ಉಳ್ಳಾಲ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಎ ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ , ನಿಟ್ಟೆ ವಿಶೇಷ ಚೇತನ ಮಕ್ಕಳ ಆರೈಕೆ ಕೇಂದ್ರ ಹಾಗೂ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗ ಇವುಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್, ವಾಕರ್ ಡೈಫರ್ಸ್ ವಿತರಣೆ ನಿಟ್ಟೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕ್ಷೇಮಾದ ಮೂಳೆಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ. ಡಾ. ವಿಕ್ರಮ್ ಶೆಟ್ಟಿ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಅವರಿಗೆ ಆದ ಸಾಮರ್ಥ್ಯ ಇರುತ್ತದೆ. ಇದಕ್ಕೆ ಅವರಿಗೆ ಬೇಕಾದ ಅವಕಾಶ , ವ್ಯವಸ್ಥೆ ನಾವು ಮಾಡಬೇಕಾಗಿದೆ. ಇದನ್ನು ನಿಟ್ಟೆ ವೈದ್ಯಕೀಯ ಸಂಸ್ಥೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು.ಸಮನ್ವಯ ಸಂಪನ್ಮೂಲ ಶಿಕ್ಷಕಿ ಕಿಶೋರಿ ಮಾತನಾಡಿದರು. ಎಬಿಎಸ್‌ಎಂಐಡಿಎಸ್ ಉಪ ಪ್ರಾಂಶುಪಾಲ ಪ್ರೊ. ಡಾ.ಎಂ.ಎಸ್. ರವಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಈ. ಸಂದರ್ಭದಲ್ಲಿ 18 ವಿಶೇಷ ಚೇತನ ಮಕ್ಕಳಿಗೆ ಐದು ವೀಲ್ ಚೇರ್,ಮೂರು ವಾಕರ್,…
Author: UllalaVani
ಉಳ್ಳಾಲ: ರಾಜ್ಯ ವಕ್ಫ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಅವರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಶರೀಯತ್ ಕಾಲೇಜು ಕಟ್ಟಡ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹೂಗುಚ್ಛ ನೀಡಿ ಸ್ವಾಗತಿಸಿ ಅವರನ್ನು ಬರ ಮಾಡಿಕೊಂಡರು ಹಾಗೂ ದರ್ಗಾ ಆವರಣ ಗೋಡೆಗೆ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು. ಕಟ್ಟಡ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಜಮೀರ್ ಅಹಮದ್, ಶರೀಯತ್ ಕಾಲೇಜು ವಸತಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಮೂರು ಕೋಟಿ ಮಂಜೂರು ಮಾಡಲಾಗಿದೆ. ಕಾಂಪೌAಡ್ ನಿರ್ಮಾಣಕ್ಕಾಗಿ ಇನ್ನೊಂದು ಕೋಟಿ ಮಂಜೂರು ಮಾಡಿದರು. ದರ್ಗಾ ಝಿಯಾರತ್ ನಡೆಸಿದ ಬಳಿಕ ಅಧ್ಯಕ್ಷರ ಕಚೇರಿಯಲ್ಲಿ ಸಭೆ ನಡೆಸಿದ ಅವರು ಅಹವಾಲು ಸ್ವೀಕಾರ ಮಾಡಿದ್ದಾರೆ. ಪ್ರಮುಖರಾದ ಯುಟಿ ಇಫ್ತಿಕರ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ವಕ್ಫ್ ಅಧಿಕಾರಿ ಅಬೂಬಕ್ಕರ್, ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ.ಬಾವಾ, ದರ್ಗಾ ಉಪಾಧ್ಯಕ್ಷ ಅಶ್ರಫ್…
ಪ್ರಮೋದ್ ಮುತಾಲಿಕ್ ಹಾಗೂ ಡಾ. ವಿಜಯಲಕ್ಷಿö್ಮÃ ಬಾಳೆಕುಂದ್ರಿ ಅವರ ಇತ್ತಿಗಿನ ಕೆಲ ಹೇಳಿಕೆಗಳನ್ನು ಆಲ್ ಇಂಡಿಯಾ ಕಥೊಲಿಕ್ ಯೂನಿಯನ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಆಲ್ವಿನ್ ಡಿ’ಸೋಜ ಪಾನೀರ್ ಅವರು ಪತ್ರಿಕಾ ಪ್ರಟನೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಪ್ರಮೋದ್ ಮುತಾಲಿಕ್ ಅವರು ಕ್ರಿಸ್ಮಸ್ ರಜೆಯನ್ನು ಕಡಿತಗೊಳಿಸಬೇಕು ಅಥವಾ ಶಾಲೆಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದನ್ನು ಟೀಕಿಸಿದ ಆಲ್ವಿನ್ ಡಿಸೋಜ ಪಾನೀರ್ ಅವರು “ಶಾಲೆಗಳಿಗೆ ಬೀಗ ಹಾಕುವುದಾಗಿ ಬೆದರಿಕೆ ಹಾಕುವ ಹಕ್ಕು ಯಾರಿಗೂ ಇಲ್ಲ. ಭಾರತದ ಅತೀ ಹೆಚ್ಚು ವಿದ್ಯಾರ್ಥಿಗಳು ಕ್ರೈಸ್ತ ಸಂಸ್ಥೆಗಳತ್ತ ಹರಿಯುವುದಕ್ಕೆ ಕಾರಣ ಅವರ ಶಿಕ್ಷಣದ ಗುಣಮಟ್ಟ. ರಜೆಯ ವಿಚಾರದಲ್ಲಿ ಬೆದರಿಕೆ ಭಾಷೆ ಬಳಕೆ ಮಾಡುವುದು ಸುಸಂಬೋಧನೆಯ ಮಾರ್ಗವಲ್ಲ” ಎಂದು ತಿರುಗೇಟು ನೀಡಿದ್ದಾರೆ. ಇನ್ನು ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರ ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಕುರಿತ ಹೇಳಿಕೆಗಳು ಅಸಂಗತವಾಗಿವೆ ಎಂದು ಅವರು ಹೇಳಿದ್ದಾರೆ. “ಕಾನ್ವೆಂಟ್ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ದೇಶಕ್ಕೆ ದ್ರೋಹ ಮಾಡಿಲ್ಲ; ದೇಶ ಕಟ್ಟುವ ಕಾರ್ಯದಲ್ಲಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆಲ್ವಿನ್…
ಮಂಗಳೂರು: ಎಂಸಿಸಿ ಬ್ಯಾಂಕ್, ಮಂಗಳೂರು ಇದರ ನವೀಕೃತ ಕಂಕನಾಡಿ ಶಾಖೆಯನ್ನು ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯo ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು. ನವೀಕರಿಸಿದ ಶಾಖೆಯನ್ನು ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ, ಉದಾರ ದಾನಿ ಮತ್ತು ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜಾ ಉದ್ಘಾಟಿಸಿ, ಕಂಕನಾಡಿ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾದರ್ ಫೌಸ್ಟಿನ್ ಲೋಬೊ ಆಶೀರ್ವದಿಸಿದರು. ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜೆಪ್ಪುವಿನ ಸೇಂಟ್ ಆ್ಯಂಟನಿ ಆಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ.ಕ್ರಾಸ್ತಾ, ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿ’ಸೋಜಾ, ಮತ್ತು ಕೊಂಕಣಿ ಸಾಂಸ್ಕೃತಿಕ ಸಂಸ್ಥೆ (ಕೆಸಿಒ) ಅಧ್ಯಕ್ಷ ಲಿಯೋ ರೋಡ್ರಿಗಸ್, ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷರಾದ ಅನಿಲ್ ಲೋಬೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಕಂಕನಾಡಿ ಶಾಖೆಯ ನವೀಕರಣದ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವನ್ನು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು…
ಉಳ್ಳಾಲ: ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರಿನ ಸಹಯೋಗದೊಂದಿಗೆ, ಬೀರಿಯ ಸ್ಟೆಲ್ಲಾ ಮೇರಿಸ್ ಅನುದಾನಿತ ಶಾಲೆಯ ಮಕ್ಕಳಿಗಾಗಿ “ಸೈಟ್ ಫಾರ್ ಕಿಡ್ಸ್” ಕಾರ್ಯಕ್ರಮದ ಭಾಗವಾಗಿ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಪ್ರಸಿದ್ಧ ನೇತ್ರ ತಪಾಸಣಾ ತಜ್ಞರ ನೇತೃತ್ವದಲ್ಲಿ ನಡೆದ ಶಿಬಿರವನ್ನು ಮಾಜಿ ಸೈನಿಕ ಕೃಷ್ಣ ಬೋಳಾರ್ ಅವರು ಉದ್ಘಾಟಿಸಿದರು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ. ಖಜಾಂಜಿ, ಲಯನ್ ನಿತೀಶ ಕೃಷ್ಣ, ಕಮಾಂಡರ್ ಲಯನ್ ವಿಜಯಕುಮಾರ್, ಸಬ್ ಲೆಫ್ಟಿಂನೆAಟ್ ಲಯನ್ ಶಶಿಕುಮಾರ್ ನಾಯರ್, ಲಯನ್ ರಾಘವನ್ ಮೂತಾಲ್ , ಲಯನ್ ನಿರ್ಮಿತಾ ಭಂಡಾರಿ, ಲಯನ್ ಡಿ. ದಾಮೋದರನ್ ಉಪಸ್ಥಿತರಿದ್ದರು. ಮುಂಬರುವ ದಿನಗಳಲ್ಲಿ ಅಗತ್ಯವಿರುವ ಮಕ್ಕಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಗುವುದು.
ಉಳ್ಳಾಲ: ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ ವಿಶ್ವ ಮದುಮೇಹ ದಿನದ ಅಂಗವಾಗಿ ಏಡೆಡ್ ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆ ಮತ್ತು ಸಂತ ಸೆಬಸ್ಟಿಯನ್ ಪ್ರೌಢ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮದುಮೇಹ ಜಾಗ್ರತ ಶಿಬಿರವನ್ನು ಜಂಟಿಯಾಗಿ ಆಯೋಜಿಸಲಾಗಿತ್ತು. ಕ್ಲಬ್ ಚಾರ್ಟರ್ ಅಧ್ಯಕ್ಷ ಭಾರತೀಯ ನೌಕಾಪಡೆಯ ವೆಟರನ್ ಲಯನ್ ಕೆ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಲಯನ್ ಅರವಿಂದ್ ಶೆಣೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಶಾಲೆಯಲ್ಲಿ ಶುಗರ್ ಬೋರ್ಡನ್ನು ಸ್ಥಾಪಿಸಿದರು. ಬಳಿಕ ಮಾತನಾಡಿದ ಇವರು, ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಮಧುಮೇಹದ ಬಗ್ಗೆ ವಿಶ್ವಾಸಾರ್ಹ ಜ್ಞಾನವನ್ನು ಒದಗಿಸುವಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ನಿರ್ಣಾಯಕವಾಗಿವೆ ಎಂದು ಹೇಳಿದರು. ಕಮಾಂಡರ್ ಲಯನ್ ವಿಜಯಕುಮಾರ mರಿಜಿ ಮತ್ತು ಡಾ. ಚಿರಾಗ್ ಗೋಪಿನಾಥ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಮಧುಮೇಹದ ಲಕ್ಷಣಗಳು, ಕಾರಣಗಳು, ತಡೆಗಟ್ಟುವ ಕ್ರಮಗಳು ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಪ್ರಮುಖರಾದ ಕ್ಯಾಬಿನೆಟ್ ಖಜಾಂಚಿ ಲಯನ್ ಬಾಲಕೃಷ್ಣ ಹೆಗ್ಡೆ,ಚಾರ್ಟರ್ ಖಜಾಂಚಿ…
ರಕ್ಷಿತ್ ಕುಮಾರ ಜೆ ಅವರು ಪ್ರತಿಷ್ಠಿತ ಗೋವ ಮ್ಯಾನೆಜ್ಮೆಂಟ್ ಎಸೋಸಿಯೇಶನ್ ನೀಡಲ್ಪಡುವ ದಿ ಬೆಸ್ಟ್ ಮ್ಯಾನೆಜ್ಮೆಂಟ್ ಸ್ಟೂಡೆಂಟ್ ಆಫ್ ಇಯರ್ 2025- ಪೋಸ್ಟ್ ಗ್ರಾಚುವೆಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಸುರತ್ಕಲ್‌ನ ಪ್ರತಿಷ್ಠಿತ ಎನ್‌ಐಟಿಕೆ ಯ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಗೋವಾ ಇನ್ಸಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮಂಗಳೂರಿನ ಜೈಕುಮಾರ್ ಕೊಲ್ಯ ಮತ್ತು ವತ್ಸಲ ದಂಪತಿಯ ಸುಪುತ್ರರಾಗಿದ್ದಾರೆ.
ಹನುಮಾನ್ ನಗರ,05 ; ಭಗವಂತನ ಮೇಲೆ ವಿಶ್ವಾಸವಿರಲಿ, ಕೆಲಸ ಕಾರ್ಯಗಳು ವ್ಯವಸ್ಥಿತವಾಗಿ ಸಾಗುತ್ತವೆ. ಹನುಮನ ಕೃಪಾಕಟಾಕ್ಷದಿಂದ ನೂತನ ಮಂದಿರದ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಒಡಿಯೂರು ಗುರುದೇವಾದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಇವರು ಶ್ರೀ ವೀರಾಂಜನೇಯ ಶಾಲೆಯ ದೈವಜ್ಞರಾದ ರಂಗ ಐತಾಳ್ ಮತ್ತು ತಂತ್ರಿವರ್ಯರಾದ ಪ್ರಸಾದ್ ನಲ್ಲುರಾಯ ಹಾಗೂ ಉಳ್ಳಾಳ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿಗಳು ದೇವು ಮೂಲ್ಯಣ್ಣ ಇವರ ಮಾರ್ಗದರ್ಶನದಂತೆ, ಕದ್ರಿ ನವನೀತ ಶೆಟ್ಟಿಯವರ ಮುಂದಾಳತ್ವದಲ್ಲಿ ಹನುಮಾನ್ ನಗರ, ಮಾಸ್ತಿಕಟ್ಟೆ ಇಲ್ಲಿ ನಡೆದ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಮಂದಿರ ಜೀರ್ಣೋದ್ಧಾರ ಕಾರ್ಯದ ಪ್ರಥಮ ಹಂತವಾದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ನಂತರ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಸುಸಂಸ್ಕೃತವಾದ ವಾತಾವರಣ ನಿರ್ಮಾಣಗೊಂಡಿದ್ದು, ಧರ್ಮಸಂಸ್ಕೃತಿಯ ಅನಾವರಣಗೊಳಿಸಿದಂತಾಗಿದೆ. ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯನ್ನು ನಾವು ಮರೆಯುವಂತಿಲ್ಲ. ಜನನಿಯಿಂದ ಕಲಿತ ಜನರು ಧನ್ಯರು ಎಂದರು. ದಾನ, ಧರ್ಮದಿಂದ ಅಭಿವೃದ್ದಿ ಕೆಲಸಗಳು ಸಾಧ್ಯ. ಹನುಮಂತನ ಅನುಗ್ರಹದಿಂದ ಮಂದಿರ ಒಂದು…
ಮಂಗಳೂರು;ಕoಬಳ ಕ್ರೀಡೆ ಕೇವಲ ಕರಾವಳಿಯ ಜಾನಪದ ಕ್ರೀಡೆ ಮಾತ್ರವಲ್ಲ. ಇದೊಂದು ಕರಾವಳಿಯ ಘನತೆ, ಪ್ರತಿಷ್ಠೆಯ ಪ್ರತಿಬಿಂಬ. ಅಂತಹ ಕಂಬಳದ ಮೇಲೆ ಈ ಬಾರಿ ಜಿಲ್ಲಾಡಳಿತದ ವಿವಿಧ ಇಲಾಖೆಗಳು ಹದ್ದಿನ ಕಣ್ಣು ಇಟ್ಟಿವೆ. ಪ್ರತೀ ಶನಿವಾರ/ರವಿವಾರ ನಡೆಯುತ್ತಿರುವ ಕಂಬಳದ ಸ್ಥಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳೇ ಖುದ್ದು ಹಾಜರಾಗಿ ವರದಿ ರೆಡಿ ಮಾಡುತ್ತಿದ್ದಾರೆ. “ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ’ ಎಂಬ ಆರೋಪ ಇಟ್ಟುಕೊಂಡು ಈ ಹಿಂದೆ ಪೆಟಾ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ ಯಾವುದೇ ಹಿಂಸೆ ಆಗದಂತೆ ಎಚ್ಚರ ವಹಿಸುವಂತೆ ನ್ಯಾಯಾಲಯ ಸೂಚಿಸಿದ ಆಧಾರದಲ್ಲಿ ಸದ್ಯ ಕಂಬಳಗಳು ಯಶಸ್ವಿಯಾಗಿ ನಡೆಯುತ್ತಿವೆ. ಈ ಋತುವಿನಲ್ಲಿ 3 ಕಂಬಳಗಳು ನಿಯಮ ಹಾಗೂ ಸಮಯಬದ್ಧವಾಗಿ ನಡೆದಿದೆ. ಪ್ರಸಕ್ತ ನಡೆಯುತ್ತಿರುವ ಎಲ್ಲ ಕಂಬಳಗಳಿಗೆ ಪೊಲೀನ್, ಪಶುಪಾಲನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ. ಬೆಟ್ಟಿಂಗ್ ಸಹಿತ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದ್ದು, 3 ವರ್ಷದ ಒಳಗಿನ ಕೋಣಗಳ…
ಸುಳ್ಯ, ಡಿ. 05 ; ಗಾಂಧಿನಗರ ಜುಮಾ ಮಸೀದಿಯ ಜಮಾತ್‌ಗೆ ಸೇರಿದ ಗುರಂಪು ನಿವಾಸಿ ಮುಸ್ತಫಾ ಅವರ ಪುತ್ರ ಮೊಹಮ್ಮದ್ ಆದಿಲ್(13) ಅನಾರೋಗ್ಯದಿಂದ ಮನೆಯಲ್ಲಿ ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಾಲಕ, ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದನು.ಪೋಷಕರು ಆತನ ಚಿಕಿತ್ಸೆ ಮತ್ತು ಆರೈಕೆಗಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಮೃತ ಬಾಲಕನು ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

