ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಸಂಶೋಧನಗೆಳಲ್ಲಿ ಬಲವಾದ ವೈಜ್ಞಾನಿಕ ಆಧಾರಗಳ ಅಭಿವೃದ್ಧಿ ಜತೆಗೆ ಮೂಲಭೂತ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಲಂಡನ್ನಿನ ಯುನೈಟೆಡ್ ಕಿಂಗ್ಡಂ ನ ವೆಲ್‍ಕಂ ಟ್ರಸ್ಟ್‍ನ ಹಿರಿಯ ಸಲಹೆಗಾರ ಡಾ.ಶಿರ್ಷೇಂಧು ಮುಖರ್ಜಿ ಹೇಳಿದ್ದಾರೆ.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್. ಮೆಡಿಕಲ್ ಅಕಾಡೆಮಿ ನೇತೃತ್ವದಲ್ಲಿ ನಿಟ್ಟೆ ವಿ.ವಿ.ಯ ಕೇಂದ್ರ ಸಂಶೋಧನಾ ಪ್ರಯೋಗಾಲಯ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ` ವೈದ್ಯಕೀಯ ಸಂಶೋಧನಾ ವಿಧಾನ’ ಕುರಿತ ರಾಷ್ಟ್ರೀಯ ಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಚಾರಿಟಿಯಾಗಿ ವೆಲ್‍ಕಂ ಟ್ರಸ್ಟ್ ಮಾನವ ಜೀವನದ ಸಂಪತ್ತು ಕುರಿತು ಕೆಲಸಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಸಂಶೋಧನೆಗಳಲ್ಲಿ ಎಲ್ಲರೂ ಒಂದೇ ವಿಷಯದಲ್ಲಿ ಮುಂದುವರಿದಲ್ಲಿ ಪರಿಣಾಮಕಾರಿಯಾಗದು. ಒಂದೇ ವಿಷಯವನ್ನು ವಿಭಿನ್ನವಾಗಿ ಯೋಚಿಸಿ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಲ್ಲಿ ಯಶಸ್ವಿಯಾಗಬಹುದು ಎಂದರು.
ಕ್ಷೇಮ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ತಜ್ಞೆ ಡಾ.ವಿಜಯಾ ಶೆಣೈ, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಸುಚೇತಾ ಕುಮಾರಿ ಮುಖ್ಯ ಅತಿಥಿಗಳಾಗಿದ್ದರು.


