ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಡಿಸೆಂಬರ್‍ನಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಪರೀಕ್ಷಾ ಫಲಿತಾಂಶವು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಫೆ.12ರಂದು(ಇಂದು) ಲಭ್ಯವಾಗಲಿದೆ. ಪ್ರಥಮವಾಗಿ ಬಿ.ಎಡ್. ಬಿ.ಎಚ್.ಎಮ್., ಬಿ.ಎಚ್.ಎಸ್. ಮತ್ತು ಬಿ.ಎ.ಎಸ್.ಎಲ್.ಪಿ. ಪದವಿಗಳ ಫಲಿತಾಂಶವನ್ನು ಪ್ರಕಟಿಸಿ ಬಳಿಕ ಪೆ. 15ರಂದು ಉಳಿದ ಎಲ್ಲಾ ಕೋರ್ಸುಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಮಂಗಳೂರು ಪರೀಕ್ಷಾಂಗ ಕುಲಸಚಿವಾಲಯದ ಪ್ರಕಟನೆ ತಿಳಿಸಿದೆ. ಈ ವರ್ಷದಿಂದ ಪರೀಕ್ಷಾ ಕಾರ್ಯಗಳಿಗೆ ಹೊಸ ಆಧುನಿಕ ಸಾಪ್ಟವೇರ್ ಅಳವಡಿಸಿದ್ದು ಅದನ್ನು ಪರೀಕ್ಷಿಸಿ ವಿಶ್ವವಿದ್ಯಾನಿಲಯದ ನಿಯಾಮಾನುಸಾರ ಸರಿ ಇದೆಯೋ ಎಂದು ಪರಾಮರ್ಶಿಸಲು ಪರೀಕ್ಷೆಗೊಳಪಡಿಸಿ ಫಲಿತಾಂಶಗಳನ್ನು ಪ್ರಕಟಿಸಬೇಕಾಗಿರುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಈ ಫಲಿತಾಂಶಗಳು ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್(odd semester) ಪರೀಕ್ಷೆಗಳ ಫಲಿತಾಂಶ ವಾಗಿರುವುದರಿಂದ ಈ ಸಾಪ್ಟವೇರ್ ಅಳವಡಿಸಿ ಪರೀಕ್ಷಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ಶೈಕ್ಷಣಿಕ ವರ್ಷದಿಂದ odd ಮತ್ತು even ಎರಡೂ ಸೆಮಿಸ್ಟರ್‍ನ ಪರೀಕ್ಷೆಗಳು ಜೊತೆಗೆ ನಡೆಸಲಾಗಿದ್ದು ಪರೀಕ್ಷಾಕಾರ್ಯ ಮುಗಿಸುವಲ್ಲಿ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಾಗಿತ್ತು. ಜೊತೆಗೆ ಕೆಲ ಸಮಯಗಳ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಾಚಾರು: ಆರು ತಿಂಗಳಿನಿಂದ ಜತೆಗಿದ್ದ ವಿವಾಹಿತೆ ಪ್ರಿಯತಮೆಯನ್ನು ಪ್ರಿಯಕರ ಹತ್ಯೆಗೈದಿರುವ ಘಟನೆ ಬೀರಿ ಸಮೀಪದ ಮಾಡೂರು ಕಾಚಾರು ಬಳಿ ನಿನ್ನೆ ಸಂಜೆ ಬೆಳಕಿಗೆ ಬಂದಿದ್ದು, ಕೊಲೆಗೈದಾತನನ್ನು ಪೊಲೀಸರು ಶವ ಪತ್ತೆಯಾದ ಕ್ಷಣದಲ್ಲೇ ಪತ್ತೆಹಚ್ಚಿ ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಶೋಭಾ (22) ಹತ್ಯೆಯಾದವಳು. .ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಳೆಗೇರಿ ಮೂಲದ ಮುತ್ತಪ್ಪ ದಾಟಿನಾಳ ಹಾಗೂ ಶೋಭಾ ಕಳೆದ ನಾಲ್ಕು ತಿಂಗಳ ಹಿಂದೆ ಬೀರಿ ಆಸಿಯಾ ಕಂಪೌಂಡಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮುತ್ತಪ್ಪ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರೆ, ಶೋಭಾ ಮನೆಯಲ್ಲೇ ಇರುತ್ತಿದ್ದಳು. ಆರು ತಿಂಗಳ ಹಿಂದೆ ಕೂಳೂರು ಸಮೀಪ ಶೋಭಾಳ ಪರಿಚಯವಾಗಿದ್ದ ಮುತ್ತಪ್ಪ ಆಕೆಯನ್ನು ತನ್ನ ಜತೆಗೇ ಇರಿಸಿಕೊಂಡಿದ್ದ. ಶೋಭಾ ವಿಪರೀತ ಕುಡಿತದ ಚಟ ಹೊಂದಿದ್ದ ಕಾರಣ ಇಬ್ಬರ ನಡುವೆ ಆಗಾಗ್ಗ ಜಗಳಗಳು ನಡೆಯುತ್ತಿತ್ತು. ವಿವಾಹಿತಳಾಗಿರುವ ಶೋಭಾಳಿಗೆ ಪತಿ ಹಾಗೂ ಒಂದು ಮಗು ಇದೆ. ಅವರನ್ನು ವರ್ಷದ ಹಿಂದೆಯೇ ತೊರೆದ ಶೋಭಾ ಕೂಳೂರು ಬಳಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನಕಲಿ ದಾಖಲೆಗಳನ್ನು ನೀಡಿ ಪಾಸ್‍ಪೋರ್ಟ್ ಪಡೆಯಲು ಯತ್ನಿಸಿದ ಹಳೇ ಪ್ರಕರಣದ ಆರೋಪಿಯನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಿನ್ಯಾ ಉಕ್ಕುಡದ ಹಿದಾಯತ್ತುಲ್ಲಾ ಮದರಸ ಬಳಿಯ ಮಹಮ್ಮದ್ ಮುದಸ್ಸಿರ್ (22) ಬಂಧಿತ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಳ್ಳಾಲ ಠಾಣೆಯಲ್ಲಿ ಪರಿಶೀಲನೆಗಾಗಿ ಬಂದ ಸಂದರ್ಭ ಶಂಕೆ ವ್ಯಕ್ತಪಡಿಸಿದ ಉಳ್ಳಾಲ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ. ಸೊತ್ತು ನಾಶ ಹಾಗೂ ಹಲ್ಲೆ ಪ್ರಕರಣದ ಆರೋಪಿಯಾಗಿದ್ದ ಮುದಸ್ಸಿರ್ ಉಳ್ಳಾಲ ಮೇಲಂಗಡಿ ದರ್ಗಾ ರಸ್ತೆಯ ನಕಲಿ ವಿಳಾಸದೊಂದಿಗೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‍ಪೋರ್ಟ್ ಕಚೇರಿಯಲ್ಲಿ ನೀಡಿದ್ದನು. ಅಲ್ಲಿಂದ ಪೊಲೀಸರ ಪರಿಶೀಲನೆಗಾಗಿ ಉಳ್ಳಾಲ ಠಾಣೆಗೆ ಬಂದಿದ್ದ ಸಂದರ್ಭ ದಾಖಲೆಗಳಿಂದ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಹಳೇ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ. ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ವಿದೇಶಕ್ಕೆ ಪಲಾಯನಗೈದು ವಿಧ್ವಂಸಕ ಕೃತ್ಯ , ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸುವ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಅಭ್ಯರ್ಥಿಗಳ ಗೆಲುವು ಮತದಾರರಲ್ಲಿ ಆಡುವ ಮಾತು, ನಡವಳಿಕೆಯಿಂದಲೇ ನಿರ್ಧಾರವಾಗುತ್ತದೆ. ಆರೋಪಗಳು ಸ್ವಾಭಾವಿಕ ಅದಕ್ಕೆಲ್ಲಾ ಎದೆಗುಂದದೇ ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೊಕ್ಕೊಟ್ಟುವಿನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೆಲ ಪಕ್ಷಗಳಲ್ಲಿ ಇನ್ನೂ ಅಭ್ಯರ್ಥಿಗಳು ಸಿಗದೇ ಹುಡುಕಾಟದಲ್ಲಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದವರು ಬೇಸರಗೊಳ್ಳದೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದರು. ಬಿಜೆಪಿ ಮುಖಂಡ ಕಾಂಗ್ರೆಸ್ ಅಭ್ಯರ್ಥಿ ! ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬಾಲ್ಯದಿಂದಲೇ ಕಾರ್ಯಕರ್ತನಾಗಿದ್ದು, ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಉಳ್ಳಾಲ ಭಾಗದ ಮುಖಂಡನಾಗಿದ್ದ ರಮೇಶ್ ಕೊಲ್ಯ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಬಾರಿಯ ಸೋಮೇಶ್ವರ (1) ರಲ್ಲಿ ತಾಲೂಕು ಪಂಚಾಯಿತಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುಡಿಪು: ಕೊಣಾಜೆ-ಪುರುಷಕೋಡಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷವನ್ನು ಖಂಡಿಸಿ ಪುರುಷಕೋಡಿ ನಾಗರಿಕರು ಸೋಮವಾರ ಪುರುಷಕೋಡಿ ಬಳಿ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಪ್ರತಿಭಟನೆಗೆ ಮುನ್ನ ಚುನಾವಣಾ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರಲ್ಲಿ ಭಿನ್ನಮತ ಸ್ಪೋಟಗೊಂಡು ವಾಗ್ವಾದ ನಡೆದು ಬಳಿಕ ಒಂದು ಗುಂಪು ಚುನಾವಣಾ ಬಹಿಷ್ಕಾರ ತೀರ್ಮಾಣಕ್ಕೆ ಒಪ್ಪದೆ ಪ್ರತಿಭಟನೆಯನ್ನು ನಡೆಸಿದರೆ ಇನ್ನೊಂದು ಗುಂಪು ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾಣವನ್ನು ಕೈಗೊಂಡು ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಿದರು. ಮಂಗಳೂರು ವಿವಿ ಬಳಿಯಿಂದ ಪುರುಷಕೋಡಿಯ ಸುಮಾರು ಎರಡು ಕಿ.ಮೀ ವ್ಯಾಪ್ತಿಯ ರಸ್ತೆಯು ಕಳೆದ ಹಲವಾರು ವರ್ಷದಿಂದ ಹದಗೆಟ್ಟು ಹೋಗಿ ಈ ಭಾಗದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದರು. ಅಲ್ಲದೆ ಈ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಗೆ ಡಾಂಬಾರು ಹಾಕಿದ್ದು ಅದೀಗ ಎದ್ದು ಹೋಗಿ ನಡೆದಾಡಲೂ ಜನರು ತೊಂದರೆ ಎದುರಿಸುವಂತಾಗಿತ್ತು. ಇದರಿಂದ ಬೇಸತ್ತ ಪುರುಷಕೋಡಿಯ ನಾಗರಿಕರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ತೀರ್ಮಾನವನ್ನು ಕಳೆದ ವಾರ ತೆಗೆದುಕೊಂಡಿದ್ದರು. ಇದರಂತೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿ ಪಂಜಾಳ ಸೂರ್ಯ ಚಂದ್ರ ಜೋಡುಕೆರೆ ಕಂಬಳ ಇದರ ಸಮಾರೋಪ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಗಳೂರು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಮ್.ಬಿ. ಪುರಾಣಿಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಂಬಳ ಕೋಣಗಳ ಯಜಮಾನ ಸಾಣೂರು ಸುಂದರ ಕೊಗ್ಗು ಆಚಾರ್ಯ ಅವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆರಣ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಎ.ಜೆ. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ| ಮೋಹನ್‍ದಾಸ್ ರೈ, ಕೋಟೆಕಾರು ವ್ಯವಸಾಯ ಸೇವಾ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಆಟದ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಪರ್ಯಾವಸನಗೊಂಡ ಘಟನೆ ಸೋಮವಾರ ಸಂಜೆ ಪಂಡಿತ್ ಹೌಸಿನ ಪ್ರಕಾಶನಗರದಲ್ಲಿ ಸಂಭವಿಸಿದೆ. ಪ್ರಕಾಶನಗರದ ಮಹಮ್ಮದ್ ಅಬೀದ್ (25) ಹಾಗೂ ಸ್ಥಳೀಯ ನಿವಾಸಿ ಸುನಿಲ್ (23) ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡವರು. ಇಬ್ಬರು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ವಿವರ: ಭಾನುವಾರ ಸಂಜೆ ಪ್ರಕಾಶನಗರದ ಸುಮಾರು 20 ಕ್ಕೂ ಅಧಿಕ ಮಂದಿ ಕ್ರಿಕೆಟ್ ಗ್ರೌಂಡಿನಲ್ಲಿ ಹೌಸಿ ಹೌಸಿ ಆಟವನ್ನಾಡುತ್ತಿದ್ದರು. ಈ ಸಂದರ್ಭ ಜತೆಯಾಗಿಯೇ ಆಟವಾಡುತ್ತಿದ್ದ ಖಲಂದರ್ ಮತ್ತು ವಜ್ರೇಶ್ ಯಾನೆ ಚಿನ್ನು ಎಂಬವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅಲ್ಲಿ ಸೇರಿದ್ದ ಯುವಕರೆಲ್ಲರೂ ಅವರನ್ನು ಸಮಾಧಾನಗೊಳಿಸಿದ್ದರು. ಘಟನೆ ಅಲ್ಲಿಗೆ ಸುಖಾಂತ್ಯಗೊಂಡಿದ್ದರೆ ಮತ್ತೆ ಸೋಮವಾರ ಬೆಳಿಗ್ಗೆ ಖಲಂದರ್ ನನ್ನು ಸುನಿಲ್ ಎಂಬಾತ ಪ್ರಶ್ನಿಸಿದ್ದನು. ಈ ಬಗ್ಗೆ ಖಲಂದರ್ ಗೆಳೆಯ ಮಹಮ್ಮದ್ ಆಬೀದ್ ಬಳಿ ವಿಷಯ ತಿಳಿಸಿದ್ದನು. ಅದನ್ನು ಮತ್ತೆ ಆಬೀದ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಒಂದು ಲಕ್ಷಕ್ಕೂ ಅಧಿಕ ತೆರಿಗೆಯನ್ನು ಪಾವತಿಸದ ತೊಕ್ಕೊಟ್ಟು ನಗರಸಭೆ ಕಟ್ಟಡದಲ್ಲಿರುವ ಆರು ಅಂಗಡಿಗಳಿಗೆ ನಗರಸಭೆ ಪೌರಾಯುಕ್ತೆ ಹಾಗೂ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಜಡಿದ ಪ್ರಸಂಗ ಸೋಮವಾರ ನಡೆಯಿತು. ತೊಕ್ಕೊಟ್ಟು ನಗರಸಭೆ ಕಟ್ಟಡದಲ್ಲಿರುವ ಅಂಗಡಿ ಸಂಖ್ಯೆ 7,26,30,38, 40, 48 ದಾಳಿ ನಡೆಸಿ ಮುಚ್ಚಿಸಿ ನಗರಸಭೆಯ ಬೀಗ ಹಾಕಲಾಯಿತು. ಅಂಗಡಿಗಳ ಮಾಲೀಕರಾದ ರಾಜೇಶ್ ಸಾಲ್ಯಾನ್ ಕೋಡಿಕಲ್ -1,14,830, ಹಸನ್ ಶಾಫಿ – 1,59,400, ಪೃಥ್ವಿರಾಜ್ ಸಾಲಿಯಾನ್ -2,12,520, ಹಂಝ ಇಂತಿಯಾಝ್ -2,24,380, ಮಹಮ್ಮದ್ ಹನೀಫ್ 2,83,200 ಹಾಗೂ ಮಹಮ್ಮದ್ ಝೀನತ್ ಕಾಮ್ -2,17,540 ರೂ. ತೆರಿಗೆ ಹಣವನ್ನು ಬಾಕಿಯಿರಿಸಿದ್ದರು. ಈ ಬಗ್ಗೆ ಆರು ತಿಂಗಳಿನಿಂದ ನಗರಸಭೆಯಿಂದ ನೋಟೀಸುಗಳನ್ನು ನೀಡುತ್ತಾ ಬಂದರೂ, ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೇ ತೆರಿಗೆಯನ್ನು ಪಾವತಿಸಿರಲಿಲ್ಲ. ಅದಕ್ಕಾಗಿ ಪೌರಾಯುಕ್ತ ನೇತೃತ್ವದಲ್ಲಿ ದಾಳಿ ನಡೆಸಿ ಮುಚ್ಚಿಸಲಾಗಿದೆ. ಅಭಿವೃದ್ಧಿ ಕುಂಠಿತ ಹಿನ್ನೆಲೆ ದಾಳಿ: ಪೌರಾಯುಕ್ತೆ ರೂಪಾ ನಗರಸಭೆ ಕಟ್ಟಡದಲ್ಲಿ ಸುಮಾರು 48…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ : ಜಾನಪದ ಸಂಸ್ಕøತಿಗಳನ್ನು ಅರ್ಥ ಮಾಡಿಕೊಂಡು ಅದನ್ನು ಶಾಶ್ವತವಾಗಿ ನೆಲೆ ನಿಲ್ಲಿಸುವ ಪ್ರಯತ್ನ ಯುವಜನತೆಯಿಂದ ಆಗಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ಪಂಜಾಳದಲ್ಲಿ ಭಾನುವಾರ ಜರಗಿದ ಹೊನಲು ಬೆಳಕಿನ ಸೂರ್ಯ ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಜಾನಪದ ಕಲೆ ಹಾಗೂ ಕ್ರೀಡೆಗಳು ಸೌಹಾರ್ದಯುತ ಕೇಂದ್ರಗಳಾಗಿವೆ. ಕಂಬಳದ ಸಂಘಟಕರಿಂದ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕøತಿಯನ್ನು ಚಿರಪರಿಚಿತವಾಗಿಸುವ ಕಾರ್ಯ ಆಗಿದೆ, ಆಧುನಿಕ ತಂತ್ರಜ್ಞಾನಗಳು ಬದಲಾದಂತೆ ಕಾನೂನುಗಳ ಬದಲಾವಣೆಗಳು ಆಗುತ್ತಿದೆ. ರಾಜ್ಯ ಸರಕಾರದಿಂದ ಕ್ರೀಡೆಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದ್ದು, ಕಂಬಳಕ್ಕೆ ಕಾನೂನು ಅಡ್ಡಿಯಾದರೂ ರಾಜ್ಯ ಸರಕಾರ ಅದನ್ನು ಸಡಿಲುಗೊಳಿಸುವಲ್ಲಿ ಯಶಸ್ವಿಯಾಗಿದೆ. ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಜಿಲ್ಲೆಯ ಜನತೆ ಮತ್ತು ಸರಕಾರ ಮನೇಕಾ ಗಾಂಧಿ ಮನವೊಲಿಸಿ ಕ್ರೀಡೆಯ ಬಗ್ಗೆ ಸಮಗ್ರ ವರದಿ ನೀಡುವ ಅಗತ್ಯ ಇದೆ ಎಂದರು. ಈ ಸಂದರ್ಭ ಕಂಬಳದ ಸಾಂಪ್ರದಾಯಿಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಅಕ್ಷರ ಸಂತ ಹಾಜಬ್ಬರಿಗೆ ಹರೇಕಳದ ನ್ಯೂಪಡ್ಪುವಿನಲ್ಲಿ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್, ಮಂಗಳೂರು ಇವರು ನಿರ್ಮಿಸಿಕೊಟ್ಟ ನೂತನ ಥಾರಸಿ ಮನೆಯ ಹಸ್ತಾಂತರ ಕಾರ್ಯಕ್ರಮ ಮತ್ತು ಗೃಹಪ್ರವೇಶವು ಭಾನುವಾರ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರನ್ನು ಒಂದಲ್ಲ ಒಂದು ದಿನ ಸಮಾಜವೇ ಗುರುತಿಸುತ್ತದೆ. ಸಮಾಜಸೇವೆಯೊಂದಿಗೆ ಅವಿದ್ಯಾವಂತನಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಹರೇಕಳ ಹಾಜಬ್ಬರನ್ನು ಸಮಾಜವು ಗುರುತಿಸಿದ್ದು ಮಾತ್ರವಲ್ಲ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‍ನವರು ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯವಾಗಿದ್ದು ಇದೊಂದು ಪುಣ್ಯದ ಕೆಲಸ ಮತ್ತು ಮಾದರಿಯಾಗಿದೆ ಎಂದು ಹೇಳಿದರು. ಬಡವರ ಕಣ್ಣೀರೊರೆಸುವ ಕೆಲಸ ಎಂದರೆ ದೇವರ ಕೆಲಸ. ಕಿತ್ತಲೆ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬ ಶಾಲೆಯೊಂದನ್ನು ನಿರ್ಮಿಸಲು ಹೋರಾಟ ಮಾಡಿ ಯಶಸ್ಸನು ಕಂಡಿದ್ದಾರೆ. ಹಾಜಬ್ಬರ ಶಿಕ್ಷಣ ಸಂಸ್ಥೆಯು ಹಂತ ಹಂತವಾಗಿ ಬೆಳೆದು ವಿಶ್ವವಿದ್ಯಾನಿಲಯವಾಗಿ ಬೆಳೆಯಲಿ ಹಾಗೂ ದೇವರು…

