ತಲಪಾಡಿ ; ನಿಷೇಧಿತ ಇ-ಸಿಗರೇಟ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ.

ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಿದ್ದಪ್ಪ ನರನೂರ ಅವರ ನೇತೃತ್ವದಲ್ಲಿ,ರಾತ್ರಿ ವೇಳೆ ದಾಳಿ ನಡೆಸಿದ್ದಾರೆ. ತಲಪಾಡಿ ಗ್ರಾಮದ ಮೇಲಿನ ತಲಪಾಡಿ ಪ್ರದೇಶದಲ್ಲಿರುವ ನಮ್ಮತ್ ಮಂಝಿಲ್ ಎಂಬ ಮನೆಯ ಮುಂಭಾಗದಲ್ಲಿ ಬಿಳಿ ಗೋಣಿ ಚೀಲದಲ್ಲಿ ಇ-ಸಿಗರೇಟ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಆರೋಪಿ ನವಾಝ್ ವಶದಲ್ಲಿದ್ದ ವಿವಿಧ ಕಂಪನಿಗಳ ನಿಷೇಧಿತ ಇ-ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಸುಮಾರು ೩೭,೦೦೦ ಮೌಲ್ಯದ ಇ-ಸಿಗರೇಟ್‌ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವಸ್ತುಗಳು ಕೇಂದ್ರ ಸರ್ಕಾರದ ನಿಯಮಗಳಾದ Cigarettes and Other Tobacco Products Act, 2003 ºÁUÀÆ Packing and Labelling Rules, 2020 ಅಡಿಯಲ್ಲಿ ನಿಷೇಧಿತವಾಗಿವೆ.
ಆರೋಪಿಯ ವಿರುದ್ಧ ಸಂಬAಧಿತ ಕಾಯಿದೆಗಳಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.


