Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಇನೋವಾ ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಉಬ್ಬಿನಲ್ಲಿ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿ ಸೇತುವೆ ಕಾಮಗಾರಿಯ ಸರಳುಗಳಲ್ಲಿ ಸಿಕ್ಕಿಹಾಕಿಕೊಂಡು ನೀರಿಗೆ ಉರುಳಿದ ಚಾಲಕ ಪವಾಡಸದೃಶವಾಗಿ ಪಾರಾದ ಘಟನೆ ಸೋಮವಾರ ತಡರಾತ್ರಿ ಜೆಪ್ಪಿನಮೊಗರು ಕಂರ್ಭಿಸ್ಥಾನ ದ್ವಾರದ ಬಳಿ ಸಂಭವಿಸಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದೋಷಪೂರಿತ ಆಹಾರ ಪದಾರ್ಥಗಳಿಂದ ಆರೋಗ್ಯದಲ್ಲಿ ಆಗುವ ಏರುಪೇರುಗಳನ್ನು ಔಷಧಿಗಳಿಂದ ಗುಣಪಡಿಸಲು ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಯೋಗದಿಂದ ಮಾತ್ರ ಆರೋಗ್ಯದ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ ಎಂದು ಕೋಟೆಕಾರು ಶ್ರೀ ಸಿದ್ಧಿವಿನಾಯಕ ಕ್ಷೇತ್ರದ ಯಶವಂತ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಕೃಷ್ಣನಗರದ ಮುದ್ದುಕೃಷ್ಣ ಶಾಖೆಯಲ್ಲಿ ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆದ ಯೋಗನಡಿಗೆ, ಮಾತೃಪೂಜನ, ಮಾತೃಭೋಜನ ಮತ್ತು ಮಕ್ಕಳ ಚೈತನ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ, ಧರ್ಮ, ರಾಜಕೀಯವಿಲ್ಲದೆ ಪಡೆಯುವ ಯೋಗ ಶಿಕ್ಷಣ ಎಲ್ಲರನ್ನು ಒಗ್ಗಟ್ಟು ಮಾಡುವುದರ ಜತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಈ ಕಾರಣಕ್ಕಾಗಿ ಯೋಗದ ಕುರಿತ ಅರಿವು ಇನ್ನೂ ಆಗಬೇಕಿದೆ ಎಂದರು. ಯಾವುದೇ ಫಲಾಪೇಕ್ಷೆಯಿಲ್ಲದೆ ಯೋಗದ ಮೂಲಕ ಸಂಸ್ಕಾರವನ್ನು ಕಲಿಸುವ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಕಾರ್ಯವೈಖರಿ ಎಲ್ಲರೂ ಗೌರವಿಸಬೇಕು ಎಂದು ಮಂಗಳೂರಿನ ಪತಂಜಲಿ ಯೋಗಶಿಕ್ಷಣ ಕೇಂದ್ರ ಮಂಗಳುರು ವಲಯ ಅಧ್ಯಕ್ಷ ರವೀಶ್ ಹೇಳಿದರು. ಛಾಯಗ್ರಾಹಕ ಕ್ಲಿಕ್ ಅಶೋಕ್ ಉಪಸ್ಥಿತರಿದ್ದರು. ಅರುಣ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟುವಿನಲ್ಲಿ ನಡುರಾತ್ರಿಯಲ್ಲಿ ಬರ್ಬರವಾಗಿ ತಲವಾರು ದಾಳಿಗೊಳಗಾಗಿ ಹತ್ಯೆಗೀ ಡಾದ ರೌಡಿಶೀಟರ್ ಕೋಡಿಕಲ್ ನಿವಾಸಿ ವಿಕ್ರಂ ಬೋಳಾರ (29) ಖುದ್ದು ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಸೈಕೋ ವಿಕ್ಕಿಯನ್ನು ಹತ್ಯೆ ನಡೆಸಲು ಕುಂಪಲಕ್ಕೆ ಬಂದಿದ್ದ. ವಿಪರ್ಯಾಸವೆಂದರೆ ಹತ್ಯೆ ನಡೆಸಲು ಬಂದವನೇ ಹೆಣವಾಗಿ ಹೋಗಿದ್ದಾನೆ. ಮೆಹಂದಿ ಮನೆಯಲ್ಲಿ ನಡೆದಿತ್ತು ಗಲಾಟೆ: ಭಾನುವಾರ ರಾತ್ರಿ ಕುಂಪಲ ವಿದ್ಯಾ ನಗರ ನಿವಾಸಿ ರೋಹಿತ್ ಗಟ್ಟಿ ಎಂಬಾತನ ವಿವಾಹದ ಮೆಹಂದಿ ಕಾರ್ಯಕ್ರಮವಿತ್ತು. ಅಲ್ಲಿ ಸೈಕೋ ವಿಕ್ಕಿ ಸಹಿತ ಆತನ ಬಣದ ಸುಮಾರು 30ರಷ್ಟು ಮಂದಿ ಪಾರ್ಟಿ ಯಲ್ಲಿ ಭಾಗವಹಿಸಿದ್ದರು. ಪಾರ್ಟಿ ನಡೆಯುತ್ತಿದ್ದಂತೆ ಕ್ಷುಲ್ಲಕ ವಿಚಾರ ದಲ್ಲಿ ಅವರ ತಂಡದೊಳಗೆ ಗಲಾಟೆ ನಡೆದಿತ್ತು. ಇದನ್ನು ರೌಡಿಗಳ ವಿರೋಧಿ ಬಣಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಯುವಕನೋರ್ವ ಬೋಳಾರ ತಂಡದ ವಿಕ್ರಂ ಬೋಳಾರನಿಗೆ ಸುದ್ಧಿ ಮುಟ್ಟಿಸಿದ್ದ. ಅಲ್ಲದೆ `ಸೈಕೋ ಭಾರೀ ಹಾರಾಟ ನಡೆಸುತ್ತಿ ದ್ದಾನೆ, ಆತನಿಗೆ ಒಂದು ಗತಿ ಕಾಣಿಸಬೇಕು ಅಂದಿದ್ದ’ ನಂತೆ. ಬಜಿಲಕೇರಿಯಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಜಿಲ್ಲೆಯ ಜನರಿಗೆ ಕೃಷಿ ಬಿಟ್ಟರೆ, ಬೀಡಿ ಉದ್ಯಮ ಪ್ರಮುಖ ಉದ್ಯೋಗವಾಗಿದ್ದು, ಅದನ್ನೇ ಮುಚ್ಚಲು ಹೊರಟಿರುವ ಸರಕಾರ 3 ಕೋಟಿ ಕಾರ್ಮಿಕರನ್ನು ಉಪವಾಸದಿಂದ ಬದುಕಲು ಯತ್ನಿಸುತ್ತಿದೆ ಎಂದು ಜಿಲ್ಲಾ ಬೀಡಿ ಫೆಡರೇಶನ್ನಿನ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಉಳ್ಳಾಲದ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸೋಮವಾರ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ ಕೋಪ್ಟಾ ಹಿಂತೆಗೆಯಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಸರಕಾರಗಳು ಬೀಡಿ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಜಾರಿಗೊಳಿಸುತ್ತಿದೆ. ಇದರಿಂದ ಕಾರ್ಮಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಬೀಡಿ ಮಜೂರಿಯಲ್ಲಿ 12.75 ಪೈಸೆ ಹೆಚ್ಚಿಗೆ ಮಾಡಬೇಕೆಂಬ ಆದೇಶ ಇದ್ದರೂ, ಮಾಲೀಕರಿಗೆ ಹೊರೆಯಾಗುವುದೆಂಬ ಕಾರಣದಿಂದ ಒಂದು ವರ್ಷದಿಂದ ಅದನ್ನು ಹೆಚ್ಚಿಸದೆ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ವಿಶ್ವ ಅರೋಗ್ಯ ಸಂಸ್ಥೆ ತಂಬಾಕು ಉತ್ಪನ್ನಗಳಿಗೆ ಕರೆ ನೀಡಿದ್ದರೂ, ತಂಬಾಕು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗವನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಸಹಕಾರಿ ಸಂಘಗಳು ಹೆಚ್ಚಿದಷ್ಟು ವ್ಯಾವಹಾರಿಕ ಕ್ಷೇತ್ರವೂ ಬೆಳವಣಿಗೆ ಸಾಧ್ಯವಾಗುತ್ತದೆ. ಈ ಮೂಲಕ ಜನರ ಬದುಕು ಕೂಡಾ ಉತ್ತಮವಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ಕುಂಪಲ ಅಮೃತನಗರದಲ್ಲಿ ಆರಂಭಗೊಂಡ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು. ವ್ಯಾವಹಾರಿಕ ಕ್ಷೇತ್ರದಲ್ಲಿ ಪೈಪೋಟಿ ಇದ್ದರೆ ಮಾತ್ರ ಬೆಳೆಯಲು ಸಾಧ್ಯ. ಪೈಪೋಟಿ ಇಲ್ಲದಿದ್ದರೆ ತಾವು ಮಾಡಿದ್ದೇ ಸರಿ ಎಂಬ ಭಾವನೆ ಬರುತ್ತದೆ. ಹಾಗಾಗಿ ಸಾಮಾನ್ಯ ಜನರಿಗೂ ವ್ಯವಹಾರ ಮಾಡಲು ಅವಕಾಶ ಲಭಿಸುವಂತೆ ಮಾಡಿದ ಅನುಗ್ರಹ ಸೊಸೈಟಿ ನಿರ್ಮಾಣ ಕಾರ್ಯ ಶ್ಲಾಘನೀಯವಾಗಿದ್ದು ಭವಿಷ್ಯದಲ್ಲಿ ಎಲ್ಲ ಸೊಸೈಟಿಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯಲಿ ಎಂದರು. ನೂತನ ಕಟ್ಟಡ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ದಕ್ಷಿಣ ಜಿಲ್ಲೆ ಸಹಕಾರಿ ಕಾಶಿಯಾಗಿದ್ದು ಜಿಲ್ಲೆಯ ಸಹಕಾರಿ ರಂಗ ಅದ್ಭುತ ಸಾಧನೆ ಮಾಡಿದ್ದು ಶತಮಾನಗಳ ಇತಿಹಾಸವಿದೆ. ಅನುಗ್ರಹ ರಾಜ್ಯದ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ತೊಕ್ಕೊಟ್ಟು: ಬೋಳಾರದ ಎರಡು ರೌಡಿ ಬಣಗಳ ನಡುವಿನ ಮದುವೆ ಮನೆಯಲ್ಲಿ ಭುಗಿಲೆದ್ದ ವೈಷಮ್ಯ ಬೋಳಾರದ ವಿಕ್ರಂ.ಆರ್ ಯಾನೆ ವಿಕ್ಕಿ ಬೋಳಾರ (29) ಎಂಬಾತನ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಎದುರುಬಣದ ರೌಡಿ ಸೈಕೋ ವಿಕ್ಕಿ ತಂಡ ಹತ್ಯೆ ನಡೆಸಿದೆ ಎನ್ನಲಾಗಿದೆ. ಕುಂಪಲ ಮೂರುಕಟ್ಟದಲ್ಲಿ ತಮ್ಮ ಸ್ನೇಹಿತ ರೋಹಿತ್ ಎಂಬಾತನ ಮೆಹಂದಿ ಕಾರ್ಯಕ್ರಮದಲ್ಲಿ ಎರಡು ರೌಡಿಗಳ ತಂಡ ಭಾಗವಹಿಸಿತ್ತು. ಅಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯೊಂದು ನಡೆದಿತ್ತು. ಆ ಬಳಿಕ ಸೈಕೋ ವಿಕ್ಕಿ ಮನೆಯಿಂದ ಹೊರಹೋಗಿದ್ದನು. ಮತ್ತೆ ರಾತ್ರಿ ಸುಮಾರು 2.00 ಗಂಟೆ ವೇಳೆ ಪಾರ್ಟಿ ಮುಗಿಸಿ ಮಂಗಳೂರು ಕಡೆಗೆ ಅಭಿಲಾಷ್ ಶೆಟ್ಟಿ ಎಂಬಾತನ ಜತೆಗೆ ಬೋಳಾರ ವಿಕ್ಕಿ ಎಫ್.ಝೀ ಬೈಕಿನಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಅದಾಗಲೇ ಕುಂಪಲ ಬೈಪಾಸಿನ ಸಮೀಪ ಬಿಳಿ ಸ್ಕಾರ್ಪಿಯೋ ವಾಹನದಲ್ಲಿ ಸೈಕೋ ವಿಕ್ಕಿ, ಗೌರೀಶ್ ಮತ್ತೆ ಇನ್ನೋರ್ವ ಸೇರಿದ ತಂಡ ಸ್ಕಾರ್ಪಿಯೋ ವಾಹನದಲ್ಲಿ ಎದುರು ನಿಂತಿದ್ದರು. ಕೂಡಲೇ ಅಪಾಯವರಿತ ಬೋಳಾರ ವಿಕ್ಕಿ ಬೈಕನ್ನು ವೇಗ ಚಲಾಯಿಸುವಂತೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಚಾಲಕನ ಅತೀ ವೇಗದ ಅಜಾಗರೂಕತೆಯ ಚಾಲನೆಯಿಂದ ಆಟೋರಿಕ್ಷಾ ಪಲ್ಟಿ ಹೊಡೆದು ಒಂದೇ ಕುಟುಂಬದ ಆರು ಮಂದಿ ಆಸ್ಪತ್ರೆಗೆ ಸೇರಿದ ಘಟನೆ ಕುಂಪಲದಲ್ಲಿ ನಡೆದಿದೆ. ಕುಂಪಲದ ಸುರಕ್ಷಾ ನಗರದ ಸಂಭಂಧಿಯ ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಬಸ್ಸಿಗಾಗಿ ಕಾಯುತ್ತಿದ್ದ ಆರು ಮಂದಿ ಸಂಭಂಧಿಗಳನ್ನು ರಿಕ್ಷಾ ಚಾಲಕನು ಕುಂಪಲ ಬಾಲಕೃಷ್ಣ ಮಂದಿರದ ಬಳಿ ಹತ್ತಿಸಿಕೊಂಡು ಕುಂಪಲ ಸರಕಾರಿ ಶಾಲೆ ಕಡೆಗೆ ಇಳಿಜಾರು ರಸ್ತೆಯಲ್ಲಿ ಅತೀ ವೇಗದಿಂದ ಚಲಾಯಿಸಿ ಕೊಂಡು ಬಂದು ತಿರುವಿನಲ್ಲಿ ಏಕಾಏಕಿ ತಿರುಗಿಸಿದಾಗ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ.ಪರಿಣಾಮ ರಿಕ್ಷಾದಲ್ಲಿದ್ದ ಮಾಡೂರು ನಿವಾಸಿಗಳಾದ ನಿಶಿತ್(16)ತಂದೆ ವಿಶ್ವನಾಥ್ (42) ಬಲ್ಲಾಳ್ ಭಾಗ್ ನಿವಾಸಿಗಳಾದ ಭಾಸ್ಕರ್ (45) ಪತ್ನಿ ವನಿತಾ (38) ಮಗಳು ವಿನಿಶಾ (16) ಮತ್ತು ಶಕ್ತಿನಗರದ ಹಿತೇಶ್ (14) ಗಾಯಗೊಂಡು ನರಳಾಡುತ್ತಿದ್ದರೆ,ರಿಕ್ಷಾ ಚಾಲಕ ಪರಾರಿಯಾಗಿದ್ದು ,ಸ್ಥಳೀಯರು ರಿಕ್ಷಾವನ್ನು ಮೇಲಕ್ಕೆತ್ತಿ ಗಾಯಾಲುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಗೊಂಡವರಲ್ಲಿ ನಿಶಿತ್ (16)ನ ಎಡಗಾಲು ಮುರಿತಕ್ಕೊಳಗಾಗಿ ಶಸ್ತ್ರಕ್ರಿಯೆ ನಡೆಸಲಾಗಿದೆ.ನಿಶಿತ್ ಮಂಗಳೂರಿನ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ನಾಟೆಕಲ್ : ತಾಯಿ ಹಾಗೂ ಅಜ್ಜಿಯೊಂದಿಗೆ ಕಾಸರಗೋಡಿನ ತಳಂಗರೆ ಮಾಲಿಕ್ ದೀನಾರ್ ದರ್ಗಾಕ್ಕೆ ಝಿಯಾರತ್‌ಗೆ ತೆರಳಿದ್ದ ನಾಟೆಕಲ್ ಸಮೀಪದ ನಿವಾಸಿ ಸಹೋದರ ಬಾಲಕರಿಬ್ಬರು ಕೊಳವೆಯಲ್ಲಿ ಮುಳುಗಿ ದಾರುಣ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ನಾಟೆಕಲ್ ಸಮೀಪದ ಅನ್ವರ್ ಮತ್ತು ರೇಷ್ಮಾ ದಂಪತಿ ಮಕ್ಕಳಾದ ಅಲ್ತಾಫ್ (8), ಆತಿಫ್ (7) ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು. ಗುರುವಾರ ಬೆಳಿಗ್ಗೆ ಕಾಸರಗೋಡಿಗೆ ತೆರಳಿದ್ದ ಕುಟುಂಬ, ತಳಂಗೆರೆ ಮಾಲಿಕ್ ದೀನಾರ್ ದರ್ಗಾದಲ್ಲಿ ಝಿಯಾರತ್ ಮುಗಿಸಿದ್ದರು. ತಾಯಿ ಮತ್ತು ಅಜ್ಜಿ ಇಬ್ಬರೂ ದರ್ಗಾದಲ್ಲಿದ್ದ ಸಂದರ್ಭ, ಇಬ್ಬರು ಬಾಲಕರು ಸಮೀಪದಲ್ಲಿದ್ದ ಕೊಳವೆಯ ನೀರಿಗೆ ಇಳಿದು ಈಜಲು ಆರಂಭಿಸಿದ್ದರು. ಆದರೆ ಕೊಳದಲ್ಲಿ ನೀರು ಆಳವಾಗಿದ್ದರಿಂದಾಗಿ ಈಜು ಗೊತ್ತಿಲ್ಲದ ಮಕ್ಕಳು ಮುಳುಗಲು ಆರಂಭವಾಗುತ್ತಿದ್ದಂತೆ ಕೂಗಾಡಲು ಆರಂಭಿಸಿದ್ದರು. ಸದ್ದು ಕೇಳಿ ಸ್ಥಳೀಯರು ಕೊಳವೆ ಸಮೀಪ ಧಾವಿಸಿ ಮಕ್ಕಳನ್ನು ನೀರಿನಿಂದ ಮೇಲಕ್ಕೆತ್ತಿದರೂ, ಅಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿಯೂ ಹಾರಿಹೋಗಿತ್ತು. ಕಾಸರಗೋಡು ಚೌಕಿಯ ಅಜ್ಜಿ ಮನೆಗೆ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಬಾಲಕರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಗ್ರಾಮೀಣ ಪ್ರದೇಶಕ್ಕೆ ಕೇಂದ್ರ, ರಾಜ್ಯ ಸರಕಾರದ ಆರ್ಥಿಕ ಸೌಲಭ್ಯಗಳನ್ನು ಸೊಸೈಟಿ ಮುಖೇನ ನೀಡುವ ಉದ್ದೇಶದಿಂದ ಕುಂಪಲದ ಅಮೃತನಗರದ ನಿಸರ್ಗ ಪರಿಸರದಲ್ಲಿ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಅ.25 ರಂದು ಬೆಳಿಗ್ಗೆ 10.00ಕ್ಕೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಕುಂಪಲದ ಅನುಗ್ರಹ ಕಾ-ಆಪರೇಟಿವ್ ಸೊಸೈಟಿಯಲ್ಲಿ ಬುಧವಾರ ಹಮ್ಮಿಕೊಂಡ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸೊಸೈಟಿಯನ್ನು ಉದ್ಘಾಟಿಸಲಿದ್ದು, ಹೊಸ ಕಟ್ಟಡವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಹಿಸಲಿದ್ದಾರೆ. ಸೋಮೇಶ್ವರ ಗ್ರಾಮದಲ್ಲಿ ಕುಂಪಲ ದೊಡ್ಡ ಜನಸಂಖ್ಯೆಯುಳ್ಳ ಪ್ರದೇಶವಾಗಿದೆ. ಕಳೆದ 15 ವರ್ಷಗಳ ಹಿಂದೆ ಪ್ರದೇಶ ತೀರಾ ಹಿಂದುಳಿದಿತ್ತು. ಇದೀಗ ಪ್ರದೇಶ ಸಾಮಾಜಿಕ , ಧಾರ್ಮಿಕ ಇನ್ನಿತರ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಈ ಭಾಗಕ್ಕೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಸಿಂಗಾಪುರ ಮೂಲದ ಕೆಇಎಫ್ ಹೋಲ್ಡಿಂಗ್ಸ್ ನ ಅಂಗ ಸಂಸ್ಥೆಯ ಕೆಇಎಫ್ ಇನ್ಫ್ರಾ ಸಂಸ್ಥೆ ಭಾರತದಲ್ಲಿ ಪ್ರಥಮವಾಗಿ ಫ್ಯಾಕ್ಟರಿಯಲ್ಲಿ ತಯಾರಿಸಿದ ಮೆರಿಡಿಯನ್ ವಸತಿ ಸಮುಚ್ಛಯವನ್ನು ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಬುಧವಾರ ಉದ್ಘಾಟಿಸಿದರು. ಕೆಇಎಫ್ ಕ್ರೋನಿಕಲ್ಸ್ ವಿಶೇಷ ಸುದ್ಧಿ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಕಡಿಮೆ ಅವಧಿ ಹಾಗೂ ಖರ್ಚಿನಲ್ಲಿ ನೂತನ ತಂತ್ರಜ್ಞಾನಗಳೊಂದಿಗೆ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಸರಕಾರ ಹೆಚ್ಚಿನ ಚಿಂತನೆ ನಡೆಸಲಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸರಕಾರಿ ಸಂಬಂಧಿ ಕಟ್ಟಡಗಳನ್ನು ಇದೇ ತಂತ್ರಜ್ಞಾನದೊಂದಿಗೆ ನಿರ್ಮಿಸುವುದರ ಮೂಲಕ ಕಡಿಮೆ ಅನುದಾನಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಎಂದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವಂತದ್ದಾದ ಮನೆ ಹೊಂದುವ ಕನಸಿದ್ದು ಅದು ಈಡೇರುವಲ್ಲಿ ಕೆಇಎಫ್ ಇನ್‍ಫ್ರಾ ತಂತ್ರe್ಞÁನದಲ್ಲಿ ನಿರ್ಮಿಸಲಾಗುವ ಮನೆ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ…

Read More