ಶರವು: ಉಳ್ಳಾಲ ಕಾಪಿಕಾಡ್ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಮತ್ತು ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರಿಗೆ ಹೊರೆಕಾಣಿಕೆ ಸಮರ್ಪಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊರೆಕಾಣಿಕೆ ಕೇಂದ್ರವನ್ನು ಶರವು ಮಹಾಗಣಪತಿ ಕ್ಷೇತ್ರದ ಆವರಣದಲ್ಲಿ ಉದ್ಘಾಟಿಸಲಾಯಿತು.

ಶರವು ಕ್ಷೇತ್ರದ ಮೊಕ್ತೇಸರರಾದ ಶರವು ರಾಘವೇಂದ್ರ ಶಾಸ್ತಿçà ಅವರು ಹೊರೆ ಕಾಣಿಕೆ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಬ್ರಹ್ಮಕಲಶೋತ್ಸವಗಳಿಗೆ ತಾವೂ ಸಹಕಾರ ನೀಡಬೇಕು ಎನ್ನುವ ಭಾವನೆ ಸಾಕಷ್ಟು ಮಂದಿ ಭಕ್ತರಲ್ಲಿ ಇರುತ್ತದೆ. ಆದರೆ ಹೊರೆಕಾಣಿಯನ್ನು ಎಲ್ಲಿಗೆ ಹೇಗೆ ಸಮರ್ಪಿಸಬೇಕು ಎನ್ನುವ ಮಾಹಿತಿ ಇರುವುದಿಲ್ಲ. ಹಾಗಾಗಿ ಸಂಗ್ರಹ
ಕೇAದ್ರದಿAದ ಭಕ್ತರಿಗೆ ನೆರವಾಗಿದೆ. ನಗರ ಪ್ರದೇಶದ ಜನರು ಇಲ್ಲಿಗೆ ತಾವು ನೀಡುವಂತಹ ತರಕಾರಿ, ದಿನಸಿ, ಪಾತ್ರೆ ಇತ್ಯಾದಿ ವಸ್ತುಗಳನ್ನು ನೀಡುವುದರಿಂದ ಅದು ಉಮಾಮಹೇಶ್ವರಿ ದೇವಸ್ಥಾನಕ್ಕೆ ಸಂದಾಯವಾಗುತ್ತದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆ. 1ರಿಂದ 8ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ವಾರ್ಷಿಕ
ಜಾತ್ರೆ ನಡೆಯಲಿದೆ. ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಶರವು ಕ್ಷೇತ್ರದ ಹೊರೆಕಾಣಿಕೆ ಕೇಂದ್ರದಲ್ಲಿ ಸಂಗ್ರಹವಾದ ಹಸುರು ವಾಣಿಯ ಮೆರವಣಿಗೆ ಫೆ. 1ರಂದು ಸಂಜೆ 3 ಗಂಟೆಗೆ ಆರಂಭವಾಗಲಿದೆ.
ಎಲ್ಲ ಕಡೆಯಿಂದ ಬಂದ ಹೊರೆಕಾಣಿಕೆ ತೊಕ್ಕೊಟ್ಟಿನಲ್ಲಿ ಒಟ್ಟು ಸೇರಿ ಅಲ್ಲಿಂದ ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ ಎಂದರು.
ಹೊರೆ ಕಾಣಿಕೆ ಕೇಂದ್ರದ ಉಸ್ತುವಾರಿ ಮೋನಪ್ಪ ಭಂಡಾರಿ, ದೇವಸ್ಥಾನ ಆಡಳಿತ ಮೊಕ್ತಸರ ಎ.ಜೆ. ಶೇಖರ್, ಆಡಳಿತ ಮಂಡಳಿ ಪ್ರ.ಕಾವ್ಯದರ್ಶಿ ದಿನೇಶ್ ಕೆ. ಅತ್ತಾವರ, ಸೇವಾ ಸಮಿತಿ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಪ್ರಧಾನ ಕಾವ್ಯದರ್ಶಿ ಗಣೇಶ್ ಕಾಪಿಕಾಡ್, ಮಾಜಿ ಮೇಯರ್‌ಗಳಾದ ಸುಧೀರ್‌ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ರವಿಶಂಕರ್ ಮಿಜಾರು, ರವೀಂದ್ರ ಶೆಟ್ಟಿ ಉಳಿದೊಟ್ಟು ರಮೇಶ್ ಕಂಡೆಟ್ಟು ನಂದನ್ ಮಲ್ಯ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.



