Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಮಂಜನಾಡಿ ಪ್ರಕರಣ; ಮಾನವ ಹಕ್ಕುಗಳ ಆಯೋಗದೆದುರು ನ್ಯಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ…!

UllalaVaniBy UllalaVaniFebruary 18, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು, ಫೆ.18: ಮಂಜನಾಡಿಯ ಮೊಂಟೆಪದವು ಎಂಬಲ್ಲಿ 2025ರ ಮೇ 30ರಂದು ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಎಂಬವರು ತನ್ನ ತಾಯಿ ಪುಷ್ಪಾವತಿ ಜತೆ ಮಾನವ ಹಕ್ಕುಗಳ ಆಯೋಗದೆದುರು ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ಬುಧವಾರ ನಡೆಯಿತು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶ್ಯಾಂ ಭಟ್ ಮತ್ತು ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ದೂರುಗಳ ವಿಚಾರಣೆಯನ್ನು ಹಮ್ಮಿಕೊಂಡಿದ್ದರು. ಇದಕ್ಕಾಗಿ ತಾಯಿ ಜೊತೆ ಖಾಸಗಿ ಆಂಬುಲೆನ್ಸ್ ನಲ್ಲಿ ಆಗಮಿಸಿದ್ದ ಅಶ್ವಿನಿಯವರು ಆಂಬುಲೆನ್ಸ್ ನಿಂದ ವೀಲ್ ಚೇರ್ನಲ್ಲಿ ಕೂತು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಜಿ.ಪಂ. ಸಭಾಂಗಣ ಪ್ರವೇಶ ದ್ವಾರದಲ್ಲಿಯೇ ತಡೆದು ತಮ್ಮ ಅಳಲು ತೋಡಿಕೊಂಡರು.

ಅಶ್ವಿನಿ ಪರವಾಗಿ ಪ್ರಕರಣದ ಕುರಿತಂತೆ ಸಾಮಾಜಿಕ ಕಾರ್ಯಕರ್ತ ರವಿ ಎಂಬವರು ಆಯೋಗದ ಪ್ರತಿನಿಧಿಗಳಿಗೆ ವಿವರ ನೀಡಿದರು.

‘ಮಂಜನಾಡಿ ಗ್ರಾಮದ ಮೊಂಟೆಪದವಿನ ಪಂಬದ ಹಿತ್ತಿಲು ಕೋಡಿ ಕೊಪ್ಪಳ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಅಶ್ವಿನಿಯವರ ಇಬ್ಬರು ಪುಟ್ಟ ಮಕ್ಕಳು ಮತ್ತು ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದರು. ಮನೆಯ ಮೇಲಿನ ಬೃಹತ್ ಗುಡ್ಡ ಕುಸಿದ ಪರಿಣಾಮವಾಗಿ ಉಂಟಾದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಮನೆಯ ಹಿಂದಿನ ಗುಡ್ಡದಲ್ಲಿ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಈ ದುರ್ಘಟನೆ ಸಂಭವಿಸಿ ಕುಟುಂಬದ ಮೂವರ ಪ್ರಾಣ ಹಾನಿಯ ಜತೆಗೆ ಅಶ್ವಿನಿಯವರು ಜೀವನ ಪರ್ಯಂತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಕಾಲು ಕಳೆದುಕೊಂಡಿದ್ದಕ್ಕೆ ಅಶ್ವಿನಿಯವರಿಗೆ ಸರಕಾರದಿಂದ 2 ಲಕ್ಷ ರೂ. ಪರಿಹಾರ ಲಭಿಸಿದೆ. ಆದರೆ ಅದು ನಿರ್ಲಕ್ಷ್ಯದಿಂದ ಸಂಭವಿಸಿದ ದುರ್ಘಟನೆ ಆದ ಕಾರಣ ಸಂತ್ರಸ್ತೆಗೆ ಜೀವನ ಪರ್ಯಂತ ಸೂಕ್ತ ಪರಿಹಾರ, ಮನೆಯ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ಮಾನವ ಹಕ್ಕು ಆಯೋಗ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ. ಪ್ರಕರಣದಲ್ಲಿ ಮನೆಯನ್ನೂ ಕಳೆದುಕೊಂಡಿರುವ ಕುಟುಂಬಕ್ಕೆ ಇನ್ನೂ ಯಾವುದೇ ವ್ಯವಸ್ಥೆ ಆಗಿಲ್ಲ. ಕುಟುಂಬಕ್ಕೆ ನ್ಯಾಯಯುತ ಪರಿಹಾರ ಒದಗಿಸಬೇಕು’ ಎಂದು ಆಯೋಗಕ್ಕೆ ಮನವರಿಕೆ ಮಾಡಿದರು.

ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಆಯೋಗದ ಅಧ್ಯಕ್ಷ ಡಾ.ಶ್ಯಾಂ ಭಟ್, ಅಧಿಕಾರಿಗಳು ತಿಳಿಸಿರುವಂತೆ ಎನ್‌ಐಟಿಕೆಯಿಂದ ಈ ಬಗ್ಗೆ ಸಲ್ಲಿಸಲಾಗುವ ವರದಿ ಆಧಾರದಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಸಾರ್ವಜನಿಕ ದೂರು ವಿಚಾರಣೆ ವೇಳೆ ಈ ಪ್ರಕರಣದ ಕಡತದ ಪರಿಶೀಲನೆಯ ಸಂದರ್ಭ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಪ್ರತಿಕ್ರಿಯಿಸಿ, ಇದೊಂದು ಗಂಭೀರ ಪ್ರಕರಣ, ಈ ಬಗ್ಗೆ ಎನ್‌ಐಟಿಕೆ ವರದಿ ಬಂದ ಮೇಲೆ ಮುಂದಿನ ಕ್ರಮ ವಹಿಸಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ, ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಮಂಗಳೂರು ಸಹಾಯಕ ಆಯುಕ್ತರಾದ ಮೀನಾಕ್ಷಿ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಪೆದಮಲೆ ಬಂಡಿ ನೇಮೋತ್ಸವ ‘ ಪೂರ್ವಭಾವಿಯಾಗಿ ನಡೆದ `ಕೋಳಿಕುಂಟ’

February 18, 2026

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

February 16, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಮಂಜನಾಡಿ ಪ್ರಕರಣ; ಮಾನವ ಹಕ್ಕುಗಳ ಆಯೋಗದೆದುರು ನ್ಯಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ…!

By UllalaVaniFebruary 18, 20260

ಮಂಗಳೂರು, ಫೆ.18: ಮಂಜನಾಡಿಯ ಮೊಂಟೆಪದವು ಎಂಬಲ್ಲಿ 2025ರ ಮೇ 30ರಂದು ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ತನ್ನೆರಡೂ ಕಾಲುಗಳನ್ನು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಡುಪಿ–ಕಾಸರಗೋಡು ಟ್ರಾನ್ಸ್‌ಮಿಷನ್ ಲಿಮಿಟೆಡ್ (UKTL) ವತಿಯಿಂದ ವಿಶೇಷ ಮಾಹಿತಿ

February 18, 2026

ಸೋಮೇಶ್ವರ ರೈಲು ಗೇಟ್ ಫೆ.19ರಿಂದ 21ರವರೆಗೆ ಬಂದ್..!

February 18, 2026

ಪೆದಮಲೆ ಬಂಡಿ ನೇಮೋತ್ಸವ ‘ ಪೂರ್ವಭಾವಿಯಾಗಿ ನಡೆದ `ಕೋಳಿಕುಂಟ’

February 18, 2026
1 2 3 … 1,803 Next
Automatic YouTube Gallery

`ಪೆದಮಲೆ ಬಂಡಿ ನೇಮೋತ್ಸವ' ಪೂರ್ವಭಾವಿಯಾಗಿ ನಡೆದ `ಕೋಳಿಕುಂಟ'

ಫೆ.19ರಿಂದ ಫೆ.21ರವರೆಗೆ ಪೆದಮಲೆ ಬಂಡಿ ನೇಮೋತ್ಸವ ;ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ನಡೆದ `ಕೋಳಿಕುಂಟ'

ಭಕ್ತಾದಿಗಳು ದೈವಿಕ ಕಾರ್ಯದಲ್ಲಿ ಭಾಗಿಯಾಗುವಂತೆ ವಿನಂತಿಸಿಕೊoಡ ಸಮಿತಿ

#ullalavani #news #package #Mangalore #tulunadu #pedamale #nema
`ಪೆದಮಲೆ ಬಂಡಿ ನೇಮೋತ್ಸವ' ಪೂರ್ವಭಾವಿಯಾಗಿ ನಡೆದ `ಕೋಳಿಕುಂಟ'
Now Playing
`ಪೆದಮಲೆ ಬಂಡಿ ನೇಮೋತ್ಸವ' ಪೂರ್ವಭಾವಿಯಾಗಿ ನಡೆದ `ಕೋಳಿಕುಂಟ'
ಫೆ.19ರಿಂದ ಫೆ.21ರವರೆಗೆ ಪೆದಮಲೆ ಬಂಡಿ ನೇಮೋತ್ಸವ ;ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ...
ಫೆ.19ರಿಂದ ಫೆ.21ರವರೆಗೆ ಪೆದಮಲೆ ಬಂಡಿ ನೇಮೋತ್ಸವ ;ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ನಡೆದ `ಕೋಳಿಕುಂಟ'

ಭಕ್ತಾದಿಗಳು ದೈವಿಕ ಕಾರ್ಯದಲ್ಲಿ ಭಾಗಿಯಾಗುವಂತೆ ವಿನಂತಿಸಿಕೊoಡ ಸಮಿತಿ

#ullalavani #news #package #Mangalore #tulunadu #pedamale #nema
ಸಹಕಾರ ಸಂಘಗಳಿಗೆ ಶೀಘ್ರ ತರಬೇತಿ ; ಡಾ.ಎಂ.ಎನ್ ರಾಜೇಂದ್ರಕುಮಾರ್
Now Playing
ಸಹಕಾರ ಸಂಘಗಳಿಗೆ ಶೀಘ್ರ ತರಬೇತಿ ; ಡಾ.ಎಂ.ಎನ್ ರಾಜೇಂದ್ರಕುಮಾರ್
ಯುಪಿಎ, ಐಎಂಪಿಎಸ್ ಸೌಲಭ್ಯ ಉದ್ಘಾಟಿಸಿದ ಡಾ.ಎಂ.ಎನ್ ರಾಜೇಂದ್ರಕುಮಾರ್; ...
ಯುಪಿಎ, ಐಎಂಪಿಎಸ್ ಸೌಲಭ್ಯ ಉದ್ಘಾಟಿಸಿದ ಡಾ.ಎಂ.ಎನ್ ರಾಜೇಂದ್ರಕುಮಾರ್; ಸಭಾಕಾರ್ಯಕ್ರಮ ದೀಪಪ್ರಜ್ವಲನೆ ಮೂಲಕ ಚಾಲನೆ

ಯುಪಿಐ ಮತ್ತು ಐಎಂಪಿಎಸ್ ವ್ಯವಸ್ಥೆಯ ಪೋಸ್ಟರ್,ಕ್ಯೂಆರ್ ಕೋಡ್ ಅನಾವರಣ

#ullalavani #News #Package #news #sdcc #SdccBank #Mangalore
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d