Author: UllalaVani

Kannada News From Coastal Karnataka

ಉಡುಪಿ, ನ. 25 : ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(ಎಸ್‌ಪಿಜಿ) ಸೇರಿದಂತೆ ವಿವಿಧ ಭದ್ರತಾ ಏಜೆನ್ಸಿಗಳು ಈಗಾಗಲೇ ಕಾರ್ಯಕ್ರಮದ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಉಸ್ತುವಾರಿ ವಹಿಸಿಕೊಂಡಿವೆ. ಕಳೆದ ಎರಡು ದಿನಗಳಿಂದ ಸಿದ್ಧತೆಗಳು ಚುರುಕುಗೊಂಡಿದೆ. ಎಸ್‌ಪಿಜಿ ತಂಡವು ನಿನ್ನೆ ಉಡುಪಿಗೆ ಆಗಮಿಸಿದ್ದು, ತಕ್ಷಣವೇ ವಿವರವಾದ ಪರಿಶೀಲನೆಗಳನ್ನ ಪ್ರಾರಂಭಿಸಿದೆ. ತಂಡವು ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ, ಪ್ರವೇಶ ಮಾರ್ಗಗಳನ್ನು ಪರಿಶೀಲಿಸಿದೆ ಮತ್ತು ಜನಸಂದಣಿ ನಿರ್ವಹಣೆ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಇಂದು ಬೆಳಿಗ್ಗೆಯೂ ಎಸ್‌ಪಿಜಿ ಅಧಿಕಾರಿಗಳು ತಮ್ಮ ಸ್ಥಳ ಪರಿಶೀಲನೆಯನ್ನು ಮುಂದುವರೆಸಿದ್ದು, ಎಲ್ಲಾ ಭದ್ರತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಆವರಣದ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿದ್ದಾರೆ. ಯಾವುದೇ ಕೊನೆಯ ಕ್ಷಣದ ಲೋಪಗಳನ್ನು ತಪ್ಪಿಸಲು ಅಧಿಕಾರಿಗಳು ತುರ್ತು ನಿರ್ಗಮನಗಳು, ಚಲನೆಯ ಮಾರ್ಗಗಳು ಮತ್ತು ಬ್ಯಾರಿಕೇಡ್ ವ್ಯವಸ್ಥೆಗಳನ್ನೂ ಪರಿಶೀಲಿಸಿದ್ದಾರೆ.ಈ ಪರಿಶೀಲನೆಯ ನಂತರ, ಇಂದು ಎಸ್‌ಪಿಜಿ, ಜಿಲ್ಲಾಡಳಿತ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ಉನ್ನತ ಮಟ್ಟದ…

Read More

ಕೊಲ್ಯ; ತೊಕ್ಕೊಟ್ಟುವಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ಬಿಜೆಪಿ ಮುಖಂಡೆ, ಸಾಮಾಜಿಕ ಕಾರ್ಯಕರ್ತೆ ಎಂದೇ ಖ್ಯಾತಿ ಗಳಿಸಿದ್ದ ಲಲಿತಾ ಡಿ ಸುಂದರ್ ಅವರಿಗೆ ಗೌರವ ನುಡಿ-ನಮನವನ್ನು ಸಲ್ಲಿಸುವ ಸಲುವಾಗಿ ಬಿಜೆಪಿ ವಿಧಾನಸಭಾ ಕ್ಷೇತ್ರ ಮಂಗಳೂರು ವತಿಯಿಂದ ಕೊಲ್ಯದ ಶ್ರೀ ಶಾರದ ಸಭಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಸಭೆಗೆ ಆಗಮಿಸಿದ್ದ ಎಲ್ಲರೂ ಲಲಿತಾ ಡಿ ಸುಂದರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ಬಳಿಕ ಉಳ್ಳಾಲ ವಿಧಾನ ಸಭಾದ ಮಾಜಿ ಶಾಸಕರಾದ ಜಯರಾಮ್ ಶೆಟ್ಟಿ ನುಡಿನಮನ ಸಲ್ಲಿಸಿ, “ಯಥಾಸ್ಯಂ ಮರಣಂ ಧ್ರುವಂ” ಎಂದರೆ “ಹುಟ್ಟಿದ ಪ್ರತಿ ಜೀವಕ್ಕೂ ಮರಣವು ನಿಶ್ಚಿತ”. ಇದು ಜೀವನದ ಅನಿವಾರ್ಯ ಸತ್ಯವನ್ನು ಹೇಳುತ್ತದೆ, ಹುಟ್ಟಿದ ಎಲ್ಲರೂ ಅಂತಿಮವಾಗಿ ಮರಣಹೊಂದುತ್ತಾರೆ. ಆದರೆ ಲಲಿತಾ ಅವರದ್ದು, ಸಾಯುವ ವಯಸ್ಸಲ್ಲ. ಬಿಜೆಪಿ ಪಕ್ಷ ಬಲಿಷ್ಠಗೊಳಿಸಲು ದಿ.ಲಲಿತಾ ಡಿ ಸುಂದರ್ ಅವರ ಕೊಡುಗೆ ಮಹತ್ವದ್ದಾಗಿದೆ ಎನ್ನುತ್ತಾ ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ…

Read More

ನಾಲ್ವರ ತಂಡದಿಂದ ಯುವಕನೋರ್ವನಿಗೆ ಚೂರಿ ಇರಿತ ಆಗಿರುವ ಘಟನೆ ಬಜ್ಪೆಯಲ್ಲಿ ನಡೆದಿದೆ. ಬೈಕ್ ನಲ್ಲಿ ಚಾಕು ಹಿಡಿದುಕೊಂಡು ಹೋಗುತ್ತಿದ್ದವರ ವಿಡಿಯೋ ಮಾಡಲು ಅಖಿಲೇಶ್ ಎಂಬ ಯುವಕ ಅವರ ಹಿಂದೆ ಹೋಗಿದ್ದಾನೆ. ಈ ವೇಳೆ ನಾಲ್ವರ ತಂಡ ಎಡಪದವು ಪೂಪಡಿ ಕಲ್ಲು ನಿವಾಸಿ ಅಖಿಲೇಶ್ ಮೇಲೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಪರಾರಿಯಾಗಿದ್ದು, ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ನಿಖರ ಕಾರಣ ಪೊಲೀಸರು ತನಿಖೆ ಬಳಿಕ ತಿಳಿದುಬರಬೇಕಿದೆ.

Read More

ಮುಂಬೈ, ನ. 24 : ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇದೇ ಡಿಸೆಂಬರ್‌ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು. ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು. ಮುಂಬೈ ಸಮೀಪದ ಖಂಡಾಲಾದಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ತಂದೆ ಧರ್ಮೇಂದ್ರ ಅವರು ವಾಸಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು.ಧರ್ಮೇಂದ್ರ ಅವರ ಪತ್ನಿ ನಟಿ ಹೇಮಾ ಮಾಲಿನಿ, ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ನಟರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ…

Read More

ಉಡುಪಿ, ನ. 24 : ಬೈಕೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶಂಕರನಾರಾಯಣ ಗ್ರಾಮದ ಕಲ್ಲಗದ್ದೆ ಎಂಬಲ್ಲಿ ನಡೆದಿದೆ. ಮೃತರನ್ನು ಸಚಿನ್ ಕಲ್ಲಪ್ಪ್ ಸಂಕ್ರಟ್ಟಿ(28) ಎಂದು ಗುರುತಿಸಲಾಗಿದೆ. ಇವರು ಶಂಕರನಾರಾಯಣ ಪದವಿ ಕಾಲೇಜಿನಲ್ಲಿ ನಡೆಯುತ್ತಿದ್ದ ಹುಟ್ಟೂರು ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದು, ನಂತರ ಸ್ನೇಹಿತ ಬಸವ ಕಿರಣ ಎಂಬವರನ್ನು ಬಸ್ಸಿಗೆ ಬಿಡಲು ಕುಂದಾಪುರಕ್ಕೆ ಬೈಕಿನಲ್ಲಿ ಹೊರಟಿದ್ದರು. ಅಂಪಾರು ಮಾರ್ಗವಾಗಿ ಕುಂದಾಪುರಕ್ಕೆ ಹೊಗುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಇದರಿಂದ ಗಂಭೀರವಾಗಿ ಗಾಯಗೊಂಡ ಸಚಿನ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಮೂಲಕ ಆಯೋಜಿಸಲಾದ “ವೇವ್ಸ್ 2025 – ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ” ನವೆಂಬರ್ 25ರಿಂದ 27ರ ವರೆಗೆ ಮಂಗಳಗಂಗೋತ್ರಿಯಲ್ಲಿ ಜರುಗಲಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯ್ಕ್ ತಿಳಿಸಿದರು. ಅವರು ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಈ ವರ್ಷದ ಉತ್ಸವದ ವಿಷಯ “ಸಾಂಸ್ಕೃತಿಕ ಸಂಯೋಜನೆ 2025: ವಿಕಸಿತ ಭಾರತದತ್ತ” ಆಗಿದ್ದು, ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆಯ (ಎ ಐ ಯು ) ನವದೆಹಲಿ ಆಶ್ರಯದಲ್ಲಿ ನಡೆಯುವ ಎ ಐ ಯು39ನೇ ಅಂತರ-ವಿಶ್ವವಿದ್ಯಾಲಯ ಯುವೋತ್ಸವ (ಯುನಿಫೆಸ್ಟ್) 2025–26ಕ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆಮಾಡುವುದು ಇದರ ಪ್ರಮುಖ ಉದ್ದೇಶವೆಂದರು.ನವೆಂಬರ್ 25ರಂದು ಬೆಳಿಗ್ಗೆ 9:30ಕ್ಕೆ ಮಂಗಳಾ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದು, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ರಾಜಕೀಯ ವಿಜ್ಞಾನ ಪ್ರಾಧ್ಯಾಪಕಿ ಡಾ. ಶಾನಿ ಕೆ.ಆರ್. ಮುಖ್ಯ ಅತಿಥಿಗಳಾಗಿ…

Read More

ಉಳ್ಳಾಲ : ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಂಗಳೂರಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ 6ನೇ ಪದವಿ ಪ್ರದಾನ ಸಮಾರಂಭವು ನವೆಂಬರ್ 25 ಮಂಗಳವಾರ ಮತ್ತು 26 ರ ಬುಧವಾರದಂದು ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯ ಆವರಣದ ಯೆಂಡ್ಯೂರೆನ್ಸ್ ವೇದಿಕೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಈ ಎರಡು ದಿನಗಳ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 1,863 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.ನವೆಂಬರ್ 25 ರಂದು ಬಿಬಿಎ, ಬಿಕಾಂ, ಎಂಬಿಎ, ಎಂ.ಎಸ್‌ಸಿ (ಕಂಪ್ಯೂಟರ್ ಸೈನ್ಸ್, ಆಹಾರ ತಂತ್ರಜ್ಞಾನ), ಎಂಎಸ್ಥಬ್ಲೂ, ಬಯೋ–ಸೈನ್ಸ್ ಮತ್ತು ಕಂಪ್ಯೂಟೇಶನಲ್ ಬಯಾಲಜಿ ವಿಭಾಗಗಳ ಪದವೀಧರರಿಗೆ ಪದವಿ ಪ್ರದಾನ ನಡೆಯಲಿದೆ.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮೈಸೂರಿನ ಎಸ್‌ಡಿಎಂ ಐಎಂಡಿ ನಿರ್ದೇಶಕ ಡಾ. (ಲೆಫ್ಟಿನೆಂಟ್ ಕರ್ನಲ್) ಪ್ರಸಾದ್ ಎಸ್.ಎನ್.ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ–ವೈಸ್–ಚಾನ್ಸೆಲರ್ ಡಾ. ಬಿ.ಎಚ್. ಶ್ರೀಪತಿ ರಾವ್ ವಹಿಸಲಿದ್ದಾರೆ.
ಯೆನೆಪೋಯ ಇಂಟರ್‌ನ್ಯಾಶನಲ್ ಸ್ಕೂಲ್ (ಕೆಎಸ್‌ಎ) ಸಿಇಒ ಪ್ರೊ. ಅರುಣ್ ಎ. ಭಾಗವತ್ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 26 ರಂದು ಬಿಸಿಎ, ಬಿಎಸ್ಸಿ,…

Read More

ಮಂಗಳೂರು,ನ.24:ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ಮೀನಾ ಮೇಷ ಎಣಿಸುವ ರಾಜ್ಯ ಸರಕಾರದ ವಿರುದ್ದ ಬೀಡಿ ಕಾರ್ಮಿಕರು CITU ನೇತ್ರತ್ವದಲ್ಲಿ ಇಂದಿನಿಂದ (24-11-2025) ನಗರದ ಕ್ಲಾಕ್ ಟವರ್ ಬಳಿಯಲ್ಲಿ ರಾತ್ರಿ ಹಗಲು ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.ಪ್ರಾರಂಭದಲ್ಲಿ ಧರಣಿನಿರತರು ಬೀಡಿ ಮಾಲಕರು ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. :ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಬೀಡಿ ಫೆಡರೇಶನ್ ನ ಕರ್ನಾಟಕ ರಾಜ್ಯಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು, ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿದ ವೇತನ‌ ನೀಡದೆ ನಿರಂತರ ಶೋಷಿಸುತ್ತಿರುವ ಬೀಡಿ ಮಾಲಕರ ವಿರುದ್ಧ ಕ್ರಮ‌ಕೈಗೊಂಡು ಬಾಕಿ ವೇತನವನ್ನು ಕೊಡಿಸಬೇಕು ಹಾಗೂ ಕಾನೂನುಬದ್ದ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕೆಂದು ಹೇಳಿದರು. CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು ಮಾತನಾಡುತ್ತಾ, ದುಡಿದ ವೇತನ ನೀಡದ ಮಾಲಕರ ಪರ,ಅತ್ಯಾಚಾರ ಕೊಲೆ ಮಾಡುವ ಆರೋಪಿಗಳ…

Read More

ದೇಶದ ಕ್ರಿಶ್ಚಿಯನ್ ನಾಗರಿಕರ ಹಕ್ಕು-ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ Concerned Christian Citizens of India (CCCI) ಸಂಘಟನೆಯು ರಾಷ್ಟ್ರೀಯ ಕ್ರಿಶ್ಚಿಯನ್ ಕನ್ವೆನ್ನನ್ನನ್ನು ನವೆಂಬರ್ 29ರಂದು ಶನಿವಾರ ನವದೆಹಲಿಯ ಜಂತರ್ ಮಂತರ್ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲು ಘೋಷಿಸಿದೆ. AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇದರಲ್ಲಿ ಭಾಗಿಯಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದವರನ್ನು ಪ್ರತಿನಿಧಿಸಲಿದ್ದಾರೆ. ವಿಭಿನ್ನ ಪಂಥಗಳ ನಾಗರಿಕರ ಒಕ್ಕೂಟದಿಂದ ಆರಂಭವಾದ ಈ ಚಳವಳಿಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಂ (UCF) ಸಂಪೂರ್ಣ ಬೆಂಬಲ ಘೋಷಿಸಿದೆ. ಸಂಘಟಕರು ತಿಳಿಸಿದಂತೆ, ಈ ಕನ್ವೆನ್ನನ್ ಭಾರತದ ಧರ್ಮ ನಿರಪೇಕ್ಷತೆ ಮತ್ತು ಕ್ರಿಶ್ಚಿಯನ್ ಸಮುದಾಯದ ಸಂವಿಧಾನಿಕ ಹಕ್ಕುಗಳಿಗೆ ಎದುರಾಗಿರುವ ತುರ್ತು ಸಂವಿಧಾನ ಸಂಕಟದ” ಬಗ್ಗೆ ರಾಷ್ಟ್ರದ ಗಮನ ಸೆಳೆಯುವ ಗುರಿ ಹೊಂದಿದೆ. ನಾಯಕರು, ಬುದ್ಧಿಜೀವಿಗಳು ಮತ್ತು ಸಮುದಾಯ ಪ್ರತಿಸಿಧಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಸಂವಿಧಾನ ಸಂಕಟದ ನಡುವೆ ಕ್ರಿಶ್ಚಿಯನ್ ಸಮುದಾಯದ ಮೂರು ಮುಖ್ಯ ಪ್ರಮುಖ ಸಂವಿಧಾನಿಕ ಬೇಡಿಕೆಗಳು:

Read More

ಮೈಸೂರು, ನ. 24 ರಾಜ್ಯ ರಾಜಕೀಯದಲ್ಲಿ ಸಿಎಂ ಹುದ್ದೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ವೇಳೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಹಾರೈಕೆಗಾಗಿ ಮೈಸೂರು ಜಿಲ್ಲೆಯಲ್ಲೇ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಈ ವಿಶೇಷ ಪೂಜೆಯನ್ನು ಶಬರಿಮಲಾ ಯಾತ್ರಿಕರು ನೆರವೇರಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಶಬರಿಮಲಾ ಯಾತ್ರಿಗಳು ಡಿಕೆ ಶಿವಕುಮಾರ್ ಅವರ ಫೋಟೋ ಹಿಡಿದು, ‘‘ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ’’ ಎಂದು ಘೋಷಣೆ ಕೂಗುತ್ತಾ ದೇವರ ಕೃಪೆಯನ್ನು ಬೇಡಿಕೊಂಡರು. ಯಾತ್ರಿಕರು ಕೈಯಲ್ಲಿ ಇಟ್ಟಿದ್ದ ಚಿತ್ರ ಮತ್ತು ಘೋಷಣೆಗಳು ದೇವಾಲಯದ ವಾತಾವರಣದಲ್ಲೇ ರಾಜಕೀಯ ಚರ್ಚೆಗಳನ್ನು ಮರುಜ್ವಲಿಸುತ್ತಿತ್ತು.ಈ ಘಟನೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ನಡೆದಿರುವುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವ ಬದಲಾವಣೆ ಬಗ್ಗೆ ಊಹಾಪೋಹಗಳು ಜೋರಾಗಿರುವ ಸಂದರ್ಭದಲ್ಲಿ ನಡೆದಿರುವ ಈ ವಿಶೇಷ ಪೂಜೆ ಗಮನ ಸೆಳೆಯುತ್ತಿದೆ.ಜಿಲ್ಲೆಯಲ್ಲಿನ ರಾಜಕೀಯ ಚರ್ಚೆಗಳ ನಡುವೆ, ಡಿಕೆ ಶಿವಕುಮಾರ್ ಬೆಂಬಲಿಗರ ಈ ಹಾರೈಕೆ…

Read More