Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಣಚೂರು : ಕಣಚೂರು ಶಿಕ್ಷಣ ಸಂಸ್ಥೆಯಲ್ಲಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಕಣಚೂರು ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ| ಅರುಣಾಚಲಂ ಕುಮಾರ್, ಶಾಲಾ ಸಂಚಾಲಕ ಅಬ್ದುಲ್ ರಹೆಮಾನ್, ಕಣಚೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಖಾಝಾ ನಸೀರುದ್ಧೀನ್, ಆಡಳಿತಾ„ಕಾರಿ ಡಾ| ರೋಹನ್ ಮೋನಿಸ್, ಕಣಚೂರು ಪದವಿ ಕಾಲೇಜಿನ ಪೆÇ್ರ| ಇಕ್ಬಾಲ್ ಅಹಮ್ಮದ್ ಯು.ಟಿ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್, ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯಿನನಿ ಆನಂದಿ, ಪ್ರಿ ಪ್ರೈಮರಿ ಶಾಲಾ ಮುಖ್ಯಶಿಕ್ಷಕಿ ಲಿನೆಟ್ ಡಿ.ಸೋಜ ಉಪಸ್ಥರಿದ್ದರು. ವಿದ್ಯಾರ್ಥಿನಿ ರುಖಿಯಾ ಶಫ್ನಾಝ್ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು, ನಿಹಾ ಮಿತ್ತಲ್ ಕಾರ್ಯಕ್ರಮ ನಿರ್ವಹಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹಿರಾ : ಗಣರಾಜ್ಯೋತ್ಸವದ ಅಂಗವಾಗಿ ಬಬ್ಬುಕಟ್ಟೆಯ ಹಿರಾ ಶಿಕ್ಷಣ ಸಂಸ್ಥೆಯಲ್ಲಿ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟ್‍ನ ಸ್ಥಾಪಕ ಸದಸ್ಯ ಮಹಮ್ಮದ್ ಅನ್ವರ್ ಧ್ವಜಾರೋಹಣಗೈದರು. ಶಾಂತಿ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷ ಅಬ್ದುಲ್ ರಹೆಮಾನ್, ಸಂಚಾಲಕ ರಹಮತುಲ್ಲ, ಸದಸ್ಯರಾದ ಉಮ್ಮರ್ ಬಾವ, ಅಬ್ದುಲ್ ಖಾದರ್, ಅಬ್ದುಲ್ ಕರೀಂ, ಹಸನ್ ಪಿಲಾರ್, ಮಹಮ್ಮದ್ ಸಮೀರ್, ಹಿರಾ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ನಝೀರ್ ಉಳ್ಳಾಲ್, ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಇಲಿಯಾಸ್, ಹಿರಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎ.ಕೆ. ಕುಕ್ಕಿಲ ಗಣರಾಜ್ಯೋತ್ಸವದ ಮಹತ್ವ ತಿಳಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾವೂರು : ಪಾವೂರು ಗ್ರಾಮದ ಮಲಾರ್ ಬದ್ರಿಯಾ ನಗರ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಗಣಿತ ಮೇಳದೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. ಶಾಲೆಯ ಶಿಕ್ಷಕ-ಶಿಕ್ಷಕಿಯರು, ಹೆತ್ತವರ ನೆರವಿನಿಂದ ವಿದ್ಯಾರ್ಥಿ0ಗಳು ತರಕಾರಿ ಅಂಗಡಿ, ಚಹಾ, ತಿಂಡಿ-ತಿನಿಸುಗಳು ಕ್ಯಾಂಟೀನ್ ಜೊತೆ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನ ಪಡೆದರು. ಅಲ್ಲದೆ ಗಣಿತದ ಮೂಲ ಕ್ರಿಯೆಗಳು, ಆಕೃತಿಗಳು, ಔಪಚಾರಿಕ ಮತ್ತು ಅನೌಪಚಾರಿಕ ಅಳತೆಗೋಳು, ರೇಖಾಗಣಿತ, ಭಿನ್ನರಾಶಿ, ಕೋನಗಳ ರಂಗೋಲಿಗಳು-ಆಕೃತಿಗಳ ಪ್ರದರ್ಶನ ನಡೆಸಿ ಗ್ರಾಮಸ್ಥರನ್ನು ಪುಳಕಗೊಳಿಸಿದರು. ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿನಾರಾಯಣ ಭಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಶ್ಯಾನ್‍ಭಾಗ್, ಕೊಣಾಜೆ ಪದವು ಸಿಆರ್‍ಪಿ ಸುಗುಣಾ, ಮುನ್ನೂರು ಸಿಆರ್‍ಪಿ ವತ್ಸಲಾ ಜೋಗಿ, ತಾ.ಪಂ. ಸದಸ್ಯ ಮುಹಮ್ಮದ್ ಮೋನು, ಗ್ರಾ.ಪಂ. ಸದಸ್ಯ ಎಂ.ಪಿ.ಹಸನ್, ಗ್ರಾಪಂ ಮಾಜಿ ಸದಸ್ಯ ಮುಹಮ್ಮದ್ ಬದ್ರಿಯಾನಗರ, ಪತ್ರಕರ್ತ ಹಂಝ ಮಲಾರ್, ಉದ್ಯಮಿಗಳಾದ ಇಸ್ಮಾಯಿಲ್ ಎಸ್.ಎಂ., ಅಸ್ಲಾಂ, ಎಸ್‍ಡಿಎಂಸಿ ಅಧ್ಯಕ್ಷ ಆರ್.ಮಜೀದ್ ಉಪಸ್ಥಿತರಿದ್ದು ಪ್ರೋತ್ಸಾಹ ನೀಡಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಜಮಾಹಿತುಲ್ ಮೊಹಲ್ಲಿಮೀನ್ ಇದರ ವತಿಯಿಂದ ದೇರಳಕಟ್ಟೆಯ ಸಿಟಿ ಗ್ರೌಂಡ್‍ನಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ವಿದ್ಯಾರತ್ನ ಆಂಗ್ಲ ಮಾದ್ಯಮ ಶಾಲಾ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಸುರೇಶ್ ಬಿ. ಶೆಟ್ಟಿ, ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯ ಮಹಾಬಲ ಪೂಂಜಾ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯ ಕಬೀರ್ ಡಿ, ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಮಾಜಿ ಆದ್ಯಕ್ಷ ಇಸ್ಮಾಯಿಲ್, ಅಧ್ಯಕ್ಷ ಅಬೂಬಕ್ಕಾರ್, ಕೆ.ಎಸ್. ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ಫಾರೂಕ್ ಕಲ್ಲಡ್ಕ, ಸಂಶುಲ್ಲಾ ಉಲಮಾ ಇಸ್ಲಾಮಿಕ್ ದೇರಳಕಟ್ಟೆ ಇದರ ಅಧ್ಯಕ್ಷ ಅಹಮ್ಮದ್ ಸಿರಾಜ್ ತಾಜ್, ಮಹಮ್ಮದ್ ಪನೀರ್, ಲತೀಫ್ ದಾರಿಮಿ, ಫಾರೂಕ್ ದಾರಿಮಿ, ಯಾಸರ್ ಅರಾಫತ್, ಕೆ.ಯು. ಖಲೀಲ್ , ರಹಮಾನ್ ಅರ್ಷದಿ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೆಸಿರೋಡ್: ದೇಶದಲ್ಲಿ ಪ್ರಜಾಪ್ರಭುತ್ವ ಸಿಕ್ಕಿದರೂ ಈಗಲೂ ತುಂಬಾ ಜನ ಬಡತನದಿಂದ ಇದ್ದು, ಈ ನಿಟ್ಟಿನಲ್ಲಿ ನೆಮ್ಮದಿ ಶಾಂತಿ ಐಕ್ಯತೆಯ ವಾತಾವರಣ ನಿರ್ಮಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದು ಕಾಂಗ್ರೆಸ್‍ನ ಉಳ್ಳಾಲ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಇಬ್ರಾಹಿಂ ಕೆಸಿರೋಡ್ ಹೇಳಿದರು. ಅವರು ಎಸ್,ಎಸ್,ಎಫ್ ಕೆ,ಸಿ.ರೋಡ್ ಯುನಿಟ್ ವತಿಯಿಂದ 25ನೇ ವರ್ಷದ ಅಂಗವಾಗಿ ತಲಪಾಡಿ ಪಟ್ನಾ ಹಿರಿಯ ಪ್ರಾಥಮಿಕ ಶಾಲೆಗೆ ವಾಟÀರ್ ಕೂಲರನ್ನು ಗಣರಾಜೋತ್ಸವದ ಸಂದರ್ಭದಲ್ಲಿ ವಿತರಿಸಿದರು. ಎಸ್,ಎಸ್,ಎಫ್ ಉಳ್ಳಾಲ ವಿಭಾಗದ ಉಪಾಧ್ಯಕ್ಷ ಮುಸ್ತಾಫ ಝಹರಿ ದುಆ ನೆರವೇರಿಸಿದರು. ಎಸ್,ಎಸ್,ಎಫ್ ಉಳ್ಳಾಲ ವಿಭಾಗದ ಉಪಾಧ್ಯಕ್ಷ ಮುಸ್ತಾಫ ಉಳ್ಳಾಲ್ ಮುಖ್ಯ ಭಾಷಣಗೈದರು. ಶಾಲೆಯ ಮುಖ್ಯೋಪದ್ಯಾಯÀ ಶ್ಯಾಮಲಾ.ಬಿ,ತಲಪಾಡಿ ಪಂಚಾಯತ್ ಸದಸ್ಯರಾದ ಹಸೈನಾರ್,ಇಸ್ಮಾಯಿಲ್ ಖಾದರ್, ಶಾಲಾಬಿವೃದ್ದಿ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್, ತಲಪಾಡಿ ವಲಯ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲಾಂ, ಎಸ್.ಎಸ್.ಎಫ್ ಕೆಸಿರೋಡ್ ಯುನಿಟ್ ಅಧ್ಯಕ್ಷ ಸಬೀರ್,ಉಪಾಧ್ಯಕ್ಷ ಅಲ್ತಾಫ್, ರಿಯಾಝ್, ಸದಸ್ಯರಾದ ಇಸ್ಮಾಯಿಲ್ ಬಿ.ಎಚ್ , ತಲಪಾಡಿ ಸೆಕ್ಟರ್ ಕಾರ್ಯದರ್ಶಿ ಶಿಹಾಬುದ್ದೀನ್ ,ಕೆಸಿರೋಡ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಆಗಸ್ಟ್ 18ರಂದು ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ದುರಂತ ಸಾವಿಗೀಡಾದ ಪೊಲೀಸ್ ಸಿಬ್ಬಂದಿ ಗಣೇಶ್.ಎಂ.ಪಿ ರವರ ಮಕ್ಕಳಾದ ಅಖಿಲ್ ಮತ್ತು ಅನುರಚನಾ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಿಸಿಬಿ ಪೋಲೀಸರ ವತಿಯಿಂದ ತಲಾ 50,0000 ರೂಪಾಯಿ ಸಹಾಯಧನವನ್ನು ಸಿಸಿಬಿ ಅಧಿಕಾರಿ ವೆಲೆಂಟಿನ್ ಡಿ’ಸೋಜ ಹಸ್ತಾಂತರಿಸಿದರು. ಗಣರಾಜ್ಯೋತ್ಸವ ದಿನದ ಅಂಗವಾಗಿ ಮಂಗಳೂರಿನ ಸಿ.ಸಿಬಿ ಕಚೇರಿಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಮ್ಮುಖದಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

Read More

ಬೆಂಗಳೂರು: 67ನೇ ಗಣರಾಜ್ಯೋತ್ಸವ ಆಚರಣೆಯನ್ನು ರಾಜ್ಯಾದ್ಯಂತ ವಿದ್ಯುಕ್ತವಾಗಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿ, ಸೈನಿಕರಿಂದ ಗೌರವ ರಕ್ಷೆ ಸ್ವೀಕರಿಸಿದರು. ಇದಕ್ಕೂ ಮೊದಲು ಪೊಲೀಸ್ ಬ್ಯಾಂಡ್ ವೃಂದದಿಂದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆಯೇ ಸೇನೆಯ ಹೆಲಿಕಾಪ್ಟರ್ ರಾಷ್ಟ್ರಧ್ವಜದ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಿತು. ಬಳಿಕ ಹಿಂದಿಯಲ್ಲಿ ಭಾಷಣ ಪ್ರಾರಂಭಿಸಿದ ರಾಜ್ಯಪಾಲರು, ಭಾರತ 67 ವರ್ಷಗಳ ಹಿಂದೆ ಗಣರಾಜ್ಯವಾಯಿತು. ಅದೆಷ್ಟೋ ಜನರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಗಣರಾಜ್ಯೋತ್ಸವ ದಿನವಾದ ಇಂದು ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದವರಿಗೆ ಗೌರವವನ್ನು ಈ ಮೂಲಕ ಸಲ್ಲಿಸುತ್ತೇವೆ ಎಂದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಬಾರ್‍ನಲ್ಲಿ ಕುಡಿದು ಹೊರಬಂದು ನಿಂತಿದ್ದ ವ್ಯಕ್ತಿಗೆ ಅಪರಿಚಿತ ತಂಡವೊಂದು ರೀಪಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ತಲಪಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ತಲಪಾಡಿ ನಿವಾಸಿ ಫ್ರಾನ್ಸಿಸ್ ಡಿಸೋಜಾ ಎಂಬವರು ಬಾರ್ ನಿಂದ ಕುಡಿದು ಬಂದು ರಸ್ತೆಬದಿಯಲ್ಲಿ ನಿಂತಿದ್ದರು. ಈ ವೇಳೆ ಬಾರಿನ ಒಳಗಡೆಯಿಂದ ಬಂದ ಸುಮಾರು 6 ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಓರ್ವ ರೀಪಿನಿಂದ ಸಿಕ್ಕ ಸಿಕ್ಕಲ್ಲಿಗೆ ಹೊಡೆಯಲು ಆರಂಭಿಸಿದ್ದಾನೆ. ಬಳಿಕ ಇತರರು ಸೇರಿಕೊಂಡು ಕೈ ಮತ್ತು ಕಾಲುಗಳಲ್ಲಿ ತುಳಿದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಫ್ರಾನ್ಸಿಸ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ: ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದ ಮೂವರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಿಂದ ಬಂಧಿಸಿದ್ದು, ಅವರಿಂದ 3,56,900 ರೂ. ಬೆಲೆಬಾಳುವ ಸೊತ್ತು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಚೆಂಬುಗುಡ್ಡೆಯ ಅಲ್ವಿನ್ ಕಿರಣ್ ಮೊಂತೇರೋ(32), ಉಳ್ಳಾಲ ಹೊಯಿಗೆಗದ್ದೆ ಮನೆಯ ಇನ್ನಾಸ್ ಡಿಸೋಜಾ(41) ಮತ್ತು ಕುತ್ತಾರು ನಿವಾಸಿ ಗಿತೇಶ್ (37) ಎಂಬವರನ್ನು ಬಂಧಿಸಲಾಗಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಬಿಗ್ ಬ್ಯಾಶ್ 20-20 ಕ್ರಿಕೆಟ್ ಪಂದ್ಯಾಟದ ಸೋಲು ಗೆಲುವಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಂಬ ಅಕ್ರಮ ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಚೆಂಬುಗುಡ್ಡೆಯ ಮನೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 13 ಮೊಬೈಲ್ ಫೋನ್, ಎಲ್ ಇಡಿ ಟಿ.ವಿ, ಬೆಟ್ಟಿಂಗ್ ವ್ಯವಹಾರಗಳ ಬಗ್ಗೆ ಬರೆದಿರುವ 3 ಡೈರಿಗಳು ಹಾಗೂ ನಗದು ಸೇರಿ ಒಟ್ಟು ರೂ.4 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಠಾಣೆಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

ಹೈದರಾಬಾದ್: ಮಲಯಾಳಂನ ಖ್ಯಾತ ಕಲಾವಿದೆ ಹಾಗೂ ಪೋಷಕ ನಟಿ ಕಲ್ಪನಾ ರಂಜನಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತಕ್ಕೆ ಒಳಗಾಗಿ ನಟಿ ಕಲ್ಪನಾ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು ಅವರಿಗೆ 51 ವರ್ಷ ವಯಸ್ಸಾಗಿತ್ತು.  ತೆಲುಗು ಚಿತ್ರವೊಂದರ ಚಿತ್ರೀಕರಣದ ನಿಮಿತ್ತ ಹೈದರಾಬಾದಿನ ಖಾಸಗಿ ಹೊಟೆಲ್ ನಲ್ಲಿ ನಟಿ ಕಲ್ಪನಾ ಅವರು ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಕೊಠಡಿಯ ಬಾಗಿಲು ತೆಗೆದಾಗ ಕಲ್ಪನಾ ಅವರು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಗಾಬರಿಯಾದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ನಟಿ ಊರ್ವಶಿ ಅವರ ಸಹೋದರಿಯಾಗಿರುವ ಕಲ್ಪನಾ ಅವರ 1983ರಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಲ್ಪನಾ ಅವರು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕಲ್ಪನಾ ಅವರು 2012ರಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ…

Read More