ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಬದಲಾದ ಜೀವನ ಶೈಲಿಯಲ್ಲಿ ಆಹಾರ ಪದ್ಧತಿಗೆ ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿಯೇ ಏರುಪೇರುಗಳು ಉಂಟಾಗುತ್ತಿದ್ದು ಯುವಕರು ಸಣ್ಣಪುಟ್ಟ ಎದೆನೋವನ್ನು ಲಘುವಾಗಿ ಪರಿಗಣಿಸದೆ, ದೇಹ ತಪಾಸಣೆ ನಡೆಸುವುದು ಉತ್ತಮ ಎಂದು ದೇರಳಕಟ್ಟೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕ ಯು.ಕೆ. ಮೋನು ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಕೈರಂಗಳ ಪಡಿಕ್ಕಲ್ನ ಬದ್ರುಲ್ ಹುದಾ ಅಸೋಸಿಯೇಶನ್ ವತಿಯಿಂದ ನಡೆದ ವೈದ್ಯಕೀಯ ಶಿಬಿರವನ್ನು ಕಣಚೂರು ಆಸ್ಪತ್ರೆಯ ಸಂಚಾಲಕ ಯು.ಕೆ. ಮೋನು ಅವರು ಉದ್ಘಾಟಿಸಿ ಮಾತನಾಡಿದರು.
ಯುವಕರು ಸಮಾಜದ ಎಲ್ಲ ಕಾರ್ಯಚಟುವಟಿಕೆಗಳಲ್ಲೂ ತಮ್ಮನ್ನು ಉತ್ಸಾಹದಿಂದ ತೊಡಗಿಸುತ್ತಿದ್ದು, ಬಳಲಿದ ತಮ್ಮ ಶರೀರವನ್ನು ಮಾತ್ರ ವೈದ್ಯಕೀಯ ಪರೀಕ್ಷೆಗೊಳಪಡಿಸಲು ಉದಾಸೀನ ಪೃವೃತ್ತಿಯನ್ನು ತಾಳುತ್ತಿರುವುದು ಕಳವಳಕಾರಿ. ಬದಲಾದ ಜೀವನ ಶೈಲಿಯಲ್ಲಿ ಆರೋಗ್ಯದ ಏರುಪೇರುಗಳು ಸಹಜವಾಗಿದ್ದು, ಯುವಕರು ಇಂತಹ ಉಚಿತ ವೈದ್ಯಕೀಯ ಶಿಬಿರಗಳಲ್ಲಾದರೂ ತಮ್ಮ ದೇಹ ಪರೀಕ್ಷೆಗೊಳಪಡಿಸುವುದು ಉತ್ತಮ ಎಂದು ಹೇಳಿದರು.
ಕುರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ ಕಣಚೂರು ಮೋನು ಅವರು ಒಬ್ಬ ಉತ್ತಮ ಸಮಾಜಸೇವಕನಾಗಿದ್ದು ಸಮಾಜದ ಬಡ ವರ್ಗದವರ ಕಣ್ಣೀರೊರೆಸುವ ಅವರ ಕನಸು ಸಾಕಾರಗೊಂಡಿದೆ. ಪಡಿಕ್ಕಳ್ ಮಸೀದಿಯು ಕಾರಣಿಕ ಸ್ಥಳವಾಗಿದ್ದು ಅಂತಹ ಪ್ರದೇಶದಲ್ಲಿ ಜನರಿಗೆ ಅವಶ್ಯವಾಗಿದ್ದ ಅರ್ಥಪೂರ್ಣ ಶಿಬಿರವನ್ನು ಏರ್ಪಡಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಖಾಜಾ ನಾಸಿರುದ್ದಿನ್ ಸ್ಥಳೀಯ ಖತೀಬ ನಾಸಿರುದ್ದಿನ್ ಮದನಿ, ಎಸ್. ಕೆ. ಖಾದರ್ ಮುಡಿಪು, ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ, ಸಂಜೀವ ಗಟ್ಟಿ ಡಿ. ಧರ್ಮಕ್ಕಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಶೀರ್ ಮುಡಿಪು, ಸಿದ್ದಿಕ್ ಮುಡಿಪು, ಸ್ಥಳೀಯ ಮುಖಂಡರಾದ ಮಹಮ್ಮದ್ ಪಡಿಕ್ಕಳ್, ಅಬ್ಬಾಸ್ ಪಡಿಕ್ಕಳ್, ಆಸಿಫ್ ಡಿ. ಹೆಚ್, ಇಬ್ರಾಹಿಂ ಡಿ. ಹೆಚ್, ಬಾವು ಪಡಿಕ್ಕಳ್, ಹಮೀದ್ ಮದನಿ ಪಡಿಕ್ಕಳ್ ಹಾಗೂ ಅಬೂಬಕ್ಕರ್ ಉಪಸ್ಥಿತರಿದ್ದರು.


