Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

UllalaVaniBy UllalaVaniFebruary 16, 2026No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು, ಫೆ.16: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ತಮ್ಮ ಗ್ರಾಹಕರಿಗೆ ಪ್ರಸಕ್ತ ಅವಶ್ಯಕತೆಗೆ ಅನುಗುಣವಾಗಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಕೂಡಾ ಅಳವಡಿಸಿಕೊಂಡಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ನಮ್ಮ ಬ್ಯಾಂಕಿನ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯಗಳಿಗೆ ಅಧಿಕೃತ ಚಾಲನೆ ಕಾರ್ಯಕ್ರಮ ಫೆ.17ರಂದು ಮಧ್ಯಾಹ್ನ 12ಕ್ಕೆ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ನಮ್ಮ ಬ್ಯಾಂಕ್ 2025ರ ಸೆ.16ರಿಂದ ಐಎಂಪಿಎಸ್ (IMPS – Immediate Payment Service) ಸೇವೆಯನ್ನು ಆರಂಭಿಸಿದೆ, ಬ್ಯಾಂಕ್ ಈಗಾಗಲೇ ಕೋರ್ ಬ್ಯಾಂಕಿಂಗ್ ಸೇವೆಯೊಂದಿಗೆ ಆರ್ ಟಿಜಿಎಸ್ / ನೆಫ್ಟ್, ಸಿಟಿಎಸ್, ಎಸ್‌ಎಂಎಸ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್ (POS) ಸೌಲಭ್ಯ ಸೇರಿದಂತೆ ಹಲವಾರು ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಪರಿವರ್ತನೆಗೆ ಒಳಗಾಗಿದೆ, ಡಿಜಿಟಲ್ ಸೇವೆಗಳು ಸಾಂಪ್ರದಾಯಿಕ ಮಾದರಿಯನ್ನು ಬದಲಾಯಿಸಿವೆ. ಇಂದು, ಹೆಚ್ಚಿನ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ಗಳು ಮತ್ತು ತ್ವರಿತ ಪಾವತಿ ವ್ಯವಸ್ಥೆಗಳ ಮೂಲಕ ತಮ್ಮ ಖಾತೆಗಳಿಗೆ ಸುಗಮ ಪ್ರವೇಶವನ್ನು ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತಮ್ಮ ಗ್ರಾಹಕರಿಗೆ ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಕೂಡಾ ಅಳವಡಿಸಿ ಕೊಂಡಿದೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ನಮ್ಮ ಬ್ಯಾಂಕ್ 16 ಸೆಪ್ಟೆಂಬರ್ 2025 ರಿಂದ ಐಎಂಪಿಎಸ್ (IMPS Immediate Payment Service) ಸೇವೆಯನ್ನು ಆರಂಭಿಸಿದೆ. ಈ ಸೇವೆಯ ಮೂಲಕ ನಮ್ಮ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಬಳಸಿ ಗ್ರಾಹಕರು ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಐಎಂಪಿಎಸ್ ಎಂಬುದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿ ಪಡಿಸಿದ ತ್ವರಿತ ಹಣ ವರ್ಗಾವಣೆ ವ್ಯವಸ್ಥೆಯಾಗಿದ್ದು, ಇದು 24×7, ವಾರಾಂತ್ಯ ಮತ್ತು ಸಾರ್ವಜನಿಕ ರಜೆ ದಿನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಪರ್ಸ್ ನ್ ಟು ಅಕೌಂಟ್ (person to Account) ಮೂಲಕ ಖಾತೆ ಸಂಖ್ಯೆ ಮತ್ತು( IFSC )ಐಎಫ್ ಎಸ್ ಸಿ ಬಳಸಿ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು ಎಂದವರು ತಿಳಿಸಿದರು.

ಈಗ ಡಿಜಿಟಲ್ ಭಾರತ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಬ್ಯಾಂಕ್ ಅತ್ಯಂತ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಯುಪಿಐ (UPI Unified Payment Interface) ಸೇವೆಯನ್ನು ಪ್ರಸಕ್ತ ಜನವರಿ 21ರಂದು ಪ್ರಾರಂಭಿಸಿದೆ. ಯುಪಿಐ ಸೇವೆಯ ಮೂಲಕ ನಮ್ಮ ಗ್ರಾಹಕರು ಸುಲಭವಾಗಿ ಹಾಗೂ ಸುರಕ್ಷಿತ ವಾಗಿ ಹಣ ವರ್ಗಾವಣೆ ಮಾಡಬಹುದು. ಗ್ರಾಹಕರು ಗೂಗಲ್ ಪೇ (Googl Pay), ಫೋನ್ ಪೇ (Phone Pay). ಭೀಮ್ (BHIM), ವಾಟ್ಸ್ಅಪ್ ಪೇ (WhatsApp Pay), ಪೇಟಿಎಂ (Paytm), ಫ್ರೀಚಾರ್ಜ್ (Freecharge) (Super Money) ಸುಲಭವಾಗಿ ವ್ಯವಹಾರಗಳನ್ನು ನಡೆಸಬಹುದು.ಈ ಸೇವೆಯ ಮೂಲಕ ಗ್ರಾಹಕರು ಬ್ಯಾಂಕ್ಕೆ ಭೇಟಿ ನೀಡುವ ಅವಶ್ಯಕತೆ ಇಲ್ಲದೆ. ಮನೆಯಲ್ಲೇ ಅಥವಾ ಎಲ್ಲಿಂದ ಬೇಕಾದರೂ 24×7 ಸಮಯದಲ್ಲಿ ಹಣ ವರ್ಗಾವಣೆ ಮಾಡಬಹುದು. ಇದು ವೇಗವಾದ, ಸುರಕ್ಷಿತ ಹಾಗೂ ಸುಲಭವಾದ ಡಿಜಿಟಲ್ ಪಾವತಿ ವಿಧಾನವಾಗಿದೆ.

ಯುಪಿಐ ಮೂಲಕ ಗ್ರಾಹಕರು ತಕ್ಷಣ ಹಣ ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು; ಹಣ ಸ್ವೀಕರಿಸುವವರ ಯುಪಿಐ ಐಡಿಗೆ ನೇರವಾಗಿ ಹಣ ಕಳುಹಿಸಬಹುದು. * ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು. ‘ ಆನ್ಸನ್ ಖರೀದಿ ಹಾಗೂ ಬಿಲ್ ಪಾವತಿ ಮಾಡಬಹುದು.ದೇಶದ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು

ಈ ಎಲ್ಲಾ ವ್ಯವಹಾರಗಳು ಯುಪಿಐ ಪಿನ್ ಮತ್ತು ಎರಡು ಹಂತದ ಭದ್ರತಾ ವ್ಯವಸ್ಥೆಯಿಂದ ಸುರಕ್ಷಿತವಾಗಿರುತ್ತವೆ ಎಂದವರು ತಿಳಿಸಿದರು.

ಯುಪಿಐ ಸೇವೆಯಿಂದ ಸಣ್ಣ ವ್ಯಾಪಾರಿಗಳು, ರೈತರು, ಅಂಗಡಿ ಮಾಲಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಎಲ್ಲರೂ ಪ್ರಯೋಜನ ಪಡೆಯಬಹುದು.ಒಬ್ಬ ಚಿಲ್ಲರೆ ವ್ಯಾಪಾರಿಯೂ ಈಗ QR ಕೋಡ್ ಮೂಲಕ ಡಿಜಿಟಲ್ ಪಾವತ ಇದು ನಮ್ಮ ಬ್ಯಾಂಕಿನ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಇದು ದಿನನಿತ್ಯದ ಸಣ್ಣ ಮೊತ್ತದ ಪಾವತಿಗಳಿಗೆ, ಇ-ಕಾಮರ್ಸ್ ವ್ಯವಹಾರಗಳಿಗೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಲು ಅತ್ಯಂತ ಅನುಕೂಲಕರವಾಗಿದೆ.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್.ಬಿ.ಜಯರಾಮ್ ರೈ ಸದಾಶಿವ ಉಳ್ಳಾಲ್, ಜೈರಾಜ್ ಬಿ. ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

February 16, 2026

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

February 16, 2026

ರೋಸಾರಿಯೋ ಶಾಲೆಯಲ್ಲಿ ಸ್ಮಾರ್ಟ್ ಕಿಡ್ ಶೋ

February 15, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

By UllalaVaniFebruary 16, 20260

ಮಂಗಳೂರು, ಫೆ.16: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

February 16, 2026

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

February 16, 2026

ರೈತರು ನೀಡಿದ ಅಕ್ರಮ ಸಕ್ರಮ‌ ಅರ್ಜಿ ಶೀಘ್ರ ವಿಲೇವಾರಿಗೆ ರಾಜ್ಯ ರೈತ ಸಂಘ ಒತ್ತಾಯ..!

February 16, 2026
1 2 3 … 1,802 Next
Automatic YouTube Gallery

ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?

ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ವಿಶೇಷ ಸಂದರ್ಶನ
#ullalavani #Mla #JayaramShetty #Package
ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?
Now Playing
ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?
ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ...
ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ವಿಶೇಷ ಸಂದರ್ಶನ
#ullalavani #Mla #JayaramShetty #Package
ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ
Now Playing
ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ
ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿoಗ್ ಸೇವೆ; ಫೆ.17ರಂದು ...
ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿoಗ್ ಸೇವೆ; ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ

ಯುಪಿಐ, ಐಎಂಪಿಎಸ್ ಬಗ್ಗೆ ಡಾ.ಎಂ.ಎನ್.ರಾಜೇoದ್ರ ಪ್ರಸಾದ್ ಮಾಹಿತಿ
#ullalavani #news #prsmt #news #package #scdccbank
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d