Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಜ್ಯ ಅಲ್ಪಸಂಖ್ಯಾತ ನಿಗಮದಿಂದ ಕ್ರೈಸ್ತ ಸಮುದಾಯಕ್ಕೆ ಕೊಡಮಾಡುವ ಶ್ರಮಶಕ್ತಿ ಸಾಲ 629 ಮಂದಿಗೆ ಹಾಗೂ ಕಿರುಸಾಲ 216 ಮಂದಿಗೆ ವಿತರಣೆ ಕಾರ್ಯಕ್ರಮ ಮಂಗಳವಾರ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ನರ ಚರ್ಚ್ ವಠಾರದಲ್ಲಿ ನಡೆಯಿತು. ಫಲಾನುಭವಿಗಳಿಗೆ ಸಾಲ ವಿತರಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ವರ್ಷ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕೇವಲ ಮಂದಿ ಫಾಲನುಭವಿಗಳನ್ನು ಮಾತ್ರ ಆಯ್ಕೆ ಮಾಡಿತ್ತು. ಆದರೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಬೇಕು ಎಂದು ತಾನು ಒತ್ತಾಯಿಸಿದ ಪರಿಣಾಮ ಎಲ್ಲರಿಗೂ ಸಿಗುವಂತಾಗಿದೆ. ಈ ಮೂಲಕ ಸರ್ಕಾರದ ಸವಲತ್ತು ಜನಸಾಮಾನ್ಯರ ಕಾಲಬುಡಕ್ಕೆ ತಲುಪಿಸುವ ಪ್ರಯತ್ನ ಜನಪ್ರತಿನಿಧಿಗಳಿಂದ ನಡೆದಿದೆ. ಸಾಲ ಪಡೆದವರು ವ್ಯಾಪಾರ ಆರಂಭಿಸಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕು ಎಂದು ಹೇಳಿದರು. ಈ ಸಂದರ್ಭ ಚರ್ಚ್‍ನ ಧರ್ಮಗುರು ಫಾ.ಜೆ.ಬಿ.ಸಲ್ದಾನ, ಉಳ್ಳಾಲ ನಗರಸಭೆ ಉಪಾಧ್ಯಕ್ಷ ರಝಿಯಾ ಇಬ್ರಾಹಿಂ, ಕೌನ್ಸಿಲರ್‍ಗಳಾದ ಫಾರೂಕ್ ಉಳ್ಳಾಲ್, ಬಾಜಿಲ್ ಡಿಸೋಜ, ಉಸ್ಮಾನ್ ಕಲ್ಲಾಪು, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ: ಹೆಚ್ಚಿನ ಗ್ರಾಮ ಪಂಚಾಯಿತಿಗಳು ಕೇವಲ ನೀರು ಪೂರೈಕೆ, ರಸ್ತೆ ಅಭಿವೃದ್ಧಿ, ಚರಂಡಿ, ದಾರಿದೀಪದ ಬಗ್ಗೆ ಮಾತ್ರವೇ ಗಮನಹರಿಸುತ್ತಿದ್ದು ಇದೇ ವೇಳೆ ಗ್ರಾಮ ಪಂಚಾಯಿತಿಗೆ ಆದಾಯ ತರುವ ಕೆಲಸಗಳ ಬಗ್ಗೆಯೂ ಯೋಜನೆ ರೂಪಿಸಬೇಕು ಎಂದು ಆರೋಗ್ಯ ಸಚಿಯ ಯು.ಟಿ.ಖಾದರ್ ಹೇಳಿದರು. ಮಂಜನಾಡಿ ಗ್ರಾಮ ಪಂಚಾಯಿತಿ ವತಿಯಿಂದ ನಾಟೆಕಲ್‍ನಲ್ಲಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಗ್ರಾಮಾಭಿವೃದ್ಧಿ ಯೋಜನೆಗೆ ಹೆಚ್ಚಿನ ಆಧ್ಯತೆ ನೀಡಿದ್ದು 1.5 ಕೋಟಿ ರೂಪಾಯಿ ನೀಡುತ್ತಿದೆ. ಇದು ಮಂಜನಾಡಿಗೂ ದೊರಕಲಿದ್ದು ಒಳರಸ್ತೆ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗಳು ಶೀಘ್ರ ಆರಂಭಗೊಳ್ಳಲಿದೆ. ಇತರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಮತ್ತು ಸದಸ್ಯರ ಮಧ್ಯೆ ವೈಮನಸ್ಸು ಇದ್ದು ಮಂಜನಾಡಿಯಲ್ಲಿ ಅಂತಹ ಸಮಸ್ಯೆ ಇಲ್ಲದ ಕಾರಣ ಗ್ರಾಮ ಅಭಿವೃದ್ಧಿ ಸುಲಲಿತವಾಗಿದೆ. ನಿವೇಶನ, ಹಕ್ಕುಪತ್ರ ವಿತರಣೆ ಪ್ರಗತಿಯಲ್ಲಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಸದಸ್ಯರಾದ ಮಹಮ್ಮದ್ ಮುಸ್ತಫಾ ಹರೇಕಳ, ಮಹಮ್ಮದ್ ಮೋನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾವೂರು: ಕೋಟೆಕಾರ್‍ನಲ್ಲಿ ನಾದುರಸ್ಥಿಯಲ್ಲಿರುವ ಪ್ರಾಥಮಿಕ ಪಶು ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕಾಗಿ 22 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಶೀಘ್ರವೇ ಶಿಲಾನ್ಯಾಸ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಪಾವೂರು ಗ್ರಾಮ ಕಂಬಳಪದವಿನಲ್ಲಿ 26 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪಶು ಚಿಕಿತ್ಸಾಲಯ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಪಾವೂರು ಪಶು ಚಿಕಿತ್ಸಾಲಯದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಾಣಿಗಳು ಉಳಿದರೆ ಮಾತ್ರ ಜನಜೀವನ ಸುಲಲಿತವಾಗುತ್ತದೆ. ಸಾಕು ಪ್ರಾಣಿಗಳನ್ನು ಉಳಿಸುವುದು ಕ್ಲಿಷ್ಟಕರವಾಗಿದ್ದು ಇದಕ್ಕಾಗಿ ಚಿಕಿತ್ಸಾಲಯ ಅನಿವಾರ್ಯ. ಈಗಾಗಲೇ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದ್ದು ಪ್ರಾಣಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮೆಲ್ವಿನ್ ಡಿಸೋಜ, ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್, ಉಪಾಧ್ಯಕ್ಷೆ ಲೀಲಾವತಿ ನಾಟ್ರಕೋಡಿ, ಸದಸ್ಯರಾದ ರುಪೀನಾ ಲೂವಿಸ್, ಮಹಮ್ಮದ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸರಸ್ವತಿ ಕಾಲನಿಯಿಂದ ಸೋಮೇಶ್ವರದವರೆಗೆ ಶಾಸಕರ ವಿಶೇಷ ಅನುದಾನದಲ್ಲಿ ಆಗಲಿರುವ ರಸ್ತೆಯ ಕಾಂಕ್ರೀಟಿಕರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಶಿಲಾನ್ಯಾಸಗೈದರು. ಬಳಿಕ ಮಾತನಾಡಿದ ಅವರು ಉಳ್ಳಾಲ ಭಾಗದ ಎಲ್ಲಾ ಒ¼ರಸ್ತೆಗಳಿಗೆ ಹೆಚ್ಚಿನ ಒಲವು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಳ್ಳಾಲವನ್ನು ರಾಜ್ಯದಲ್ಲಿ ಅಭಿವೃದ್ಧಿ ಗ್ರಾಮವನ್ನಾಗಿ ರೂಪಿಸಲಾಗುವುದು ಎಂದರು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಸೋಮೇಶ್ವರ ಪಂ.ಸದಸ್ಯರಾದ ಶಾಲಿನಿ.ವಿ.ಶೆಟ್ಟಿ, ಮಾಧವ ಗಟ್ಟಿ, ನೋವಿತ.ವಿ.ಗಟ್ಟಿ, ಸದಾಶಿವ ಉಳ್ಳಾಲ, ದಿನೇಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸಮಾಜಕ್ಕೆ ಪೂರಕವಾಗುವ ಕೆಲಸದಲ್ಲಿ ಯುವಜನತೆ ಕಾರ್ಯ ನಡೆಸಿದಾಗ ಶಾಂತಿಯುತ ವಾತಾವರಣದ ಜತೆಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಪೆರ್ಮನ್ನೂರ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ತೊಕ್ಕೊಟ್ಟು ಶಾಲಾ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಥಮ ವಾರ್ಷಿಕೋತ್ಸವ ಮತ್ತು ರಂಗ್ ತರಂಗ್-2016 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸ್ಪೋಟ್ರ್ಸ್ ಕ್ಲಬ್ ಕಾರ್ಯ ಚಟುವಟಿಕೆ ಶ್ಲಾಘನೀಯ. ಯುವಜನತೆ ಐಕ್ಯತೆ, ಏಕತೆ, ಸಹೋದರತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯ. ಹಿರಿಯರು, ಧಾರ್ಮಿಕ ಮುಖಂಡರು ಸಮಾಜದ ಆಸ್ತಿ ಸಂಪತ್ತಾಗಿದ್ದು, ಅವರ ಆದರ್ಶದಲ್ಲಿ ಎಲ್ಲರೂ ಬದುಕಬೇಕಿದೆ ಎಂದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕನ್ಯಾನ ಜಳಂತಬೆಟ್ಟು ಸಂತ ಪೌಲ್ ಚರ್ಚಿನ ಧರ್ಮಗುರು ಫಾ.ಪೀಟರ್ ಸೆರಾವೋ, ಭಜರಂಗಿ ಭಾಯಿಜಾನ್ ಚಿತ್ರದ ಸಹ ನಿರ್ಮಾಪಕ ರಾಜೇಶ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟುವಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಮಾದರಿ ರಸ್ತೆಯನ್ನು ರಚಿಸುವ ಮೂಲಕ ಜನರಿಗೆ ನೀಡಿದ ಭಾಷೆಯನ್ನು ಉಳಿಸಲಾಗಿದ್ದು, ಮುಂದೆ ರಸ್ತೆಯನ್ನು ಸಂಪೂರ್ಣ ವಿದ್ಯುದ್ದೀಕರಣ ನಡೆಸಿ ಪಾದಚಾರಿಗಳು ನಡೆದುಕೊಂಡು ಹೋಗಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ನೂತನ ಚತುಷ್ಪತ ರಸ್ತೆ ಕಾಂಕ್ರಟೀಕರಣ ಮತ್ತು ಅಬ್ಬಕ್ಕ ಸರ್ಕಲ್ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಒಂದು ಭಾಗದ ಕಾಂಕ್ರೀಟಿಕರಣ ಪೂರ್ಣಗೊಂಡಿದ್ದು, ಇನ್ನೊಂದು ಭಾಗದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ.ಆನಂತರ ಪಾದಚಾರಿಗಳಿಗೆ ಅನುಕೂಲವಾಗುವಂತೆ ನಡೆದುಕೊಂಡು ಹೋಗುವ ವ್ಯವಸ್ಥೆ ಮತ್ತು ಸಂಪೂರ್ಣ ವಿದ್ಯುದ್ದೀಕರಣ ನಡೆಸಲು 5 ಕೋಟಿ ರೂ ಅನುದಾನ ಮಂಜೂರಾಗಲಿದೆ. ಸೋಮೇಶ್ವರದಿಂದ ಮುಕ್ಕಚ್ಚೇರಿವರೆಗೆ ಸುಸಜ್ಜಿತ ರಸ್ತೆ, ಉಳ್ಳಾಲದ ನಗರಸಭೆ ಎದುರುಗಡೆಯಿಂದ ತೊಕ್ಕೊಟ್ಟು ಜಂಕ್ಷನ್ನಿನವರೆಗಿನ ರಸ್ತೆಯ ಕಾಂಕ್ರೀಟಿಕರಣ ನಡೆಸುವ ಮೂಲಕ ಅಭಿವೃದ್ಧಿಯ ಉಳ್ಳಾಲವನ್ನು ನಿರ್ಮಿಸಿ 5 ಕೋಟಿ ಅನುದಾನ ಬರುವಲ್ಲಿಗೆ 30…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹಳೆಕೋಟೆ: ಹಳೆಕೋಟೆಯ ಮಸ್ಜಿದ್ ಅಲ್-ಕರೀಂ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮರ್ಖಲ್ ಇಸ್ಲಾಂ ಮದರಸ ಇದರ ಜಂಟಿ ಅಶ್ರಯದಲ್ಲಿ ಮೀಲಾದುನ್ನೆಬಿ ಕಾರ್ಯಕ್ರಮ ಮತ್ತು ಹಳೆ ವಿದ್ಯಾರ್ಥಿ ಸಂಘ 24ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಸೈಯದ್ ಮದನಿ ಉರ್ದು ಅನುದಾನಿ ಶಾಲಾ ವಠಾರದಲ್ಲಿ ನಡೆಯಿತು. ಸೂಲಗಿತ್ತಿ ಪರಮೇಶ್ವರಿ, ಸುಧೀರ್ಘ 15ವರ್ಷ ಸೇವೆಸಲ್ಲಿಸಿದ ಅದಂ ಮುಸ್ಲಿಯಾರ್, ಪ್ರಮಾಣಿಕ ಸೇವೆಗೈದ ಅಬ್ದುಲ್ ರಹ್ಮಾನ್ ಯು.ಎಚ್, ಗಾಯಕ ಬಾಲ ಪ್ರತಿಭೆ ಮಾಸ್ಟರ್ ಸಲ್ಮಾನ್ ಪಾರಿಶ್ ಈ ಸಂಧರ್ಭ ಸನ್ಮಾನಿಸಲಾಯಿತು. ಮಸ್ಜಿದ್ ಅಲ್-ಕರೀಂ ಖತೀಬ್ ಉಸ್ಮಾನ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಸ್ಜಿದ್ ಅಲ್-ಕರೀಂ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಳೆಕೋಟೆಯ ಸೈಯದ್ ಮದನಿ ಉರ್ದು ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ, ಮಸ್ಜಿದ್ ಅಲ್-ಕರೀಂ ಜುಮಾ ಮಸೀದಿಯ ಉಪಾಧ್ಯಕ್ಷ ಯು.ಎಚ್ ಝೈನುದ್ದೀನ್, ಉದ್ಯಮಿ ಹಮೀದ್ ಕಣ್ಣೂರು, ಮರ್ಖಲ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೆಳ್ಮ: ಸಚಿವ ಯು.ಟಿ ಖಾದರ್ ಅನುದಾನದಿಂದ ಬೆಳ್ಮ ಗ್ರಾಮದ ರೆಂಜಾಡಿ ಬಡಕಬೈಲ್‍ನ ರಸ್ತೆ ಶಿಲಾನ್ಯಾಸವನ್ನು ಬೆಳ್ಮ ಗ್ರಾ.ಪ ಅಧ್ಯಕ್ಷ ವಿಜಯ ಕೃಷ್ಣಪ್ಪರವರು ಶುಕ್ರವಾರ ನೆರವೇರಿಸಿದರು. ಜಿ.ಪಂ ಸದಸ್ಯ ಎನ್.ಎಸ್ ಕರೀಂ, ಬೆಳ್ಮ ಗ್ರಾ.ಪ ಉಪಾಧ್ಯಕ್ಷ ಸಿ.ಎಂ ಸತ್ತಾರ್, ಮಾಜಿ ಅಧ್ಯಕ್ಷ ಯಸೂಫ್ ಬಾವ, ಸದಸ್ಯರಾದ ಅಬ್ದುಲ್ ರಝಾಕ್ ಕನೆಕ್ಕೆರೆ, ಸತೀಶ್ ಕುಮಾರ್, ಭವಾನಿ, ಕಬೀರ್.ಡಿ, ಎಂ.ಎಂ ಅಬ್ದುಲ್ಲ, ಮುನ್ನೂರು ಗ್ರಾ.ಪ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಮಾಜಿ ತಾಲೂಕು ಪ.ಸದಸ್ಯ ಸತ್ತಾರ್, ಸ್ಥಳೀಯರಾದ ಹುಸೈನ್ ಬಡಕಬೈಲ್, ಬಾವ, ರವೂಫ್ ರೆಂಜಾಡಿ, ಅಶ್ರಫ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ:  `ಸತ್ಯ ಮಾತನಾಡುತ್ತೇನೆ, ಅದಕ್ಕಾಗಿ ಯಾರೂ ನನ್ನನ್ನು ಕಾರ್ಯಕ್ರಮಕ್ಕೆ ಕರೆಯುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳುವ ಮೂಲಕ ನೆರೆದ ಕಾಂಗ್ರೆಸ್ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡಿರುವ ಸನ್ನಿವೇಶ ಅಸೈಗೋಳಿಯ ಅಭಯಾಶ್ರಮದಲ್ಲಿ  ಶುಕ್ರವಾರ ನಡೆಯಿತು. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಅಸೈಗೋಳಿಯ ಅಭಯಾಶ್ರಮ ವಾಸಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಸತ್ಯ ಮಾತನಾಡಿದರೆ ಒಳಿತಾಗುವುದಿಲ್ಲ ಬದಲು ಅವರು ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ ಎಂದರು. ಸೋತು ಸತ್ತಿದ್ದೇನೆ.  ಭಾಷಣದುದ್ದಕ್ಕೂ ಸತ್ಯವನ್ನೇ ಮಾತನಾಡುತ್ತೇನೆ. ಇದು ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡುತ್ತದೆ.  ಬಳಿಕ ಅವರು ಹಿಂದೆಯಿಂದ ಬೈಯ್ಯುವುದೂ ಉಂಟು.  ವಿಧಾನಸಭೆಗೆ ಸಲ್ಲದವರು ಕಾರ್ಯಕ್ರಮಗಳಿಗೂ ಸಲ್ಲದಂತಾಗಿದೆ.  ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯುವುದನ್ನು ಬಿಟ್ಟಿದ್ದಾರೆ ಎಂದು ಹತಾಶೆ ವ್ಯಕ್ತಪಡಿಸಿದರು. ನದಿ ತಿರುವು ಬಗ್ಗೆ ಸ್ವರ ಎತ್ತಬೇಕಿತ್ತು : ಆಶ್ರಮ ವಾಸಿಗಳಿಗೆ ನೀರಿನ ವ್ಯವಸ್ಥೆಯಿಲ್ಲ. ಇದು ಬೇಸರದ ಸಂಗತಿ.  ಕೂಡಲೇ ಶಾಸಕರು ಹಾಗೂ ಸಚಿವರು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆಯನ್ನು …

Read More

ಉಳ್ಳಾಲ್  ನ್ಯೂಸ್ ನೆಟ್ ವರ್ಕ್ ತಲಪಾಡಿ: ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಆಯ್ಕೆಯಾಗಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನಯ ನಾೈಕ್ ಅವರ ಮನೆಯ ವಠಾರದಲ್ಲಿ ಬಿಜೆಪಿ ತಲಪಾಡಿ ಗ್ರಾಮ ಸಮಿತಿ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಪ್ರ. ಕಾರ್ಯದರ್ಶಿಯಾಗಿ ರಾಜೀವ ದೇವಾಡಿಗ ದೇವಿಪುರ, ಉಪಾಧ್ಯಕ್ಷರಾಗಿ ಸಂತೋಷ್ ಕಡೇಮುಗೇರು, ಸೌಮ್ಯ ಗುಡ್ಡೆಮನೆ, ಕಾರ್ಯದರ್ಶಿಗಳಾಗಿ ರಾಜೇಶ್ ಗುಡ್ಡೆಮನೆ, ಫಯಾಝ್ ದೇವಿನಗರ, ಹಾಗೂ 10 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಪಕ್ಷ ಸಂಘಟನೆಯ ಕುರಿತು ಮಾಹಿತಿ ನೀಡಿದರು. ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಕ್ಷೇತ್ರ ಪ್ರ. ಕಾರ್ಯದರ್ಶಿ ಸಂಜೀವ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಕ್ಷೇತ್ರ ಪ್ರ. ಕಾರ್ಯದರ್ಶಿ ಯಶವಂತ್ ಅಮೀನ್ ಹೊಸ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟರು. ಚುನಾವಣಾ ಪ್ರಮುಖರಾಗಿ ಸುರೇಂದ್ರ ಶೆಟ್ಟಿ ಹಾಗೂ ಬಾಲಕೃಷ್ಣ ಭಾಗವಹಿಸಿದ್ದರು.…

Read More