ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ವಿಟ್ಲ: ಕರೋಪಾಡಿ ಗ್ರಾಮದ ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಮುಕ್ತಾಯದ ಹಂತದಲ್ಲಿದೆ. ಜ.24ರಿಂದ 31ರ ವರೆಗೆ ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯ ದೇವರ ಬಿಂಬಗಳ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ಅವರು ದೇಗುಲದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂದೇಶ ನೀಡಿ, 750 ವರ್ಷಗಳಿಗೂ ಪುರಾತನವಾದುದು. 23 ವರ್ಷಗಳ ಹಿಂದೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಜರುಗಿದೆ. ಇದೀಗ ಮತ್ತೆ 750 ವರ್ಷಗಳಿಗೂ ಪುರಾತನವಾದುದು. 23 ವರ್ಷಗಳ ಹಿಂದೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಜರುಗಿದೆ. ತುಳುನಾಡಿನ ಮಣ್ಣಿನಲ್ಲಿ ವಿಶೇಷ ಸತ್ವಗುಣವಿದೆ. ಕೃಷಿಕನಿಗೂ ಮಣ್ಣಿಗೂ ಉತ್ತಮ ಸಂಬಂಧವಿದೆ. ಈ ದೇಗುಲದಲ್ಲಿ ಆಳುಪ ವಂಶದ ರಾಜನು ಡೊಂಬ ಹೆಗ್ಗಡೆ ಸಹಿತವಾಗಿ ಸಭೆ ನಡೆಸಿದ ಶಿಲಾ ಶಾಸನವಿದೆ. ಎಂದು ಅವರು ವಿಶ್ಲೇಷಿಸಿದರು.
ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಅವರು ಮಾತನಾಡಿ ಗರ್ಭಗುಡಿಗೆ ತಾಮ್ರದ ಛಾವಣಿಯನ್ನು ಹಾಕಲಾಗಿದೆ. ವಿಶಿಷ್ಟವಾದ 16 ಕಂಬಗಳುಳ್ಳ ತೀರ್ಥಮಂಟಪ ರಚನೆಯಾಗಿದೆ. ಪ್ರತ್ಯೇಕ ಗಣಪತಿ ದೇವರ ಗುಡಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಅಪರೂಪದ ಪದ್ಮಾಸನ ಭಂಗಿಯಲ್ಲಿ ಕುಳಿತ ಗಣಪತಿ ದೇವರ ಪ್ರತಿಷ್ಠಾಪನೆ ಮಾಡಲಾಗುವುದು. ಈ ದೇಗುಲದ ಪುನರ್ನಿರ್ಮಾಣಕ್ಕೆ ಸುಮಾರು 1.20 ಕೋಟಿ ರೂ.ಗಳ ಮೊತ್ತ ಖರ್ಚಾಗಿದೆ. ಸರಕಾರದ ಅನುದಾನದಿಂದ ಜನಪ್ರತಿನಿಧಿಗಳ ಸಹಕಾರದಿಂದ ರಸ್ತೆ ಸುಸಜ್ಜಿತವಾಗಿದೆ ಎಂದು ವಿವರಿಸಿದರು.
ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ, ಅಧ್ಯಕ್ಷ ಮಹಾಬಲ ಶೆಟ್ಟಿ ಪಟ್ಲಗುತ್ತು, ಪ್ರಧಾನ ಕಾರ್ಯದರ್ಶಿ ಬಿ.ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಅನೆಯಾಲಮಂಟಮೆ, ಗುರಿಕ್ಕಾರ ಬೇತ ಗೋಪಾಲಕೃಷ್ಣ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ಕೊರಗಪ್ಪ ಶೆಟ್ಟಿ ಪಟ್ಲಗುತ್ತು, ಬ್ರಹ್ಮಕಲಶ ಸಮಿತಿ ಕೋಶಾ„ಕಾರಿ ದಿನೇಶ್ ಶೆಟ್ಟಿ ಪಟ್ಲಗುತ್ತು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಟ್ಲಗುತ್ತು ರಘುನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


