Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಂಟ್ವಾಳ: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಂಗಳೂರು ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಯ ವಿದ್ಯಾರ್ಥಿಗಳ ವತಿಯಿಂದ  ಬಂಟ್ವಾಳದ ತೆಂಕಕಜೆಕಾರು  ಕರ್ಲ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರದಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರ 2015-16 ರಲ್ಲಿ ಮಂಗಳವಾರ ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ನಡೆದ ಬೆಳಕಿನ ಹಬ್ಬ-ಆಧ್ಯಾತ್ಮದ ಪರಿಕಲ್ಪನೆ ಕಾರ್ಯಕ್ರಮ ಗಮನ ಸೆಳೆಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಗ್ರಾಮಾಂತರ ಪ್ರದೇಶದ ಜನರಿಗೆ ಪ್ರಯಾಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನರ್ಮ್ ಆಶ್ರಯದಲ್ಲಿ ನಗರದಿಂದ ೨೦ಕಿಮೀ ಪರಿಧಿಯಲ್ಲಿ ಸಂಚರಿಸಲು ೩೫ ಬಸ್ಸುಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು ಇದೀಗ ಈ ಯೋಜನೆಯಡಿಯಲ್ಲಿ ಮುಡಿಪುಗೆ ಹೊಸ ಬಸ್ಸು ಸಂಚಾರ ಶುರುವಾಗುವ ಮೂಲಕ ಮುಡಿಪು ಜನತೆಯ ಕನಸು ನನಸಾಗಿದೆ. ಸ್ಟೇಟ್ ಬ್ಯಾಂಕಿನಿಂದ ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆಯ ಮೂಲಕ ಸಾಗುವ ಈ ಬಸ್ ಗೆ ಸತೀಶ್ ಶೆಟ್ಟಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಜಗದೀಶ್ ಆಳ್ವ, ದೇವದಾಸ್ ಆಳ್ವ, ವಿಠಲ ಶೆಟ್ಟಿ, ಹೆಚ್. ಕೆ. ಮುಡಿಪು ಭಾಗವಹಿಸಿದ್ದರು. ಹೋರಾಟಗಾರರಾದ ಇಸ್ಮಾಯಿಲ್ ಮುಡಿಪು, ಜಗದೀಶ್ ಎಂ, ಅಬ್ಬು ಎಜ್.ಕೆ.ಜೆ.ಉಮ್ಮರ್ ಲೈನ್ ಮೆನ್, ಸಿದ್ದಿಕ್ ಬೋಲೆರೋ,ಮತ್ತು ಮುಡಿಪಿನ ನಾಗರೀಕರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಆಧ್ಯಾತ್ಮ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿದಲ್ಲಿ ದುಷ್ಟಟ ಮತ್ತು ಸಮಾಜದ್ರೋಹಿ ಚಟುವಟಿಕೆಗಳಿಂದ ದೂರವಿರಲು ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು . ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿಯ ನಲ್ವತ್ತೊಂದನೇ ವಾರ್ಷಿಕ ಭಜನಾ ಮಂಗಳೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು .ಭಜನಾ ಮಂಗಳೋತ್ಸವವು ಊರಿನಲ್ಲಿ ಪರಸ್ಪರ ಒಗ್ಗಟ್ಟು ಮತ್ತು ಸಾಮರಸ್ಯತೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ .ಒಬ್ಬರಿಗೊಬ್ಬರು ಮುನಿಸಿಕೊಂಡವರು ಪರಸ್ಪರ ಕ್ಷಮಿಸಿ ಮತ್ತೆ ಸಹಬಾಳ್ವೆ ನಡೆಸಲು ಸೇತುವಾಗುತ್ತದೆ .ಮುಖ್ಯವಾಗಿ ಹದಿಹರೆಯದ ಯುವಕರು ಇಂದಿನ ದಿವಸಗಳಲ್ಲಿ ಕಾಲಹರಣಕ್ಕೆಂದು ದುಷ್ಟಟಗಳಿಗೆ ಬಲಿಯಾಗಿ ,ಕೊನೆಗೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ.ಯುವಕರು ಕಲಿಕೆಯ ಜೊತೆಗೆ ತಮ್ಮನ್ನು ಆಧ್ಯಾತ್ಮದೆಡೆ ತೊಡಗಿಸಿಕೊಂಡಾಗ ಸಮಾಜದಲ್ಲಿ ಅವರು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು . ಅವರು ಧಾರ್ಮಿಕ ಉಪನ್ಯಾಸ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದ ಶ್ರೀ ಸ್ವಾಮೀ ಈಶ್ವರಾನಂದ ಭಜನಾ ಮಂದಿರದ ನಲ್ವತ್ತೊಂದನೇ ವಾರ್ಷಿಕ ಭಜನಾ ಮಂಗಳೋತ್ಸವಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು . ಮಾಡೂರು ಭಗವತಿ ಕ್ಷೇತ್ರದ ಕೋಶಾಧಿಕಾರಿ ಭಾಸ್ಕರ ಟಿ , ಭಜನಾ ಮಂದಿರದ ಅಧ್ಯಕ್ಷ ಯು.ಹರಿಶ್ಚಂದ್ರ ,ಕಾರ್ಯದರ್ಶಿ ವಿಶ್ವೇಶ್ವರಯ್ಯ ಉಳ್ಳಾಲ್ , ಪದಾಧಿಕಾರಿಗಳಾದ ಸುನೀಲ್ ಉಳ್ಳಾಲ್ , ದೇವದಾಸ್ , ಶ್ರೀಧರ್ ಉಳ್ಳಾಲ್ , ಜಯರಾಜ್ ,ಅರ್ಚಕರಾದ ಯು ಶೇಷಪ್ಪ , ಯಾದವ , ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು .

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಇನೋವಾ ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಮದಕ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಪೆಟ್ರೋಲ್ ಕಳವು ನಡೆಸಲು ಬಂದವರಿಂದ ಕೃತ್ಯ ನಡೆದಿದೆ ಅನ್ನುವ ಸಂಶಯದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮದಕ ನಿವಾಸಿ ಜಬ್ಬಾರ್ ಎಂಬವರಿಗೆ ಸೇರಿದ ಕಾರು ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲೆ ಮನೆಗೂ ಆವರಿಸಿ ಗೋಡೆಯೂ ಬಿರುಕು ಬಿಟ್ಟಿದೆ. ಘಟನೆಯಿಂದ ರೂ.10 ಲಕ್ಷ ನಷ್ಟ ಉಂಟಾಗಿದೆ. ಸೋಮವಾರ ರಾತ್ರಿ ಮನೆಮಂದಿ ಮಲಗಿದ ಬಳಿಕ ಸುಮಾರು 1.30ರ ವೇಳೆ ಕೃತ್ಯ ನಡೆದಿದೆ. ಬೆಂಕಿ ಉರಿಯುತ್ತಿರುವುದನ್ನು ನೆರೆಮನೆಯ ಬಾಲಕನೋರ್ವ ಗಮನಿಸಿ ಬೊಬ್ಬೆ ಹಾಕಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ಹಾಗೂ ಸ್ಥಳೀಯರು ಸೇರಿ ಮನೆಗೂ ತಗಲುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. ಪೆಟ್ರೋಲ್ ಕಳ್ಳರ ಕೃತ್ಯ : ಈ ಭಾಗದಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳರ ಜಾಲ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವಿಧಾನ ಪರಿಷತ್ ಸದಸ್ಯರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಸ್ಥಳೀಯ ಜನಪ್ರತಿನಿ„ಗಳು ಬಹುಳ ಉತ್ಸುಕತೆಯಿಂದಲೇ ಬೆಳಗ್ಗೆಯೇ ಮತಹಾಕುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ಅದಾಗ್ಯೂ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 99.5ಶೇ. ಮತ ಚಲಾವಣೆ ಆಗಿದ್ದು ಪುದು ಗ್ರಾಮ ಪಂಚಾಯಿತಿಯ ಸದಸ್ಯೆ ಲಿಡಿಯಾ ವಿದೇಶದಲ್ಲಿದ್ದ ಕಾರಣ ಒಂದು ಮತ ಚಲಾವಣೆ ಆಗಿಲ್ಲ. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಉಳ್ಳಾಲ ನಗರ ಸಭೆ, ಸೋಮೇಶ್ವರ, ತಲಪಾಡಿ, ಕಿನ್ಯ, ಮಂಜನಾಡಿ, ಬೆಳ್ಮ, ಮುನ್ನೂರು, ಅಂಬ್ಲಮೊಗರು, ಕೊಣಾಜೆ, ಹರೇಕಳ, ಪಾವೂರು, ಬೋಳಿಯಾರು, ನರಿಂಗಾನ, ಬಾಳೆಪುಣಿ, ಇರಾ, ಸಜಿಪ ಪಡು, ಕುರ್ನಾಡು, ಪಜೀರು, ಸಜಿಪ ನಡು, ಪುದು, ಮೇರೆಮಜಲು ಹಾಗೂ ತುಂಬೆ ಪಂಚಾಯಿತಿ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು ಪುದು ಗ್ರಾಮ ಪಂಚಾಯಿತಿಯ ಸದಸ್ಯೆಯೊಬ್ಬರ ಗೈರು ಮಾತ್ರ ಕಂಡಿದೆ. ಉಳ್ಳಾಲ ನಗರ ಸಭೆಯ ಸದಸ್ಯರಾದ ಉಸ್ಮಾನ್ ಕಲ್ಲಾಪು ಹಾಗೂ ಬಾಜಿಲ್ ಡಿಸೋಜ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿದ್ಯಾರ್ಥಿಗಳೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿದಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಹೆತ್ತವರು ಕೇವಲ ಸಂಪತ್ತನ್ನು ಗಳಿಸುವ ಬದಲಿಗೆ ಮಕ್ಕಳನ್ನೇ ಸಂಪತ್ತನ್ನಾಗಿ ಬೆಳೆಸಿದಾಗ ಮುಂದಿನ ದಿನಗಳಲ್ಲಿ ಸದೃಡವಾದ ಸಮಾಜ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಅಭಿಪ್ರಾಯಪಟ್ಟರು. ಅವರು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ದೇರಳಕಟ್ಟೆ ಇದರ ಧರ್ಮಗುರು ಅಬ್ದುಲ್ ನಾಸೀರ್ ಫೈಝಲ್, ಸಾಮಾಜಿಕ ಮುಂದಾಳು ಟಿ.ಎಸ್. ಅಬ್ದುಲ್ಲಾ, ಸಂಸ್ಥೆಯ ಕೋಶಾಧಿಕಾರಿ ರತ್ನಾವತಿ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ಚಂದನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತಂತ್ರಜ್ಞಾನದ ವೇಗಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಆದರಲ್ಲೂ ವಾಟ್ಸ್‍ಆ್ಯಪ್ ಹಾಗೂ ಫೇಸ್‍ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಿಪ್ರಗತಿಯಲ್ಲಿ ಹರಿದಾಡುವ ಸುದ್ದಿಗಳಿಂದಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಕಾಪಿಕಾಡಿನ ಅಂಬಿಕಾರೋಡಿನಲ್ಲಿರುವ ಗಟ್ಟಿ ಸಮಾಜಭವನದಲ್ಲಿ ಶನಿವಾರ ತೊಕ್ಕೊಟ್ಟಿನ ಪೆÇಸಕುರಲ್ ಬಳಗದ ಆಶ್ರಯದಲ್ಲಿ ನಡೆದ ಪೋಸಕುರಲ್ ದೃಶ್ಯ ಮಾಧ್ಯಮದ 12ನೆಯ ವಾರ್ಷಿಕ ಸಮಾರಂಭ ಉದ್ಘಾಟಿಸಿ ಹದಿಮೂರು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಹದಿನೈದು ವರುಷಗಳ ಹಿಂದೆ ಒಂದು ಸುದ್ದಿ ಜನರಿಗೆ ತಿಳಿಯಲು ರೇಡಿಯೋ, ಪತ್ರಿಕೆ ಹಾಗೂ ಟಿವಿ ಜನರಿಗೆ ಬಹಳ ಹತ್ತಿರದ ಮಾಧ್ಯಮವಾಗಿತ್ತು. ಆದರೆ ಈಗ ಕೈಬೆರಳ ತುದ್ದಿಯಲ್ಲಿ ಸುದ್ದಿಯನ್ನು ತಿಳಿಯಲು ಸಾಧ್ಯವಾಗಿದೆ. ಅದು ತಂತ್ರಜ್ಞಾನದ ಪ್ರಭಾವವಾದರೆ ತುಳು ಭಾಷೆಯ ಮೂಲಕ ತುಳುನಾಡಿನ ಎಲ್ಲ ಧರ್ಮಗಳ ಸಂಸ್ಕಾರ ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವನ್ನು ಪೆÇಸಕುರಲ್ ಮಾಡುತ್ತಾ ಬಂದಿದೆ. ಸಮಾಜವೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ವಾರದ ಹಿಂದೆ ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕುಂಪಲ ಹನುಮಾನನಗರ ನಿವಾಸಿ ತಾನೇಶ್ (28) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ. ಮಂಗಳಾದೇವಿಯಲ್ಲಿ ಟೈಲರ್ ಅಂಗಡಿಯನ್ನು ಹೊಂದಿರುವ ತಾನೇಶ್ ಅವರು ಡಿ.18ರ ಸಂಜೆ ಕೆಲಸ ಮುಗಿಸಿ ಕುಂಪಲದ ಮನೆ ಕಡೆಗೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿತ್ತು. ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಸಂದರ್ಭ ತಾನೇಶ್ ಅವರು ನಿಯಂತ್ರಣ ಕಳೆದು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸ್ವಲ್ಪ ಗಾಯಗೊಂಡ ಮಹಿಳೆಯನ್ನು ತಾನೇಶ್ ಅವರೇ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತನ್ನ ಸಹೋದರರಿಗೆ ಅಪಘಾತವಾದ ವಿಚಾರವನ್ನು ತಿಳಿಸಿದ್ದರು. ಆಸ್ಪತ್ರೆಗೆ ಬಂದ ಸಹೋದರರು ತಾನೇಶ್ ಅವರ ತಲೆಗೂ ಗಾಯ ಆಗಿರುವುದನ್ನು ಗಮನಿಸಿ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವಿಪರೀತ ತಲೆಯೊಳಗೆ ಆಗಿರುವ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ತಮ್ಮ ಸ್ವಕ್ಷೇತ್ರ ಉಳ್ಳಾಲ ಇಲ್ಲಿನ ಉಳ್ಳಾಲದ ನಗರಸಭೆಯಲ್ಲಿ ವಿಧಾನಪರಿಷತ್ ಚುನಾವಣೆಯ ಮತ ಹಾಕಿದರು. ಮಂಗಳೂರಿನ ತಾಲೂಕು ಪಂಚಾಯಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮತ ಚಲಾವಣೆ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ಸಚಿವರು ಅಲ್ಲಿ ತಮ್ಮ ಮತಪಟ್ಟಿಯಲ್ಲಿ ಹೆಸರು ಇರದೆ ಉಳ್ಳಾಲ ನಗರಸಭೆಯತ್ತ ದೌಡಾಯಿಸಬೇಕಾಯಿತು. ಉಳ್ಳಾಲದ ನಗರಸಭೆಯಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಂದ ಆಯ್ಕೆಗೊಳ್ಳಲಿರುವಂತಹ ವಿಧಾನಪರಿಷತ್ ನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರ ಪರವಾಗಿ ಮತ ಚಲಾಯಿಸಿದ್ದೇನೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಕಾಂಗ್ರೆಸ್ ನ ಅಭ್ಯರ್ಥಿಗಳನ್ನೇ ಸ್ಥಳೀಯ ಜನಪ್ರತಿನಿಧಿಗಳು ಚುನಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ. ಗ್ರಾ.ಪಂ, ಜಿ.ಪಂ, ತಾ.ಪಂ ಇವರು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸಲು ಅಧಿಕಾರ ಮತ್ತು ಶಕ್ತಿಯನ್ನು ಕೊಟ್ಟಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಮುಖ್ಯಮಂತ್ರಿಯವರು ಸಮಿತಿಯೊಂದನ್ನು ರಚಿಸಿ ಸ್ಥಳೀಯ ಸಂಸ್ಥೆಗಳ ಕುಂದು ಕೊರತೆಗಳನ್ನು ಬಗೆಹರಿಸಿದ್ದಾರೆ.…

Read More