ಕೊಣಾಜೆ: ಮಂಗಳೂರು ಮಂಡಲದ ವತಿಯಿಂದ “ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ (VBG RAM G)” ಅಡಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ ತೊಡೆದು ಹಾಕಲು, ಕೇಂದ್ರ ಸರ್ಕಾರದ ಕಾಯ್ದೆಯ ಬಗ್ಗೆ ಜನಜಾಗ್ರತಿ ಮೂಡಿಸಲು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ “ಮುಡಿಪು ಕಾಯರ್ ಗೋಳಿ ಜಂಕ್ಷನ್ ನಿಂದ ಮುಡಿಪು ಜಂಕ್ಷನ್ ವರೆಗೆ” “ಕಾಲ್ನಡಿಗೆ ಜಾಥಾ” ಹಾಗೂ ಜಾಗೃತಿ ಸಭೆಯು ನಡೆಯಿತು.

ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಅವರು ಮಾತನಾಡಿ, ಕಾಂಗ್ರೆಸ್ ನವರು ಎಂಜಿ ನರೇಗ ಯೋಜನೆಯ ಮೂಲಕ ಹಣವನ್ನು ಲೂಟಿ ಮಾಡುತ್ತಿದ್ದರು. ಸತ್ತವರ ಹೆಸರಲ್ಲಿ, ವಿದೇಶದವರ ಹೆಸರಲ್ಲಿ ಹಣ ಪಡೆಯುವ ಮೂಲಕ ಭ್ರಷ್ಟಾಚಾರಗಳು ನಡೆಯುತ್ತಿತ್ತು. ಅದಕ್ಕಾಗಿ ಮೋದಿಜಿಯವರು ಇದನ್ನು ತಡೆಯುವುದಕ್ಕಾಗಿ ಹಾಗೂ ಗ್ರಾಮೀಣ ಜನರ ಅಭಿವೃದ್ಧಿಗಾಗಿ ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿಯವರು ಗ್ರಾಮಸ್ವರಾಜ್ಯದ, ರಾಮರಾಜ್ಯದ ಕನಸನ್ನು ಕಂಡಿದ್ದರು. ಅದನ್ನು ಪ್ರಧಾನಿ ನರೇಂದ್ರ ಮೋದಿಜಿಯವರು ನನಸು ಮಾಡಿದ್ದಾರೆ. ಆತ್ಮನಿರ್ಭರ ಭಾರತ, ಸ್ವದೇಶಿ ಚಿಂತನೆ ಮೂಲಕ ಮೋದಿಜಿಯವರ ಅನೇಕ ಅಭಿವೃದ್ಧಿ ಯೋಜನೆಗಳಿಂದ ಭಾರತ ಆರ್ಥಿಕತೆಯಲ್ಲಿ ಹದಿಮೂರನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದರು.
ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪೂಜಾ ಪೈ ಅವರು ಮಾತನಾಡಿ, ಅನೇಕ ಸುಳ್ಳುಗಳನ್ಮು ಹೇಳಿಕೊಂಡು ಪಾದಯಾತ್ರೆ ನಡೆಸಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ಜು ಕಾಂಗ್ರೆಸ್ ಮಾಡುತ್ತಿದೆ. ನರೇಗ ಹೊ ಯೋಜನೆಯಲ್ಲಿ ಅನೇಕ ಸುದಾರಣೆಯನ್ನು ತಂದಿದೆ. ಬಿಜೆಪಿ ಬಂದ ನಂತರ ನೂರು ದಿನಗಳ ಬದಲು ನೂರ ಇಪ್ಪತ್ತೈದು ದಿನ ಉದ್ಯೋಗವನ್ನು ನೀಡಿದೆ. ಗ್ರಾಮೀಣ ಪ್ರದೇಶದಿಂದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಈ ಕಾಯ್ದೆ ಅನುಕೂಲ ನೀಡಿದೆ. ಕಾಂಗ್ರೆಸ್ ನವರಿಗೆ ಲೂಟಿ ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಿರೋಧಿಸುತ್ತಿದ್ದಾರೆ.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ಅವರು ಮಾತನಾಡಿ ಕಾಂಗ್ರೆಸ್ ಜನರನ್ನು ಸುಳ್ಳು ಸುದ್ದಿ ಹಬ್ಬಿಸಿ ಮೋಸಗೊಳಿಸುವ ಪ್ರಯತ್ನ ಫಲಿಸದು. ರಾಜ್ಯದಲ್ಲಿರುವ ಇಂತಹ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್ ಕುಮಾರ್ ರೈ ಬೋಳಿಯಾರ್, ಚಂದ್ರಶೇಖರ್ ಉಚ್ಚಿಲ, ಚಂದ್ರಹಾಸ್ ಪಂಡಿತ್ ಹೌಸ್,ಧನಲಕ್ಷ್ಮೀ ಗಟ್ಟಿ, ಹೇಮಂತ್ ಶೆಟ್ಟಿ, ಸೀತಾರಾಮ ಬಂಗೇರ, ದಿವ್ಯ ಸತೀಶ್ ಶೆಟ್ಟಿ ಸೇರಿದಂತೆ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಮಂಡಲ ಪ್ರದಾನ ಕಾರ್ಯದರ್ಶಿ ಮೋಹನ್ ರಾಜ್ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ವಂದಿಸಿದರು. ಮಂಡಲ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ನಿರೂಪಿಸಿದರು.




