಸಾಧನೆ ಮಾಡುವ ಮೂಲಕ ಕಾರ್ಕಳಕ್ಕೆ ನಮ್ಮ ರಾಜ್ಯಕ್ಕೆ- ದೇಶಕ್ಕೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.ಇದೇ ಸಂಧರ್ಭದಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಗಣನಾಥ್ ಶೆಟ್ಟಿ, ಅಶ್ವಥ್ ಎಸ್ ಎಲ್, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಪ್ರಧಾನ ಕಾರ್ಯದರ್ಶಿ ಸತೀಶ್ ಬೋಳ, ಬಿಜೆಪಿ ಹಿರಿಯರಾದ ರವೀಂದ್ರ ಮಡಿವಾಳ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಮುಖರು ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು…
ಮಧ್ಯಪ್ರದೇಶ, ಡಿ. 02 : ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯಲ್ಲಿ ಬರೇಲಿ-ಪಿಪರಿಯಾ ರಾಜ್ಯ ಹೆದ್ದಾರಿಯ ನಯಾಗಾಂವ್ ಸೇತುವೆಯಲ್ಲಿ ನಡೆಯುತ್ತಿದ್ದ ನಿರ್ವಹಣಾ ಕಾರ್ಯದ ವೇಳೆ ದೊಡ್ಡ ದುರಂತ ಸಂಭವಿಸಿದೆ. ಸೇತುವೆಯ ಸ್ಪ್ಯಾನ್ ಅಕಸ್ಮಾತ್ ಕುಸಿದು ಬಿದ್ದು ಭಾರೀ ಅನಾಹುತಕ್ಕೆ ಕಾರಣವಾಗಿದೆ. ಸೇತುವೆ ಕುಸಿದಾಗ ಎರಡು ಬೈಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಾಜಿ CRPF ಜವಾನ್ ದೇವೇಂದ್ರ ಧಕಾಡ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸೇತುವೆಯ ನಿರ್ವಹಣೆಯಲ್ಲಿ ಭದ್ರತಾ ಕ್ರಮಗಳ ಕುರಿತಂತೆ ಪ್ರಶ್ನೆಗಳು ಏರಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದ್ದು, ಸಂಬಂಧಿತ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಮಂಗಳೂರು, ಡಿ. 02: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ(ಆರ್‌ಡಬ್ಲ್ಯುಬಿಸಿಐಎಸ್)ಯಡಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಮಂದಿ ಅರ್ಹ ರೈತರಿಗೆ ಈ ಬಾರಿ ವಿಮಾ ಹಣ ಪಾವತಿ ವಿಳಂಬವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ನಡೆಸಿ, ತಕ್ಷಣವೇ ಬೆಳೆ ವಿಮಾ ಮೊತ್ತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಿಮಾ ಕಂಪೆನಿಗಳು ಅರ್ಹ ರೈತರಿಗೆ ಆರ್‌ಡಬ್ಲ್ಯುಬಿಸಿಐಎಸ್ ಯೋಜನೆಯಡಿ ವಿಮಾ ಮೊತ್ತ ಪಾವತಿಸುವುದಕ್ಕೆ ಸಾಕಷ್ಟು ವಿಳಂಬವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಕ್ಯಾ. ಚೌಟ ಅವರು ಕಳೆದ ವಾರ ತೋಟಗಾರಿಕ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಳಂಬಕ್ಕೆ ಕಾರಣಗಳನ್ನು ಪರಾಮರ್ಶಿಸಿದ್ದರು. ಆ ಮೂಲಕ ತುರ್ತಾಗಿ ವಿಮಾ ಮೊತ್ತ ಬಿಡುಗಡೆಗೊಳಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಜಾರಿಗೊಳಿಸಿರುವ ಈ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ವಿಮಾ ಕಂಪೆನಿಗಳು…
ಬಂಟ್ವಾಳ, ಡಿ. 02; ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದ ರಮಾನಂದ ಅವರದು ಆತ್ಮಹತ್ಯೆ ಅಲ್ಲ, ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ ಸಂಶಯವಿದ್ದು,ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಿ ಎಂದು ತಾಯಿ ಜಾನಕಿ ಅವರು ವಾಮಂಜರೂರು ಪೋಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಬರಿಮಾರು ಗ್ರಾಮದ ದೇಲಬೆಟ್ಟು ನಿವಾಸಿ ರಮಾನಂದ (25) ಎಂಬಾತ ನ.25 ರಂದು ನಾಪತ್ತೆಯಾಗಿದ್ದ , ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಾಗಿತ್ತು.ಈ ಮಧ್ಯೆ ಅದೇ ದಿನ ಮಧ್ಯಾಹ್ನದ ವೇಳೆ ಈತನ ಮೃತದೇಹ ಮಂಗಳೂರು ತಾಲೂಕಿನ ವಾಮಂಜೂರು ಕೆತ್ತಿಕಲ್ಲು ಎಂಬಲ್ಲಿ ಪತ್ತೆಯಾಗಿದೆ. ರಮಾನಂದ ಅವರ ಮೃತದೇಹ ಕೆತ್ತಿಕಲ್ಲು ಎಂಬಲ್ಲಿ ಗುಡ್ಡದಲ್ಲಿ ಮರದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇತ್ತು, ಮೇಲ್ನೋಟಕ್ಕೆ ಈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹಗ್ಗ ತುಂಡಾಗಿ ಕೆಳಗೆ ಬಿದ್ದಂತೆ ಕಾಣಿಸಿಕೊಂಡಿದ್ದು, ವಾಮಂಜರೂ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.ಆದರೆ ಮನೆಯವರಿಗೆ…
ಮಂಗಳೂರು, ಡಿ. 02 : ಮೂಡುಶೆಡ್ಡೆ ಗ್ರಾಮ ಪಂಚಾಯತ್ ಕಚೇರಿಯ ಎದುರು ಮಗಳೇ ತನ್ನ ತಾಯಿಗೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ರಕ್ಷಣಾ ವೇದಿಕೆ ಮಧ್ಯ ಪ್ರವೇಶಿಸಿ ಮಗಳು ನೇತ್ರಾವತಿ ವಿರುದ್ಧ ದೂರು ದಾಖಲಿಸಿದೆ. ಹಿರಿಯ ನಾಗರಿಕರಾದ ನಿರ್ಮಲಾ ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ದೂರನ್ನು ದಾಖಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕಿ ರಮಿತಾ ಸೂರ್ಯವಂಶಿ ಹಾಗೂ ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೀಕ್ಷಿತ್ ಉಪಸ್ಥಿತರಿದ್ದರು.ಮಗಳೇ ತನ್ನ ತಾಯಿಗೆ ಮನಬಂದಂತೆ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

