ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮಹಿಳೆಯೋರ್ವರ ಸರವನ್ನು ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಕಳವುಗೈದಿರುವ ಘಟನೆ ಸೋಮೇಶ್ವರದ ಉಚ್ಚಿಲ ರೈಲ್ವೇ ಟ್ರಾಕ್ ಸಮೀಪ ಗುರುವಾರ ರಾತ್ರಿ ವೇಳೆ ನಡೆದಿದೆ.
ಸೋಮೇಶ್ವರ ಉಚ್ಚಿಲದ ನಿವಾಸಿ ಶಹನಾಝ್ (62) ಎಂಬವರು ಮನೆಗೆಂದು ನಡೆದುಕೊಂಡು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಅವರ ಕುತ್ತಿಗೆಯಲ್ಲಿದ್ದ ರೂ.30,000 ಬೆಲೆಬಾಳುವ 15 ಗ್ರಾಂ ಚಿನ್ನದ ಸರವನ್ನು ಕಳವುಗೈದು ಪರಾರಿಯಾಗಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಗಳ ಹಿಂದೆ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಗನವಾಡಿ ಶಿಕ್ಷಕಿಯ ಸರವನ್ನು ಇದೇ ರೀತಿಯಲ್ಲಿ ಬೈಕಿನಲ್ಲಿ ಬಂದ ಕಳ್ಳರು ಕಳವುಗೈದಿದ್ದರು.


