Author: UllalaVani

Kannada News From Coastal Karnataka

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಕನ್ನಡ ಚಿತ್ರರಂಗದ ಪಾಲಿಗೆ ಹಬ್ಬ. ಗುರುವಾರ ರಿಲೀಸ್ ಆಗಿರುವ ದಿ ಡೆವಿಲ್ ಕೂಡ ದೊಡ್ಡ ಮಟ್ಟದಲ್ಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣದಿಂದಲೇ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ ದಿ ಡೆವಿಲ್ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 13.8ಕೋಟಿ ಎನ್ನಲಾಗಿದೆ. ಕನ್ನಡದ ಸಿನಿಮಾಗಳ ಪಾಲಿಗೆ ಒಂದೇ ದಿನಕ್ಕೆ 13 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ದಾಖಲೆಯ ವಿಷಯವೇ ಸರಿ. ಒಂದು ರೀತಿಯಲ್ಲಿ ಇದಕ್ಕೆ ಟಿಕೆಟ್ ಬೆಲೆ ಕೂಡ ಕಾರಣ ಎನ್ನಬಹುದು. ಪಿವಿಆರ್, ಐನಾಕ್ಸ್​​ ಮೊದಲಾದ ಮಲ್ಟಿಪ್ಲೆಕ್ಸ್​ ಚಿತ್ರ ಮಂದಿರಗಳಲ್ಲಿ ಟಿಕೆಟ್ ದರ 500 ರೂಪಾಯಿಗಳಿಂದಲೇ ಆರಂಭ ಎನ್ನುವ ಹಾಗಿತ್ತು. ಸಿಂಗಲ್ ಥೀಯೇಟರ್ ಗಳಲ್ಲಿ 400 ರೂಪಾಯಿ ವರೆಗೂ ಟಿಕೆಟ್ ದರ ಇತ್ತು. ಇದರಿಂದಾಗಿಯೇ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯನ್ ಸಿನಿಮಾಗಳ ಸಿನಿಮಾ ಬಗ್ಗೆ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ನಿರೀಕ್ಷೆ ಮಾಡಿತ್ತು. ಆದರೆ…

Read More

ಉಳ್ಳಾಲ:ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ದಿ ಪಡೆದಿದೆ. ಯಕ್ಷಗಾನ ಅನೇಕರು ಆಕರ್ಷಿಸುವ ಕಲೆ. ವರ್ಷಗಳ ಹಿಂದೆ ವಾರಣಾಸಿ ವಿದ್ಯಾರ್ಥಿಗಳಿಂದ ಹಿಂದಿ ಭಾಷೆಯಲ್ಲಿ ಏಕಲವ್ಯ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತ್ತು. ಇದೀಗ ನಿಟ್ಟೆ ವಿ.ವಿಯಲ್ಲಿ ಮಲಯಾಳಂ ಭಾಷೆಯಲ್ಲಿ ಮಹಿಷಾಸುರನ ವಧೆ ನಡೆದಿದೆ. ಅಶ್ವಥ್ ಮಂಜನಾಡಿ ,ದೀವಿತ್ ಎಸ್.ಕೆ.ಪೆರಾಡಿ ನಿರ್ದೇಶನದಲ್ಲಿ ಮಹಿಷಾಸುರ ವಧೆ ಮೂಡಿಬಂದಿದೆ. ಹಿಮ್ಮೇಳದಲ್ಲಿರಾಜಾರಾಮ್ ಹೊಳ್ಳ, ಚೆಂಡೆ-ಮದ್ದಳೆ-ಕೌಶಿಕ್ ರಾವ್ ಪುತ್ತಿಗೆ, ಕೌಶಲ್ ರಾವ್ ಪುತ್ತಿಗೆ, ಚಕ್ರತಾಳ-ಹರಿಶ್ಚಂದ್ರ ನಾಯ್ಗ ಮಾಡೂರು, ವೇಷ ಭೂಷಣ- ಮೋಹಿನಿ ಕಲಾಸಂಪದ ಕಿನ್ನಿಗೋಳಿ, ದೇವಿ-ಡಾ|ಪ್ರಣಮ್ಯ ಭಟ್, ಬ್ರಹ್ಮ -ಸುಮಿತ್ ವಿ.ಶೆಟ್ಟಿ, ವಿಷ್ಣು -ಡಾ| ವಾದಿಶ್ ಭಟ್, ಮಹೇಶ್ವರ- ಡಾ|ಸತೀಶ್ ಕುಮಾರ್ ಭಂಡಾರಿ, ಮಹಿಷ -ಡಾ|ಅರುಣ್ ಭಟ್, ಶಂಕ-ದುರ್ಗ-ಭರತ್ ರಾಜ್ ಮಾಣೈ, ಡಾ|ಸುಜಾತದೇವೇಂದ್ರ -ದಾಮೋದರ ಯು.ಬಿ, ದೇವೇಂದ್ರ ಬಲ -ಪ್ರತೀಕ್ಷಾ, ಪ್ರೀತಮ್,ಸಿಂಹ- ಪ್ರೀತಮ್ ನಾಯ್ಕ್ ಪಾತ್ರಧಾರಿಗಳಾಗಿದ್ದರು.

Read More

ಪುತ್ತೂರು, ಡಿ. ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಅರಣ್ಯ ಉತ್ಪನ್ನಗಳ ಖರೀದಿ ಕೇಂದ್ರಕ್ಕೆ ಹಾಡಹಗಲೇ ನುಗ್ಗಿ 5 ಲಕ್ಷ ರೂ. ನಗದು ಮತ್ತು ದಾಖಲೆಗಳು ಹಾಗೂ ಚೆಕ್‌ಗಳು ಇದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26) ಮತ್ತು ಜಂಶೀದ್ (25) ಎಂದು ಗುರುತಿಸಲಾಗಿದೆ.ಈ ಇಬ್ಬರನ್ನೂ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ಪೊಲೀಸರು ಅಂಗಡಿಯೊಂದರಿಂದ ಹಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಿದ್ದರು. ಅಲ್ಲಿ ನಡೆಸಿದ ವಿಚಾರಣೆ ವೇಳೆ, ಈ ಜೋಡಿ ಉಪ್ಪಿನಂಗಡಿ ಕಳ್ಳತನವನ್ನೂ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದ್ದು, ನಂತರ ಉಪ್ಪಿನಂಗಡಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಘಟನೆ ಅಕ್ಟೋಬರ್ 27 ರಂದು ಗಾಂಧಿ ಪಾರ್ಕ್ ಸಮೀಪದ ಶ್ರೀರಾಮ ಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ವಸಂತ್ ಎಂಬುವವರಿಗೆ ಸೇರಿದ ಅಡಿಕೆ ಮತ್ತು ಅರಣ್ಯ ಉತ್ಪನ್ನಗಳ ವ್ಯಾಪಾರ ಕೇಂದ್ರದಲ್ಲಿ ನಡೆದಿತ್ತು.…

Read More

ಉಡುಪಿ, ಡಿ.11; ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿನ ಗುಂಡಿಗೆ ಬಿದ್ದು ನಿಯಂತ್ರಣ ತಪ್ಪಿದ ಟಿಪ್ಪರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಟಿಪ್ಪರ್ ಚಾಲಕ ಶ್ರೀಕಾಂತ್(26) ಎಂದು ಗುರುತಿಸಲಾಗಿದೆ. ಈ ವಾಹನವು ನಿಟ್ಟೂರಿನ ರಂಜನ್ ಶೆಟ್ಟಿ ಅವರಿಗೆ ಸೇರಿದ್ದು, ಜಲ್ಲಿ ಲೋಡ್ ಮಾಡಲು ಶ್ರೀಕಾಂತ್ ಅವರು ನಿಟ್ಟೂರಿನಿಂದ ಹೊರಟಿದ್ದರು ಎನ್ನಲಾಗಿದೆ. ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಟಿಪ್ಪರ್ ಸಂಚರಿಸುತ್ತಿದ್ದಾಗ, ರಸ್ತೆಯ ತಿರುವಿನಲ್ಲಿ ಇದ್ದ ಗುಂಡಿಗೆ ಬಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಇದರಿಂದ ವಾಹನವು ರಸ್ತೆಯ ಬಲ ಬದಿಯ ದೊಡ್ಡ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಾಲಕನ ಆಸನದಲ್ಲಿ ಸಿಲುಕಿದ್ದ ಶ್ರೀಕಾಂತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬAಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಶಾಲಾ ಅಂತರ್ಗತ ಪಂದ್ಯಾಟ – ಕ್ರೀಡಾ ಹಬ್ಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಗಟ್ಟೀಸ್ ಪಿಟ್ ಲೈನ್ ಜಿಮ್ ಮಾಲಕರು, ಹಾಗೂ ರಾಜ್ಯ ಮಟ್ಟದ ಮಾಜಿ ಕ್ರೀಡಾಪಟು ಆಗಿರುವ ಅರುಣ್ ಕುಮಾರ್ ಗಟ್ಟಿ ಅಗರಿಮಾರ್ ಮಾತನಾಡಿದರು. ಕ್ರೀಡೆಯಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ, ಬದ್ಧತೆ, ಸಮಯ ಪ್ರಜ್ಞೆ,ತಾಳ್ಮೆ,ಆತ್ಮವಿಶ್ವಾಸ ಗುಣಗಳೇ ಮುಖ್ಯ ಆದ್ರೆ ಬಡತನ ಎನ್ನುವುದು ಕ್ರೀಡಾ ಸಾಧನೆಗೆ ಅಡ್ಡಿ ಬರುವುದಿಲ್ಲ, ವಿಶ್ವ ಕಪ್ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿರುವ ಧನಲಕ್ಷ್ಮೀ ಪೂಜಾರಿ ಅವರು ಕಡು ಬಡತನದಲ್ಲಿ ಹುಟ್ಟಿ ಇಂದು ವಿಶ್ವದಲ್ಲೇ ತನ್ನ ಹೆಸರನ್ನು ದಾಖಲಿಸಿಕೊಂಡದ್ದು ನಮಗೆಲ್ಲ ಉದಾಹರಣೆ. ಹಾಗಾಗಿ ನಾವು ಕ್ರೀಡೆಯಲ್ಲಿ ಸೋಲು ಗೆಲುವು ಇದ್ದದ್ದೇ , ಸೋಲು ನಮಗೆ ನಮ್ಮ ವೈಫಲ್ಯವನ್ನು ಸರಿ ಪಡಿಸಲು ದಾರಿ ಮಾಡಿ ಕೊಡುತ್ತದೆ, ಯಶಸ್ಸು ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿ ಮುಂದಿನ ಹಂತದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ. ಹಾಗಾಗಿ ಸೋಲು ಮತ್ತು ಗೆಲುವು ಒಂದೇ ನಾಣ್ಯದ…

Read More

ಉಳ್ಳಾಲ: ಮಂಗಳೂರು ವಿಶ್ವ ವಿದ್ಯಾನಿಲಯದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ವತಿಯಿಂದ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ ‘ಸ್ವಾಸ್ಥ್ಯ ಸಂಪದ-2025’ ಔಷಧೀಯ ಸಸ್ಯಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನವು ಡಿ.12 ಮತ್ತು 13 ರಂದು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಜಯಶಂಕರ್ ಅವರು ಹೇಳಿದರು. ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡುತ್ತಾ,ಆಯುರ್ವೇದ, ಯೋಗ, ಸಸ್ಯ ಮೂಲಗಳಿಂದ ಬೇರ್ಪಡಿಸುವ ರಾಸಾಯನಿಕ ವಸ್ತುಗಳು, ಸಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು, ಹೊಸ ರೀತಿಯ ವೈದ್ಯಕೀಯ ಔಷಧಗಳ ತಯಾರಿಕೆಗಳು ಮಾನವ ಮತ್ತು ಸಾಕು ಪ್ರಾಣಿಗಳ ಆಹಾರ ಪದ್ಧತಿಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕ್ರಿಯೆಗಳು ಮುಂತಾದ ಪುರಾತನ ಆಹಾರ ಪದ್ಧತಿ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ರೋಗ ನಿಯಂತ್ರಣ…

Read More

ಕುತ್ತಾರು; ಸುಪ್ರೀಮ್ ಆಟೋ ಡೀಲರ್ ಪ್ರೈ.ಲಿ ವತಿಯಿಂದ ಬೃಹತ್ ವಾಹನ ತಪಾಸಣಾ ಶಿಬಿರ ಡಿ.15ರಿಂದ 30ರವರೆಗೆ ಕುತ್ತಾರು ಪದವಿನ ನೂತನ ವರ್ಕ್ ಶಾಪ್‌ನಲ್ಲಿ ನಡೆಯಲಿದೆ. ಇವಿ ವಾಹನಗಳ ಸಾಫ್ಟ್ ವೇರ್ ಆಪ್‌ಡೇಟ್ ತಪಾಸಣೆ, ಆಯಿಲ್ ತಪಾಸಣೆ, ಗ್ರೀಸಿ0ಗ್ ಅಥವಾ ನಿಪ್ಪಾಲ್ ಗ್ರೀಸಿಂಗ್, ಏರ್ ಫಿಲ್ಟರ್ ಕ್ಲೀನಿಂಗ್, ಸ್ಪಾರ್ಕ್ ಪ್ಲಗ್ ಕ್ಲೀನಿಂಗ್, ಗ್ಯಾಸ್ ಟ್ಯೂನಿಂಗ್, ಕೇಬಲ್ ಚೆಕ್‌ಪ್ ಸೇರಿದಂತೆ ಇನ್ನಿತರÀ ವಾಹನಕ್ಕೆ ಸಂಬAಧಿಸಿದAತೆ ತಪಾಸಣೆಗಳು ಶಿಬಿರದಲ್ಲಿ ಲಭ್ಯವಿದೆ. ಲಕ್ಕಿ ಕೂಪನ್‌ನಲ್ಲಿರುವ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶ ನಿಮ್ಮದಾಗಲಿದೆ. ಇದರ ಜೊತೆಗೆ ಡಿ.16ರಂದು ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.

Read More

ಉಳ್ಳಾಲ: ಭಗವತಿ ಶಾಲೆಯಿಂದ ಉಚ್ಚಿಲ ಬೀಚ್ ರಸ್ತೆ ಅಗಲೀಕರಣದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಶಿಲಾನ್ಯಾಸ ನೆರವೇರಿಸಿ ಮತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು, ಭಗವತಿ ಶಾಲೆಯಿಂದ ಉಚ್ಚಿಲ ಬೀಚ್ ರಸ್ತೆ ಅಗಲೀಕರಣಕ್ಕೆ ಸ್ಪೀಕರ್ ಯು.ಟಿ.ಖಾದರ್ ಅವರು 80ಲಕ್ಷ ರೂ. ಅನುದಾನ ಇಟ್ಟಿದ್ದು, 40 ಲಕ್ಷ ರೂ ಬಿಡಗಡೆಗೊಳಿಸಿದ್ದಾರೆ. ಈ ರಸ್ತೆ ಅಗಲೀಕರಣಕ್ಕೆ ಸ್ಥಳೀಯರು, ಗುತ್ತಿಗೆದಾರರ ಜೊತೆ ಸಹಕಾರ ನೀಡಬೇಕು ಎಂದು ಹೇಳಿದರು. ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ಸದಸ್ಯ ಯು.ಸಲಾಮ್ ಉಚ್ಚಿಲ ಮಾತನಾಡಿದರು. ಪ್ರಮುಖರಾದ ಪುರಸಭೆ ಅಧ್ಯಕ್ಷೆ ಕಮಲ, ಸಲಾಮ್ ಉಚ್ಚಿಲ, ಮನ್ಸೂರ್ ಮಂಚಿಲ, ಸೈಫುಲ್ಲಾ ಸೋಮೇಶ್ವರ, ಇಸ್ಮಾಯಿಲ್ ಹಾಜಿ ಕೊಪ್ಪಳ, ಮಜೀದ್ ಹಾಜಿ ಉಚ್ಚಿಲ, ರಾಘವ ಆರ್ ಉಚ್ಚಿಲ, ದೀಪಕ್ ಪಿಲಾರ್, ಪುರಸಭೆ ನಾಮ ನಿರ್ದೇಶಿತ ಸದಸ್ಯ ದಿಲೀಪ್ ರೇಗೋ, ಪುರುಷೋತ್ತಮ ಗಟ್ಟಿ, ಇಸ್ಮಾಯಿಲ್, ಕಿಶೋರ್ ಉಚ್ಚಿಲ, ಹರೀಶ್ ಉಚ್ಚಿಲ, ಕರೀಮ್ ನಾಗದೋಟ, ಚಂದ್ರ ಉಚ್ಚಿಲ, ಯು.ಎ.ಇಬ್ರಾಹೀಮ್, ನಾಸೀರ್ ಖಾನ್, ಇಸ್ಮಾಯಿಲ್ ತಲಪಾಡಿ, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

Read More

ಉಳ್ಳಾಲ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡಿರುವ ಪುಷ್ಪರಾಜ್ ಶೆಟ್ಟಿ ಅವರನ್ನು ಉಳ್ಳಾಲ ವಲಯ ಬಂಟರ ಸಂಘದ ವತಿಯಿಂದ ಅಸೈಗೋಳಿಯ ಬಂಟರ ಸಂಘದ ಸಭಾಂಗಣದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರ್ ಅವರು, ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಬಂಟರ ಸಂಘದ ವತಿಯಿಂದ ನಡೆಯುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಪತ್ರಕರ್ತರ ಸಂಘವು ಕೂಡಾ ಸದಾ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಾ ಬಂದಿದೆ. ಇದೀಗ ಕರ್ನಾಟಕ ಕಾರ್ಯನಿರತ ಪತ್ರಕರ್ತರÀ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಪುಷ್ಪರಾಜ್ ಶೆಟ್ಟಿ ಅವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದ್ದಾರೆ. ಗೌರವ ಸ್ವೀಕರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಕ್ಷೇಮಾಭಿವೃದ್ಧಿಯೊಂದಿಗೆ ಜನಪರ ಕಾಳಜಿಯ ಅನೇಕ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಬಂಟರ ಸಂಘದ ವತಿಯಿಂದ ನಡೆದ ಸನ್ಮಾನವು ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ…

Read More

ಉಳ್ಳಾಲ:ಶ್ರೀ ಬಾಲಕೃಷ್ಣ ಮಂದಿರ (ರಿ) ಕುಂಪಲ, ಸೋಮೇಶ್ವರ ಇದರ ಸಹ ಸಂಸ್ಥೆಯಾದ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ 25ನೇ ವರ್ಷದ ರಜತರಾಣಿ-2025ರ ಅಂಗವಾಗಿ ಡಿ.28ರ0ದು ಕುಂಪಲದ ಕೃಷ್ಣಾಂಗಣದಲ್ಲಿ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆ ನಲಿಕೆ ದಾಮಿನಿ-2025 ಕಾರ್ಯಕ್ರಮ ಮೇಳೈಸಲಿದೆ. ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗಿಯಾಗುವ ಸ್ಪರ್ಧಿಗಳು ಈ ಕೆಳಗಿನ ನಿಯಮಗಳನ್ನು ಅನುಸರಿಸತಕ್ಕದ್ದು. 1.ನೃತ್ಯದಲ್ಲಿ ಮಹಿಳೆಯರು ಕಡ್ಡಾಯವಾಗಿ ಕನಿಷ್ಟ ಏಳು ಜನ ಗರಿಷ್ಟ 11 ಜನರ ಒಳಗೆ ಇರಬೇಕು,2.ಒಂದು ತಂಡಕ್ಕೆ 7 + 2ನಿಮಿಶ ಕಾಲಾವಕಾಶ , (ಮೂರು ನಿಮಿಷ ಸಿದ್ದತೆಗೆ). ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಆಕರ್ಷಕ ಫಲಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ, ಸ್ಮರಣಿಕೆ ನೀಡಲಾಗುವುದು.ಮೊದಲು ನೋಂದಾಯಿತ 12 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸ್ಪರ್ಧೆಯ ಕ್ರಮ ಸಂಖ್ಯೆಗಳನ್ನು ಆ ದಿನವೇ ಎಲ್ಲರ ಸಮ್ಮುಖದಲ್ಲಿ ಚೀಟಿ ಎತ್ತಿ ನಿಗದಿ ಪಡಿಸಲಾಗುವುದು.ಹೆಚ್ಚಿನ ವಿವರಗಳಿಗೆ ಮತ್ತು ಹೆಸರು ನೊಂದಾಯಿಸಲು ಸಂಪರ್ಕಿಸಿ…

Read More