ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪುತ್ತೂರು : ಭಕ್ತಕೋಡಿ ರೆಂಜಿಲಾಡಿ ಸಮೀಪ ಮನುಷ್ಯನ ತಲೆಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ದ. 14ರಂದು ವರದಿಯಾಗಿದೆ.
ಭಕ್ತಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಇರುವ ಪದ್ಮಜ ಫಾರ್ಮ್ಸ್ ನ ಹಟ್ಟಿಯ ಬಳಿ ಗೋಣಿ ಚೀಲಗಳಲ್ಲಿ ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರ ಕಂಡುಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳದಲ್ಲಿ ನೂರಾರು ಮಂದಿ ಕುತೂಹಲಿಗರು ಜಮಾಯಿಸಿದ್ದಾರೆ.
ಸಂಜೆಯ ವೇಳಗೆ ಗೋಣಿ ಚೀಲವೊಂದರಲ್ಲಿ ತಲೆಬುರುಡೆ ಪತ್ತೆಯಾಗಿತ್ತು. ಸ್ಥಳದಲ್ಲಿ ಜಮಾಯಿಸಿದ್ದ ಜನರು ಶರೀರದ ಇತರ ಭಾಗಗಳ ಅಸ್ಥಿಗಾಗಿ ಹುಡುಕಾಟ ನಡೆಸಿದ ವೇಳೆ ಇನ್ನೊಂದು ಚೀಲವೊಂದರಲ್ಲಿ ಕಾಲು ಬೆರಳು ಗೋಚರಿಸುವಂತಹ ಅಸ್ಥಿ ಪತ್ತೆಯಾಗಿದೆ.


