Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ದೈಹಿಕ ಕಸರತ್ತಿಗೆ ಕ್ರೀಡೆ ಅತೀ ಮುಖ್ಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳನ್ನು ಇಂದಿನ ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತುಳುನಾಡು ಚಿಟ್ಸ್ ಪ್ರೈವೆಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಸಂದೇಶ ಶೆಟ್ಟಿ ಕೊಳ್ಕೆ ಅಭಿಪ್ರಾಯಪಟ್ಟರು. ಅವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಐದು ಗ್ರಾಮಗಳ ಪುರುಷರಿಗಾಗಿ ಮುಕ್ತ ವಾಲಿಬಾಲ್ ಪಂದ್ಯಾಟ ಚೈತನ್ಯ ಕಪ್ -2015 ಹಾಗೂ ಮೂರು ಗ್ರಾಮಗಳ ಪುರುಷರಿಗಾಗಿ ಮುಕ್ತ ಕಬಡ್ಡಿ ಪಂದ್ಯಾಟ ಸೌಜನ್ಯ ಕಪ್ -2015ಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್‍ದಾಸ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳೇಕಲ ಮದನಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಆನಂದ ಕೆ. ಅಸೈಗೋಳಿ, ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮುಸ್ತಾಫ, ರಾಷ್ಟ್ರೀಯ ಕ್ರೀಡಾಪಟು ಟಿ.ವಿ. ಅಂಬು, ಅತ್ತಾವರ ಶಾಖೆಯ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಎಂ. ಪರಮೇಶ್ವರ, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಸದಸ್ಯ ಸೋಮಶೇಖರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುನ್ನೂರು : ಸಂಘಟನೆಗಳು ಸ್ಥಾಪನೆಯಾದರೆ ಸಾಲದು ನಿರಂತರ ಚಟುವಟಿಕೆಯ ಮೂಲಕ ಜನಪರ ಕಾರ್ಯ ನಿರ್ವಹಿಸುವುದರೊಂದಿಗೆ ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿದಾಗ ಸಂಘಟನೆಗಳು ಯಶಸ್ವಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಗಾಳದ ಕೊಂಕಣಿ ಅಭ್ಯದಯ ಸಂಘ ಸಮಾಜಕ್ಕೆ ಮಾದರಿ ಎಂದು ಉಡುಪಿ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದಲ್ಲಿ ನಡೆದ `ಗಾಳದ ಕೊಂಕಣಿ ಅಭ್ಯುದಯ ಸಂಘ’ ಇದರ ಷಷ್ಠ್ಯಾಬ್ದಿ ಮಹೋತ್ಸವ ಸಂಭ್ರಮ-2015ರ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಘವು ಬೆಳೆದು ಬಂದ ಹಾದಿಯ “ನವಸೌರಭ”ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಸಂಘಗಳು ಹುಟ್ಟುವುದು ಸಾಮಾನ್ಯ ,ಆದರೆ ಅದನ್ನು ಪೋಷಿಸಿ ಬೆಳೆಸುವ ಪರಿ ಕಷ್ಟಸಾಧ್ಯ.ಸರಕಾರದ ಪ್ರತಿನಿಧಿಗಳಿಗೂ ತಮ್ಮ ಅಹವಾಲುಗಳನ್ನು ಮುಟ್ಟಿಸಲು ಸಂಘಟನೆಗಳೇ ಪ್ರಬಲ ಮಾಧ್ಯಮ. ಸಮಾಜದ ಪ್ರತಿಯೊಬ್ಬರಲ್ಲಿಯೂ ನಾಯಕತ್ವದ ಗುಣಗಳಿದ್ದು ಅದನ್ನು ಬೆಳಕಿಗೆ ತರುವ ಕಾರ್ಯ ಸಂಘಟನೆಗಳಿಂದ ನಡೆಯಬೇಕು ಎಂದ ಅವರು ಸೋಮನಾಥ ಉಳಿಯ ಕ್ಷೇತ್ರದಲ್ಲೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ಮೂವರು ಮಹಿಳೆಯರನ್ನು ಈಜುರಕ್ಷಕ ದಳದ ಯುವಕರು ರಕ್ಷಿಸಿದ ಘಟನೆ ಉಳ್ಳಾಲ ಮೋಗವೀರಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಸಾಂದರ್ಭಿಕ ಚಿತ್ರ ಬೆಂಗಳೂರು ಹಾಗೂ ಮಡಿಕೇರಿ ಮೂಲದ ಕುಟುಂಬವೊಂದರ ಹತ್ತು ಜನ ಸದಸ್ಯರು ಉಳ್ಳಾಲ ದರ್ಗಾಕ್ಕೆ ಬೇಟಿ ನೀಡಿದ್ದರು. ನಂತರ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಇವರು ಸಮುದ್ರಕ್ಕೆ ಇಳಿದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ನೀರು ಪಾಲಾಗುತ್ತಿದ್ದ ಇವರನ್ನು ಸ್ಥಳೀಯ ಈಜುಗಾರರ ತಂಡದ ಯುವಕರು ರಕ್ಷಿಸಿದ್ದಾರೆ. ಬೆಂಗಳೂರು ಮೂಲದ ನೂರ್ ಜಹಾನ್ (45) ನಾಫೀಯಾ (30) ಮಡಿಕೇರಿಯ ಖೈರುನ್ನೀಸಾ (28) ಸಮುದ್ರ ಪಾಲಾಗುತ್ತಿದ್ದವರು ಎಂದು ತಿಳಿದು ಬಂದಿದೆ. sಸ್ಥಳೀಯ ಮೊಗವೀರ ಪಟ್ಣದ ಈಜುಗಾರ ದೀಕ್ಷಿತ್ ಕರ್ಕೆರಾ ,ಶಿವನ್ ಬಂಗೇರ ,ಧನರಾಜ್ ಪುತ್ರನ್ ,ರೋಶನ್ ಸುವರ್ಣ , ಸುಧೀರ್ ,ಕಿಶೋರ್ ಸಮುದ್ರ ಪಾಲಾಗುತ್ತಿದ್ದ ಮಹಿಳೆಯರನ್ನು ರಕ್ಷಿಸಿದ ಯುವಕರು. ಘಟನೆಯಲ್ಲಿ ನಾಫಿಯಾ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರೆ, ನೂರ್ ಜಹಾನ್ ಮತ್ತು ಖೈರುನ್ನೀಸಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪಂಪ್‍ವೆಲ್ ಬಂದ್ ಯಶಸ್ವಿಯಾಗಿ ನೆರವೇರಿದೆ. ನಗರದ ಪಂಪ್ ವೆಲ್ ವೃತ್ತದ ಬಳಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ವಿಜಯ್ ಕುಮಾರ್ ಶೆಟ್ಟಿ ರಾಜ್ಯಸರಕಾರವು ಆದಷ್ಟು ಬೇಗ ಈ ಯೋಜನೆಯನ್ನು ಕೈಬಿಡಲಿ ಎಂದು ಒತ್ತಾಯಿಸಿದರು. ಈ ಯೋಜನೆಯ ನಿಲ್ಲಿಸುವಂತೆ ಮುಖ್ಯಮಂತ್ರಿಯ ಜೊತೆಗೆ ಹಲವು ಬಾರಿ ತಿಳಿಸಿದ್ದೇವೆ ಆದರೆ ಅವರು ನಮ್ಮ ಮಾತಿಗೆ ಬೆಲೆ ನೀಡಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ನೇತ್ರಾವತಿ ಉಳಿಸಿ ಎಂಬ ಘೋಷಣೆ ಎಲ್ಲ ಕಡೆಯಲ್ಲಿ ಕೇಳಿಬರುತ್ತಿದ್ದು, `ಸುದೆ ಮಾರುನ ಮಾರಿಲು'(ನದಿಯನ್ನು ಮಾರಾಟ ಮಾಡುವ ಮಾರಿಗಳು) ಎಂಬ ಘೋಷಣೆಗಳನ್ನು ಒತ್ತಿ ಒತ್ತಿ ಕೂಗುವ ಮೂಲಕ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೊಳ್ಳ, ನೇತ್ರಾವತಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಡಾ.ನಿರಂಜನ್ ರೈ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಒಕ್ಕೂಟ ನೀಡಿದ ಪಂಪ್‍ವೆಲ್ ಬಂದ್‍ಗೆ ಹಿಂದೂ ಯುವ ಸೇನೆ ಪೂರ್ಣ ಬೆಂಬಲ ನೀಡಿದೆ. ಸಾಂದರ್ಭಿಕ ಚಿತ್ರ ನಾಳೆ ನಡೆಯಲಿರುವ ಪಂಪ್ ವೆಲ್ ಬಂದ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಯುವ ಸೇನೆಯ ಎಲ್ಲಾ ಶಾಖೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಯುವ ಸೇನಾ ಕೇಂದ್ರ ಕಚೇರಿಯಿಂದ ಜಾಥಾದ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಲಿಕ್ಕಿದ್ದು, ನೇತ್ರಾವತಿ ಹೋರಾಟಕ್ಕೆ ಜಯ ಸಿಗುವವರೆಗೆ ನಮ್ಮ ಸಹಕಾರ ಇರುತ್ತದೆ ಎಂದು ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಕಾರ್ಯದರ್ಶಿ ಪದ್ಮನಾಭ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ 2015 ನೇ ಸಾಲಿನ ಪ್ರತಿಭೋತ್ಸವದ ತೊಕ್ಕೊಟ್ಟು ಸೆಕ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಎಸ್ಸೆಸ್ಸೆಫ್ ಅಳೇಕಲ ಶಾಖೆಯು ಚಾಂಪಿಯನ್ ಆಗಿ ಹೊರಹೊಮ್ಮಿತು. ಸಬ್ ಜೂನಿಯರ್ ವಿಭಾಗದಲ್ಲಿ ರಿನಾಝ್ ತಂಙಳ್ ಹಾಗೂ ಜನರಲ್ ವಿಭಾಗದಲ್ಲಿ ಜಂಶೀರ್ ಅಳೇಕಲ ವ್ಯಯಕ್ತಿಕ ಚಾಂಪಿಯನ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡರು. ಜವಾಹಿರ್ ತಂಙಳ್, ಹಾಫಿûಳ್ ಮುಹಮ್ಮದ್ ಇರ್ಷಾದ್, ಮುಹಮ್ಮದ್ ಆಶಿಕ್, ಮುಹಮ್ಮದ್ ಕೈಸ್, ರಹ್ಮತ್ ತಾಝಿಲ್, ಅಬೂಬಕ್ಕರ್ ನಾಝಿಮ್, ಮುಹಮ್ಮದ್ ಸುಫೈದ್, ಮುಹಮ್ಮದ್ ನೌಫನ್, ಮುಹಮ್ಮದ್ ಇಸ್ತಿಹಾಕ್, ಮುಹಮ್ಮದ್ ಹಫೀಪ್, ಅನ್ನಜಾತ್ ದಪ್ ತಂಡ, ಲದಲ್ ಹಬೀಬ್ ಬುರ್ದಾ ತಂಡ ಪ್ರಥಮ ಸ್ಥಾನ ಪಡೆದಿದೆ ಎಂದು ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಪ್ರತಿಭೋತ್ಸವ ಕನ್‍ವೀನರ್ ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಈ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಉಚಿತ ಕೃತಕ ಕಾಲುಜೋಡಣೆ, ಉಚಿತ ಕೃತಕ ದಂತಪಂಕ್ತಿ ಜೋಡಣಾ , ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವು ಅ.19ರಿಂದ ಅ.25ರ ವರೆಗೆ ಹಾಗೂ ಅ.28ರಿಂದ ಅ.30ರವರೆಗೆ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಜೈಪುರ್ ಇವರ ಸಹಕಾರದೊಂದಿಗೆ ಉಚಿತ ಕೃತಕ ಕಾಲುಜೋಡಣೆ ಅ.28ರಿಂದ ಅ.30ರವರೆಗೆ ನಡೆಯಲಿದೆ. ಹಾಗೂ ಪ್ರಾಸ್ಧೊಡೋಂಟಿಕ್ಸ್ ವಿಭಾಗ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಮಂಗಳೂರು ಇಲ್ಲಿನ ದಂತ ವೈದ್ಯರಿಂದ ಉಚಿತ ದಂತಪಂಕ್ತಿ ಜೋಡಣಾ ಶಿಬಿರ ಅ.19ರಂದು ನಡೆಯಲಿದ್ದು. ಮೊದಲ ಹಂತದ ಬಾಯಿ ತಪಾಸಣೆ ಹಾಗೂ ಆಳತೆಯನ್ನು ಮಾಡಲಾಗುವುದು. ಈ ದಿನ ಆಯ್ದ ಫಲಾನುಭವಿಗಳಿಗೆ ಅ.25ರಂದು ಕೃತಕ ದಂತಪಂಕ್ತಿಯನ್ನು ಜೋಡಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಪ್ರಕಟನೆ ತಿಳಿಸಿದೆ. ಉಚಿತ ಕೃತಕ ಕಾಲುಜೋಡಣೆಗೆ ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ…

Read More

ನವದೆಹಲಿ: ಉತ್ತರ ಪ್ರದೇಶದ ದಾದಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಸುಮ್ಮನಿದ್ದು ಪ್ರತಿ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿದ್ದ ಪ್ರಧಾನಮಂತ್ರಿ ಮೋದಿ ಕೊನೆಗೂ ಮೌನವನ್ನು ಮುರಿದು, ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದ ಸುಳ್ಳು ವದಂತಿಯಿಂದ ಮುಸ್ಲಿಂ ವ್ಯಕ್ತಿಯ ಹತ್ಯೆ ಪ್ರಕರಣ ಹಾಗೂ ಪಾಕ್ ಗಾಯಕ ಗುಲಾಂ ಆಲಿ ಕಾರ್ಯಕ್ರಮ ರದ್ದಾಗಿರುವುದು ದುರದೃಷ್ಟಕರ. ಇಂತಹ ಕೃತ್ಯಗಳಿಗೆ ಬಿಜೆಪಿ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಆಂಗ್ಲಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂತಹ ಘಟನೆಗಳು ಹಿಂದೆಯೂ ನಡೆದಿದ್ದವು, ಬಿಜೆಪಿ ಸುಳ್ಳು ಜಾತ್ಯಾತೀತವಾದವನ್ನು ವಿರೋಧಿಸುತ್ತದೆ. ವಿರೋಧ ಪಕ್ಷಗಳು ಇಂತಹ ಘಟನೆಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ, ಮಾತುಕತೆಯಿಂದ ಇಂತಹ ಘಟನೆಗಳಿಗೆ ಅಂತ್ಯ ಹಾಡಬಹುದು ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪಶ್ಚಿಮ ಘಟ್ಟ ಮತ್ತು ನೇತ್ರಾವತಿ ನದಿ ಮೂಲಕ್ಕೆ ತೀರಾ ಹಾನಿಯಾಗಲಿರುವ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬದುಕಿಗೆ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆಯಾಗಲಿರುವ, ಮೀನುಗಾರರಿಗೆ ತೊಂದರೆಯಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಜಿಲ್ಲೆಯ ಜನರು ವಿರೋಧಿಸಿ, ಪ್ರತಿಭಟಿಸುತ್ತಿದ್ದರೂ ಸರಕಾರವು ಈ ಯೋಜನೆಯನ್ನು ಮಾಡಿಯೇ ತೀರುವುದೆಂಬ ಹಠಕ್ಕೆ ಬಿದ್ದಿರುವುದು ಖಂಡನೀಯ. ಜಿಲ್ಲೆಯ ಜೀವನಾಡಿಯಾಗಿರುವ ತಾಯಿ ನೇತ್ರಾವತಿಯನ್ನು ಉಳಿಸುವುದು ಎಲ್ಲರ ಪ್ರಾಮಾಣಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಅ. 15ರಂದು ನಡೆಯುವ ರಸ್ತೆ ತಡೆ ಚಳುವಳಿಗೆ ಉಳ್ಳಾಲ ನೇತ್ರಾವತಿ ನದಿ ತಿರುವು ಸಮಿತಿ, ತೊಕ್ಕೊಟ್ಟು ಶ್ರೀ ವಿದ್ಯಾಗಣಪತಿ ರಾಮ ಸೇವಾ ಸಮಿತಿ ಹೋರಾಟವನ್ನು ಬೆಂಬಲಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಅ. 13 ಮಂಗಳವಾರದಿಂದ, 21ರ ಬುಧವಾರದರ ವರೆಗೆ ನವರಾತ್ರಿ ಉತ್ಸವ ಹಾಗೂ ಅ. 27ರಂದು ಮಂಗಳವಾರ ತುಲಾಪತ್ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Read More