Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಾಪಿಕಾಡು: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಸಂಗಮದಂತಹ ಕಾರ್ಯಕ್ರಮಗಳು ಪೂರಕ ಎಂದು ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ ಉಳ್ಳಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟಿನ ಪೆÇಸಕುರಲ್‍ನ ಇದರ 12ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ನಡೆದ ಪೆÇಸಕುರಲ್ ಬಳಗ, ರೋಟರಿ ಸಮುದಾಯ ದಳ, ಕೊಲ್ಯ ಸೋಮೇಶ್ವರ, ರೋಟರಿ ಕ್ಲಬ್ ದೇರಳಕಟ್ಟೆ, ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಉಳ್ಳಾಲ ತೊಕ್ಕೊಟ್ಟು ಇದರ ಆಶ್ರಯದಲ್ಲಿ ಉಳ್ಳಾಲ ವಲಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಜಾಗೃತ ವಿವಿದ್ದೋದ್ಧೇಶ ಸಹಕಾರಿ ಸಂಘ ಅಧ್ಯಕ್ಷ ರಘುಚಂದ್ರ ಬಳ್ಳಾಲ್, ರೋಟರಿ ಕ್ಲಬ್ ದೇರಳಕಟ್ಟೆ ಅಧ್ಯಕ್ಷ ಡಿ. ಎನ್. ರಾಘವ, ರೋಟರಿ ಸಮುದಾಯದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ಶಶಿಕಾಂತ್ ಪರ್ಯತ್ತೂರು, ಭಗತ್‍ಸಿಂಗ್ ಸೇವಾ ಪ್ರತಿಷ್ಟಾನ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವ ಶಿಕ್ಷಣ ಸಿಕ್ಕಾಗ ಅವರು ಮುಂದಿನ ದಿನಗಳಲ್ಲಿ ಈ ದೇಶಕ್ಕೆ ಕೀರ್ತಿ ತರುವ ಕೆಲಸಕ್ಕೆ ಮುಂದಾಗುತ್ತಾರೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಪರಿಪೂರ್ಣ ಶಿಕ್ಷಣ ನೀಡಿದಾಗ ಆ ವಿದ್ಯಾರ್ಥಿಗಳು ಮುಂದಕ್ಕೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸುವುದರಲ್ಲಿ ಸಂಶಯವಿಲ್ಲ. ಅಂತಹ ಶಿಕ್ಷಣದ ಪ್ರಭಾವದಿಂದ ಪ್ರಪಂಚ ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ನೋಡುವಂತೆ ಮಾಡಿದ್ದು ಶಾರದಾ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಶ್ಲಾಘನೀಯ ಎಂದು ವಿಧಾನ ಪರಿಷತ್‍ನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಶಾರದಾ ವಿದ್ಯಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ ತಲಪಾಡಿ ಕಿನ್ಯ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ದಶಮ ಸಂಭ್ರಮ ಹಾಗೂ ಹೊನಲು ಬೆಳಕಿನ ಕ್ರೀಡೋತ್ಸವ-2015ನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ದೇಶದ ಪ್ರಗತಿಯನ್ನು ಕೇವಲ ಆರ್ಥಿಕ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸುವಂತಿಲ್ಲ. ಎಲ್ಲ ವಿಧದಲ್ಲೂ ಸಮಗ್ರ ಅಭಿವೃದ್ಧಿ ಸಾಧಿಸಿರಬೇಕು. ಆ ದಿಸೆಯಲ್ಲಿ ಭಾರತ ಪ್ರಪಂಚಕ್ಕೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾನೀರ್: ಮಕ್ಕಳ ಕಣ್ಣು ಪ್ರಕಾಶಿಸಿದರೆ ದೇಶ ಪ್ರಕಾಶಿಸಿದಂತೆ, ಈ ನಿಟ್ಟಿನಲ್ಲಿ ಹೆತ್ತವರು, ಪೋಷಕರು ಮಕ್ಕಳ ಕಣ್ಣು ಪ್ರಕಾಶಿಸುವಂತೆ ಮಾಡಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಪಾನೀರ್ ಮರ್ಸಿದೆ ಆಶ್ರಮ ಹಾಗೂ ಮಂಗಳೂರಿನ ಮಾ ಕ್ರಿಯೇಶನ್ ಜಂಟಿ ಆಶ್ರಯದಲ್ಲಿ ಶುಕ್ರವಾರ ಪಾನೀರ್ ಆಶ್ರಮದಲ್ಲಿ ನಡೆದ ಕ್ರಿಸ್‍ಮಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೊಬ್ಬನ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವುದು ಏಸು ಕ್ರಿಸ್ತರ ಸಂದೇಶವಾಗಿದೆ. ಅದನ್ನು ಪಾಲಿಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ. ಮನುಷ್ಯ ಯಾರಿಗೂ ಉಪಕಾರ ಮಾಡದೆ ತಾನೊಬ್ಬನೇ ಬದುಕಬೇಕೆನ್ನುವ ಹಂಬಲ ಇದ್ದರೆ ಯಾವುದೇ ಕಷ್ಟ ಪಡಬೇಕಿಲ್ಲ. ಆದರೆ ಇಂತಹ ಭಾವನೆಯಿಂದ ಹೊರಬಂದು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮರ್ಸಿದೆ ಆಶ್ರಮದ ಮುಖ್ಯಸ್ಥೆ ಸಹೋದರಿ ಲೂಸಿಯಾನ ಅವರನ್ನು ಸನ್ಮಾನಿಸಲಾಯಿತು. ಪಾನೀರ್ ಚರ್ಚ್ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್, ಉದ್ಯಮಿ ಜೋಸೆಫ್ ಮಥಾಯಿಸ್, ಅರ್ಸುಲಿನಾ ಫ್ರಾನ್ಸಿಸ್ ಸಂಸ್ಥೆಯ ಸಲಹೆಗಾರರಾದ ಲಿಲ್ಲಿ ಫೆರ್ನಾಡೀಸ್, ರೀಟಾವಾಸ್, ಉದ್ಯಮಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಬಿಜೆಪಿ ಕ್ಷೇತ್ರ ಸಮಿತಿ ಹಾಗೂ ಯುವಮೋರ್ಚಾ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 91ನೇ ಜನ್ಮ ದಿನದ ಪ್ರಯುಕ್ತ ಕುತ್ತಾರು ಬಾಲಸಂರಕ್ಷಣಾ ಕೆಂದ್ರದ ಮಕ್ಕಳಿಗೆ ಹಣ್ಣು ವಿತರಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಯುವಮೋರ್ಚಾ ಅಧ್ಯಕ್ಷ ಜೀವನ್ ತೊಕ್ಕೊಟ್ಟು, ಜಿಲ್ಲಾ ಉಪಾಧ್ಯಕ್ಷ ಗೋಪಿನಾಥ ಬಗಂಬಿಲ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಯಶವಂತ ಅಮೀನ್, ಸಂಜೀವ ಶೆಟ್ಟಿ, ಪ್ರಕಾಶ್ ಗಾಂಧಿನಗರ, ಗಣೇಶ್ ಕಾಪಿಕಾಡ್, ಉಮೇಶ್ ಕುಂಪಲ, ಹರಿಯಪ್ಪ ಸಾಲ್ಯಾನ್, ಸುರೇಶ್ ಶೆಟ್ಟಿ, ಸುರೇಂದ್ರ ಪಾವೂರು, ಸಚಿನ್ ಮೋರೆ, ಗುರು ನರಿಂಗಾನ, ಸಂಸ್ಥೆಯ ಮುಖ್ಯಸ್ಥೆ ಸುಧಾ ಮೊದಲಾದವರು ಉಪಸ್ಥಿತರಿದ್ದರು. ಶಿವಪ್ರಸಾದ್ ಕಕ್ಕೆಮಜಲು ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ಪಜೀರು ಮೆರ್ಸಿಯಮ್ಮನವರ ಇಗರ್ಜಿ ಹಾಗೂ ಕೆಥೊಲಿಕ್ ಸಭಾ ಪಜೀರು ಘಟಕದ ವತಿಯಿಂದ ಕಿಡ್ನಿ ವೈಫಲ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಮುಂಡೋಳಿಯ ಸುಪ್ರಿಯಾ ಅವರಿಗೆ ಸಹಾಯಧನ ನೀಡಲಾಯಿತು. ಕ್ರಿಸ್‍ಮಸ್ ಪ್ರಯುಕ್ತ ಶುಕ್ರವಾರ ಸುಪ್ರಿಯಾ ಮನೆಗೆ ಭೇಟಿ ನೀಡಿದ ಚರ್ಚ್ ಹಾಗೂ ಸಂಘಟನೆ ಮುಖಂಡರು 10ಸಾವಿರ ರೂಪಾಯಿಯ ಚೆಕ್ ಹಾಗೂ ಕ್ರಿಸ್‍ಮಸ್ ತಿನಿಸುಗಳನ್ನು ನೀಡಿದರು. ಈ ಸಂದರ್ಭ ಬ್ರ.ರೋಶನ್ ಡಿಸೋಜ ನೇತೃತ್ವದಲ್ಲಿ ಸುಪ್ರಿಯಾ ಶೀಘ್ರ ಗುಣಮುಖವಾಗುವಂತೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಕ್ಟರ್ ಮೊಂತೆರೋ, ಕಾರ್ಯದರ್ಶಿ ಫೆಲಿಕ್ಸ್ ಮೊಂತೆರೋ, ಸಂತ ವಿನ್ಸೆಟ್ ಪಾವುಲ್ ಸೊಸೈಟಿಯ ಅಧ್ಯಕ್ಷ ಮೈಕೆಲ್ ಲೋಬೋ, ಜಾನ್ ಎಂ.ವಿಕ್ಟರ್ ಸಲ್ದಾನಾ, ಬ್ರ.ಲ್ಯಾನ್ಸನ್ ಪಿಂಟೋ, ಕೆಥೋಲಿಕ್ ಸಭಾ ಕೇಂದ್ರೀಯ ಘಟಕ ಅಧ್ಯಕ್ಷೆ ಪ್ಲೇವಿ ಡಿಸೋಜ, ಪಜೀರು ಘಟಕ ಅಧ್ಯಕ್ಷ ಹಿಲರಿ ಡಿಸೋಜ, ಕಾರ್ಯದರ್ಶಿ ಅವಿಲ್ ಡಿಸೋಜ, ಕೆಥೊಲಿಕ್ ಸಭಾ ಪ್ರಾಂತ್ಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ ಧರ್ಮತೋಟ, ಪ್ರಮುಖರಾದ ಲವಿನಾ ದಾಂತಿ, ಲೋಯ್ ಡಿಸೋಜ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರ್‍: ಏಸು ಕ್ರಿಸ್ತ ಹುಟ್ಟು ಹಬ್ಬದ ಪ್ರಯುಕ್ತ ಪಜೀರ್ ಮೆರ್ಸಿಯಮ್ಮನವರ ಇಗರ್ಜಿ ವತಿಯಿಂದ ನಡೆದ ಕ್ರಿಸ್‍ಮಸ್ ಸೌಹಾರ್ದ ಸಂದೇಶ ವಾಹನ ಜಾಥಾ ಗುರುವಾರ ಸಮಾಪನಗೊಂಡಿತು. ಪಜೀರು ಇಗರ್ಜಿಯ ಧರ್ಮಗುರು ವಂದನೀಯ ರೆ.ಫಾ.ವಲೇರಿಯನ್ ಪಿಂಟೋ ಬುಧವಾರ ಪಜೀರ್ ಚರ್ಚ್ ವಠಾರದಲ್ಲಿ ಜಾಥಾ ಉದ್ಘಾಟಿಸಿದರು. ಕ್ರಿಸ್ಮಸ್ ಪ್ರಯುಕ್ತ ಸಂದೇಶ ಸಾರುವ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಒಂದು ದಿನ ಜಾಥಾ ನಡೆದಿದ್ದರೆ, ಈ ಬಾರಿ ಎರಡು ದಿನ ನಡೆಸಲಾಗಿದೆ ಎಂದು ಹೇಳಿದರು. ಇನೋಳಿ, ಧರ್ಮನಗರ, ಮಲಾರ್ ಪದವು, ಗ್ರಾಮಚಾವಡಿ, ಪಾವೂರು ಕಡವಿನ ಬಳಿ, ಅಸೈಗೋಳಿ, ಕೊಣಾಜೆ, ಬೆಂಗೋಡಿಪದವು, ಮುಡಿಪು ಜಂಕ್ಷನ್ ಹಾಗೂ ಬೋಳಿಯಾರ್ ಜಂಕ್ಷನ್‍ನಲ್ಲಿ ಎರಡು ದಿನ ವಾಹನ ಜಾಥಾ ನಡೆದು ಕೊನೆಗೆ ಚರ್ಚ್‍ನಲ್ಲಿ ಸಮಾಪನಗೊಂಡಿತು. ನಿಗದಿತ ಪ್ರದೇಶದಲ್ಲಿ ಸರ್ವ ದರ್ಮದ ಮುಖಂಡರು ಸಂದೇಶ ನೀಡಿದರು. ಕ್ರಿಸ್ತ ಜನನದ ಶುಭ ಸಂದೇಶ ಸಾರುವ ಹಾಡು, ನೃತ್ಯ ರೂಪಕ ಪ್ರದರ್ಶನ ವಾಹನದಲ್ಲೇ ಹಮ್ಮಿಕೊಳ್ಳಲಾಗಿತ್ತು. ಪ್ರಮುಖರಾದ…

Read More

ವಜ್ರ ಗುಜರನ್ ಮಾಡೂರು ಕ್ರಿಸ್ಮಸ್ ಬಂದಿದೆ.. ಈ ಮಹತ್ವಪೂರ್ಣ ದಿನಕ್ಕಾಗಿ ಕಾಯುತ್ತಿದ್ದ ಜನರ ಮುಖದಲ್ಲಿ ಸಡಗರ ಮೂಡಿದೆ. ಮನೆ ಮುಂದೆ ನಕ್ಷತ್ರ ಮಿನುಗತ್ತದೆ.. ಮನೆಯೊಳಗೆ ಕೇಕ್ ಘಮ್ಮೆನ್ನುತ್ತದೆ.. ಸಾಂತಕ್ಲಾಸ್ ಮನೆ ಮನೆಗೆ ಸಿಹಿ ನೀಡಿ ಸಂತಸ ಪಸರಿಸುತ್ತಾನೆ.. ನಿಸರ್ಗ ಸೇರಿದಂತೆ ಮನೆಮನಗಳಲ್ಲಿ ಹೊಸತನ ಚಿಗುರೊಡೆಯುತ್ತದೆ. ಚರ್ಚ್ ಸೇರಿದಂತೆ ಎಲ್ಲೆಡೆ ಯೇಸುವಿನ ಸ್ಮರಣೆ ನಡೆಯುತ್ತದೆ. ಡಿಸೆಂಬರ್ 25 ಕ್ರಿಸ್ತ ಯೇಸುವಿನ ಜನನೋತ್ಸವವು ಕ್ರಿಸ್ಮಸ್ ಹಬ್ಬವಾಗಿ ಆಚರಣೆಯಾಗುತ್ತಿದೆ. ಹಾಗೆ ನೋಡಿದರೆ ಕ್ರಿಸ್ಮಸ್ ಹಬ್ಬ ಕ್ರೈಸ್ತರು ಆಚರಣೆ ಮಾಡಿದರೂ ಆ ಸಂಭ್ರಮದಲ್ಲಿ ಇತರ ಎಲ್ಲ ಜನರೂ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯಲ್ಲಿ ದನಗಳ ಕೊಟ್ಟಿಗೆಯಲ್ಲಿ ಸಾಕು ತಂದೆ ಜೋಸೆಫರ ಆಶ್ರಯದಲ್ಲಿ ಮಾತೆ ಮರಿಯಮ್ಮನವರ ಉದರದಲ್ಲಿ ಜನಿಸಿದ ಏಸು 33ವರ್ಷಗಳ ಕಾಲ ಮಾತ್ರ ಭೂಮಿ ಮೇಲೆ ಬಾಳಿದರೂ ಅದ್ಭುತ ಪವಾಡಗಳನ್ನು ಮಾಡಿ ಸಮಸ್ತ ಜನರ ಪಾಪಗಳ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದರು. ಆದರೆ ಈ ಪ್ರಪಂಚದಲ್ಲಿ ಸತ್ತ ಮೇಲೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನ ಕ್ರಿಸ್ ಮಸ್ ಆಚರಣೆ ಪ್ರಯುಕ್ತ ಒಂದು ಕಿ.ಮೀ ಉದ್ದದ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಮತ್ತು ನಕ್ಷತ್ರಗಳಿಂದ ಪೆರ್ಮನ್ನೂರು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಅಲಂಕೃತಗೊಳಿಸಲಾಗಿತ್ತು. ಅಲಂಕಾರದಲ್ಲಿ ಸ್ಪೋಟ್ಸ್ ್ ಕ್ಲಬ್ ಅಧ್ಯಕ್ಷ ರಾನ್ಸನ್ ಮೊಂತೇರೊ, ನವೀನ್, ಬಾಝಿಲ್ ಡಿಸೋಜಾ, ಸುನಿಲ್ ಲೋಬೊ, ಕಿರಣ್, ಪುಷ್ಪರಾಜ್, ಮೆಲ್ವಿನ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲುಕಾಸ್ ಡಿಸೋಜಾ ಪಾಲ್ಗೊಂಡಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳುವ ವಾತಾವರಣವನ್ನು ಕ್ರಿಸ್ ಮಸ್ ಹಬ್ಬ ನಿರ್ಮಿಸಲಿ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಕ್ರಿಸ್ ಮಸ್ ಹಬ್ಬ ಎಲ್ಲರೂ ಸೇರಿ ಆಚರಿಸುವಂತಹ ಹಬ್ಬವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವ ಮೂಲಕ ಸಂತೋಷವಾಗಿದೆ. ಹಬ್ಬ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಲಿ ಎಂದರು. ಈ ಸಂದರ್ಭ ಚರ್ಚಿನ ಧರ್ಮಗುರು ಫಾದರ್ ಜೆ.ಬಿ.ಸಲ್ದಾನ್ಹ, ಚಚ್ ್ ಪಾಲನಾ ಸಮಿತಿಯ ಕಾಋಯದರ್ಶಿ ಡೆಮೆಟ್ರಿಯಸ್ ಡಿಸೋಜಾ, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೇವಸ್ ಡಿಸೋಜಾ ಸಚಿವರಿಗೆ ಕೇಕ್ ನೀಡಿ ಹಬ್ಬದ ಶುಭಾಷಯಗಳನ್ನು ಸಲ್ಲಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ , ಸಡಗರದಿಂದ ಉಳ್ಳಾಲದ ಸೈಯ್ಯದ್ ಮದನಿ ದರ್ಗಾದಲ್ಲಿ ಆಚರಿಸಲಾಯಿತು. 10,000 ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾ ಭಕ್ತಿ ಮೆರೆದರು. ಉಳ್ಳಾಲ ದರ್ಗಾ ಸೇರಿದ 33 ಮಸೀದಿಯಿಂದ ಮತ್ತು ನೆರೆಯ ಕೊಣಾಜೆ, ಮುಡಿಪು, ಬೋಳಿಯಾರು, ಕುತ್ತಾರು, ಎಲಿಯಾರುಪದವು, ಮದನಿನಗರ , ಗ್ರಾಮಚಾವಡಿ, ಪಾವೂರು, ಇನೋಳಿ ಭಾಗದದವರು ಮೆರವಣಿಗೆಯಲ್ಲಿ ಪಾಲ್ಗೊಂಡು ದರ್ಗಾ ಸೇರಿದರು. ಕಾರ್ಯಕ್ರಮವನ್ನು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಯುು.ಎಸ್ ಹಂಝರವರು ಉಳ್ಳಾಲ ಜುಮ್ಮಾ ಮಸೀದಿಯ ವಠಾರದಲ್ಲಿ ದ್ವಜಾರೋಹಣಗೈದು ಉದ್ಘಾಟಿಸಿದರು. ಖತೀಬರಾದ ಅಬ್ದುಲ್ ರವೂಫ್ ಮುಸ್ಲಿಯಾರ್ ದರ್ಗಾ ಝಿಯಾರತ್‍ಗೈದು ದುಆಗೈದರು. ಮಿಲಾದ್ ಪ್ರಯುಕ್ತ ಬೃಹತ್ ಸ್ವಲಾತ್ ಮೆರವಣಿಗೆ ಜರುಗಿತು. ಕೋಟೆಪುರ ಜುಮಾ ಮಸೀದಿಯಿಂದ ಹೊರಟು ಕೋಡಿ, ಉಳ್ಳಾಲ ಪೇಟೆಯÁಗಿ ಮುಕ್ಕಚೇರಿ ಆಜಾದ್ ನಗರ, ಮೇಲಂಗಡಿ ಮಾರ್ಗವಾಗಿ ದರ್ಗಾ ವಠಾರದಲ್ಲಿ…

Read More