Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ದಿನನಿತ್ಯ ವಾಹನ ಸವಾರರಿಗೆ ಅಲ್ಲಿಂದ ಹಾದುಹೋಗುವುದು ತೀರಾ ಕಷ್ಟ, ಪಾದಚಾರಿಗಳಿಗಂತೂ ಹೋಗುವುದೇ ಅಸಾಧ್ಯ. ಆದರೂ ಮೂಗುಮುಚ್ಚಿಕೊಂಡೇ ಮುಂದೆ ಸಾಗುವ ಅನಿವಾರ್ಯತೆ ಎಲ್ಲರಿಗೂ ಇದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕುತ್ತಾರು ಪ್ರದೇಶದಲ್ಲಿ ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳು , ಅಂಗಡಿ, ಮನೆ ಎಲ್ಲವೂ ಅಧಿಕ ಸಂಖ್ಯೆಯಲ್ಲಿ ತಲೆ ಎತ್ತಿನಿಂತಿದೆ. ಆದರೆ ವಿಪರ್ಯಾಸವೆಂದರೆ ಅಷ್ಟೂ ಕಟ್ಟಡಗಳಲ್ಲಿನ ಜನ ಉಪಯೋಗಿಸಿ ಬಿಸಾಡಿದ ಸೊತ್ತುಗಳಿಗೆ ಮುಕ್ತಿ ದೊರಕಿಸಲು ಯಾವುದೇ ವ್ಯವಸ್ಥೆಯಿಲ್ಲ. ಸಂಬಂಧಪಟ್ಟ ಪಂಚಾಯಿತಿ ಕೂಡಾ ಸರಕಾರದ ಅನುದಾನವಿಲ್ಲವೆಂದು ಕೈಚೆಲ್ಲಿ ನಿಂತಿದೆ. ಇದನ್ನು ಸವಾಲಾಗಿ ಸ್ವೀಕರಿಸಿದ ಮುನ್ನೂರು ಪಂಚಾಯಿತಿ ಅಧ್ಯಕ್ಷೆ ರೂಪಾ.ಆರ್.ಶೆಟ್ಟಿ ಅವರು ಹಲವು ಸಮಯದಿಂದ ಕುತ್ತಾರು ಜಂಕ್ಷನ್ನಿನಲ್ಲಿ ಎಚ್ಚರಿಕೆ ಫಲಕವಿದ್ದರೂ ತುಂಬಿದ್ದ ಕಸದ ರಾಶಿಯನ್ನು ಖುದ್ದು ತಾವೇ ಶುಚಿಗೊಳಿಸಲು ಮುಂದಾಗಿರುವ ಪ್ರಸಂಗ ಇತ್ತೀಚೆಗೆ ನಡೆಯಿತು. ನಾಲ್ಕು ವಸತಿ ಸಂಕೀರ್ಣಗಳು, ದೇವಸ್ಥಾನ , ಟೈಲ್ಸ್ ಕಾರ್ಖಾನೆ, ಶಾಲೆ ಇರುವ ಕುತ್ತಾರು ಜಂಕ್ಷನ್ನಿನ ರಸ್ತೆ ಬದಿಯಲ್ಲೇ ಕಸದ ರಾಶಿ ಬೆಟ್ಟದಂತೆ ತಲೆ ಎತ್ತಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯಾ: ಕಿನ್ಯಾ ಗ್ರಾಮ ಪಂಚಾಯತ್ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣಾ ಕಾರ್ಯ ಕ್ರಮ ದಲ್ಲಿ ಕಿನ್ಯಾ ಗ್ರಾಮದಲ್ಲಿ 103 ಫಲಾನುಭವಿಗಳಿಗೆ ತಿಳುವಳಿಕೆ ಪತ್ರವನ್ನು ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಮಾಲಿನಿ ಮತ್ತು ಉಪಾದ್ಯಕ್ಷರಾದ ಸಿರಾಜ್ ಕಿನ್ಯಾರವರು ವಿತರಿಸಿದರು. ಬಳಿಕ ಮಾತನಾಡಿದ ಉಪಾದ್ಯಕ್ಷರಾದ ಸಿರಾಜ್ ಕಿನ್ಯಾ, ಕರ್ನಾಟಕ ರಾಜ್ಯ ಸರಕಾರವು ಆಶ್ರಯ ಯೋಜನೆಯಲ್ಲಿ ಯಾರೆಲ್ಲಾ ಸಾಲ ಪಡೆದಿದ್ದಾರೋ ಅದನ್ನೆಲ್ಲಾ ಮನ್ನಾ ಮಾಡುವ ಮೂಲಕ ತಿಳುವಳಿಕೆ ಪತ್ರವನ್ನು ಸರಕಾರದ ಆದೇಶದ ಮೂಲಕ ಸಾರ್ವಜನಿಕರಿಗೆ ತಳುಪಿಸಿದ್ದೇವೆಂದು ತಿಳಿಸಿದರು. ಪಂಚಾಯತ್ ಸದಸ್ಯರಾದ ಮೊಹಮ್ಮದ್,ಮಹಾಬಲ ಪೂಂಜ, ಶ್ರೀಮತಿ ಮೈಮೂನಾ,ಪಂಚಾಯತ್ ಅಬಿವೃದ್ದಿ ಅಧಿಕಾರಿ ಕುಮಾರಿ ಪೂರ್ಣಿಮಾ,ಕಾರ್ಯದರ್ಶಿ ಶ್ರೀಮತಿ ಸುರೇಖಾ ,ಗುಮಾಸ್ತರಾದ ಅಶ್ರಫ್,ಸಿಬ್ಬಂದಿ ಚೇತನ್,ಕವಿತಾ,ದಿವ್ಯಾ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕುರ್ನಾಡು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಬಂಟ್ವಾಳ ತಾಲೂಕಿನ ಮೆಸ್ಕಾಂ ಉಪಕೇಂದ್ರ ಕಚೇರಿಯನ್ನು ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೊಳಿಯಾರ್ ಅವರು ಮಾತನಾಡಿ, ಮುಡಿಪು ಪ್ರದೇಶದಲ್ಲಿ ಮೆಸ್ಕಾಂ ಉಪಕೇಂದ್ರ ಕಚೇರಿ ನಿರ್ಮಾಣ ಆಗಬೇಕುನ್ನುವುದು ಈ ಭಾಗದ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕುರ್ನಾಡು ವ್ಯಾಪ್ತಿಯ ಮುಡಿಪು ಪ್ರದೇಶವು ಇತ್ತೀಚೆಗೆ ದಿನದಿಂದ ದಿನಕ್ಕೆ ಅಭಿವೃದ್ದಿ ಕಾಣುತ್ತಿದ್ದು, ಆದರೆ ಇಲ್ಲಿ ಮೆಸ್ಕಾಂ ಉಪ ಕಚೇರಿ ಇಲ್ಲದೆ ಜನರು ಬಹಳಷ್ಟು ತೊಂದರೆಯನ್ನು ಎದುರಿಸುತ್ತಿದ್ದರು. ಇದೀಗ ಕುರ್ನಾಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮೆಸ್ಕಾಂ ಉಪಕೇಂದ್ರ ಕಚೇರಿಯು ಕಾರ್ಯಾರಂಭಗೊಂಡಿದ್ದರಿಂದ ಕುರ್ನಾಡು, ನರಿಂಗಾನ, ಬಾಳೆಪುಣಿ,ಕೈರಂಗಳ ಹಾಗೂ ಇನ್ನಿತರ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯರಾದ ಟಿ.ಜಿ.ರಾಜಾರಾಂ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೆಸ್ಕಾಂ ಇಂಜಿನಿಯರ್ ಜಿ.ನಾರಾಯಣ ಭಟ್ ಕೊಡಕ್ಕಲ್, ಉಪಾಧ್ಯಕ್ಷರಾದ ನಿತಿನ್ ಕುಮಾರ್ ಗಟ್ಟಿ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಿರುನಲ್ವೇಲಿ :ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 10 ಮಂದಿ ದಾರುಣವಾಗಿ ಸಾವನ್ನಪ್ಪಿ ,ಇತರ 18 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅಪಘಾತ ಶುಕ್ರವಾರ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಸಂಭವಿಸಿದೆ. ತಿರುವನಂತಪುರಂನಿಂದ ವೆಲಂಕಣಿ ಕಡೆಗೆ ಪ್ರವಾಸಿಕ್ಕೆಂದು ತೆರಳುತ್ತಿದ್ದು ತಮಿಳುನಾಡಿನ ಪಾಂಡಿಚೆರಿಯಿಂದ ಕೇರಳಗೆ ಹೋಗುತ್ತಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ತಿರುವು ತೆಗೆದುಕೊಳ್ಳಲು ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಸ್ಥಳದಲ್ಲಿದ್ದ ಬಂಡೆಯೊಂದಕ್ಕೆ ಬಸ್ ಢಿಕ್ಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಅವಘಡ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರ ಮಹೋತ್ಸವ ಪ್ರಯುಕ್ತ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿ ಅವಿರತ ಸೇವೆ ಸಲ್ಲಿಸುತ್ತಾ ಬಂದಿರುವ ಗುರುಸ್ವಾಮಿ ವಿಶ್ವನಾಥ ಕಾಯರ್ ಪಳಿಕೆ , ಗೋಪಾಲ ಶೆಟ್ಟಿ, ಶಿವಾನಂದ ರೆಡ್ಡಿ, ಪುಷ್ಪಲತಾ ರೈ ಇವರನ್ನು ಅಭಿನಂಧಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಟಿ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಗಿರೀಶ್ ಆಳ್ವ, ಹೇಮಂತ್ ಶೆಟ್ಟಿ, ಮೋಹನಾಂಗಯ್ಯ ಸ್ವಾಮಿ, ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಅಡ್ಯಂತಾಯ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ರೈ ಸನ್ಮಾನಿತರ ವಿವರ ಓದಿದರು. ಜಾತ್ರೆ ಪ್ರಯುಕ್ತ ಸಾಂಸ್ಕøತಿಕ ಕಾರ್ಯಕ್ರಮ, ಸುಗಮ ಸಂಗೀತ ಕಾರ್ಯಕ್ರಮ ಮತ್ತು ಶ್ರೀ ಕಟೀಲು ಮೇಳದವರಿಂದ ಯಕ್ಷಗಾನ ನಡೆಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆಯ ಅನ್ವಯ, ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಬೋಂದೆಲ್. ಕೇಸರಿ ಮಿತ್ರ ವೃಂದ ಮತ್ತು ಕೇಸರಿ ಮಾತೃ ಮಂಡಳಿಯ ಸಹಭಾಗಿತ್ವದಲ್ಲಿ ಉಚಿತ ಟೈಲರಿಂಗ್ ಶಿಬಿರವನ್ನು ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಿ.ಎನ್.ಕುಂಬಾರ ಕೇಸರಿ ಸಭಾಭವನದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಸರಿ ಸೇವಾ ಟ್ರಸ್ಟ್ ನ ಟ್ರಸ್ಟಿ ನಾರಾಯಣ ಕುಂಪಲ ವಹಿಸಿದ್ದರು. ಈ ಸಂದರ್ಭ ಮಾತೃ ಮಂಡಳಿಯ ಅಧ್ಯಕ್ಷೆ ಪ್ರಮೀಳಾ ವಿಜಯ್, ಗೌರವ ಸಲಹೆಗಾರರಾದ ಜಯಲಕ್ಷ್ಮಿ ಕುಂಪಲ, ರಾಕೇಶ್ ಶೆಟ್ಟಿ, ಚಂದ್ರಕಲ ಎಸ್. ಕುಮಾರ್ ಉಪಸ್ಥಿತರಿದ್ದರು. ಲಲಿತಾ ಕೇಶವ್ ಸ್ವಾಗತಿಸಿದರು. ಮಮತ ಜೀತೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಿನಿ ದೇವದಾಸ್ ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಪ್ರತಿಯೊಂದು ಜೈವಿಕ ಸಂಪತ್ತಿನಲ್ಲೂ ಅದರದೇ ಆದ ವೈಶಿಷ್ಟ್ಯತೆ ಇದ್ದು ,ಒಂದನ್ನೊಂದು ಪ್ರಾಕೃತಿಕವಾಗಿ ಅವಲಂಬಿಸಿದ್ದು ಅದರ ಬಗೆಗೆ ವಿದ್ಯಾರ್ಥಿಗಳು ಗ್ರಹಿಕೆ ಮತ್ತು ಸಂಶೋಧನೆಯಲ್ಲಿ ತೊಡಗಿಸುವಂತೆ ದೇರಳಕಟ್ಟೆ ಕಣಚೂರು ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ಅರುಣಾಚಲಂ ಕುಮಾರ್ ಕರೆ ನೀಡಿದರು . ಅವರು ಉಳ್ಳಾಲ ಸುಭಾಸ್‍ನಗರದ ಕೆ.ಪಾಂಡ್ಯರಾಜ್ ಬಲ್ಲಾಳ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನಡೆದ “ಜೈವಿಕ ವೈವಿಧ್ಯ ಮತ್ತು ಅದರ ಸಂರಕ್ಷಣೆ ” ಕುರಿತಾದ ಪ್ರಾದೇಶಿಕ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು . ಜೈವಿಕ ಸಂಪತ್ತನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ .ಪ್ರತಿ ಜೀವ ರಾಶಿಯಲ್ಲೂ ಅದರದೇ ಆದ ವೈಶಿಷ್ಟ್ಯವಿದ್ದು ಅದರ ಬಗ್ಗೆ ವಿದ್ಯಾರ್ಥಿಗಳು ಆಳವಾಗಿ ಗ್ರಹಿಸಿ ,ಸಂಶೋಧನೆಗಳನ್ನು ನಡೆಸಬೇಕು. ಹಕ್ಕಿಯು ತನ್ನ ಕತ್ತನ್ನು ಹಿಂತಿರುಗಿಸಿ ನೋಡದಿದ್ದರೂ ,ಮುಂಬರುವ ಆಪತ್ತನ್ನು ಜಗತ್ತಿಗೆ ತಿಳಿಸುವ ವಿಶೇಷ ಗ್ರಹಣ ಶಕ್ತಿಯನ್ನು ಹೊಂದಿದೆ .ಅದು ತನ್ನ ಕೈ ,ಕಾಲುಗಳಿಂದ ಏನನ್ನೂ ಮಾಡದಿದ್ದರೂ ಆ ಹಕ್ಕಿಯ ಬಗ್ಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದಂದಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ,ಅಕಸ್ಮಾತ್ ಮಾಡಿದ್ದರೂ ಅದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಮಂಜೂರಾದ ಯೋಜನೆಯಾಗಿದ್ದು ಪ್ರಸಕ್ತ ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಶಾಲಾ ಶಿಕ್ಷಕರಿಗೆ ಚಾಕ್‍ಗಳನ್ನು ಒದಗಿಸಲು ಹೆಣಗಾಡುತ್ತಿರವುದೇ ಸ್ಪಷ್ಟ ಉದಾಹರಣೆ ಎಂದು ವಿದಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಲೇವಡಿ ಮಾಡಿದರು . ಅವರು ತೊಕ್ಕೊಟ್ಟು ಕೊಲ್ಯದ ನಾರಾಯಣ ಗುರು ಸಭಾಭವನದಲ್ಲಿ ಮಂಗಳೂರು ವಿದಾನಸಭಾ ಕ್ಷೇತ್ರ ಬಿಜೆಪಿ ಯುವಮೋರ್ಚಾವತಿಯಿಂದ ನಡೆದ ಬೈಕ್ ರ್ಯಾಲಿ ಮತ್ತು “ಯುವ ಸಮವೇಶ”ವನ್ನು ಉದ್ಘಾಟಿಸಿ ಮಾತನಾಡಿದರು .ಜಗತ್ತಿನಲ್ಲೇ ಅರವತ್ತು ಶೇಕಡ ಯುವ ಶಕ್ತಿಯನ್ನು ಹೊಂದಿರುವ ರಾಷ್ಟ್ರ ನಮ್ಮದು ,ಒಳ್ಳೆಯ ಕೆಲಸಗಳನ್ನು ಹೊಗಳುವ ಸಂಸ್ಷøತಿ ನಮ್ಮದು ಎಂಬುದನ್ನು ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಾನು ಬಿಜೆಪಿ ಪಕ್ಷದವರಾದರೂ ಕಾಂಗ್ರೆಸಿನ ಮಾಜಿ ಪ್ರದಾನಿ ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಬಣ್ಣಿಸುವ ಮುಖಾಂತರ ತೋರಿಸಿಕೊಟ್ಟಿದ್ದಾರೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಾರು ಮರಕ್ಕೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಗಂಭೀರ ಗಾಯಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತಿಬ್ಲಪದವು ಎಂಬಲ್ಲಿ ಇಂದು ರಾತ್ರಿ ನಡೆದಿದೆ. ಕೊಣಾಜೆ ವೊರ್ಕರೆಗುಡ್ಡೆ ನಿವಾಸಿಗಳಾದ ಒಂದೇ ಕುಟುಂಬದ ಕಾರು ಚಲಾಯಿಸುತ್ತಿದ್ದ ಮಹಮ್ಮದ್ ಅಸ್ಫಪಹಾನ್(25) ಪ್ರಯಾಣಿಕರಾಗಿದ್ದ ಶಿಫಾನ ಪರ್ವೀನ್ (17), ಶಮೀರಾ (350), ಇಶಾನಾ(13) ಗಾಯಗೊಂಡು, ಮುಮ್ತಾಝ್(45) ಎಂಬವರು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಣಾಜೆ ವೊರ್ಕರೆಗುಡ್ಡೆಯಿಂದ ಸೋಮೇಶ್ವರ ಉಚ್ಚಿಲದ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ತಿಬ್ಲಪದವು ಬಳಿ ಎದುರುಗಡೆಯಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಎಡಬದಿಯಲ್ಲಿ ಇದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಂದು ಬಾಗಿಲು ಕೆಲ ಕಿ.ಮೀ ದೂರ ಬಿದ್ದಿತ್ತು. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕ್ಷಕಿರಣ, ಹೊರರೋಗಿಗಳ ವಿಭಾಗ, ಡಯಾಲಿಸಿಸ್, ಸ್ಪೀಚ್ ಥೆರಪಿ ಮೊದಲಾದ ವ್ಯವಸ್ಥೆಗಳುಳ್ಳ ಆಸ್ಪತ್ರೆಯನ್ನು ಮಾದರಿಯಾಗಿಟ್ಟುಕೊಂಡು ಖಅಸಗಿ ಆಸ್ಪತ್ರೆಗೆ ಮಿಗಿಲಾಗಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗುವುದು. ಹಾಗೆಯೇ ರಾಜ್ಯದ ಉದ್ದಗಲಕ್ಕೂ ಮಾದರಿ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಉಳ್ಳಾಲದಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿ ಆಸ್ಪತ್ರೆ ನಿರ್ಮಾಣಕ್ಕಿಂತ ನಿರ್ವಹಣೆ ಕಷ್ಟ. ಹಾಗಾಗಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದಲ್ಲಿ 30ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಿಸ್ತರಿಸಲಾಗುವುದು ಎಂದರು. ಉಳ್ಳಾಲ ನಗರಸಭೆಯ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಗಳ್ ಕೂರತ್ ಶಿಲಾನ್ಯಾಸಗೈದು ದುಆ ನೆರವೇರಿಸಿದರು. ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್, ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಚರ್ಚ್‍ನ ಧರ್ಮಗುರು…

Read More