Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಸೋಮವಾರ ಮುಂಜಾನೆ ಮಸೀದಿ ಗುರುಗಳಿಗೆ ಯುವಕರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಡಿಪು ಬಾಳೆಪುಣಿ ಗ್ರಾಮದ,ಮುದುಂಗರ ಕಟ್ಟೆಯಲ್ಲಿ ನಡೆದಿದೆ. ಮುನೀರ್ ಅಹಮದ್ ಸಖಾಫಿ ಎಂಬವರೇ ಯುವಕರಿಂದ ಮಾರಣಾಂತಿಕ ಹಲ್ಲೆಗೊಳಗಾದವರು. ಮುನೀರ್ ಅವರು ಕೆ.ಸಿ ರೋಡ್ ಮಸೀದಿಯಲ್ಲಿ ಕಳೆದ ಒಂದೂವರೆ ವರುಷದಿಂದ ಗುರುಗಳಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದು ,ಸೋಮವಾರ ಮುಂಜಾನೆ ವೇಳೆ ಸಾಲೆತ್ತೂರು ಕೊಲ್ನಾಡು ಗ್ರಾಮದ ,ಅಗರಿ ಹೌಸ್ ನಲ್ಲಿರುವ ತನ್ನ ಮನೆಗೆ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಮುಡಿಪು ,ಮುದುಂಗರ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಎರಡು ಬೈಕುಗಳಲ್ಲಿ ಬಂದ ಐದು ಯುವಕರು ಮುನೀರ್ ಅವರ ಬೈಕಿಗೆ ಅಡ್ಡಗಟ್ಟಿ ರಾಡು ಮತ್ತು ಸೋಂಟೆಗಳಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಹಲ್ಲೆ ನಡೆಸಿದವರನ್ನು ಸ್ಥಳೀಯರು ಕಣ್ಣಾರೆ ಕಂಡಿದ್ದು ಈ ಬಗ್ಗೆ ಕೊಣಾಜೆ ಪೊಲೀಸರಲ್ಲಿ ದೂರು ನೀಡಲು ತೆರಳಿದಾಗ ಹಲ್ಲೆ ನಡೆಸಿದ ಆರೋಪಿಗಳು ಪೊಲೀಸ್ ಠಾಣೆಯ ಮುಂದುಗಡೆ ಜಮಾಯಿಸಿದರೆನ್ನಲಾಗಿದೆ ,ಅವರನ್ನ ಬಂಧಿಸುವಂತೆ ಹೇಳಿದಾಗ ಠಾಣಾಧಿಕಾರಿ ಸುಧಾಕರ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಟಿಪ್ಪು ಜಯಂತಿ ಆಚರಣೆ ವೇಳೆ ಉಳ್ಳಾಲದಲ್ಲಿ ನಡೆದ ಅಹಿತಕರ ಘಟನೆ ವೇಳೆ ಉದ್ರಿಕ್ತ ಜನರನ್ನು ಚದುರಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ನಗರಸಭಾ ಸದಸ್ಯರಿಬ್ಬರಿಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿ ,ಧರ್ಮನಿಂದನೆ ಮಾಡಿದ ಪೋಲೀಸರ ವಿರುದ್ಧ ಸಂತ್ರಸ್ತ ಕೌನ್ಸಿಲರ್ ಹನೀಫ್ ಕೋಟೆಪುರ ಅವರು ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಟಿಪ್ಪು ಜಯಂತಿ ವಿವಾದದಲ್ಲಿ ಉಳ್ಳಾಲದಲ್ಲಿ ಅಹಿತಕರ ಘಟನೆಗಳು ನಡೆದಿದ್ದ ಸಂದರ್ಭ ನ.13 ರಂದು ರಾತ್ರಿ ಉಳ್ಳಾಲ ವೀರಭಧ್ರ ದೇವಸ್ಥಾನದ ಬಳಿ ಇಕ್ಬಾಲ್ ಎಂಬವರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಗಳ ಪತ್ತೆಯಲ್ಲಿದ್ದ ಸಂದರ್ಭ ಮೊಗವೀರಪಟ್ನ ಸಮೀಪ ಇದ್ದ ಮೂವರು ಯುವಕರು ಸಮುದ್ರ ಹಾರಿ ಪರಾರಿಯಾಗಲು ಯತ್ನಿಸಿದ್ದರು. ಈ ಸಂಧರ್ಭ ಸಮುದ್ರದಲ್ಲಿ ನಾಡದೋಣಿ ಮೂಲಕ ಬಂದ ಮತ್ತೊಂದು ಕೋಮಿನ ಯುವಕರು ಮೊಗವೀರ ಪಟ್ಣದ ಯುವಕರಿಗೆ ಹಲ್ಲೆ ಮಾಡಿ ಕರಾವಳಿ ರಕ್ಷಣಾ ಪಡೆಗೆ ಸೆರೆ ಸಿಕ್ಕಿದ್ದರು. ಇದೇ ವೇಳೆ ಕೋಟೆಪುರದಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಂಘ ಸಂಸ್ಥೆಗಳು ,ಆಸ್ಪತ್ರೆಗಳು ಸೇರಿ ನಡೆಸುವ ಉಚಿತ ಆರೋಗ್ಯ ಶಿಬಿರಗಳಲ್ಲಿ ತಾತ್ಸಾರ ಮನೋಭಾವವಿರಿಸದೆ ಮುಕ್ತವಾಗಿ ಭಾಗವಹಿಸಿದಲ್ಲಿ ಸಾರ್ವಜನಿಕರು ಉತ್ತಮ ಆರೋಗ್ಯ ಬೆಳೆಸಲು ಸಾಧ್ಯ ಎಂದು ಮಂಗಳೂರು ಕೆಎಮ್‍ಸಿ ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಹರ್ಬರ್ಟ್ ಮರಿಯೊ ಪಿರೇರ ಅವರ ಅಭಿಪ್ರಾಯ ಪಟ್ಟರು . ಅವರು ಆತ್ಮ ಶಕ್ತಿ ವಿವಿದ್ಧೋದ್ಧೇಶ ಸಹಕಾರಿ ಸಂಘ(ನಿ) ಉಳ್ಳಾಲ ಶಾಖೆ ಮತ್ತು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ಘಟಕ ಬಂಡಿಕೊಟ್ಯ ,ಉಳ್ಳಾಲ ಇವರ ಜಂಟಿ ಆಶ್ರಯದಲ್ಲಿ ಭಾನುವಾರದಂದು ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ನಡೆದ “ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು “ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡ ವರ್ಗದ ಜನರು ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಯಿಂದ ವಂಚಿತರಾಗಿದ್ದು ,ಅವರ ಉಪಯೋಗಕ್ಕೆಂದೇ ಕೆಎಮ್‍ಸಿ ಆಸ್ಪತ್ರೆಯು ಇಂತಹ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದು ,ಎಲ್ಲರಿಗೂ ಉತ್ತಮ ಆರೋಗ್ಯ ನೀಡಲು ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.ಅಲ್ಲದೆ ಆಸ್ಪತ್ರೆಗೆ ತಪಾಸಣೆ ಮತ್ತು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಭಾರತೀಯ ಸಂಸ್ಕøತಿ, ಯೋಗ ಪದ್ದತಿಯು ಅಭೂತಪೂರ್ವವಾದದ್ದು ಇತ್ತೀಚೆಗೆ ವಿಶ್ವದೆಲ್ಲೆಡೆ ಮನ್ನಣೆ ಸಿಗುತ್ತಿದ್ದು ಹೆಮ್ಮೆಯ ವಿಚಾರವಾಗಿದೆ. ಹಲವಾರು ಶತಮಾನಗಳ ಹಿಂದೆಯೇ ಆರ್ಯುವೇದ ಹಾಗೂ ಇಲ್ಲಿಯ ಸಂಸ್ಕøತಿಯು ಶ್ರೀಮಂತವಾಗಿತ್ತು. ಆದರೆ ಬ್ರಿಟೀಷರ ಒಡೆದು ಆಳುವ ನೀತಿಯಿಂದಾಗಿ ಇದರ ಮಹತ್ವದ ಬಗ್ಗೆ ನಮಗೇ ಅರಿವಿರಲಿಲ್ಲ. ಆರ್ಯುವೇದ ಎಂದರೆ ಜೀವನ ಪದ್ದತಿ. ಯಾವುದರಿಂದ ಹಿತ, ಯಾವುದರಿಂದ ಅಹಿತವಾಗುತ್ತದೋ, ಯಾವುದರಿಂದ ಒಳ್ಳೆಯ ಜ್ಞಾನವನ್ನು ಪಡೆಯಬಹುದೋ ಅದೇ ಆರ್ಯರ್ವೇದವಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ.ಜ್ಞಾನೇಶ್ವರ ನಾಯಕ್ ಅವರು ಅಭಿಪ್ರಾಯ ಪಟ್ಟರು. ಅವರು ಶ್ರೀ ಮಹಾಕಾಳಿ ಮಿತ್ರಮಂಡಳಿ, ಮಾತೃ ಮಂಡಳಿ ಕುಂಟಾಳಗುಳಿ ಹಾಗೂ ಪತಂಜಲಿ ಯೋಗ ಸಮಿತಿ ಮುಡಿಪು ಇದರ ಆಶ್ರಯದಲ್ಲಿ ಕೊಣಾಜೆ ಗ್ರಾಮದ ಕುಂಟಾಲಗುಳಿ ವನಸಾನ್ನಿಧ್ಯದಲ್ಲಿ ಭಾನುವಾರ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶದಿಂದ ಯಾರೂ ದಂಡೆತ್ತಿ ಹೋಗಿಲ್ಲ. ವಿಶ್ವದ ಅತ್ಯಂತ ಸಹಿಷ್ಣುವಾದ ದೇಶ ಎಂದರೆ ಅದು ಭಾರತ ಮಾತ್ರ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾನೀರ್: ಪ್ರಾಯವಾಗುತ್ತಿದ್ದಂತೆ ಒಂದೊಂದೇ ಕಾಯಿಲೆ ಮನುಷ್ಯನನ್ನು ಭಾದಿಸಲಿದ್ದು ನಿಗದಿತ ಸಮಯದಲ್ಲಿ ವೈದ್ಯರನ್ನು ಕಂಡು ಪರೀಕ್ಷಿಸಿದಲ್ಲಿ ಆರೋಗ್ಯ ಸ್ಥಿರವಾಗಿಡಲು ಸಾಧ್ಯ ಎಂದು ನಿಟ್ಟೆ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಲ್ಯಾನ್ಸಿ ಲೋಬೋ ಹೇಳಿದರು. ಉಳ್ಳಾಲ ಪಾನೀರ್ ಪಾವ್ಲ್ ಸಭಾ ವತಿಯಿಂದ ಭಾನುವಾರ ಪಾನೀರ್ ಮೆರ್ಸಿಯಮ್ಮ ಚರ್ಚ್ ಸಭಾಂಗಣದಲ್ಲಿ ನಡೆದ ಹಿರಿಯರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಹನ ಹಳೆಯದಾದಂತೆ ವಿವಿಧ ಸಮಸ್ಯೆಗಳು ಬರುತ್ತದೆ, ನಿಗದಿತ ಸಮಯದಲ್ಲಿ ದುರಸ್ತಿ, ಸರ್ವೀಸ್ ಮಾಡುತ್ತಿದ್ದರೆ ದೊಡ್ಡ ಸಮಸ್ಯೆಗಳು ಇಲ್ಲದಂತೆ ಮಾಡಬಹುದು. ಅದೇ ರೀತಿ ಮನುಷ್ಯನಿಗೆ ಪ್ರಾಯವಾದಂತೆ ಗಂಟು ನೋವು, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಸಹಿತ ವಿವಿಧ ಕಾಯಿಲೆಗಳು ಬರುತ್ತದೆ. ಪ್ರತಿದಿನ ವ್ಯಾಯಾಮ, ನಡಿಗೆ, ಯೋಗ ಮನೆ ಕೆಲಸ ಮಾಡುತ್ತಿದ್ದರೆ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ. ಕನಿಷ್ಟ ಆರು ತಿಂಗಳಿಗೊಮ್ಮೆ ವೈದ್ಯರನ್ನು ಕಂಡು ಪರೀಕ್ಷಿಸಿದರೆ ಉತ್ತಮ ಎಂದರು. ಪಾನೀರ್ ಮೆರ್ಸಿಯಮ್ಮ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿ, ನಮ್ಮಲ್ಲಿ ವಿವಿಧ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೆ.ಸಿ.ನಗರ: ಎಸ್.ಎಸ್.ಎಫ್ ಕೆ.ಸಿ ನಗರ ಶಾಖೆ ಇದರ ವತಿಯಿಂದ 24 ನೇ ವಾರ್ಷಿಕೋತ್ಸವದ ಪ್ರಯುಕ್ತ ಯೇನಪೋಯ ಮೆಡಿಕಲ್ ಕಾಲೇಜ್ ದೇರಳೆಕಟ್ಟೆ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ದಂತ ಮತ್ತು ವೈದ್ಯಕೀಯ ಶಿಬಿರ ಕೆ.ಸಿ.ನಗರದ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು ಯೇನಪೋಯ ಡೆಂಟಲ್ ಕಾಲೇಜಿನ ಊಔಆ. ಡಾ.ಗಣೇಶ್ ಶೆಣೈ.ಪಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸ್.ಎಸ್.ಎಫ್ ಕೆಸಿನಗರ ಶಾಖೆ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಹಳಷ್ಟು ಸಾಮಾಜಿಕ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ.ಜಾತಿ ಮತ ಭೇದವಿಲ್ಲದೆ ಹಲವಾರು ಮಂದಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಆಳ್ವ, ಬ್ಯಾರಿ ಸಾಹಿತ್ಯ ಅಕಾಡಮಿ ರಿಜಿಸ್ಟರ್ ಉಮ್ಮರ್ ಮಾಸ್ಟರ್ ,ಡಾ ಇಮ್ರಾನ್ ಪಾಶ, ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್. ಉಳ್ಳಾಲ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಕೆ.ಸಿ. ನಗರ .ಅಬ್ದುಲ್ ಖಾದರ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಎದೆ ನೋವಿಗೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದೇರಳಕಟ್ಟೆ ಜಲಾಲ್‍ಬಾಗ್ ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಲ್ಮಾನ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಮನೆಯವರು ಆರೋಪಿಸಿದ್ದಾರೆ. ದೇರಳಕಟ್ಟೆಯಲ್ಲಿ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುವ ಸಲ್ಮಾನ್ ಮಧ್ಯಾಹ್ನದವರೆಗೆ ಕೆಲಸ ಮಾಡಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿದ್ದು, ಎದೆನೋವು ಕಾಣಿಸಿಕೊಂಡಿದ್ದರಿಂದ ತನ್ನ ಬೈಕ್‍ನಲ್ಲೇ ಸಂಬಂಧಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದರು.ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೂರು ತಿಂಗಳ ಹಿಂದೆ ಮದುವೆ : ಸಲ್ಮಾನ್ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಪತ್ನಿ, ತಂದೆ, ತಾಯಿ ಸಹೋದರಿ ಮೂವರು ಸಹೋದರರನ್ನು ಅಗಲಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಪುರ: ಶಾಲೆಗಳಲ್ಲಿ ಆಹಾರೋತ್ಸವದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ಪಡೆಯಲು ಸಹಕಾರಿ ಎಂದು ಮಂಗಳೂರು ತಾಲೂಕು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ಅಭಿಪ್ರಾಯಪಟ್ಟರು. ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಅಯೋಜಿಸಲಾಗಿದ್ದ ವಸ್ತು ಪ್ರದರ್ಶನ, ಆಹಾರೋತ್ಸವ ಮೇಳ-2015 ಹಾಗೂ ಅಕ್ಷರ ದಾಸೋಹ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಇಂದು ಶಾಲಾ ಮಟ್ಟದಲ್ಲೇ ವ್ಯವಹಾರ ಜ್ಞಾನ ಅಗತ್ಯವಿದ್ದು ಟಿಪ್ಪು ಸುಲ್ತಾನ್ ಶಾಲೆಯಲ್ಲಿ ಆಹಾರೋತ್ಸವದ ಮೂಲಕ ಆ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ, ಇಂತಹ ಕಾರ್ಯಕ್ರಮದಿಂದ ಗ್ರಾಹಕರ ನಡುವಿನ ಸಂಬಂಧವೂ ಮಕ್ಕಳಲ್ಲಿ ಬೆಳೆಯುತ್ತದೆ ಎಂದು ಹೇಳಿದರು.ಅಕ್ಷರ ದಾಸೋಹ ಕಟ್ಟಡ ಉದ್ಘಾಟಿಸಿದ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಮಾತನಾಡಿ, ಟಿಪ್ಪು ಸುಲ್ತಾನ್ ಶಾಲೆ ದರ್ಗಾ ಅಧೀನದ ಪ್ರಥಮ ವಿದ್ಯಾಸಂಸ್ಥೆಯಾಗಿದೆ, ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದು ಇಲ್ಲಿನ ಶಿಕ್ಷಕ ವೃಂದದವರ ಪ್ರಯತ್ನ ಕಾರಣ, ಈ ಸಾಲಿನಲ್ಲಿ ಶೇ.100 ಫಲಿತಾಂಶ…

Read More

ಕೊಲೆರಾಡೋ: ಅಮೆರಿಕಾದ ಕೊಲೆರಾಡೋ ಜಿಲ್ಲೆಯ ಕುಟುಂಬ ಯೋಜನೆ ಕ್ಲಿನಿಕ್ ಮೇಲೆ ಗನ್ ಮ್ಯಾನ್ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದು ೧೧ ಜನ ಗಾಯಗೊಂಡಿದ್ದಾರೆ.ಸುಮಾರು 5 ಗಂಟೆಗಳ ಕಾರ್ಯಾಚರಣೆ ಬಳಿಕ ಗನ್ ಮ್ಯಾನ್ ಶರಣಾಗಿದ್ದಾನೆ ಈ ಗುಂಡಿನ ದಾಳಿಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ, ಆದರೆ ‘ಗರ್ಭಪಾತ’ ವಿರೋಧಿ ಧಾರ್ಮಿಕ ವ್ಯಕ್ತಿಯೊಬ್ಬ ಕ್ಲಿನಿಕ್ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದಾಗಿದೆ ಎಂದು ಊಹಿಸಲಾಗಿದೆ.ಬಂಧೂಕು ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ದಾಳಿಯಲ್ಲಿ 5 ಮಂದಿ ಪೊಲೀಸ್ ಅಧಿಕಾರಿಗಳು, ನಾಲ್ವರು ನಾಗರಿಕರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮುಖ್ಯ ಅಧಿಕಾರಿ ಪೀಟರ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಪತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಬಳಿಯ ಕೈರಂಗಳದ ದರ್ಖಾಸ್ ಗೌಸಿಯಾ ಕಂಪೌಂಡ್ ಸಮೀಪ ನಡೆದಿದ್ದು ಮಹಿಳೆಯ ಅನುಮಾನಾಸ್ಪದ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದೆ. ಶಾಜಿದಾ(21)ಆತ್ಮಹತ್ಯೆಗೆ ಶರಣಾದ ಮಹಿಳೆ. ಮೂರೂವರೆ ವರುಷದ ಹಿಂದೆ ಪರಂಗಿಪೇಟೆ ಮೂಲದ ಪ್ರಸ್ತುತ ಮುಡಿಪಿನಲ್ಲಿ ಆಟೋ ಡ್ರೈವರ್ ಆಗಿ ದುಡಿಯುತ್ತಿದ್ದ ಅಝರ್ ಎಂಬಾತನನ್ನು ಮದುವೆಯಾದ ಶಾಜಿದಾಗೆ ಮಹಮ್ಮದ್ ಹಪೀಝ್ (ಎರಡೂವರೆ ವರುಷ) ಹಾಗೂ ಅನಾಸ್(ಒಂದೂವರೆ ವರುಷ) ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಗೆ ನಿತ್ಯವೂ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದು ಪತಿ ಮಾದಕ ವ್ಯಸನಿ ಎಂಬ ಆರೋಪ ಇದೆ. ಹಾಗಾಗಿ ಆರು ತಿಂಗಳ ಹಿಂದೆ ಮಹಿಳೆ ತಾಯಿಯ ಮನೆ ಸಮೀಪದ ಇಸ್ಮಾಯಿಲ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಪತಿ ಅಝರ್ ಜೊತೆಗೆ ವಾಸವಿದ್ದ ಶಾಜಿದಾ ಅವರು ಗಂಡನನ್ನು ಅದೆಷ್ಟು…

Read More