Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ರಾತ್ರಿಯಿಂದ ಬೆಳಿಗ್ಗಿನವರೆಗೂ ನಡೆದ ನಾಗಮಂಡಲೋತ್ಸವವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ವೀಕ್ಷಿಸಿ ಎಲ್ಲರ ಗಮನ ಸೆಳೆದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಸಂಬಂಧಗಳನ್ನು ರೂಪಿಸುವುದು ದೈವ ಶಕ್ತಿ, ಇಂತಹ ಶಕ್ತಿಯನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಹಾಗೂ ಆಧ್ಯಾತ್ಮ ನಾಯಕ ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರ ಕೊಲ್ಯದ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಐದನೇ ದಿನ ಶನಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ದೇವ ದೇವತೆಗಳಲ್ಲಿ ನಾಗನ ವೈಶಿಷ್ಟ್ಯ ಇದೆ. ಹಿಂದೂಗಳು ಮಾತ್ರವಲ್ಲ ಜೈನರು, ಬುದ್ಧರು ಎಲ್ಲರೂ ನಾಗದೇವರ ಆರಾಧಕರು. ಜಾಗೃತ ಚೈತನ್ಯ ಶಕ್ತಿ ನಾಗದೇವರಲ್ಲಿ ಮಾತ್ರ ಇದೆ. ಶ್ರದ್ಧೆ , ಭಕ್ತಿಯಿಲ್ಲದಿದ್ದಲ್ಲಿ ಅರ್ಥವಿಲ್ಲದ ಜೀವನ ಆಗುವುದು. ವೈವಿಧ್ಯತೆಗಳನ್ನು ಉಳಿಸುವುದು ಎಲ್ಲರ ಆದ್ಯ ಕರ್ತವ್ಯ . ಈ ನಿಟ್ಟಿನಲ್ಲಿ ಕೊಲ್ಯದ ಕ್ಷೇತ್ರದಲ್ಲಿ ನಡೆದ ನಾಗಮಂಡಲೋತ್ಸವದಿಂದ ನಾಗನ ಆರಾಧನೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದಂತಾಗಿದೆ ಎಂದರು. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಸ್ವಾಮೀಜಿ ಶ್ರೀ ವಿದ್ಯಾಪ್ರಸನ್ನ ತೀರ್ಥ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಚರ್ಚ್‍ನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರೇಕಳ ಗ್ರಾಮದ ರಾಜಗುಡ್ಡೆಯ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ. ಪಜೀರುವಿನಲ್ಲಿರುವ ಚರ್ಚ್‍ಗೆ ನುಗ್ಗಿದ್ದ ಕಳ್ಳರ ತಂಡ ಚರ್ಚ್‍ನ ಪರಮ ಪ್ರಸಾದ, ಪಾತ್ರಗಳು ಸೇರಿದಂತೆ ಲ್ಯಾಪ್‍ಟಾಪ್‍ಗಳನ್ನು ಕಳವು ಗೈದು ಪರಾರಿಯಾಗಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾ,ಮರಾದಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಕಳ್ಳತನದ ಆರೋಪಿಗಳನ್ನು ಬಂಧಿಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ಸಾಹುಲ್ ಹಮೀದ್ ತಲೆಮರೆಸಿಕೊಂಡಿದ್ದ. ಅಲ್ಲದೆ ಈತ ದೇರಳಕಟ್ಟೆ ಮೊಬೈಲ್ ಅಂಗಡಿ ಹಾಗೂ ಫ್ಯಾನ್ಸಿ ಅಂಗಡಿಗಳಿಗೂ ನುಗ್ಗಿ ಕಳ್ಳತನ ನಡೆಸಿದ್ದ. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಈತನನ್ನು ಗುರುವಾರ ಕೊಣಾಜೆ ಪೊಲೀಸ್ ಇನ್‍ಸ್ಪೆಕ್ಟರ್ ಅಶೋಕ್, ಪಿಎಸ್‍ಐ ಸುಧಾಕರ್. ಸಿಬ್ಬಂದಿಗಳಾದ ಸಂತೋಷ್ ಸಿ.ಜೆ, ಶಿವಪ್ರಸಾದ್, ಚಂದ್ರಶೇಖರ್,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ನಾಗಮಂಡಲೋತ್ಸವಗಳು ವ್ಯವಹಾರಿಕ ನೆಲೆಯಲ್ಲೇ ಮುಂದುವರಿಯಲಿದ್ದು ಈ ಬಗ್ಗೆ ಜಾಗೃತಿ ಅನಿವಾರ್ಯ ಎಂದು ಬಾರಕೂರು ಭಾರ್ಗವಬೀಡು ಮಹಾಸಂಸ್ಥಾನಂನ ಶ್ರೀ ಶ್ರೀ ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತೀ ಶ್ರೀ ಪಾದಂಗಳವರು ಎಚ್ಚರಿಸಿದರು. ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಮೂರನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮುಂಬಯಿಯಲ್ಲಿ ನೆಲೆಸಿರುವವರಲ್ಲಿ ಸಾಕಷ್ಟು ಹಣ ಇದೆ ಎನ್ನುವ ನೆಲೆಯಲ್ಲಿ ನಾಗಮಂಡಲೋತ್ಸವ ನಡೆಸಬೇಕಾದರೆ ಮುಂಬಾಯಿಯ ಹಣವೇ ಆಗಬೇಕು ಎನ್ನುವ ಭಾವನೆ ಇತ್ತೀಚಿನ ದಿನಗಳಲ್ಲಿ ಬೇರೂರಿದೆ. ಒಂದೇ ಕುಟುಂಬ ಎರಡು ಕೋಟಿ ಖರ್ಚು ಮಾಡಿ ಆಡಂಭರದ ನಾಗಮಂಡಲೋತ್ಸವ ಮಾಡಿ ಆರ್ಥಿಕ ನಷ್ಟ ಅನುಭವಿಸಿ ವರ್ಷದಲ್ಲೇ ಕೋರ್ಟಿಗೆ ಅಲೆದಾಡುತ್ತಿರುವುದನ್ನು ಕಾಣಬಹುದಾಗಿದೆ. ಕುಟುಂಬದಲ್ಲಿ ತೊಂದರೆ ಬಂದಾಗ ಒಳ್ಳೆಯ ಜ್ಯೋತಿಷ್ಯರಲ್ಲಿ ಸಲಹೆ ಪಡೆಯದೆ ಸಿಕ್ಕ ಸಿಕ್ಕವರಲ್ಲಿ ಸಲಹೆ ಕೇಳಲು ಹೋದರೆ ಆತ ಸಂಪತ್ತಿನ ಲೆಕ್ಕಾಚಾರ ಹಾಕಿ ಇಂತಹ ಸಲಹೆ ನೀಡುತ್ತಾನೆ. ಇದಕ್ಕೆ ಹೊಟೇಲ್, ಕೈಗಾರಿಕೋದ್ಯಮಿಗಳು ಬಲಿಯಾಗುತ್ತಿದ್ದು ಹೀಗೇ ಮುಂದುವರಿದರೆ ಎಂದು ತಿಳಿಸಿದರು.…

Read More

ಕನೋ: ನೈಜೀರಿಯಾದ ಈಶಾನ್ಯ ಭಾಗದಲ್ಲಿ ಬುಧವಾರ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 13 ಮಂದಿ ದುರ್ಮರಣ ಹೊಂದಿರುವ ಘಟನೆ ನಡೆಸಿದೆ. ನೈಜೀರಿಯಾದ ಈಶಾನ್ಯ ರಾಜ್ಯ ಚಿಬೋಕ್ ನಲ್ಲಿರುವ ಮಾರುಕಟ್ಟೆಗೆ ಪ್ರವೇಶಿದ್ದ ಐವರು ಉಗ್ರರು ಪೈಕಿ ಮೂವರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಯಾಚರಣೆ ನಡೆಸಿ 28ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ : ಕೇಂದ್ರ ಸರಕಾರದಿಂದ ಬೀಡಿ ಕಾರ್ಮಿಕರಿಗೆ ಆಪತ್ತು ಬಂದಿದೆ. ಕೂಡಲೇ ಅವರಿಗೆ ಪರ್ಯಾಯ ಕೆಲಸ ಒದಗಿಸದೇ ಇದ್ದಲ್ಲಿ 3,000 ಕೋಟಿ ಮಂದಿ ಬೀದಿಗೆ ಬೀಳಲಿದ್ದಾರೆ ಎಂದು ಬೀಡಿ ಫೆಡರೇಶನ್ನಿನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಸಿಐಟಿಯು ವತಿಯಿಂದ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಆಶ್ರಯದಲ್ಲಿ ಬೀಡಿ ಕೈಗಾರಿಕೆ ಮುಚ್ಚಲ್ಪಟ್ಟರೆ ಬದಲಿ ಪರಿಹಾರ ಒದಗಿಸಿರಿ ಕುರಿತು ಸೋಮೇಶ್ವರ ಗ್ರಾಮ ಪಂಚಾಯತ್‍ನಲ್ಲಿ ನಡೆಸಿದ ಸರಕಾರದ ಸ್ಥಳೀಯ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 2003ರಿಂದ ದೇಶದಲ್ಲಿ ತಂಬಾಕು ಉತ್ಪನ್ನಗಳ ನಿಷೇಧ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಇದರಿಂದ ಕಾರ್ಮಿಕರು ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕಾರ್ಮಿಕರ ಜೀವನವನ್ನು ಆಪತ್ತಿನಲ್ಲಿ ತಂದಿಟ್ಟಿದೆ. ರಾಜ್ಯದ ಅತಿದೊಡ್ಡ ಪಂಚಾಯಿತಿ ಅನಿಸಿಕೊಂಡಿರುವ ಸೋಮೇಶ್ವರ ಪಂ. ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ. ಅವರ ಗಣತಿಯನ್ನು ನಡೆಸಿ ಪಂಚಾಯಿತಿ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಬೇಕಿದೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸೋಮೇಶ್ವರ ಗ್ರಾಮದ ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ಜ. 26ರಿಂದ 30ರವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ತೊಕ್ಕೊಟ್ಟು ಬಳಿಯ ಶ್ರೀ ನಾಗ ಸಾನಿಧ್ಯದಿಂದ ಶ್ರೀಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆಯ ಶೋಭಾಯಾತ್ರೆ ಮೆರವಣಿಗೆ ನಡೆಯಿತು ಹೊರೆಕಾಣಿಕೆಗೆ ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಚಾಲನೆ ನೀಡಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮುಂಬೈಯ ರಂಗೋತ್ಸವ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಲರಿಂಗ್ ಮತ್ತು ಕೈಬರಹ ಸ್ಪರ್ಧೆ `ಆರ್ಟ್ ಫೆಸ್ಟ್’ನಲ್ಲಿ ಭಾಗವಹಿಸಿದ್ದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಹೃತಿಕ್‍ಚಂದ್’ ಅಖಿಲ ಭಾರತದಲ್ಲಿ ದ್ವಿತೀಯ ಸ್ಥಾನಿಯಾಗಿ  `ಗೋಲ್ಡನ್ ಆರ್ಟ್ ಪ್ರಶಸ್ತಿ’ಯನ್ನು ಪಡೆದುಕೊಂಡಿದ್ದಾರೆ. ಇವರು ಮಾಡೂರಿನ ಚಾಂದಿನಿ ಹರೀಶ್ ಅವರ ಪುತ್ರ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ 67ನೇ ಗಣರಾಜ್ಯೋತ್ಸವವನ್ನು ದರ್ಗಾ ಅಧ್ಯಕ್ಷ ಯು.ಎಸ್ ಹಂಝ ದ್ವಜಾರೋಹಣಗೈದರು. ಖತೀಬರಾದ ಅಬ್ದುಲ್ ರವೂಫ್ ಮುಸ್ಲಿಯಾರ್‍ರವರು ದುಆಮಾಡಿದರು, ದರ್ಗಾ ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ಫಾರೂಕ್ ಮಾರ್ಗತಲೆ, ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ನಾಝಿಮ್, ಹಾಗೂ ದರ್ಗಾ ಮತ್ತು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Read More