ತೊಕ್ಕೊಟ್ಟು ; ಪರಿಸರ ಸಮಗ್ರ ಕಸವಿಲೇವಾರಿಗೆ ಸಂಘಟಿತ ಪ್ರಯತ್ನ ಸಾಮೂಹಿಕ ಜಾಗೃತಿ ಅಗತ್ಯ ಎಂದು ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹೇಳಿದ್ದಾರೆ.

ಇವರು ಸಿರಿ ತೋಟಗಾರಿಕಾ ಸಂಘ ಇದರ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ, ಫುಡ್ ಚೈನ್ ಕ್ಯಾಂಪೇನ್, ಶಿವಾಜಿ ಫ್ರೆಂಡ್ಸ್ ಸರ್ಕಲ್, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ತೊಕ್ಕೊಟ್ಟು, ರಿಚಲ್ ಸರ್ವಿಸಸ್ , ಮಂಗಳೂರು ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ತೊಕ್ಕೊಟ್ಟು ಇವುಗಳ ಸಂಯುಕ್ತ ಸಹಭಾಗಿತ್ವದಲ್ಲಿ ಕೈತೋಟ, ತಾರಸಿತೋಟ ನಿರ್ಮಾಣದ ಬಗ್ಗೆ ಉಚಿತ ತರಬೇತಿ ಹಾಗೂ ತರಕಾರಿ ಬೀಜ ಮತ್ತು ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿತ್ತಿದಂತೆ ಬೆಳೆ ಎಂಬoತೆ ಉತ್ತಮ ಬೀಜ ಬಿತ್ತಿದರೆ ಕೃಷಿ ಅಭಿವೃದ್ಧಿಪಡಿಸಲು ಸಾಧ್ಯ. ನಾವು ಉತ್ತಮ ಚಿಂತನೆ ಅಳವಡಿಸಿಕೊಂಡರೆ ಮನಸು ಸ್ವಚ್ಚಗೊಳಿಸಲು ಸಾಧ್ಯ. ನಮಗಿರುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸಲು ನಮಗೆ ಸಾಧ್ಯವಾಗುತ್ತಿಲ್ಲ. ನಾವು ಮೌನದಿಂದ ಇರುವ ಕಾರಣ ದೇಶದಲ್ಲಿ ಮಹಾ ಮಾಲಿನ್ಯ ಸೃಷ್ಟಿ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೆರ್ಮನ್ನೂರು ಚರ್ಚ್ ಫಾದರ್ ಸಪ್ರಿಯನ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ ಎನ್ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ನುಡಿದಂತೆ ನಡೆದು ತೋರಿಸುವ ಮನೋಭಾವದ ಅಗತ್ಯವಿದೆ. ಕೀಟನಾಶಕದ ಬಳಕೆಯಿಂದ ಅನ್ನದ ಬಟ್ಟಲಲ್ಲಿ ನಾವೇ ಸುರಿಯುತ್ತಿದ್ದೇವೆ ಈ ಬಗ್ಗೆ ಜಾಗೃತಿ ಬಹುಮುಖ್ಯ ಎಂದರು.
ಸಿರಿ ತೋಟಗಾರಿಕಾ ಸಂಘ ಉಪಾಧ್ಯಕ್ಷರಾದ ಡಾ.ಭಾರತಿ ನಿರ್ಮಲ್, ಫುಡ್ ಚೈನ್ ಕ್ಯಾಂಪೇನ್ ಸ್ಥಾಪಕ ಯತೀಶ್ ತುಕರಾಮ್ ಮಾತನಾಡಿದರು. ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಯು.ಎಚ್.ಅಲ್ತಾಫ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯ ಉಪ ನಿರ್ದೇಸಕರಾದ ಪ್ರದೀಪ್ ಡಿ’ಸೋಜ ಗಿಡ ಹಾಗೂ ತರಕಾರಿ ಬೀಜ ವಿತರಿಸಿದ್ರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರದೀಪ್ ಡಿ’ಸೋಜ ತಾರಸಿ ತೋಟ ನಿರ್ಮಾಣದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಪ್ರವೀಣ್ ಕೆಯವರು ತಾರಸಿ ತೋಟದ ಉಪಯೋಗದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಗದ ಅಧ್ಯಕ್ಷರಾದ ಶಶಿಧರ ಪೊಯ್ಯತ್ತಬೈಲ್, ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಯು.ಎಚ್. ಅಲ್ತಾಫ್, ಸ್ವಚ್ಛತಾ ಅಭಿಯಾನದ ರಾಯಭಾರಿ ಕೃಷ್ಣ ಮೂಲ್ಯ ಹಾಗು ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಬೀಜ ಹಾಗೂ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಸಿರಿಲ್ ರಾಬರ್ಟ್ ಡಿ’ಸೋಜ ಪ್ರಸ್ತಾವಿಕವಾಗಿ ಮಾತಾನಾಡಿದರು. ಪ್ರವೀಣ್ ಎಸ್ ಕುಂಪಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


