Author: UllalaVani

Kannada News From Coastal Karnataka

ರಾಮನಗರ,ಡಿ. 13 : ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟ ಹೊಸ ಹೊಸ ತಿರುವು ಪಡೆಯುತ್ತಿದೆ. ಜನವರಿ 6ಕ್ಕೆ ಡಿಕೆ ಶಿವಕುಮಾರ್ ಅವರಿಗೆ ಪಟ್ಟಾಭಿಷೇಕವಾಗಲಿದೆ ಎಂದು ಡಿಸಿಎಂ ಆಪ್ತ ಇಕ್ಬಾಲ್‌ ಹುಸೇನ್‌ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು, ಅವರಿಗೆ ಅವಕಾಶ ಸಿಗಬೇಕು.ಇದಕ್ಕೆ ಹೈಕಮಾಂಡ್ ಸ್ಪಂದಿಸುತ್ತಿದೆ. ಬಹುಶ: ಜ.6ರಂದು ಸ್ಥಾನ ಸಿಗುವ ಸ್ಥಾನ ಸಿಗುವ ಸಾಧ್ಯತೆಯಿದ್ದು ನನಗೆ ಶೇ.99ರಷ್ಟು ವಿಶ್ವಾಸ ಇದೆ ಎಂದು ಹೇಳಿದರು.ಡಿಕೆ ಶಿವಕುಮಾರ್‌ ಅವರಿಗೆ ಜ.6 ಮತ್ತು ಜ. 9 ಅದೃಷ್ಟ ಸಂಖ್ಯೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ಡಿಕೆಶಿ ಅವರ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.ನಾಳೆ ನಾನು ಡಿಕೆಶಿವಕುಮಾರ್‌ ನೇತೃತ್ವದಲ್ಲಿ ದೆಹಲಿಗೆ ಹೋಗಿ ವೋಟ್‌ ಚೋರಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ದೆಹಲಿ ಭೇಟಿ ಸಮಯದಲ್ಲಿ ನಾವು ಯಾವುದೇ ವರಿಷ್ಠರನ್ನ ಭೇಟಿ ಮಾಡುವುದಿಲ್ಲ. ಈಗಾಗಲೇ ನಮ್ಮ ಮನವಿಯನ್ನ ವರಿಷ್ಠರಿಗೆ…

Read More

ಮಂಗಳೂರು; ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರ ವಲಯದ ಪಡೀಲ್‌ನಲ್ಲಿ ನಡೆದಿದೆ. ಮೃತರನ್ನು ಪಡೀಲ್ ಕೊಡೆಕ್ಕಲ್ ನಿವಾಸಿ ಶ್ರವಣ್ (26) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಪಡೀಲ್ ಕೊಡೆಕ್ಕಲ್ ಬಳಿಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕಂಕನಾಡಿ ಠಾಣಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ತಂದೆಯವರಾದ ಕೀರ್ತಿಶೇಷ ದಾಮೋದರ ಸುವರ್ಣ ಅವರ ಸ್ಮರಣಾರ್ಥವಾಗಿ ಸ್ಥಾಪಿತವಾದ ದಾಮೋದರ ಸುವರ್ಣ ಚಾರಿಟೇಬಲ್ ಟ್ರಸ್ಟ್ ಮೂಲಕ ಡಾ. ಉದಯ ಚಂದ್ರ ಸುವರ್ಣ ಅವರು ಸಮಾಜಸೇವೆಗೆ ಹೊಸ ಆಯಾಮ ನೀಡುತ್ತಿದ್ದಾರೆ. ಟ್ರಸ್ಟ್‌ನ ಸಮಾಜಮುಖಿ ಕಾರ್ಯಕ್ರಮಗಳಲ್ಲಿನ ಅತ್ಯಂತ ಪ್ರಮುಖ ಭಾಗವಾಗಿರುವ ಪ್ರತಿಭಾ ಪುರಸ್ಕಾರ ಯೋಜನೆಗೆ ಅವರು ಪ್ರತಿವರ್ಷವೂ ರೂ. 50 ಲಕ್ಷ ವೆಚ್ಚವನ್ನು ನಿರಂತರವಾಗಿ ಭರಿಸುತ್ತಾ ಬಂದಿರುವುದು ಗಮನಾರ್ಹ. ಶಿಕ್ಷಣ, ಸಾಧನೆ ಮತ್ತು ಪ್ರತಿಭೆಗಳ ಗೌರವೀಕರಣವೇ ಸಾಮಾಜಿಕ ಪ್ರಗತಿಗೆ ಮೂಲ ಎಂಬ ನಂಬಿಕೆಯಿಂದ, ಅರ್ಹ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಪ್ರೋತ್ಸಾಹ ನೀಡುವ ಈ ಯೋಜನೆಯನ್ನು ಅವರು ನಿರಂತರವಾಗಿ ಮುನ್ನಡೆಸಿದ್ದಾರೆ. ಈ ವರ್ಷ ಅದರಲ್ಲೂ ವಿಶೇಷವಾಗಿ, ರೂ. 60 ಲಕ್ಷ ಮೊತ್ತವನ್ನು ಪ್ರತಿಭಾ ಪುರಸ್ಕಾರಕ್ಕಾಗಿ ಒಬ್ಬರೇ ವೈಯಕ್ತಿಕವಾಗಿ ವ್ಯಯಿಸಿರುವುದು ಅವರ ಸಮಾಜಪರ ನಿಷ್ಠೆ, ಉದಾರ ಮನೋಭಾವ ಮತ್ತು ಶಿಕ್ಷಣದ ಮೇಲಿನ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಾಧಿಸಿದರೂ, ಅದರ ಫಲವನ್ನು ಸಮಾಜದ ಹಿತಕ್ಕಾಗಿ ಹಂಚುವ ಡಾ. ಉದಯ ಚಂದ್ರ ಸುವರ್ಣ ಅವರ…

Read More

ಮಂಗಳೂರು: ಗ್ರಾಹಕರಿಗೆ ನಗುಮೊಗದ ಸೇವೆಗಳನ್ನು ನೀಡುತ್ತಾ ಬಂದಿರುವ ಅಮ್ಮ ಜ್ಯುವೆಲ್ಲರ್ಸ್, ಮಂಗಳೂರು (ಅಮ್ಮ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು) ಸಂಸ್ಥೆಯು ಶ್ರೀ ದೇವಿಯ ಅನುಗ್ರಹ ಹಾಗೂ ಗ್ರಾಹಕ ಬಂಧುಗಳ ಪ್ರೋತ್ಸಾಹದಿಂದ ತನ್ನ ಸೇವೆಯ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮಹತ್ವದ ಸಂದರ್ಭದಲ್ಲಿ ಗ್ರಾಹಕರು, ಸದಸ್ಯರು ಹಾಗೂ ಹಿತೈಷಿಗಳ ಸೇವಾಬದ್ಧತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ‘ಅಮ್ಮ ಶ್ರೀ ರಕ್ಷಾ ನಿಧಿ’ ಎಂಬ ವಿನೂತನ ಪರಸ್ಪರ ಸಹಾಯಕ ಯೋಜನೆಯನ್ನು ಸಂಸ್ಥೆ ಪರಿಚಯಿಸಿದೆ. ಈ ಯೋಜನೆಯಡಿ ಸುಲಭ ಕಂತು ವ್ಯವಸ್ಥೆ ಒದಗಿಸಲಾಗಿದ್ದು, ಒಟ್ಟು ಪಾವತಿ ರೂ. 11,000 ಆಗಿರುತ್ತದೆ. ಗ್ರಾಹಕರು ಈ ಮೊತ್ತವನ್ನು ಒಂದೇ ಕಂತಿನಲ್ಲಿ ಅಥವಾ 11 ಕಂತುಗಳಲ್ಲಿ ಪಾವತಿಸುವ ಅವಕಾಶವಿದೆ. ಈ ಯೋಜನೆಯ ಮೂಲಕ ಕನಿಷ್ಠ ರೂ. 25,000/- ರಿಂದ ಗರಿಷ್ಠ ರೂ. 50,000/- ವರೆಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448261091, 9844706865, 7760215601, 9008502919

Read More

ಮಂಗಳೂರು; ದಾಮೋದರ್ ಆರ್ ಸುವರ್ಣ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪ, ಕುದ್ರೋಳಿ, ಮಂಗಳೂರು ಇಲ್ಲಿ ಡಿ.21 ರಂದು ಬೆಳಿಗ್ಗೆ 10.00 ಕ್ಕೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಸಮಾರಂಭ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರು ಬಿ.ಕೆ. ಹರಿಪ್ರಸಾದ್ ನೆರವೇರಿಸಲಿದ್ದು, ವಿದ್ಯಾರ್ಥಿ ವೇತನವನ್ನು ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ವಿತರಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಿರುವರು. ಸಭಾಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ಶ್ರೀ ನವೀನ್ ಚಂದ್ರ ಸುವರ್ಣ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಹಿಸಲಿದ್ದಾರೆ. ಸರ್ವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ,…

Read More

ಕಾಪಿಕಾಡ್; ಉಮಾಪುರಿ ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವ ಹಿನ್ನಲೆ ಡಿ.14 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಲಿದೆ.

Read More

ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯ- ಉಳ್ಳಾಲ ಸಮಾಜದ ವತಿಯಿಂದ ವರ್ಷಂಪ್ರತಿಯ0ತೆ ನಡೆಸಿಕೊಂಡು ಬರುತ್ತಿರುವ ಸೋಮೇಶ್ವರ ಶ್ರೀ ಸೋಮನಾಥ ದೇವರಿಗೆ ಸಿಯಾಳ ಅಭಿಷೇಕ ಡಿ.15ರಂದು ನೆರವೇರಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10;30ಕ್ಕೆ ಸಿಯಾಳ ಅಭಿಷೇಕ ನಡೆದು ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಪ್ರಸಾದ ನಡೆದು ಬಳಿಕ ಅನ್ನಸಂತರ್ಪಣೆ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Read More

ಮಂಗಳೂರು; ಮೊಗವೀರ್ಸ್ ಬಹ್ರೇನ್ ವತಿಯಿಂದ ಡಿ.14ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ನಾಡೋಜ ಡಾ| ಜಿ.ಶಂಕರ್, ದ.ಕ ಮತ್ತು ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಉರ್ವದ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷö್ಮಣ್ ಅಮೀನ್ ಕೋಡಿಕಲ್, ಉದ್ಯಮಿ ಮೋಹನ್ ಬೆಂಗ್ರೆ ಮಂಗಳೂರು, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾದ ವರದರಾಜ ಬಂಗೇರ, ಮಂಗಳೂರು ದಕ್ಷಿಣದ ಬಿಜೆಪಿ ಉಪಾಧ್ಯಕ್ಷರಾದ ಗೌತಮ್ ಸಾಲ್ಯಾನ್ ಕೋಡಿಕಲ್, ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಚೇತನ್ ಬೆಂಗ್ರೆ, ಮೊಗವೀರ್ಸ್ ಬಹ್ರೇನ್ ಅಧ್ಯಕ್ಷೆ ಶಿಲ್ಪ ಶಮಿತ್ ಕುಂದರ್, ಉಪಾಧ್ಯಕ್ಷರಾದ ವಿನೋದ್ ಶ್ರೀಯಾನ್, ಕಾರ್ಯದರ್ಶಿಯಾದ ಸುಮನ್ ಸುವರ್ಣ ಭಾಗಿಯಾಗಲಿದ್ದಾರೆ.

Read More

ಉಳ್ಳಾಲ;ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾ ಅಲ್ ಬುಖಾರಿ ಅವರ ಹೆಸರಿನಲ್ಲಿ ಡಿ.17 ರಿಂದ ಡಿ.27ರವರೆಗೆ ಮಸೀದಿ ವಠಾರದಲ್ಲಿ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉರೂಸ್ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮಸೀದಿಯ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಸೀದಿಯ ಕಾರ್ಯಕ್ರಮ ನಾವು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ಅಭಿವೃದ್ಧಿ ನಮ್ಮ ಗುರಿಯಾಗಿರುತ್ತದೆ. ಉರೂಸ್ ಕಾರ್ಯಕ್ರಮ ಯಶಸ್ಸು ಆಗಿ ನಡೆಯಲಿ ಎಂದು ಹಾರೈಸಿದರು. ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಸೀದಿ ಅಧ್ಯಕ್ಷ ಅಬ್ದುಲ್ ಅಝಿಝ್ ಮೈಸೂರು ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಆಲಿಕುಂಞ್ ಪಾರೆ, ಮೊಯ್ದಿನ್ ಕುಟ್ಟಿ, ಮುನೀರ್ ಬಾವ, ಕೋಶಾಧಿಕಾರಿ ಉಮರ್ ಕುಂಞ್ ಮೋರ್ಲ, ಕಾರ್ಯದರ್ಶಿಗಳಾದ…

Read More

ಉಳ್ಳಾಲ: ಬೆಳಗಾವಿಯ ನ್ಯೂಕ್ಲಿಯಸ್ ಮಾಲ್‌ನ ಕಪೀಲ್ ಸಿನೆಮಾಸ್‌ನಲ್ಲಿ ಮಂಗಳಮುಖಿಯರ ಕಥೆ ವ್ಯಥೆಯನ್ನೊಳಗೊಂಡ ‘’ಶಿವಲೀಲಾ’’ಚಿತ್ರವನ್ನು ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ಚಿತ್ರದಲ್ಲಿ ಒಟ್ಟು ೨ ಸಾವಿರ ಮಂಗಳಮುಖಿಯರು ಪಾತ್ರ ನಿರ್ವಹಿಸುವುದು ವಿಶೇಷವಾಗಿತ್ತು.

Read More