ನಿಡ್ಡೋಡಿ ಯೋಜನಾ ಪ್ರದೇಶಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ಉಡುಪಿ–ಕಾಸರಗೋಡು ಟ್ರಾನ್ಸ್‌ಮಿಷನ್ ಲಿಮಿಟೆಡ್ (UKTL) ಗಮನಿಸಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಅನ್ವಯವಾಗುವ ಕಾನೂನುಗಳು, ರಾಜ್ಯದ ನಿಯಮಾವಳಿಗಳು, ರಾಜ್ಯ ಸರ್ಕಾರದ ಅಧಿಸೂಚನೆಗಳ ನಿರ್ದೇಶನಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಮ್ಮ ಎಲ್ಲಾ ಚಟುವಟಿಕೆಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ.

ಯೋಜನೆಯ ಪ್ರಕ್ರಿಯೆಗಳ ಸಮಗ್ರತೆ—ವಿಶೇಷವಾಗಿ ಮಾರ್ಗಾಧಿಕಾರ (Right of Way) ಮತ್ತು ಪರಿಹಾರ ವಿತರಣೆಗೆ ಸಂಬಂಧಿಸಿದ ವಿಷಯಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಸಂಪೂರ್ಣ ಪಾರದರ್ಶಕತೆಯಿಂದ ಮತ್ತು ಕಾನೂನುಬದ್ಧವಾಗಿ ನಿರ್ವಹಿಸಲಾಗುತ್ತಿದೆ ಎಂದು ನಾವು ಖಚಿತಪಡಿಸುತ್ತೇವೆ. ಪರಿಹಾರ ನೀಡಿಕೆಯಲ್ಲಿ ನಾವು ಸಂಪೂರ್ಣ ಪಾರದರ್ಶಕತೆಯ ನೀತಿಯನ್ನು ಹೊಂದಿದ್ದು, ಭೂಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ, ಕಾಮಗಾರಿ ಆರಂಭಿಸುವ ಮೊದಲೇ ಶೇ. 100ರಷ್ಟು ಪರಿಹಾರದ ಮೊತ್ತವನ್ನು ಪಾವತಿಸುತ್ತೇವೆ.
ನಾವು ಈ ನಿಯಮ ಮತ್ತು ಮಾನದಂಡಗಳಿಗೆ ಬದ್ಧರಾಗಿದ್ದರೂ, ಸ್ಥಳೀಯ ಸಮುದಾಯದೊಂದಿಗೆ ನಾವು ಹೊಂದಿರುವ ಸಂಬಂಧಕ್ಕೆ ಹೆಚ್ಚಿನ ಗೌರವ ನೀಡುತ್ತೇವೆ. ನಿಗದಿತ ಆಡಳಿತಾತ್ಮಕ ವ್ಯವಸ್ಥೆಗಳ ಮೂಲಕ ರಚನಾತ್ಮಕ ಹಾಗೂ ಶಾಂತಿಯುತ ಸಂವಾದ ನಡೆಸಲು ಯುಕೇಟಿಎಲ್ (UKTL) ಯಾವಾಗಲೂ ಮುಕ್ತವಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಸ್ಥಳೀಯರ ಆತಂಕಗಳನ್ನು ನಿವಾರಿಸಿ, ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ.



