ಕಾಸರಗೋಡು: ಚುಟುಕು ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಚುಟುಕು ಕವಿ, ಕವಯತ್ರಿಯರು, ಸಾಹಿತಿಗಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ,ಮೈಸೂರು ಇದರ ಕೇರಳ ಗಡಿನಾಡ ಘಟಕವಾಗಿ 2000 ದಲ್ಲಿ ಅಸ್ತಿತ್ವಕ್ಕೆ ಬಂದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಳೆದ 26 ವರ್ಷಗಳಿಂದ ರಚನಾತ್ಮಕವಾಗಿ ಚುಟುಕು ಸಾಹಿತ್ಯ ಮತ್ತು ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತದೆ. 7 ಬಾರಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಕಾಸರಗೋಡಿನಲ್ಲಿ ಸಂಘಟಿಸಿ ಮಹತ್ತರವಾದ ಸಾಹಿತ್ಯ ಸಂಘಟನೆಯನ್ನು ಯಶಸ್ವಿಯಾಗಿ ಪೂರೈಸಿರುತ್ತದೆ.ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ. ),ಕನ್ನಡ ಗ್ರಾಮ, ಕಾಸರಗೋಡು ಇದರ ಸಹಯೋಗದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ಕಾಸರಗೋಡು ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮದ ಕಾಸರಗೋಡು ಗೋ – ಕುಟೀರದಲ್ಲಿ 2026 ಮಾರ್ಚ್ 28 ಶನಿವಾರದಂದು ಅಪರಾಹ್ನ ಗಂಟೆ 2.30…
Author: UllalaVani
ಬೆಂಗಳೂರು, ಮಾ. 18 : ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಗತ್ಯ ಸೇವಾ ವಲಯಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ನಾಳೆಯಿಂದಲೇ ಈ ನಿಯಮಗಳು ಜಾರಿಯಾಗಲಿವೆ. ಸರ್ಕಾರ ಹೊರಡಿಸಿರುವ ಗೈಡ್‌ಲೈನ್ಸ್ ಪ್ರಕಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಶೇ.100ರಷ್ಟು ಗ್ಯಾಸ್ ವಿತರಣೆ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಪ್ರಮುಖ ವಲಯಗಳಿಗೂ ನಿರ್ದಿಷ್ಟ ಪ್ರಮಾಣದಲ್ಲಿ ಗ್ಯಾಸ್ ಹಂಚಿಕೆ ಮಾಡುವಂತೆ ಏಜೆನ್ಸಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.ವಲಯವಾರು ಗ್ಯಾಸ್ ವಿತರಣೆಯ ಪ್ರಮಾಣ:ಆಸ್ಪತ್ರೆಗಳು – 100%ಶೈಕ್ಷಣಿಕ ಸಂಸ್ಥೆಗಳು – 100%ಸೀಡ್ ಪ್ರೊಸೆಸಿಂಗ್ ಘಟಕಗಳು – 70%ಆಯಿಲ್ ಉತ್ಪಾದನಾ ಕಂಪನಿಗಳು – 70%ಏರ್‌ಲೈನ್ಸ್ ಮತ್ತು ರೈಲ್ವೆ – 70%ವೃದ್ಧಾಶ್ರಮಗಳು – 70%ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳು – 10%ಕಾರ್ಪೋರೇಟ್ ಗೆಸ್ಟ್ ಹೌಸ್‌ಗಳು – 10%ಫುಡ್ ಪ್ರೊಸೆಸಿಂಗ್ ಕಂಪನಿಗಳು – 10%ಹೋಟೆಲ್‌ಗಳು – 10%ಸರ್ಕಾರವು ಅಗತ್ಯ ಸೇವೆಗಳ ನಿರಂತರ ಕಾರ್ಯಾಚರಣೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದೆ. ಅದರಂತೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಕಾರ್ಯಾಚರಣೆಗೆ ಯಾವುದೇ ವ್ಯತ್ಯಯ ಉಂಟಾಗದಂತೆ…
ಮಂಗಳೂರು, ಮಾ. 18 : ನಗರದ ಹೊರವಲಯದ ಪಡುಶೆಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮರಕಡ ಕುಂಜತ್ತಬೈಲು ನಿವಾಸಿ ಪ್ರತೀಕ್ (32) ಮತ್ತು ಯೆಯ್ಯಾಡಿ ದಂಡಕೇರಿ ನಿವಾಸಿ ವೀಕ್ಷಿತ್ (21) ಬಂಧಿತ ಆರೋಪಿಗಳು. ಕಾವೂರು ಪೊಲೀಸರು ಗಸ್ತಿನಲ್ಲಿದ್ದ ವೇಳೆ ಪಡುಶೆಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಇಬ್ಬರನ್ನು ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ಅವರು ಎಂಡಿಎಂಎ ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ ಪ್ರತೀಕ್ ಬಳಿ ಸುಮಾರು 30 ಸಾವಿರ ರೂ. ಮೌಲ್ಯದ 2.29 ಗ್ರಾಂ ತೂಕದ ಎಂಡಿಎಂಎ ಮತ್ತು ವೀಕ್ಷಿತ್ ಬಳಿ 40 ಸಾವಿರ ರೂ. ಮೌಲ್ಯದ 4.03 ಗ್ರಾಂ ತೂಕದ ಎಂಡಿಎಂಎ ಪತ್ತೆಯಾಗಿದೆ. ಜತೆಗೆ 20 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್, 5 ಲಕ್ಷ ರೂ. ಮೌಲ್ಯದ ಕಾರು, 350 ರೂ. ಮೌಲ್ಯದ ಡಿಜಿಟಲ್…
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಆದೇಶದಂತೆ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ. ಮಹಿಳೆಯರೊಂದಿಗೆ ಅನರ್ಹ ವರ್ತನೆ ತೋರಿದ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.ಎಸಿಪಿ ಸಲ್ಲಿಸಿದ ವರದಿಯ ಪ್ರಕಾರ ತನಿಖೆಯಲ್ಲಿ ಹಲವು ವಿಷಯಗಳು ಬೆಳಕಿಗೆ ಬಂದಿವೆ.ಸುಮತಿ ನಾಯಕ್ ಅವರು ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡುವುದರ ಜೊತೆಗೆ ಮಾಧ್ಯಮಕ್ಕೂ ಹೇಳಿಕೆ ನೀಡಿದ್ದರು. ಅವರ ಹಾಗೂ ಅವರ ಸಹೋದರಿಯ ನಡುವೆ ಕುಟುಂಬ ಸಂಬಂಧಿತ ಸಮಸ್ಯೆಗಳು ಇರುವುದಾಗಿ ತಿಳಿದುಬಂದಿದೆ. ಇಬ್ಬರ ವಿರುದ್ಧವೂ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇವರ ದೂರು ಆಧರಿಸಿ ಇನ್ಸ್‌ಪೆಕ್ಟರ್ ವಿರುದ್ಧವೂ ಒಂದು ಪ್ರಕರಣ ದಾಖಲಾಗಿತ್ತು. ಒಂದು ಪ್ರಕರಣ ತನಿಖೆಯಲ್ಲಿದ್ದು, ಉಳಿದವು ಹೈಕೋರ್ಟ್‌ನಲ್ಲಿ ಸ್ಥಗಿತಗೊಂಡಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.ಇನ್ಸ್‌ಪೆಕ್ಟರ್ ವಿರುದ್ಧ ಮಾಧ್ಯಮಕ್ಕೆ ಹೇಳಿಕೆ ನೀಡಿದ ಇನ್ನೊಬ್ಬ ಮಹಿಳೆ ಅವಿತಾ ಮಿನಾಗೆಸ್. ಅವರ ಪತಿಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಂದರಲ್ಲಿ ಅವರು ಬಿಡುಗಡೆಗೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಬಡ ವ್ಯಕ್ತಿಯ ಮೂತ್ರಪಿಂಡ ಚಿಕಿತ್ಸೆಗೆ ಸಂಗ್ರಹಿಸಿದ…
ಮಂಗಳೂರು : ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕರ ಕಚೇರಿಯ ಮೇಲ್ವಿಚಾರಣೆಯನ್ನು ಜಿಪಂ ಸಿಇಒ ಅವರಿಗೆ ವಹಿಸುವ ಸರಕಾರದ ಪ್ರಸ್ತಾವಿತ ಯೋಜನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮಾ.20ರಿಂದ ನಡೆಯಲಿರುವ ದ್ವಿತೀಯ ಪಿಯು ಮೌಲ್ಯಮಾಪನವನ್ನು ಬಹಿಷ್ಕರಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸುವ ಬಗ್ಗೆ ದ.ಕ. ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವಿವಿಧ ಸಂಘಗಳು ಸೋಮವಾರ ತೀರ್ಮಾನ ಕೈಗೊಂಡಿದೆ. ನಗರದ ರೆಡ್‌ಕ್ರಾಸ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ.ನವೀನ್ ಶೆಟ್ಟಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪಿಯು ವಿಭಾಗದ ಮೇಲೆ ಜಿಪಂ ಸಿಇಒ ಅವರು ಮೇಲ್ವಿಚಾರಣೆ ನಡೆಸುವ ಸಂಭವ ಎದುರಾಗಿದೆ. ಇದು ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಗೊಂಡರೆ ಪದವಿಪೂರ್ವ ಶಿಕ್ಷಣದ ಅಸ್ತಿತ್ವವೇ ಕಳೆದುಹೋಗಲಿದೆ. ಇದರ ವಿರುದ್ದ ಸರಕಾರಿ ಅನುದಾನಿತ ಉಪನ್ಯಾಸಕರ ಜತೆಗೆ ಅನುದಾನರಹಿತ ವಿಭಾಗದ ಎಲ್ಲಾ ಶಿಕ್ಷಕರು ಕೂಡ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಹೀಗಾಗಿ ಮೌಲ್ಯಮಾಪನ ಬಹಿಷ್ಕರಿಸಲು…
ಉಳ್ಳಾಲ: ತಾಲೂಕಿನ ಕಾಪಿಕ್ಕಾಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ (ರಿ.) ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕಬಡ್ಡಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 5ರಿಂದ ಪ್ರಾರಂಭವಾಗುವ ಈ ಶಿಬಿರವು ಪ್ರತಿದಿನ ಸಂಜೆ 4.30ರಿಂದ 6 ಗಂಟೆಯವರೆಗೆ ನಡೆಯಲಿದೆ. ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ಕ್ರೀಡಾ ಚಟುವಟಿಕೆಗಳತ್ತ ಆಸಕ್ತಿ ಬೆಳೆಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯುವ ಪ್ರತಿಭೆಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಮುಂದುವರೆಯಲು ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳ ಪೋಷಕರು ತರಬೇತಿ ಆರಂಭಕ್ಕೂ ಮೊದಲು ಹೆಸರು ನೋಂದಾಯಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9035578198 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸೋಮೇಶ್ವರ : ಇಲ್ಲಿನ ಮಣ್ಣಲ್ಲಿ ಸಣ್ಣ ಗುಡಿಯೊಂದು ಕೆಲವೇ ವರುಷಗಳಲ್ಲಿ ಪವಾಡ ಸದೃಶವಾಗಿ ಬೆಳೆದು ನಿಂತದನ್ನ ಕಂಡಾಗ ನಿಜಕ್ಕೂ ದಿಗ್ಭ್ರಮೆಯಾಗುತ್ತದೆ.ಭಕ್ತಿ ಶ್ರದ್ಧೆಯ ಆರಾಧನೆ ಮತ್ತು ದಾನ,ಧರ್ಮಗಳ ಆಧಾರದಡಿ ಯಾವುದೇ ಕ್ಷೇತ್ರಗಳ ಶಕ್ತಿ ಬೆಳಗುತ್ತದೆ.ರಕ್ತೇಶ್ವರಿ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆ ಕಳೆದ ಇಪ್ಪತ್ತೈದು ವರುಷಗಳಲ್ಲಿ ಸಾವಿರಾರು ಜನರಿಗೆ ಉಪಯುಕ್ತಕಾರಿ ಸಾರ್ಥಕ ಕಾರ್ಯಗಳನ್ನ ಮಾಡಿರುವ ಸೋಮೇಶ್ವರದ ರಕ್ತೇಶ್ವರಿ ಬಳಗದವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆಯೆಂದು ನಿವೃತ್ತ ಶಿಕ್ಷಕರಾದ ಕೆ.ಆರ್.ಚಂದ್ರ ಅಭಿಪ್ರಾಯಪಟ್ಟರು. ಸೋಮೇಶ್ವರದ ರಕ್ತೇಶ್ವರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆದ ರಕ್ತೇಶ್ವರೀ ಬಳಗದ 26ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೋಮೇಶ್ವರ ರಕ್ತೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಪತ್ರಕರ್ತರಾದ ವಿದ್ಯಾಧರ ಶೆಟ್ಟಿ,ಭಜಕರಾದ ನಾಗೇಶ್ ಗಟ್ಟಿ ಕೊಲ್ಯ,ಪ್ರಮುಖರಾದ ಸಂದೀಪ್ ಶೆಣೈ,ರಘುರಾಮ ಸುವರ್ಣ ಅವರನ್ನ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಸೋಮೇಶ್ವರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಅಧ್ಯಕ್ಷತೆ ವಹಿಸಿದ್ದರು.ಹೇಮಲತಾ ಆರ್.ಶೆಟ್ಟಿ,ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ರಾಮದಾಸ್ ಸೋಮೇಶ್ವರ ಉಪಸ್ಥಿತರಿದ್ದರು. ರಕ್ತೇಶ್ವರಿ ಬಳಗದ ಅಧ್ಯಕ್ಷರಾದ…
ಕೊಣಾಜೆ; ಇಂದಿನ ಆಧುನಿಕತೆಯಲ್ಲೊ ಮಹಿಳೆಗೆ ಸಮಾಜದಲ್ಲಿ ಹಲವಾರು ಅವಕಾಶಗಳು ಇವೆಯಾದರೂ ಅವಳೆದುರು ಅನೇಕ ಸವಾಲುಗಳೂ ಇವೆ. ಮಹಿಳೆಯು ಶಿಕ್ಷಣ,ಜ್ಞಾನ, ಕೌಶಲ್ಯ ಮೊದಲಾವುಗಳ ಮೂಲಕ ಸಮಾಜದ ಧ್ವನಿಯಾಗಬೇಕು. ವರ್ತಮಾನ ಕಾಲದ ಬದುಕಿನ ಸಂಗತಿಗಳನ್ನು ಬರವಣಿಗೆಯ ಮೂಲಕ ದಾಖಲಿಸುವ, ವಿಮರ್ಶಿಸುವ ಕಾರ್ಯ ಮಹಿಳೆಯರಿಂದ ಹೆಚ್ಚೆಚ್ಚು ಆಗಬೇಕು. ವೈಚಾರಿಕತೆಯು ನಮ್ಮ ಅಂಧಶ್ರದ್ಧೆಯನ್ನು ದೂರಮಾಡುತ್ತದೆ ಎಂದು ಬರಹಗಾರ್ತಿ, ಕವಿಯತ್ರಿ ಮಮತಾ ಅರಸಿಕೆರೆ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಮಂಗಳ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರುಶರಣರ ಕಾಲದಲ್ಲಿ ಕೆಳಸಮುದಾಯದ ಮಹಿಳೆಯರಿಗೆ ವಚನಗಳು ಹೇಗೆ ಮಾಧ್ಯಮವಾಗಿತ್ತೋ ಹಾಗೆಯೇ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಮಗ್ರ ಬೆಳವಣಿಗೆಗಾಗಿ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡದೆ ವಿವೇಚನಯುಕ್ತವಾಗಿ ಬಳಸಿಕೊಳ್ಳುವ ಚಾಕಚಕ್ಯತೆಯನ್ನು ಮಹಿಳೆ ಬೆಳೆಸಿಕೊಳ್ಳಬೇಕು ಎಂದರು. ಬೆಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಸಮತಾ ದೇಶ್ಮನೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನದ್ದು ಎಐ ಯುಗ, ಸಾಮಾಜಿಕ ಜಾಲತಾಣ ಸಕ್ರಿಯವಾಗಿದೆ. ತಂತ್ರಜ್ಞಾನದ…
ಕೊಣಾಜೆ: ಪ್ರೊ.ಜೋಗನ್ ಶಂಕರ್ ಅವರು ಸಮ ಸಮಾಜದ ನಿರ್ಮಾಣ ಹಾಗೂ ಸಮಾಜದ ನೈಜ ಅಭಿವೃದ್ಧಿಯ ಕನಸಿನೊಂದಿಗೆ ಸಮಾಜಕ್ಕೆ ಕೊಡುಗೆ ನೀಡಿದ ಸಮಾಜಶಾಸ್ತ್ರಜ್ಞರಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಸಮತಾ ದೇಶ್ಮನೆ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಮಂಗಳವಾರ ನಡೆದ ಪ್ರೊ.ಜೋಗನ್ ಶಂಕರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುವುದು ಶಿಕ್ಷಣದಿಂದ ಮಾತ್ರ ಎಂಬುದು ಅವರ ನಿಲುವುಗಿತ್ತು. ಸಮಾಜದ ಧನಾತ್ಮಕ ಚಿಂತಕರಾಗಿದ್ದ ಪ್ರೊ.ಜೋಗನ್ ಶಂಕರ್ ದೇವದಾಸಿ ಪದ್ದತಿಯ ಬಗ್ಗೆ ನಡೆಸಿದ ಹೋರಾಟ ಅವಿಸ್ಮರಣೀಯವಾದುದು. ದೇವದಾಸಿಯರ ಮಕ್ಕಳಿಗಾಗಿ ವಿಮೋಚನಾ ಶಾಲೆಯನ್ನು ತೆರದು ಶಿಕ್ಷಣ ನೀಡಿದ ಮಹಾನ್ ವ್ಯಕ್ತಿತ್ಚ ಅವರದ್ದು. ಶಿಕ್ಷಣದಿಂದಾಗಿ ಅದೆಷ್ಟೋ ದಲಿತ ಮಹಿಳೆಯರು ಸಮಾಜದ ಮುನ್ನಲೆಗೆ ಬಂದಿದ್ದಾರೆ. ಇಂತಹ ಪ್ರಾಧ್ಯಾಪಕರ ಹೆಸರಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದರು.ಕಾರ್ಯಕ್ರಮದಲ್ಲಿ ಕಲಾ ನಿಕಾಯದ ಡೀನ್ ಪ್ರೊ.ಪರಿಣಿತ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ತ್ರಿವೇಣಿ, ಪ್ರಾಧ್ಯಾಪಕರಾದ ಡಾ.ನರಸಿಂಹಯ್ಯ ಮೊದಲಾದವರು ಉಪಸ್ಥಿತರಿದ್ದರು. ವಿಭಾಗದ ಅಧ್ಯಕ್ಷರಾದ ಡಾ.ಗೋವಿಂದ ರಾಜು…
ಉಳ್ಳಾಲ:ಕೋಟೆಕಾರ್ ಹೆಲ್ಪ್ ಪ್ರೆಂಡ್ಸ್ ಹಿದಾಯತ್ ನಗರ ಇದರ ವತಿಯಿಂದ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇದರ ವಠಾರದಲ್ಲಿ ಮಾ.16 ಇಫ್ತಾರ್ ಸಂಗಮ ಜರುಗಿತು. ಸಂಘದ ಅಧ್ಯಕ್ಷರೂ ಕಾರ್ಯದರ್ಶಿ ಸದಸ್ಯರು ಉಪಸ್ಥಿತರಿದ್ದರು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ದುವಾ ಮಾಡಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ಸಂಘದ ಪ್ರಕಟನೆಯಲ್ಲಿ ತಿಳಿಸಿದ್ದಾರೆ,

