ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಭಾರತದ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ಆಸ್ಟ್ರೇಲಿಯಾದ ಮ್ಯಾರಥಾನ್ ಓಟಗಾರ ಹಾಗೂ ಮಾಜಿ ಸಂಸದ ಪ್ಯಾಟ್ರಿಕ್ ಫಾರ್ಮರ್ ಹಮ್ಮಿಕೊಂಡಿರುವ ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಮ್ಯಾರಥಾನ್ ಓಟ ಗುರುವಾರ ಬೆಳಿಗ್ಗೆ ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿಯನ್ನು ಪ್ರವೇಶಿಸಿ ದ.ಕ ಜಿಲ್ಲೆಗೆ ಆಗಮಿಸಿದರು. ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಅವರು ಹೂಗುಚ್ಛ ನೀಡುವುದರ ಮೂಲಕ ಪ್ಯಾಟ್ರಿಕ್ ಫಾರ್ಮರ್ ಹಾಗೂ ಅವರ ತಂಡವನ್ನು ಸ್ವಾಗತಿಸಿದರು. ಗಣರಾಜ್ಯೋತ್ಸವದಂದು ಆರಂಭಿಸಿರುವ ದೇಶದುದ್ದಕ್ಕೂ 4,600 ಕಿ.ಮೀ ಮ್ಯಾರಥಾನ್ ಓಟದ ಹತ್ತನೇ ದಿನವಾದ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಉಳ್ಳಾಲದ ಸೈಯ್ಯದ್ ಮದನಿ ಹಾಗೂ ಎಕ್ಕೂರು ಯೆನೆಪೋಯ ಶಾಲಾ ವಿದ್ಯಾರ್ಥಿಗಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿಗಳು ನೀಡಿದ ಸಿಯಾಳ ಕುಡಿಯುತ್ತಾ ಮಾತನಾಡಿದ ಪ್ಯಾಟ್ರಿಕ್ ಅವರು ` ಭಾರತದಂತಹ ವೈಭವಪೂರಿತ ದೇಶ ಬೇರೊಂದಿಲ್ಲ.…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕನೀರುತೋಟ: ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೈದಿರುವ ಘಟನೆ ಕನೀರುತೋಟದ ಬಂಡಿಕೊಟ್ಯ ಎಂಬಲ್ಲಿ ಗುರುವಾರ ಮುಂಜಾನೆ ವೇಳೆ ನಡೆದಿದೆ. ಕುಂಪಲದ ಕುಜುಮಗದ್ದೆ ನಿವಾಸಿ ಸುಂದರ್ ಪೂಜಾರಿ ಎಂಬವರ ಪುತ್ರಿ ಮೋಹಿನಿ(55) ಆತ್ಮಹತ್ಯೆಗೈದವರು. ಮನೆಯಿಂದ ತುಸು ದೂರದಲ್ಲಿರುವ ಕನೀರುತೋಟದ ಮಾವನ ಮನೆಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾವನ ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ತಿಳಿದುಕೊಂಡಿದ್ದ ಮೋಹಿನಿಯವರು ಅವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಪತಿ ಸಾವನ್ನಪ್ಪಿದ ಬಳಿಕ ಮಾನಸಿಕವಾಗಿ ಕಿನ್ನತೆಗೆ ಒಳಗಾಗಿದ್ದ ಇವರು, ಅದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿಯೊಬ್ಬಳಿದ್ದಾಳೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ : ಜೀವನದಲ್ಲಿ ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ನಿಂತು ಉತ್ತಮ ಸಾಧನೆ ಮಾಡಬೇಕು, ಫಲಾನುಭವಿಗಳು ತಮ್ಮ ಮೂರು ತಿಂಗಳ ತರಬೇತಿ ಅವಧಿಯಲ್ಲಿ ಕೇವಲ ಅಡಿಪಾಯವನ್ನು ಮಾತ್ರಾ ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ಅದರಲ್ಲಿ ಕಟ್ಟಡ ಕಟ್ಟುವ ವಿನ್ಯಾಸಗೊಳಿಸುವ ಕಲೆಯನ್ನು ತನ್ನ ಸ್ವ ಸಾಮರ್ಥ್ಯದಿಂದಲೇ ಭರಿಸಿಕೊಳ್ಳಬೇಕು ಎಂದು ಸಿ.ಡಿ.ಟಿ.ಪಿ ಕೆ.ಪಿ.ಟಿ ಸಂಯೋಜಕಿ ಹಾಗೂ ಪ್ರಾಂಶುಪಾಲರಾದ ಸುಶೀಲ ಅಭಿಪ್ರಾಯಪಟ್ಟರು. ಅವರು ಕೇಶವ ಶಿಶುಮಂದಿರ ಕಿನ್ಯ ಹಾಗೂ ಸಿ.ಡಿ.ಟಿ.ಪಿ. ಕೆಪಿಟಿ ಇದರ ಜಂಟಿ ಆಶ್ರಯದಲ್ಲಿ ನಡೆದ ಮೂರು ತಿಂಗಳ ಉಚಿತ ಫ್ಯಾಶನ್ ಡಿಸೈನ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಪಿ.ಟಿ. ಸಿ.ಡಿ.ಟಿ.ಪಿ ಆಂತರಿಕ ಸಂಯೋಜಕ ಸುಶಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ತರಬೇತಿಯ ಪ್ರಯೋಜನ, ಯಾವ ರೀತಿ ಸ್ವದ್ಯೋಗವನ್ನು ಜೀವನದಲ್ಲಿ ಅಳವಡಿಸಬಹುದು ಎಂದು ಮಾರ್ಗದರ್ಶನ ನೀಡಿದರು. ಮುಖ್ಯ ಅತಿಥಿಗಳಾಗಿ ಸಿಡಿಟಿಪಿ ಕೆಪಿಟಿಯ ಸುಧೀರ್, ಕೇಶವ ಶಿಶುಮಂದಿರದ ಕಾರ್ಯದರ್ಶಿ ಚೇತನ್ ಪಿಲಿಕೂರು, ತರಬೇತಿ ಶಿಕ್ಷಕಿ ಕಾಂಚನ ಸೋಮೇಶ್ವರ ಉಪಸ್ಥಿತರಿದ್ದರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ದ್ವಾರದ ಮುಖಮಂಟಪ ಶಿಖಿರ ಗೋಪುರದ ಪಾದುಕನ್ಯಾಸವು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೆಂಕಟಕೃಷ್ಣ ಅಡಿಗರ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನದೊಂದಿಗೆ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಪದ್ಮಶಾಲಿ ಸಮಾಜದ ಅಧ್ಯಕ್ಷ ನ್ಯಾಯವಾದಿ ವಿಜಯ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ನಿವೃತ್ತ ಸೇನಾನಿ ಕೃಷ್ಣಗಟ್ಟಿ ಸೋಮೇಶ್ವರ, ಧಾರ್ಮಿಕ ಪರಿಷತ್ತು ಸದಸ್ಯ ಮಹಾಬಲ ಚೌಟ, ಕಾರ್ತಿಕ್ ಕರ್ಕೇರ ಮೊಗವೀರ ಪಟ್ಣ ಉಳ್ಳಾಲ, ಕಿಶೋರ್ ಡಿ. ಶೆಟ್ಟಿ, ಲೀಡ್ಸ್ ಗ್ರೂಪ್ ಮಂಗಳೂರು. ಪ್ರಧಾನ ಕಾರ್ಯದರ್ಶಿ ಐತಪ್ಪ ನೆಟ್ಟಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾರಾಮ ದಂಪತಿ ಮುಳಿಹಿತ್ಲು ಮಂಗಳೂರು ಇವರು ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದರು. ಪದ್ಮಶಾಲಿ ಸಮಾಜದ ಕಾರ್ಯದರ್ಶಿ ನಾಗಪ್ಪ ನೆಟ್ಟಿಗಾರ ವಂದಿಸಿದರು. ಚೆಲುವಯ್ಯ ನೆಟ್ಟಿಗಾರ ಕುಂಪಲ ಕಾರ್ಯಕ್ರಮ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಂದಕಕ್ಕೆ ಉರುಳಿ ಇಬ್ಬರು ಗಾಯಗೊಂಡಿರುವ ಘಟನೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಮೀಪ ನಡೆದಿದೆ. ಪೆರ್ಮನ್ನೂರು ನಿವಾಸಸಿಗಳಾದ ಲಾರಿ ಚಾಲಕ ಸದ್ದಾಂ ಹುಸೈನ್ ಮತ್ತು ಕ್ಲೀನರ್ ನೂರ್ ಅಹಮ್ಮದ್ ಗಾಯಗೊಂಡವರು. ತೊಕ್ಕೊಟ್ಟುವಿನಿಂದ ಇನೋಳಿ ಕಡೆಗೆ ಕಲ್ಲು ತರಲೆಂದು ತೆರಳುತ್ತಿದ್ದ ವೇಳೆ ದೇರಳಕಟ್ಟೆ ಸಮೀಪ ಸಿಯಾಳ ವ್ಯಾಪಾರದ ತಳ್ಳುಗಾಡಿಗೆ ಢಿಕ್ಕಿ ಹೊಡೆದು ಬಳಿಕ ಕಂದಕಕ್ಕೆ ಉರುಳಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮನುಷ್ಯನ ಬದುಕಿಗೆ ಜಾನುವಾರುಗಳ ಕೊಡುಗೆ ಆಪಾರವಾಗಿರುದರಿಂದ ಜನ-ಜಾನುವಾರುಗಳ ಸಂಬಂಧ ಸದೃಢವಾಗಲಿ ಎಂದು ಖ್ಯಾತ ಪಶುವೈಧ್ಯ ಹಾಗೂ ಬರಹಗಾರ ಡಾ. ಪಿ. ಮನೋಹರ ಉಪಾಧ್ಯ ಹೇಳಿದರು. ಅವರು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ‘ಜನ-ಜಾನುವಾರು’ವಿಷಯದ ಕುರಿತು ಉಪನ್ಯಾಸ ನೀಡಿದರು. ಮನುಷ್ಯನಂತೆ ಪ್ರಾಣಿಗಳಿಗೂ ಭಾವನೆ, ಪರಸ್ಪರ ಸ್ಪಂದನೆ ಮತ್ತು ಪ್ರತಿಕ್ರಿಯೆಗಳಿವೆ. ಅವುಗಳನ್ನು ಗೌರವಯುತವಾಗಿ ಜೀವಸಲು ಅವಕಾಶ ಮಾಡಿಕೊಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಸಾಕುಪ್ರಾಣಿಗಳ ಒಡನಾಟ ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುವ ಸುಲಭದ ದಾರಿ. ಸಾಕುಪ್ರಾಣಿಗಳನ್ನು ಕೃತಕವಾಗಿ ಬೆಳೆಸುದಕ್ಕಿಂತ, ಅವುಗಳಿಗೆ ನೈಸರ್ಗಿಕ ಪರಿಸರ ನಿರ್ಮಾಣ ಮತ್ತು ಆಹಾರ ನೀಡಿಕೆ ಅಗತ್ಯವಿದೆ ಎಂದು ಅವರು ನುಡಿದರು. ಕನಕದಾಸ ಸಂಶೋಧನ ಕೇಂದ್ರ ಸಂಯೋಜಕ ಡಾ. ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರದ ಉದ್ದೇಶ ಮತ್ತು ಸಮಕಾಲಿನ ಸನ್ನಿವೇಶದಲ್ಲಿ ಕನಕ ಚಿಂತನೆಯ ಅಗತ್ಯವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕ್ರೇನ್ ಮೂಲಕ ಕಡಿದ ಮರವೊಂದು ವಿದ್ಯುತ್ ಕಂಬಕ್ಕೆ ಉರುಳಿದ ಪರಿಣಾಮ ಹೈಟೆನ್ಶನ್ ತಂತಿ ರಸ್ತೆಯಲ್ಲೇ ಬಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದ ಘಟನೆ ತೊಕ್ಕೊಟ್ಟು ಸಮೀಪ ಬುಧವಾರ ಸಂಜೆ ವೇಳೆ ನಡೆದಿದೆ. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮತ್ತು ಅಗಲೀಕರಣ ಕಾಮಗಾರಿ ತ್ವರಿತ ಗತಿಯಿಂದ ಸಾಗುತ್ತಿದ್ದು, ತೆರವು ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆ ಎದುರುಗಡೆಯಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಸಂಜೆ ವೇಳೆ ಅಲ್ಲೇ ಇದ್ದ ಬೃಹತ್ ಗಾತ್ರದ ಮರವೊಂದನ್ನು ಕ್ರೇನ್ ಮೂಲಕ ತೆಗೆಯುತ್ತಿದ್ದಂತೆ ಆಕಸ್ಮಿಕವಾಗಿ ಮರಕ್ಕೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ನೂತನ ವಿದ್ಯುತ್ ಕಂಬದ ಮೇಲೆ ಉರುಳಿತ್ತು. ಪರಿಣಾಮ ಕಂಬ ತುಂಡಾಗಿ ತಂತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡವಾಗಿ ಬಿದ್ದಿತು. ಈ ವೇಳೆ ಕೇರಳ ಕಡೆಯಿಂದ ಟೂರಿಸ್ಟ್ ಬಸ್ಸೊಂದು ತಂತಿಯ ಮೇಲೆಯೇ ಚಲಿಸಿದಾಗ ಎರಡು ತಂತಿಗಳು ತಾಗಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಉತ್ತಮ ಮನಸ್ಸು, ಆರೋಗ್ಯ, ಸಮಾಜದ ಆರೋಗ್ಯದ ಜತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಯೋಗ ಶಿಕ್ಷಣ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಎಲ್ಲರೂ ಅದನ್ನು ದುರ್ಬಳಕೆ ಮಾಡದೆ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ,ಯೋಗ ವಿಜ್ಞಾನ ವಿಭಾಗ ಮತ್ತು ಧರ್ಮನಿಧಿ ಯೋಗಪೀಠದ ಆಶ್ರಯದಲ್ಲಿ ದಕ್ಷಿಣ ಕೊರಿಯಾದ ವಾಂಕ್ವಾಂಗ್ ಡಿಜಿಟಲ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ನಾಲ್ಕು ದಿನಗಳ `ಯೋಗ ಥೆರಫಿ’ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಪುರಾತನ ಕಾಲದಿಂದಲೇ ಭಾರತದಲ್ಲಿರುವ ಯೋಗ ವಿದ್ಯೆ ಇಂದು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿದ್ದು ಯೋಗದ ಮಹತ್ವನ್ನು ಎಲ್ಲರೂ ಅರಿತುಕೊಂಡಿದ್ದಾರೆ. 5,000 ವರ್ಷಗಳ ಹಿಂದೆ ಯೋಗವನ್ನು ದೇಶದಲ್ಲಿ ಪ್ರತಿಯೊಬ್ಬರೂ ಮೈಗೂಡಿಸಿಕೊಂಡಿದ್ದರು. ಆ ಬಳಿಕ ಕ್ರಮೇಣ ಜನ ಮರೆತಿದ್ದು, ಇತ್ತೀಚೆಗೆ ಪ್ರಧಾನಿಯವರು ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡುವ ಮೂಲಕ ಅಲ್ಲದೆ ಯೋಗ ವಿಜ್ಞಾನ ಇವತ್ತು ಪ್ರಸಿದ್ದಿ ಪಡೆಯುವುದರೊಂದಿಗೆ ಹಲವಾರು ಉದ್ಯೋಗಾವಕಾಶಗಳು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಬರಹಗಾರನೊಬ್ಬ ಸ್ವಲ್ಪ ಪ್ರಸಿದ್ಧಿಗೆ ಬಂದೊಡನೆ ಬರೆಯುವುದಷ್ಟೇ ತನ್ನ ಕೆಲಸ, ಮಿಕ್ಕದ್ದೆಲ್ಲವೂ ಬೇರೆಯವರ ಕೆಲಸ ಎಂಬ ಭಾವನೆಯಲ್ಲಿ ಬದುಕುತ್ತಿದ್ದು ಅಂತಹ ಮನೋಭಾವನೆ ಎಲ್ಲರ ಮನದಿಂದ ದೂರವಾಗಬೇಕು ಎಂದು ದೇಸಿ ಚಿಂತಕರು ಮತ್ತು ಸುಸ್ಥಿರ ಜೀವನ ಪ್ರತಿಪಾದಕರು ಹಾಗೂ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಿಟ್ಟೆ ವಿಶ್ವವಿದ್ಯಾಲಯ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಸೋಮವಾರ ನಡೆದ `ಕನಕ ತತ್ವ ಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ `ಬ್ರೆಡ್ ಲೇಬರ್’ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಮನುಷ್ಯ ತನ್ನ ಕೆಲಸ, ಜಾತಿಗೆ ಅಂಟಿಕೊಂಡಿದ್ದು ಇತರ ಜಾತಿ ಕೆಲಸಗಳನ್ನು ಹಗುರವಾಗಿ ಕಾಣುತ್ತಿದ್ದಾನೆ. ಅದು ಎಲ್ಲರಿಂದ ದೂರ ಸರಿಯಬೇಕು. ಸಮಾಜಕ್ಕೆ ಎಲ್ಲರೂ ಒಳ್ಳೆಯ ಕಾರ್ಯಗಳನ್ನೇ ಮಾಡುತ್ತೇವೆ. ಆದರೆ ಕೆಲವರು ಬುದ್ಧಿ ಕೆಲವರು e್ಞÁನದ ಮೂಲಕ ಕೆಲಸ ಮಾಡುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ. ಮನುಷ್ಯ ದೈಹಿಕ ಕೆಲಸವನ್ನು ಮಾಡುತ್ತಾ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ತಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಪಟ್ಟೋರಿ ಎಂಬಲ್ಲಿ ಸೋಮವಾರ ಬಂಧಿಸಿದ್ದಾರೆ. ಮೂಡಬಿದಿರೆ ಅಲಾಂಗರು ನಿವಾಸಿ ರೋಶನ್ ನಿಕೇಶ್ ಮಿನೆಜಸ್(24), ಪಟ್ಟೋರಿ ಮನೆ ನಿವಾಸಿ ಸಿಂಪಲ್ ಕುಮಾರ್ ಹಾಗೂ ಚಿಕ್ಕಮಗಳೂರು ಕೊಪ್ಪದ ಪ್ರಕಾಶ್ ಡಿ’ಸೋಜ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತರಿಂದ ಒಂದು ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿ ಗಾಂಜಾವನ್ನು ದಾಸ್ತನಿರಿಸಿದ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಸಿಂಪಲ್ ಕುಮಾರನ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

