ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ರಕ್ತದ ಗುಂಪಿನ ಬಗ್ಗೆ ಮಾಹಿತಿಯಿದ್ದರೆ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಮುರಳೀ ಮೋಹನ್ ಚೂಂತಾರು ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕ ಹಾಗೂ ಮಂಜೇಶ್ವರದ ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ಇನೋಳಿ ದ.ಕ.ಜಿ.ಪಂ. ಪ್ರಾಥಮಿಕ ಶಾಲೆಯಲ್ಲಿ ನಡೆದ ರಕ್ತ ವರ್ಗೀಕರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅದೆಷ್ಟೋ ಮಂದಿ ತುರ್ತು ಸಂದರ್ಭದಲ್ಲಿ ರಕ್ತದ ಅನಿವಾರ್ಯತೆಯಿದ್ದು, ರಕ್ತದಾನಿಗಳಿದ್ದರೂ ಗುಂಪಿನ ಬಗ್ಗೆ ಅರಿವಿಲ್ಲದ ಕಾರಣ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತದ ಗುಂಪಿನ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸರ್ಕಾರವೂ ಪ್ರತೀ ಶಾಲೆಗಳಲ್ಲಿ ಈ ಪ್ರಕ್ರಿಯೆ ನಡೆಸುವಂತೆ ಸುತ್ತೋಲೆ ನೀಡಿದೆ ಎಂದು ತಿಳಿಸಿದರು. ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ಮುಖ್ಯಸ್ಥ ಅಬ್ದುಲ್ ಹಮೀದ್ ಮಾತನಾಡಿ, ಸೊಳ್ಳೆ ಕಚ್ಚುವಾಗ ಆಗುವ ನೋವಿಗಿಂತಲೂ ಕಡಿಮೆ ನೋವು ಪರೀಕ್ಷೆ ನಿಟ್ಟಿನಲ್ಲಿ ರಕ್ತ ತೆಗೆಯುವ ಸಂದರ್ಭ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಕಾರ್ಯ ವೈಖರಿ ಬಗ್ಗೆ ನಿಗಾ ಇಡಲಾಗಿದೆ. ಚುನಾವಣೆ ದಿನ ಎಲ್ಲರೂ ಒಗ್ಗಟ್ಟಿನಿಂದ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಮತ ಹಾಕುವ ಮೂಲಕ ಕುರ್ನಾಡು ಮತ್ತು ಉಳ್ಳಾಲ ಬ್ಲಾಕ್‍ನಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ನೋಡಿಕೊಳ್ಳಬೇಕು. ಚುನಾವಣೆ ಸಂದರ್ಭ ವಿರೋಧ ಪಕ್ಷದಿಂದ ಆರೋಪ ಸ್ವಾಭಾವಿಕವಾಗಿದ್ದು ಬಿಜೆಪಿ ಮಾಡುತ್ತಿರುವ ಆರೋಪಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಕುರ್ನಾಡು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಂಗಳವಾರ ಮುಡಿಪು ಖಾಸಗಿ ಸಭಾಂಗಣದಲ್ಲಿ ನಡೆದ ಸ್ಥಳಿಯಾಡಳಿತ ಜನಪ್ರತಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜನಪ್ರತಿನಿಧಿಗಳು ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡದೆ ಅಡ್ಡ ಮತದಾನ ಮಾಡಿದರೆ ಅವರ ವಿರುದ್ಧ ಯಾವುದೇ ಕರುಣೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನವದೆಹಲಿ: ದೆಹಲಿಯ ನ್ಯಾಯಾಲಯವೊಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಭದ್ರತಾ ಲೋಪಕ್ಕೆ ಸಾಕ್ಷಿ ಎಂಬಂತೆ ಕರ್ಕಾರ್‌ದೂಮಾ ಕೋರ್ಟ್‌ನ ಹಾಲ್ ನಂ. 73ರಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಧೀಶರೆದುರೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿಯಲ್ಲಿ ಪೇದೆಯೊಬ್ಬರಿಗೆ ನಾಲ್ಕು ಗುಂಡುಗಳು ತಗುಲಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇಬ್ಬರು ಪೇದೆ ಹಾಗೂ ನ್ಯಾಯಾಲಯದ ಕ್ಲರ್ಕ್ ಗೆ ಗಾಯವಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ಗುಂಡಿನ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನವ ದೆಹಲಿ :ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ 2016ರಲ್ಲಿ ಜೈಲಿಗೆ ಹೋಗುವುದು ನಿಶ್ಚಿತ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿಕೆ ನೀಡಿದ್ದಾರೆ. ಆಜ್ ತಕ್ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಭಾರತದ ನ್ಯಾಯಾಂಗದಲ್ಲಿ ತನಗೆ ವಿಶ್ವಾಸವಿದೆ ಎಂದರು. “ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಬುದ್ಧು; ಆತನಿಗೆ ಯಾವುದೇ ಭವಿಷ್ಯ ಇಲ್ಲ ‘ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ ರಾಹುಲ್ ಗಾಂಧಿಗೆ ಸುಳ್ಳು ಹೇಳುವುದು ಹುಟ್ಟುಗುಣವಾಗಿದ್ದು ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಕೂಡ ಸುಳ್ಳು ಹೇಳಿಕೊಂಡು ಬಂದಿದ್ದಾರೆ’ ಎಂದು ಹೇಳಿದರು. ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಪಟ್ಟು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನೀಡಿರುವ ಮಾಧ್ಯಮ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸ್ವಾಮಿ,ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿ ನನಗೆ ಬಿಜೆಪಿಯಿಂದ ಯಾವುದೇ ರೀತಿಯ ಬೆಂಬಲ ಬೇಕಾಗಿಲ್ಲ.ಈ ಕೇಸಿನ ಬಗ್ಗೆ ನಾನು ಈ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಕ್ಕಳಿಗೆ ಸಾಹಿತ್ಯದ ಬೆಳವಣಿಗೆ, ಪರಿಚಯ ಮತ್ತು ಸಾಹಿತಿಗಳ ಮೇಲೆ ಗೌರವ ಭಾವನೆ ಯನ್ನು ಮೂಡಿಸುವಲ್ಲಿ ಸಾಹಿತ್ಯ ಉತ್ಸವಗಳಿಂದ ಮಾತ್ರ ಸಾಧ್ಯ ಎಂದು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಅಮೃತಾನಂದಮಯಿ ನುಡಿದರು. ಅವರು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮಂಗಳವಾರ ನಡೆದ ನಾಡು ನುಡಿ ವೈಭವದ “ರತ್ನೋತ್ಸವ 2015” ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು. ಸಹಿಷ್ಣುತೆಯಿಂದ ಕೂಡಿರುವ ಸಾಹಿತ್ಯ ಸಾರ್ವಕಾಲಿಕ. ಅಂತಹ ಸಂಸ್ಕøತಿ ಮತ್ತು ಪರಂಪರೆಯನ್ನು ಸಾಹಿತ್ಯದ ಮೂಲಕ ಅರಿತುಕೊಳ್ಳಬಹುದು. ಬದುಕನ್ನು ಪ್ರೇರೇಪಿಸಲು , ಪುರಾಣ ತಿಳಿಯಲು ಸಾಹಿತ್ಯ ಸಹಕಾರಿ. ಕವಿಗಳಲ್ಲಿ ಒಳ್ಳೆಯ ಹೃದಯಗಳಿದ್ದಲ್ಲಿ ಒಳ್ಳೆಯ ಸಾಹಿತ್ಯ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಕೃತಿ ಸಹಜ ಸಾಹಿತ್ಯ ಸಮಾಜದಲ್ಲಿ ಕ್ಷೇಮದ ವಾತಾವರಣ ಉಂಟು ಮಾಡುವುದು. ವಿಕೃತಿ ಸಾಹಿತಿಗಳಿಂದ ಸಮಾಜದಲ್ಲಿ ಗೊಂದಲದ ವಾತಾವರಣ ಉಂಟಾಗುವುದರಲ್ಲಿ ಸಂಶಯವಿಲ್ಲ ಎಂದರು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಛಾಂದಸ ಡಾ.ಎನ್ ನಾರಾಯಣ ಶೆಟ್ಟಿ ಶಿಮಂತೂರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ದಿಲ್ ವಾಲೆ ಸಿನಿಮಾ ವೀಕ್ಷಣೆಗೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಜರಂಗದಳದ ಮುಖಂಡ ಮತ್ತು ಕಾರ್ಯಕರ್ತರ ಮೇಲೆ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ದೂರು ನೀಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾರೂಕ್ ಖಾನ್ ದೇಶದ್ರೋಹಿ ಎಂದು ಆರೋಪಿಸಿ ಭಾನುವಾರ ನಗರದ ಪಾಂಡೇಶ್ವರದ ಪಿವಿಆರ್ ಚಿತ್ರಮಂದಿರದಲ್ಲಿ ದಿಲ್ ವಾಲೆ ಚಿತ್ರವನ್ನು ನಿಲ್ಲಿಸುವಂತೆ ಬಜರಂಗಿಗಳು ಒತ್ತಾಯಿಸಿದ್ದು ನಂತರ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು.
ಹೊಸದಿಲ್ಲಿ : ವಿಮಾನ ಅಪಘಾತಕ್ಕೀಡಾಗಿ ೧೦ ಮಂದಿ ಬಿಎಸ್ಎಪ್ ಯೋಧರು ದಾರುಣವಾಗಿ ಸಾವನ್ನಪ್ಪ್ಪಿರುವ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ದ್ವಾರಕಾ ಬಳಿ ಸಂಭವಿಸಿದೆ. ಸೂಪರ್ ಕಿಂಗ್ ಹೆಸರಿನ ಬಿಎಸ್ ಎಫ್ ವಿಮಾನ ದೆಹಲಿಯಿಂದ ರಾಂಚಿಗೆ ತೆರಳುತ್ತಿತ್ತು. ಸೈನಿಕರು, ಸೇರಿದಂತೆ ಒಟ್ಟು 12 ಮಂದಿ ಇದ್ದರೆಂದು ಹೇಳಲಾಗುತ್ತಿದ್ದ ಈ ವಿಮಾನದಲ್ಲಿ ಬಿಎಸ್ ಎಫ್ ಕಮಾಂಡರ್ ಕೂಡ ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ ಇಂಜಿನಿಯರಿಂಗ್ ವಿಭಾಗದ 10 ಮಂದಿ ಸೈನಿಕಾಧಿಕಾರಿಗಳು ಇದ್ದರು ಎಂದು ವರದಿಯಾಗಿದೆ. ಈಗಾಗಲೇ ಎರಡು ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ 15 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದೆಂದು ಹೇಳಲಾಗುತ್ತಿದ್ದು, ಬೆಳಗ್ಗೆ 9.30 ರ ಸುಮಾರಿಗೆ ವಿಮಾನ ಗೊಡೆಯೊಂದಕ್ಕೆ ಅಪ್ಪಳಿಸಿದ್ದು ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯಾಡಳಿತ ಜನಪ್ರತಿನಿ„ಗಳ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಸಮಾವೇಶ ಮುಡಿಪು ಆಡಿಟೋರಿಯಂನಲ್ಲಿ ಡಿ. 22ರಂದು ಮಧ್ಯಾಹ್ನ ಮೂರು ಗಂಟೆ ನಡೆಯಲಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಹೇಳಿದರು. ಕುತ್ತಾರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರ ಗೆಲುವು ಖಂಡಿತ. ಪಕ್ಷದ ತತ್ವ ಹಾಗೂ ಸಿದ್ಧಾಂತದಂತೆ ನಡೆದಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರ ಪಕ್ಷ ನಿಷ್ಠೆ, ಜನರ ಜೊತೆಗಿನ ಒಡನಾಟ, ಕ್ಷೇತ್ರದ ಅಭಿವೃದ್ಧಿ ಎಲ್ಲವನ್ನೂ ಗಮನಿಸಿದಾಗ ಅವರ ಗೆಲುವು ನಿಶ್ಚಿತ ಎಂದು ನುಡಿದರು. ಪ್ರತಾಪ್‍ಚಂದ್ರ ಶೆಟ್ಟಿ ಅವರ ವಿರುದ್ಧವಾಗಿ ಈ ಹಿಂದೆ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ನಾಯಕರು ಈಗ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದು ಅಂತಹ ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಲಾಗಿದೆ. ಮುಡಿಪು ಬ್ಲಾಕ್‍ನಲ್ಲಿ 107 ಮಂದಿ ಪಂಚಾಯಿತಿ ಸದಸ್ಯರು, ನಾಲ್ಕು ಮಂದಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಒಂದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೀರಿ : ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಪವಾಡಸದೃಶವಾಗಿ ಪಾರಾದ ಘಟನೆ ಕೋಟೆಕಾರು ಸಮೀಪದ ಬೀರಿ ಚೆಕ್ ಪೋಸ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಉಪ್ಪಳ ನಿವಾಸಿ ಅಝೀಂ(23) ಪಾರಾದ ಕಾರು ಚಾಲಕ. ಮಂಗಳೂರಿನಿಂದ ಉಪ್ಪಳ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಚೆಕ್ ಪೋಸ್ಟ್ ಎದುರುಗಡೆ ರಾ.ಹೆ.ಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ತಪ್ಪಿಸಿ ಎದುರಿಗೆ ತೆರಳುತ್ತಿದ್ದಂತೆ ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಅಝೀಂ ಪವಾಡಸದೃಶವಾಗಿ ಪಾರಾದರೆ, ಬಸ್ಸಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಪೊಲೀಸರ ಜತೆ ಕುಡುಕನ ಅನುಚಿತ ವರ್ತನೆ: ಬಂಧನ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕನೋರ್ವ ಸ್ಥಳಕ್ಕೆ ಬಂದಿದ್ದ ಪೊಲೀಸರ ಜತೆಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದನು. ಮೊದಲಿಗೆ ಪೊಲೀಸರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕಲಿಕೆ ದುಡಿಮೆ ಬದುಕು ಒಂದಾಗಿಸಿದ ಮನಸ್ಸು ಕಟ್ಟುವ ಪ್ರೀತಿ ಹಂಚುವ ನವಸಾಕ್ಷರರ ಸಂಘಟನೆಯ 24 ನೇ ವರ್ಷದ ಅಕ್ಷರೋತ್ಸವ ಹಾಗೂ ಸಂಪೂರ್ಣ ಸೌರಶಕ್ತಿ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದ ವಠಾರದಲ್ಲಿ ನಡೆಯಿತು. ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ, ಸುಗ್ರಾಮ ಸಂಘ, ಅಪ್ನಾದೇಶ್, ಆದಿವಾಸಿ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ನಡೆದ ಉತ್ಸವವನ್ನು ಸೌರದೀಪ ಬೆಳಗಿಸುವ ಮೂಲಕ ನವಸಾಕ್ಷರೆ ಪ್ರೇಮ ಉದ್ಘಾಟಿಸಿದರು. ಇಡೀ ಭೂಲೋಕಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ತ್ಯಾಜ್ಯ ಮುಕ್ತ ಸ್ವಚ್ಛ ಮನೆ ಹಾಗೂ ಬಡವರ ಮನೆಗಳಿಗೆ ಸೌರ ದೀಪ ಅಳವಡಿಸಿ ಕತ್ತಲು ಮುಕ್ತ ಗ್ರಾಮ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿ ಒಮ್ಮನಸ್ಸಿನಿಂದ ಕೆಲಸ ಮಾಡುವುದು ಅಗತ್ಯ ಎಂದರು. ಸಾಕ್ಷರತೆ, ಸ್ವಚ್ಛತೆ, ಮಹಿಳಾ ಸಬಲೀಕರಣ ಹಾಗೂ ವಿಟ್ಲ ಪಡ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಸುಧಾ ಶೆಟ್ಟಿಯವರು ರಚಿಸಿದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಸಹಾಯಕ ಪೋಲಿಸ್ ಆಯುಕ್ತ ವಿನಯ.ಎಸ್.…

