ಆರೋಗ್ಯ ನಿರ್ವಹಣೆಯಲ್ಲಿ ಪೋಷಣೆಯ ಸಮಗ್ರ ಮತ್ತು ಅಂತರಶಾಸ್ತ್ರೀಯ ದೃಷ್ಟಿಕೋನಗಳು ಯೇನೆಪೊಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆ (YNYSCH), ಯೇನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ಯ ಘಟಕವು 15 ಡಿಸೆಂಬರ್ 2025 ರಂದು ಮಂಗಳೂರು, ನರಿಂಗಣದ ಆಯುಷ್ಕ್ಯಾಂಪಸ್‌ನ YNYSCH ಸಭಾಂಗಣದಲ್ಲಿ “ಆಹಾರ ವಿಜ್ಞಾನ” ರಾಷ್ಟ್ರೀಯ ಮಟ್ಟದ ಸಮ್ಮೇಳನದ ಉದ್ಘಾಟನಾಸಮಾರಂಭವನ್ನು ಆಯೋಜಿಸಿತು. ಕಾರ್ಯಕ್ರಮಕ್ಕೆ ಡಾ. ಅಜಿತ್ ಕೆ ಅವರ ಸ್ವಾಗತ ಭಾಷಣದೊಂದಿಗೆ ಚಾಲನೆ ದೊರೆಯಿತು. ಅವರು ಸಮಗ್ರ ಆರೋಗ್ಯದಲ್ಲಿ ಆಹಾರ ವಿಜ್ಞಾನದ ಮಹತ್ವವನ್ನು ವಿವರಿಸಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಇಡ್ಡ್ಯ ಕರುಣಾ ಸಾಗರ್,(ಸಂಶೋಧನಾ ಸಲಹೆಗಾರರು, ನಿಟ್ಟೆ ವಿಶ್ವವಿದ್ಯಾಲಯ) ಹಾಗೂ ಅತಿಥಿಯಾಗಿ ಆಸಿಂ ಸಯದ್ ಶೀರಾಜ್,(ಸಿಇಒ, ಯೇನೆಪೊಯ ಟೆಕ್ನಾಲಜಿ ಇಂಕ್ಯುಬೇಟರ್) ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪುನೀತ್, ರಾಘವೇಂದ್ರ, ಪ್ರಾಂಶುಪಾಲರು, YNYSCH ವಹಿಸಿದ್ದರು. ಡಾ. ಸುನಿತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನವನ್ನು ಆಯೋಜನಾ ಸಮಿತಿ ಯಶಸ್ವಿಯಾಗಿ ನಡೆಸಿಕೊಟ್ಟಿತು. ಕಾರ್ಯಕ್ರಮದ ಅಂತ್ಯದಲ್ಲಿ ಡಾ. ಅರ್ಪಿತ್ ಅವರು ವಂದನಾರ್ಪಣೆ ಸಲ್ಲಿಸಿದರು.
Author: UllalaVani
ಮಂಗಳೂರು, ಡಿ. 15: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಜಪೆ ಠಾಣಾ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಮಂಗಳೂರು, ಉಳಾಯಿಬೆಟ್ಟು, ಕೊಟ್ಟಾನ ಹೌಸ್ ನ ಪ್ರಸ್ತುತ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು, ಸಜಿಪಮುನ್ನೂರು ಗ್ರಾಮದ ಸೌದಿ ಅರೆಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ (27) ಆರೋಪಿಯಾಗಿರುತ್ತಾನೆ.ಇದೇ ಅಕ್ಟೋಬರ್ 11ರಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ _sdpi_2025_ID ಎಂಬ ಖಾತೆಯಲ್ಲಿ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದಲ್ಲಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದಾಗ ಇನಸ್ವಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ವ್ಯಕ್ತಿ ಮಂಗಳೂರು ಮೂಲದ ಸೌದಿ ಅರೆಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ ಎಂದು ತಿಳಿದುಬಂದಿರುತ್ತದೆ.ಆರೋಪಿ ಅಬ್ದುಲ್ ಖಾದರ್ ನೇಹಾದ್ ವಿರುದ್ಧ LOC ಹೊರಡಿಸಲಾಗಿರುತ್ತದೆ. ಡಿ. 14ರಂದು ಕೇರಳ ರಾಜ್ಯದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸಿದ್ದ…
ಉಳ್ಳಾಲ, ಡಿ. 15: ಉಮಾಮಹೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ನಮ್ಮ ಅಮೂಲ್ಯ ಸಮಯವನ್ನು ಮೀಸಲಿಡಬೇಕಿದೆ. ಅನೇಕ ಯಶಸ್ವಿ ಕಾರ್ಯಕ್ರಮಗಳನ್ನ ಸಂಘಟಿಸಿದ ಅನುಭವಸ್ಥರೇ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿದ್ದಾರೆ. ಇಂದು ಬಿಡುಗಡೆಗೊಳಿಸಿದ ಆಮಂತ್ರಣ ಪತ್ರಿಕೆಯನ್ನ ಸೀಮಿತ ಅವಧಿಯೊಳಗೆ ಎಲ್ಲರ ಮನೆಗಳಿಗೂ ತಲುಪಿಸಬೇಕಿದೆಯೆಂದು ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕರೆ ನೀಡಿದರು. ತೊಕ್ಕೊಟ್ಟು ಸಮೀಪದ ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಭಧ್ರಕಾಳಿ ದೇವರ ಪ್ರತಿಷ್ಠೆಯು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ 2026ರ ಫೆ. 1ರಿಂದ 6ರ ತನಕ ಜರುಗಲಿದ್ದು, ಆ ಪ್ರಯುಕ್ತ ಉಮಾಮಹೇಶ್ವರಿ ಕ್ಷೇತ್ರದಲ್ಲಿ ರವಿವಾರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಬಹುಮುಖ್ಯವಾಗಿ ಆರ್ಥಿಕ ಸಂಪತ್ತು ಕ್ಷೇತ್ರಕ್ಕೆ ಹರಿದು ಬರಬೇಕಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದಾಗ ಸಹಜವಾಗಿಯೇ ಧನ ಸಂಗ್ರಹವಾಗುತ್ತದೆ. ಪಕ್ಷ ,ಜಾತಿ…
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಕೋಟೆಕಾರ್ ಅಜ್ಜಿನಡ್ಕದ ಬದ್ರಿಯಾ ವೆಲ್ಫೇರ್ ಸೊಸೈಟಿ (ರಿ.) ಮತ್ತು ಶಾಲಾಭಿವೃದ್ಧಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜಿನಡ್ಕ ಇವರುಗಳ ಜಂಟಿ ಸಹಯೋಗದಲ್ಲಿ ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರವು ಡಿಸೆಂಬರ್ 6 ರಂದು ಅಜ್ಜಿನಡ್ಕ ಶಾಲಾ ಸಭಾಂಗಣದಲ್ಲಿ ಜರುಗಿತು. ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಅಹಮದ್ ಅಜ್ಜಿನಡ್ಕ ಹಾಗೂ ಬದ್ರಿಯಾ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕರವರು ಶಿಬಿರಕ್ಕೆ ಶುಭ ಹಾರೈಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯರಾಗಿರುವ ಡಾ.ಅನಿತಾ ಲೋಬೋರವರು ಹೋಮಿಯೋಪಥಿ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಬದ್ರಿಯಾ ವೆಲ್ಫೇರ್ ಸೊಸೈಟಿಯ ಉಪಾಧ್ಯಕ್ಷರಾದ ಸಿ.ಎಚ್.ಇಸ್ಮಾಯಿಲ್, ಕಾರ್ಯದರ್ಶಿ ಬಾತೀಷ್ ಸುಲೈಮಾನ್, ಕೋಶಾಧಿಕಾರಿ ಹಂಝ ಕೋಟೆಕಾರ್, ಅಜ್ಜಿನಡ್ಕ ಶಾಲೆಯ ಮುಖ್ಯೋಪಾಧ್ಯಾಯಿನಿ ರಜಿಯಾ, ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು. ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ MSW ಶೌವಾದ್ ಗೂನಡ್ಕರವರು ಸ್ವಾಗತಿಸಿ,…
ಮಂಗಳೂರು/ಉಡುಪಿ, ಡಿ. 15 : ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ತೀವ್ರ ಇಳಿಕೆ ದಾಖಲಾಗಿದ್ದು, ಇದರಿಂದ ಚಳಿಯ ಪ್ರಮಾಣ ಗಣನೀಯ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ, ಮುಂಜಾನೆಯಿಂದಲೇ ಆರಂಭವಾಗುವ ಚಳಿ ಮಧ್ಯಾಹ್ನದವರೆಗೂ ಮುಂದುವರಿಯುತ್ತದೆ. ಬೆಳಗಿನ ಜಾವದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣವು ಸ್ವಾಭಾವಿಕವಾಗಿ ಚಳಿಯನ್ನು ತೀವ್ರಗೊಳಿಸುವುದರಿಂದ ಹೊರಗೆ ಓಡಾಡುವ ಜನರಿಗೆ ಅನಾನುಕೂಲವಾಗುತ್ತಿದೆ. ಕಳೆದ ವಾರದಲ್ಲಿ ತಾಪಮಾನದಲ್ಲಿ ಏರಿಳಿತಗಳು ಕಂಡುಬಂದಿದ್ದು, ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿಯ ಹವಾಮಾನ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ.ಮಂಗಳೂರಿನ ಸರಾಸರಿ ಕನಿಷ್ಠ ತಾಪಮಾನದಿನಾಂಕ ಕನಿಷ್ಠ ತಾಪಮಾನ (ಸೆಲ್ಸಿಯಸ್)ಡಿಸೆಂಬರ್ 9|20.5ಡಿಸೆಂಬರ್ 10|21.9ಡಿಸೆಂಬರ್ 11|21.5ಡಿಸೆಂಬರ್ 12|19.5ಡಿಸೆಂಬರ್ 13|20.3ಉಡುಪಿಯ ಸರಾಸರಿ ಕನಿಷ್ಠ ತಾಪಮಾನದಿನಾಂಕ ಕನಿಷ್ಠ ತಾಪಮಾನ (ಸೆಲ್ಸಿಯಸ್)ಡಿಸೆಂಬರ್ 9|21.6ಡಿಸೆಂಬರ್ 10|21.6ಡಿಸೆಂಬರ್ 11|21.4ಡಿಸೆಂಬರ್ 12|21.6ಡಿಸೆಂಬರ್ 13|20.8
ಸುಳ್ಯ, ಡಿ. 15 : ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಕಸ ಎಸೆದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆ ಶಾಲೆಯ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ, ತಾವೇ ಖುದ್ದಾಗಿ ಬಂದು ತ್ಯಾಜ್ಯವನ್ನು ತೆರವುಗೊಳಿಸಿ ದಂಡ ಪಾವತಿಸುವುದಾಗಿ ಭರವಸೆ ನೀಡಿದ ಘಟನೆ ಸಂಪಾಜೆಯಲ್ಲಿ ನಡೆದಿದೆ. ಡಿಸೆಂಬರ್ 12 ರಂದು ಬೆಳಿಗ್ಗೆ, ಪ್ರವಾಸಕ್ಕೆ ತೆರಳಿದ್ದ ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು ಊಟದ ನಂತರ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವ ಬದಲು ರಸ್ತೆ ಬದಿಯಲ್ಲಿ ಸುರಿದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಹೀಗೆ ಮಾಡದಂತೆ ಶಿಕ್ಷಕರಲ್ಲಿ ಮನವಿ ಮಾಡಿದರೂ, ಧಿಕ್ಕರಿಸಿ ಪ್ರಯಾಣ ಮುಂದುವರೆಸಿದ್ದರು ಎನ್ನಲಾಗಿದೆ.ಸ್ಥಳೀಯ ನಿವಾಸಿಯೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಮೀದ್ ಜಿ.ಕೆ. ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಈ ವಿಚಾರ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ, ಅವರು…
ನವದೆಹಲಿ, ಡಿ. 15 : ಚಾಕೊಲೇಟ್ ನೀಡುವ ಆಮಿಷವೊಡ್ಡಿ ಎರಡು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಕೊಲೆ ಮಾಡಿ ಜೈಲು ಶಿಕ್ಷೆಗೊಳಗಾದ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2022ರ ಜುಲೈ 25 ರಂದು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ ಮೂರನೇ ಕ್ಷಮದಾನ ಅರ್ಜಿ ಇದಾಗಿದೆ. ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ 2012ರ ಮಾರ್ಚ್ 6 ರಂದು ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ, ಕೊಲೆ ಮಾಡಲಾಗಿತ್ತು. 2015ರ ಸೆಪ್ಟೆಂಬರ್ 16 ರಂದು ವಿಚಾರಣಾ ನ್ಯಾಯಾಲಯ ಆರೋಪಿ ರವಿ ಅಶೋಕ್ ಘುಮಾರನನ್ನು ಅಪರಾಧಿ ಎಂದು ಘೋಷಿಸಿ ಮರಣ ದಂಡನೆ ವಿಧಿಸಿತ್ತು.ಅಪರಾಧಿ ರವಿ ಅಶೋಕ್ ಘುಮಾರಿಗೆ ವಿಧಿಸಿದ್ದ ಮರಣದಂಡನೆಯನ್ನು 2016ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು. ಬಳಿಕ 2019ರ ಅಕ್ಟೋಬರ್ 3 ರಂದು ಈ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.ಎರಡು ವರ್ಷದ ಮಗುವಿನ ಮೇಲೆ…
ಮಂಗಳೂರು: ದೇವರು ಕೊಟ್ಟ ಪಾಲು ಅಲ್ಪವಾಗಿದ್ದರೂ, ಅದರಲ್ಲೊಂದು ಭಾಗವನ್ನು ಸಮಾಜಕ್ಕೆ ನೀಡುವ ಕಾರ್ಯ ದೇವರಿಗೆ ಮೆಚ್ಚುಗೆಯಾದದ್ದು. ಸಮಾಜಕ್ಕೆ ಪಾಲು ಕೊಡುವ ಸಂಸ್ಕೃತಿ ಪಡೆದುಕೊಂಡವರಲ್ಲಿಯೂ ಬೆಳೆಯಬೇಕು ಎಂದು ನಾಡೋಜ ಡಾ| ಜಿ.ಶಂಕರ್ ಅಭಿಪ್ರಾಯಪಟ್ಟರು. ಮೊಗವೀರ್ಸ್ ಬೆಹ್ರೈನ್ ವತಿಯಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನಗೈದು ಮಾತನಾಡಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸೇರಿದಂತೆ ಮಾರುತಿ ಜನಸೇವಾ ಸಂಘ, ಉಚ್ಚಿಲ, ಬೆಣ್ಣೆಕುದ್ರು, ಉರ್ವ ಮಾರಿಯಮ್ಮ ಕ್ಷೇತ್ರದ ಆಶ್ರಯದಲ್ಲಿ ನಿರಂತರವಾಗಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿರುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಣ ಪಡೆಯುವ ಜವಾಬ್ದಾರಿ ಮಾತ್ರ ಮಕ್ಕಳಲ್ಲಿ ಬೇಕಿದೆ. ಹಿಂದಿನಂತೆ ಶಿಕ್ಷಣ ಪಡೆಯುವ ಕಷ್ಟ ಇಂದಿನ ದಿನಗಳಲ್ಲಿ ಇಲ್ಲ. ಅದನ್ನು ಅರಿತುಕೊಂಡು , ಸಮಾಜದಲ್ಲಿ ವಿವಿದೆಡೆ ಸಿಗುವಂತಹ ವಿದ್ಯಾರ್ಥಿವೇತನಗಳನ್ನು ವಿನಿಯೋಗಿಸಿಕೊಂಡು ಶಿಕ್ಷಣದಿಂದ ವಂಚಿತರಾಗದೇ ಮುಂದುವರಿಯಿರಿ. ಇದೇ ಸುದುದ್ದೇಶದೊಂದಿಗೆ ಬಹರೈನ್ ಮೊಗವೀರ್ಸ್ ಸಂಘ ಕೂಡಾ ತಾವು ಬಂದ ದಾರಿಯನ್ನು ಮರೆಯದೇ ಮತ್ತೆ ಸಮಾಜದತ್ತ…
ಸಾಲೆತ್ತೂರು: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮಾವೆಯ ಶ್ರೀ ಚಾಮುಂಡೇಶ್ವರಿ ರಕ್ತೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ವತಿಯಿಂದ “ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತರಾದ ಟಿ.ಜಿ. ರಾಜಾರಾಮ ಭಟ್ ಅವರನ್ನು ಶಾಲು ಹೊದಿಸಿ, ಫಲಪುಷ್ಟ ನೀಡಿ ಅಭಿನಂದಿಸಲಾಯಿತು. ಕರ್ನಾಟಕ ಘನ ಸರಕಾರದ ವತಿಯಿಂದ ಕೊಡಮಾಡುವ ಸಹಕಾರ ರತ್ಮ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು ಅಖಿಲ ಭಾರತ ಸಹಕಾರ ಸಪ್ತಾಹ ಇದರ ವತಿಯಿಂದ ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಸೇವೆಯ ಮೂಲಕ ಭಾಜನರಾಗಿ, ಇಂದು ಸಹಕಾರ ರತ್ನ ಪುರಸ್ಕೃತರಾದವರು ಟಿ.ಜಿ ರಾಜಾರಾಮ ಭಟ್. ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ರಕ್ತೇಶ್ವರಿ ಕ್ಷೇತ್ರದ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷರು ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ;ಹಾಸನ ಸಕಲೇಶಪುರ ವಿಭಾಗಗಳಲ್ಲಿ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡ ನಂತರ ಬೆಂಗಳೂರಿನಿAದ ಮಂಗಳೂರು, ಉಡುಪಿ ಮತ್ತು ಕಾರವಾರಕ್ಕೆ ವಂದೇ ಭಾರತ್ ಎಕ್ಸ÷್ಸ ಪ್ರೆಸ್ ಅನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎ0ದು ಕೇಂದ್ರ ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ನವದೆಹಲಿಯಲ್ಲಿ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಸಂಬ0ದ ಒಂದು ಮನವಿ ಪತ್ರವನ್ನು ಸಲ್ಲಿಸಿ ,ಈ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸುವ ಅಗತ್ಯವನ್ನು ವಿವರಿಸಿದರು. ಮನವಿಗೆ ಸ್ಪಂದಿಸಿದ ರೈಲ್ವೇ ಸಚಿವರು, ಸಕಲೇಶಪುರ ಘಾಟ್ ವಿಭಾಗದಲ್ಲಿ ರೈಲ್ವೇ ಹಳಿ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿAದ ಕಾರವಾರಕ್ಕೆ ರೈಲು ಸೇವೆಗಳನ್ನು ಸುಧಾರಿಸಲಾಗುವುದು. ಮತ್ತು ಈ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಪರಿಚಯಿಸುವ ಯೋಜನೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

