ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಯೆನೆಪೋಯ ದಂತ ಮಹಾವಿದ್ಯಾಲಯದ ಮ್ಯಾಕ್ಸಿಲೋ ಫ಼ೇಶಿಯಲ್ ಹಾಗೂ ಸೆಂಟರ್ ಫ಼ಾರ್ ಕ್ರೇನಿಯೋಫ಼ೇಶಿಯಲ್ ಅನಾಮಲೀಸ್ ವಿಭಾಗ ಯೆನೆಪೋಯ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಪ್ಲಾನಿಂಗ್ ಫಾರ್ ಓರ್ಥೊಗ್ನಾಥಿಕ್ ಸರ್ಜರಿ -ಕಲೆಯೋ ವಿಜ್ಞಾನವೋ ಎಂಬ ವಿಚಾರದಡಿಯಲ್ಲಿ ಒಂದು ದಿನದ ಕಾರ್ಯಗಾರ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಯೆನೆಪೋಯ ವಿವಿ ಉಪ ಕುಲಪತಿ ಪ್ರೊ. ಡಾ. ಪಿ. ಚಂದ್ರಮೋಹನ್ ಉದ್ಘಾಟಿಸಿದರು.

ಯೆನೆಪೋಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎಚ್. ಶ್ರಿಪತಿ ರಾವ್ ವಿಷಯ ಕುರಿತು ಮಾತನಾಡಿದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಮೋದ್ ಸುಭಾಶ್ ಹಾಗೂ ಡಾ. ಅಕ್ಷಯ್ ಶೆಟ್ಟಿ ಪ್ಲಾನಿಂಗ್ ಬಗ್ಗೆ ಉಪನ್ಯಾಸ ನೀಡಿದರು. ದಕ್ಷಿಣ ಕನ್ನಡ ಹಾಗೂ ಪರಿಸರದ ದಂತ ವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸುಮಾರು ೨೩೦ ಮಂದಿ ಭಾಗವಹಿಸಿದ್ದರು.
ಓರಲ್ ಮ್ಯಾಕ್ಸಿಲೋ ಫ಼ೇಶಿಯಲ್ ವಿಭಾಗದ ಪ್ರೊಫೆಸರ್ ಡಾ. ಜೋಯ್ಸ್ ಸಿಕ್ವೇರ ಸ್ವಾಗತಿಸಿದರು. ಡಾ. ಜಗದೀಶ್ ಚಂದ್ರ ವಂದಿಸಿದರು.




