Author: UllalaVani

Kannada News From Coastal Karnataka

ದೇರಳಕಟ್ಟೆ: ಸಿನಿಮಾಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಪಿಲಿಪಂಜ’ ತುಳು ಚಿತ್ರದ ಪ್ರೀಮಿಯರ್ ಶೋ ದೇರಳಕಟ್ಟೆಯ ಭಾರತ್ ಸಿನಿಮಾಸ್‌ನಲ್ಲಿ ನಡೆಯಿತು. ಡಿ.12ರಂದುಪಿಲಿಪಂಜ’ ತುಳು ಸಿನಿಮಾ ಅಬ್ಬರಿಸಲಿದ್ದು, ಈಗಾಗಲೇ ಚಿತ್ರದ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ. ಹಾಸ್ಯನಟ ಭೋಜರಾಜ್ ವಾಮಂಜೂರು ಮಾತನಾಡಿ, ಪಿಲಿಪಂಜ ಸಿನಿಮಾ ಭರತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸಿನಿಪ್ರೇಕ್ಷಕರು ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹಿಸಿ ಎಂದರು. ಚಿತ್ರದ ನಿರ್ದೇಶಕ ಭರತ್ ಶೆಟ್ಟಿ ಮಾತನಾಡಿ, ಪುತ್ತೂರು, ಮಂಗಳೂರು, ದೇರಳಕಟ್ಟೆಯಲ್ಲಿ ಪ್ರೀಮಿಯರ್ ಶೋ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ಮೊದಲ ವಾರದಲ್ಲೇ ಸಿನಿಮಾವನ್ನು ವೀಕ್ಷಿಸಿ, ತುಳು ಚಿತ್ರವನ್ನು ಬೆಳೆಸಿ ಎಂದರು. ನಿರ್ಮಾಪಕ ಪ್ರತೀಕ್ ಯು.ಪೂಜಾರಿ ಕಾವೂರು ಮಾತನಾಡಿ, ಪಿಲಿಪಂಜ ಚಿತ್ರದ ಕಥೆ ತುಳುನಾಡಿನ ಮಣ್ಣಿನ ಕಥನವನ್ನು ಒಳಗೊಂಡಿದ್ದು, ವಿಭಿನ್ನ ರೀತಿಯ ತಂಡದ ಪ್ರಯತ್ನಕ್ಕೆ ಆರ್ಶೀವದಿಸಿ, ಬುಕ್ ಬೈ ಶೋನಲ್ಲಿ ಟಿಕೆಟ್ ಬುಕ್ ಮಾಡಿ ಮೊದಲ ವಾರದಲ್ಲೇ ಪಿಲಿಪಂಜ ವೀಕ್ಷಿಸಿ ಎಂದು ಹೇಳಿದ್ದಾರೆ. ಪ್ರತೀಕ್ ಯು.ಪೂಜಾರಿ ಕಾವೂರು ನಿರ್ಮಾಣದ ಪಿಲಿಪಂಜ ಚಿತ್ರಕ್ಕೆ…

Read More

ಮಂಗಳೂರು: ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುತ್ತೇನೆಂದು ಹೇಳಿ ಮನೆಯಿಂದ ತನ್ನ ತಾಯಿಯ ಕಾರಿನಲ್ಲಿ ಹೊರಟು ಬಂದಿದ್ದ ರಕ್ಷಣ್ ಜೆ.ಕೆ. (32) ಎಂಬವರು ಡಿ.6ರಿಂದ ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರು ಅಂದು ರಾತ್ರಿ 10:30ಕ್ಕೆ ನಗರದ ಟೌನ್‌ಹಾಲ್ ಬಳಿ ಪತ್ತೆಯಾಗಿದೆ. ಸುಮಾರು 5.8 ಅಡಿ ಎತ್ತರದ, ಸಧೃಡ ಶರೀರದ, ಗೋಧಿ ಮೈ ಬಣ್ಣದ ರಕ್ಷಣ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಪ್ರಕರಣ ದಾಖಲಿಸಿದ ಪೊಲೀಸರು ತಿಳಿಸಿದ್ದಾರೆ.

Read More

ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮದ ನೂತನ ಕಟ್ಟಡದ ವಠಾರದಲ್ಲಿ ನಡೆದ ಪಾವಂಜೆ ಯಕ್ಷಗಾನ ಮೇಳದ ಪ್ರದರ್ಶನದ ಸಂದರ್ಭದಲ್ಲಿ ದೈಗೋಳಿ ರಿಕ್ಷಾ ಚಾಲಕರಿಗೆ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ದೈಗೋಳಿ ರಿಕ್ಷಾ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು, ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಅವರ ಆರೋಗ್ಯ ವನ್ನು ಲೆಕ್ಕಿಸದೆ, ರಾತ್ರಿ ಹಗಲೆನ್ನದೆ ರೋಗಿಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಿದ್ದರು.ಆಶ್ರಮವಾಸಿಗಳು ಕಣ್ತಪ್ಪಿಸಿ ಹೋದ ಸಂದರ್ಭದಲ್ಲಿ ಪುನಃ ಕರೆತರುವುದು, ಕರೆ ಮೂಲಕ ಮಾಹಿತಿ ನೀಡುವುದು. ರಸ್ತೆ ಬದಿಯಲ್ಲಿರುವ ನಿರ್ಗತಿಕರನ್ನು ಆಶ್ರಮಕ್ಕೆ ಕರೆತಂದು ಬಿಡುವುದರ ಮೂಲಕ ಆಶ್ರಮದ ಸೇವಾಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದರು. ಇದೇ ರೀತಿಯ ಯಾವುದೇ ಪರಿಸ್ಥಿತಿಯಲ್ಲಿ ಸಂಕೋಚ ಇಲ್ಲದೆ ನಿಸ್ವಾರ್ಥವಾಗಿ ಸೇವೆಯನ್ನು ಮಾಡಿರುತ್ತಾರೆ. ಈ ಸೇವಾಕಾರ್ಯಗಳನ್ನು ಗುರುತಿಸಿ ಇವರನ್ನು ಅಭಿನಂದಿಸಲಾಯಿತು.

Read More

ಉಳ್ಳಾಲ: ಡಿ-08;ಕುಂಪಲ ಬಗಂಬಿಲ ಹಿಂದೂ ನಗರದ ಹಿಂದೂ ಯುವಸೇನೆ ಶ್ರೀ ಮಹಾದೇವಿ ಶಾಖೆಯ ವತಿಯಿಂದ ಗುಣಕರ ಶೆಟ್ಟಿಯವರ ಸ್ಮರಣಾರ್ಥವಾಗಿ, ಲಯನ್ಸ್ ಕ್ಲಬ್ ಕದ್ರಿ, ಮಂಗಳೂರು ಇವರ ಸಹಕಾರದೊಂದಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಆಸ್ಪತ್ರೆಯ ಸಹಯೋಗದೊಂದಿಗೆ ಬಗಂಬಿಲ ಫ್ರೆಂಡ್ಸ್ ಸರ್ಕಲ್ ಮೈದಾನದಲ್ಲಿ ಭಾನುವಾರದಂದು ಬೃಹತ್ ರಕ್ತದಾನ ಶಿಬಿರ,ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು. ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷರಾದ ಭಾಸ್ಕರ ಚಂದ್ರ ಶೆಟ್ಟಿ ಕಾರ್ಯಕ್ರಮ‌ ಉದ್ಘಾಟಿಸಿದರು.ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ ಚೌಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ. ಉದ್ಯಮಿ ಪ್ರವೀಣ್ ಸುವರ್ಣ ಬಗಂಬಿಲ, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷರಾದ ಕೆ.ಸಂಜೀವ ಗೌಡ ,ಯೆನೆಪೋಯ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಅನುಷ್ ,ಶಿಬಿರ ಸಂಯೋಜಕರಾದ ಅಬ್ದುಲ್ ರಝಾಕ್,ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಐ ಬಗಂಬಿಲ, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಎಕ್ಕೂರು,ಮಂಗಳೂರು…

Read More

ಉಡುಪಿ, ಡಿ. 08 : ತೀವ್ರ ಅಸ್ವಸ್ಥರಾಗಿದ್ದ ರೋಗಿಯೊಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಸುಮಾರು ಎರಡೂವರೆ ಗಂಟೆಗಳ ಕಾಲ 108 ಆಂಬ್ಯುಲೆನ್ಸ್ ಅಥವಾ ಯಾವುದೇ ಖಾಸಗಿ ಆಂಬ್ಯುಲೆನ್ಸ್ ಸಿಗದ ಕಾರಣ, ಕೊನೆಗೆ ಅವರನ್ನು ಸರಕು ಸಾಗಿಸುವ ಟೆಂಪೋದಲ್ಲಿ ಕರೆದೊಯ್ಯಬೇಕಾದ ಆಘಾತಕಾರಿ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ. ರೋಗಿಯ ಕುಟುಂಬವು ಸಂಜೆ 7:00 ರಿಂದ ರಾತ್ರಿ 9:30 ರವರೆಗೆ 108 ತುರ್ತು ಸೇವೆಗೆ ಪದೇ ಪದೇ ಕರೆ ಮಾಡಿದೆ, ಆದರೆ ಯಾವುದೇ ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಆಂಬ್ಯುಲೆನ್ಸ್‌ಗಳನ್ನೂ ಸಹ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ರೋಗಿಯ ಸ್ಥಿತಿ ಹದಗೆಡುತ್ತಿದ್ದರಿಂದ, ಕುಟುಂಬವು ಅಂಬಲಪಾಡಿಯ ವಿಷು ಶೆಟ್ಟಿ ಅವರ ಸಹಾಯವನ್ನು ಕೋರಿತು.ವಿಷು ಶೆಟ್ಟಿ ಅವರು ಪ್ರಯತ್ನಿಸಿದರೂ, ಅವರಿಗೂ ಆಂಬ್ಯುಲೆನ್ಸ್ ಒದಗಿಸಲು ಸಾಧ್ಯವಾಗಲಿಲ್ಲ. ಬೇರೆ ದಾರಿಯಿಲ್ಲದೆ ಮತ್ತು ರೋಗಿಯ ಆರೋಗ್ಯವು ಮತ್ತಷ್ಟು ಹದಗೆದುತ್ತಿದ್ದ ಕಾರಣ, ವಿಷು ಶೆಟ್ಟಿ ಅವರು ತಮ್ಮ ಸರಕು ಟೆಂಪೋದೊಳಗೆ ಮಂಚವನ್ನು ಇರಿಸಿ, ರೋಗಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ಘಟನೆಯ ಕುರಿತು ಮಾತನಾಡಿದ ವಿಷು ಶೆಟ್ಟಿ, “ಕಳೆದ…

Read More

ಮಂಗಳೂರು, ಡಿ. 08 : ತುಳು ನಾಡಿನ ಪರಂಪರೆಯ ಕಂಬಳದಲ್ಲಿ ಈ ವರ್ಷದಿಂದ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ಎಂಬ ಆರು ವಿಭಾಗಗಳಲ್ಲಿ ನಡೆಯುವ ಕಂಬಳ ಸ್ಪರ್ಧೆಗಳಿಗೆ ಸಮಯ ನಿರ್ವಹಣೆ ಮತ್ತು ಅಂಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕನೆ ಹಲಗೆ ವಿಭಾಗದಲ್ಲಿ ಈಗಾಗಲೇ ಇದ್ದ ಗೊಂದಲದ ನಿರ್ವಹಣೆಗೆ ಈ ಬಾರಿ ಸಮಿತಿ ಸ್ಪಷ್ಟವಾದ ತೀರ್ಮಾನಕ್ಕೆ ಬಂದಿದೆ. ಹಿಂದಿನ ವರ್ಷಗಳಲ್ಲಿ ಕೋಣಗಳು ನಿಶಾನೆಗೆ ನೀರು ತಾಕದಿದ್ದರೂ, ಓಟದ ಸಮಯದಲ್ಲಿ ನೀರು ಹಾಯಿಸಿದ ಎತ್ತರವನ್ನು ಆಧರಿಸಿ ಬಹುಮಾನ ನೀಡುವ ಪದ್ಧತಿ ಇತ್ತು. ಇದು ಕೆಲವೊಮ್ಮೆ ಗೊಂದಲ ಮತ್ತು ಅನಗತ್ಯ ಚರ್ಚೆಗೆ ಕಾರಣವಾಗುತ್ತಿತ್ತು. ಇದಕ್ಕೆ ಕೊನೆಗಾಣಿಸುತ್ತಾ, ಈ ಬಾರಿ 6.5 ಕೋಲು ಮತ್ತು 7.5 ಕೋಲು ನಿಶಾನೆಗೆ ನೀರು ತಾಕಿದರಷ್ಟೇ ಬಹುಮಾನ ನೀಡುವಂತೆ ಕಂಬಳ ಸಮಿತಿ ನಿರ್ಧರಿಸಿದೆ.ಕನೆ ಹಲಗೆ ವಿಭಾಗಕ್ಕೆ 3.30…

Read More

ಉಳ್ಳಾಲ; ನಾಲ್ಕನೇ ವರ್ಷದ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಡೆಯಲಿರುವ ಲವ-ಕುಶ ಜೋಡುಕರೆ ‘ನರಿಂಗಾನ ಕಂಬಳೋತ್ಸವ’ದ ಪ್ರಯುಕ್ತ ಶುಕ್ರವಾರ ಕಂಬಳಕರೆಯ ಬಳಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ, ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪ್ರತೀವರ್ಷ ಕಂಬಳ ಯೋಜನೆಯಲ್ಲಿ ಅಭಿವೃದ್ಧಿ ಕಾಣುತ್ತಿದ್ದು ಈ ಬಾರಿ ಊರಿಗೇ ಹೆಸರು ಬರುವ ರೀತಿಯಲ್ಲಿ ಸರ್ವರ ಪ್ರಶಂಸೆಗೆ ಪಾತ್ರವಾಗುವ ನಿಟ್ಟಿನಲ್ಲಿ ಕಂಬಳ ನಡೆಯಲಿದೆ. ಶಾಶ್ವತ ವೇದಿಕೆ ನಿರ್ಮಾಣ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಸರ್ವ ಧರ್ಮೀಯರನ್ನು ಒಂದೇ ವೇದಿಕೆಗೆ ತರುವ ಹಾಗೂ ದಕ್ಷಿಣ ಜಿಲ್ಲೆಯ ಇತಿಹಾಸ, ಪರಂಪರೆ ಸಾರುವ ನಿಟ್ಟಿನಲ್ಲಿ ಕಂಬಳ ಸಹಕಾರಿಯಾಗಲಿದೆ. ಈ ಬಾರಿ ರಾಜ್ಯ ರಾಷ್ಟ್ರ ಮಟ್ಟದ ರಾಜಕೀಯ, ಧಾರ್ಮಿಕ, ಸಾಮಾಜಿಕ ಹೆಸರಾಂತ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಮಾತನಾಡಿ, ಜ.10ಕ್ಕೆ ಕಂಬಳ ನಡೆಯಲಿದ್ದು, ವೇದಿಕೆಗೆ ಹೆಚ್ಚಿನ ಖರ್ಚು ತಗಲುವುದರಿಂದ ಶಾಶ್ವತ ವೇದಿಕೆ ನಿರ್ಮಿಸಬೇಕಿದೆ. ಅದರಿಂದ ಘನತೆ ಹೆಚ್ಚಿಸಲು ಸಾಧ್ಯ ಗಡಿನಾಡಿನಲ್ಲಿ ನಡೆಯುವ ಕಂಬಳದಲ್ಲಿ 260 ಜೋಡಿ…

Read More

ಉಳ್ಳಾಲ: ಭೀಕರ ನಾಯಿ ದಾಳಿಯಿಂದ ಕುಂಪಲ ಬೈಪಾಸ್ ಸಮೀಪದ ನಿವಾಸಿ ದಯಾನಂದ ಗಟ್ಟಿ ಸಾವನ್ನಪ್ಪಿ ತಿಂಗಳಾಗುತ್ತಾ ಬಂದರೂ 48 ಗಂಟೆಯೊಳಗೆ ಸಿಗಬೇಕಾದ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಅವರು ನ.14ರಂದು ಬೆಳಿಗ್ಗೆ ಸುಮಾರು 7.30 ಗಂಟೆಗೆ ಕುಂಪಲ ಮುಖ್ಯರಸ್ತೆಯಲ್ಲಿ ನಡೆದ ಬೀದಿ ನಾಯಿಯ ಕ್ರೂರ ದಾಳಿಗೆ ತುತ್ತಾಗಿ ಮರಣ ಹೊಂದಿದ್ದರು. ಈ ಕುರಿತು ಅಸ್ವಾಭಾವಿಕ ಮರಣ ಎಂಬ ಪ್ರಥಮ ಮಾಹಿತಿ ದೊರಕುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಪೋಸ್ಟ್ಮಾರ್ಟಂ ವೈದ್ಯಕೀಯ ವರದಿಯೇ ‘ಪ್ರಾಣಿ ದಾಳಿಯಿಂದಾದ ಗಂಭೀರ ಗಾಯಗಳೇ ದಯಾನಂದ ಗಟ್ಟಿಯವರ ಮರಣಕ್ಕೆ ನೇರ ಕಾರಣ’ ಎಂದು ಸ್ಪಷ್ಟಪಡಿಸಿದೆ. ಇವುಗಳನ್ನು ಪರಿಗಣಿಸಿ ಜಿಲ್ಲಾಡಳಿತದ ಬೇಜವಬ್ದಾರಿಗೆ ಬಲಿಯಾದ ದಯಾನಂದ ಅವರ ಬಡಕುಟುಂಬಕ್ಕೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ರಿಟ್ ಪಿಟೀಷನ್ ಸಂಖ್ಯೆ 110352/2019 ಹಾಗೂ ಸರ್ಕಾರದ ಆದೇಶ ÀDE 159 ಜಿಇಯಲ್ 2023 (ದಿನಾಂಕ: 30.10.2023) ಪ್ರಕಾರ, ಬೀದಿ ನಾಯಿಗಳ ದಾಳಿ ಅಥವಾ ಜೀವಹಾನಿ ಸಂಭವಿಸಿದಲ್ಲಿ ಸ್ಥಳೀಯ ಸಂಸ್ಥೆಯಿoದ ಕಮಿಟಿ ರಚಿಸಿ,ಮೃತರ ಕುಟುಂಬಕ್ಕೆ…

Read More

ಉಳ್ಳಾಲ: ಶ್ರೀ ರಾಮ ಭಜನಾ ಮಂದಿರ ಕೊಲ್ಯ ಇದರ 75ನೇ ವಾರ್ಷಿಕೋತ್ಸವದ ಅಂಗವಾಗಿ ಅಮೃತ ಮಹೋತ್ಸವ ಸಂಭ್ರಮ ಕಾರ್ಯಕ್ರಮವು ಡಿ.7 ರ ಭಾನುವಾರದಿಂದ ಡಿ.14 ರ ಭಾನುವಾರದ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಉಳ್ಳಾಲ್ ತಿಳಿಸಿದರು . ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಡಿ.7 ರ ಭಾನುವಾರದಂದು ಸಂಜೆ 4. 30 ಗಂಟೆಗೆ ಕೊಲ್ಯ ಶ್ರೀ ಮೂಕಾಂಜಕಾ ದೇವಸ್ಥಾನದಿಂದ ಶ್ರೀ ರಾಮ ಭಜನಾ ಮಂದಿರದವರೆಗೆ ಕುಣಿತ ಭಜನೆ ಮೆರವಣಿಗೆ ನಡೆಯಲಿದೆ . ಸಂಜೆ 6 ಗಂಟೆಗೆ ಏಳು ದಿನಗಳ ಸಂಧ್ಯಾ ಭಜನೆ ಪ್ರಾರಂಭ (ಪ್ರತೀ ದಿನ ಸಂಜೆ 7:30ಕ್ಕೆ ಮಂಗಳಾಚರಣೆ)ನಡೆಯಲಿದೆ. ಡಿ 12 ರ ಶುಕ್ರವಾರದಂದು ಸಂಜೆ 7.30 ಕ್ಕೆ ಸಂಧ್ಯಾ ಭಜನೆ ಮಂಗಳಾಚರಣೆಯ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವದೂತ ಗುಳಿಗೆ ಎಂಬ ತುಳುನಾಟಕ…

Read More

ಮಂಗಳೂರು: ಶ್ರೀ ರಾಮ ಭಜನಾ ಮಂದಿರ ದೇರೆಬೈಲ್ ಕೊಂಚಾಡಿ ಇದರ ೨೦೨೫-೨೭ ನೇ ಸಾಲಿನ ಪದಾಧಿಕಾರಿಗಳು ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾ ಹೊನ್ನಯ್ಯ ಪೂಜಾರಿ, ಅಧ್ಯಕ್ಷರಾಗಿ ವಿಜಯ ಕುಮಾರ್,ಉಪಾಧ್ಯಕ್ಷ್ಷರಾಗಿ ಆನಂದ ದೇವಾಡಿಗ, ಕಾರ್ಯದರ್ಶಿಯಾಗಿ ಸದಾಶಿವ ದೇವಾಡಿಗ , ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ಉಡುಪ, ಕೋಶಾಧಿಕಾರಿಯಾಗಿ ಮೋಹನ್ ಶೆಟ್ಟಿಗಾರ್ ,ಲೆಕ್ಕ ಪರಿಶೋಧಕರಾಗಿಪದ್ಮಿನಿ ಮೊಯ್ಲಿ , ಕಮಿಟಿ ಸದಸ್ಯರುಗಳಾಗಿ ಮಾಧವ ಕೋಟ್ಯಾನ್, ಕಿಶೋರ್ ಕೆ, ಮಾಧವ ಕೆ , ಸದಾಶಿವ, ಸದಾಶಿವ ಮಲೆಮಾರ್, ಗಣೇಶ್, ರಾಜೇಶ್ ಕೆ, ಭಾಸ್ಕರ ಸಾಲ್ಯಾನ್, ಕಿಶೋರ್ ಗಡುಕಲ್ಲು, ಜ್ಯೋತಿ ಪ್ರವೀಣ್, ದಾಮೋದರ ಕರ್ಕೇರ, ದಾಮೋದರ ಬಂಗೇರ, ಲಲಿತ ಕೃಷ್ಣಪ್ಪ ಗೌಡ ಆಯ್ಕೆಗೊಂಡಿದ್ದಾರೆ.

Read More