ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ವೈಯಕ್ತಿಕ ವಿಚಾರದಲ್ಲಿ ಅರಾಫತ್ ಹನೀಫ್ ಎಂಬಾತನಿಗೆ ಮೂವರ ತಂಡ ಹಲ್ಲೆ ನಡೆಸಿದ ಘಟನೆ ಮುಡಿಪುವಿನಲ್ಲಿ ನಡೆದಿದ್ದು, ತಲೆಗೆ ಗಾಯವಾಗಿರುವ ಹನೀಫ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ನವಾಝ್, ಅಬ್ದುಲ್ ಖಾದರ್, ಮತ್ತು ಆತನ ಪುತ್ರ ಅಝೀನ್ ಎಂಬವರಾಗಿದ್ದು. ಚುನಾವಣೆ ಪಲಿತಾಂಶದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಡಿಪುವಿನಲ್ಲಿ ವಿಜಯೋತ್ಸವ ನಡೆಸಿದ್ದು ಈ ಸಂದರ್ಭದಲ್ಲಿ ಸಿಹಿತಿಂಡಿ ಹಂಚಿದ ತಂಡದಲ್ಲಿದ್ದ ಅಬ್ದುಲ್ ಖಾದರ್ ಲಾಡೊಂದನ್ನು ಹನೀಫ್‍ನಿಗೆ ನೀಡಿದ್ದು, ಆತ ನಿರಾಕರಿಸಿದಾಗ ವ್ಯಂಗ್ಯವಾಗಿ ಮಾತನಾಡಿದ ಖಾದರ್ ಮೇಲೆ ಹಲ್ಲೆ ನಡೆಸಲು ಬಂದಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಖಾದರ್ ಪುತ್ರ ಅಝೀನ್ ಮತ್ತು ಈ ಹಿಂದೆ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿಇರುವ ನವಾಝ್ ಹನೀಫ್ ಮೇಲೆ ಬಾಟ್ಲಿಯಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಹನೀಫ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಿಗಾಗಿ ಕೊಣಾಜೆ ಪೆÇಲೀಸರು ಹುಡುಕಾಟ ನಡೆಸಿದ್ದಾರೆ. ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದು, ವ್ಯಾಪ್ತಿಗೆ ಬರುವ ಐದು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಾಂಗ್ರೆಸ್ ಪಾಲಾದರೆ ಎರಡು ಕ್ಷೇತ್ರ ಬಿಜೆಪಿ ವಿಜಯಿಯಾಗಿದೆ. ಕ್ಷೇತ್ರದ 16 ತಾಲೂಕು ಪಂಚಾಯತ್‍ನಲ್ಲಿ 12 ತಾಲೂಕು ಪಂಚಾಯತ್ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡರೆ ಬಿಜೆಪಿ ನಾಲ್ಕು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರತಿಷ್ಠಿತ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಬಿಜೆಪಿಯಿಂದ `ಕೈ’ವಶ ಮಾಡಿಕೊಂಡಿದೆ. ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಒಳಪಡುವ ಮಂಗಳೂರು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಪುದು, ಸೋಮೇಶ್ವರ ಮತ್ತು ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಈ ಬಾರಿ ತನ್ನಲ್ಲೇ ಉಳಿಕೊಳ್ಳುವ ಕಾರ್ಯತಂತ್ರ ನಡೆಸಿದರೂ ಕುರ್ನಾಡು ಕ್ಷೇತ್ರವನ್ನು ಉಳಿಸುವಲ್ಲಿ ವಿಫಲವಾಗಿದೆ. ಈ ಹಿಂದೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಸೋಮೇಶ್ವರದಲ್ಲಿ ಧನಲಕ್ಷ್ಮೀ ಗಟ್ಟಿ 517 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಕುರ್ನಾಡಿನಲ್ಲಿ ಕಾಂಗ್ರೆಸ್‍ನ ಮಮತಾ ಗಟ್ಟಿ ಹಾಗೂ ಕೊಣಾಜೆಯಲ್ಲಿ ರಶೀದಾ ಭಾನು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ತಾಲೂಕು ಪಂಚಾಯಿತಿನಲ್ಲಿ ಸೋಮೇಶ್ವರ 1- ಬಿಜೆಪಿಯ ರಾಮಚಂದ್ರ ಕುಂಪಲ, ಸೋಮೇಶ್ವರ 2- ಬಿಜೆಪಿಯ ರವಿಶಂಕರ್ ಸೋಮೇಶ್ವರ , ಮುನ್ನೂರು- ವಿಲ್ಫ್ರೆಡ್ ವಿಲ್ಮಾ ಡಿಸೋಜಾ, ಅಂಬ್ಲಮೊಗರು-ಹರೇಕಳ ಕಾಂಗ್ರೆಸ್ ನ ಪ್ರಭಾ.ಡಿ.ಶೆಟ್ಟಿ ಕುರ್ನಾಡು- ಪಜೀರು : ಬಿಜೆಪಿಯ ನವೀನ್ ಪಾದಲ್ಪಾಡಿ 12 ಮತಗಳ ಅಂತರ, ಬಾಳೆಪುಣಿ- ಕೈರಂಗಳ : ಹೈದರ್ ಕೈರಂಗಳ 403 ಮತಗಳ ಅಂತರ, ಇರಾ -ನರಿಂಗಾನ: ಚಂದ್ರಹಾಸ್ ಕರ್ಕೇರ ಕೊಣಾಜೆ : ಕಾಂಗ್ರೆಸ್ ನ ಪದ್ಮಾವತಿ .ಯಸ್ , ಬೆಳ್ಮ-ನೂರ್ ಜಹಾನ್, ತಲಪಾಡಿ-ಕಿನ್ಯಾ: ಸಿದ್ಧೀಕ್ , ಮಂಜನಾಡಿ -ಸುರೇಖಾ ಚಂದ್ರಹಾಸ್ ಗೆಲುವು ಸಾಧಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಯುವಜನತೆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಉಪಯೋಗಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಪಜೀರು ಬೀಜಗುರಿಯ ಗೋವನಿತಾಶ್ರಯ ಟ್ರಸ್ಟಿನ 16 ನೇ ವರ್ಷಾಚರಣೆ ಜ್ಯೋತಿಷ್ಯಜ್ಞರ-ವೈದಿಕರ ಸಮಾವೇಶ ಹಾಗೂ ಚತುರ್ಥ ಗೋಶಾಲಾ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಹಿಂದು ಸಂಸ್ಕøತಿ ಉಳಿವಿಗಾಗಿ ಯುವಜನತೆ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಬೇಕಿದೆ. ಈ ಮೂಲಕ ಹಿಂದು ಸಮಾಜದ ಆಚಾರ ವಿಚಾರ ಹಾಗೂ ಸೊತ್ತುಗಳನ್ನು ಭದ್ರವಾಗಿಸಿಕೊಳ್ಳಬಹುದು ಎಂದರು. ವಿಶ್ವ ಹಿಂದು ಪರಿಷತ್ ಪ್ರಾಯೋಜಿತ ಸಂಸ್ಥೆ ಮಂಗಳೂರು ಗೋವನಿತಾಶ್ರಯ ಟ್ರಸ್ಟ್‍ನ ಪಜೀರು ಬೀಜಗುರಿ ಗೋಶಾಲಾ ವಠಾರದಲ್ಲಿ ಮಾ.5,6 ರಂದು 16 ನೇ ನಡೆಯಲಿರುವ ವರ್ಷಾಚರಣೆಯ ಮಾಹಿತಿ ನೀಡಿದರು. . ನಿವೃತ್ತ ಸೇನಾನಿ ಅಪ್ಪು ಶೆಟ್ಟಿ, ನಿವೃತ್ತ ಸೇನಾನಿ ಪ್ರವೀಣ್ ಶೆಟ್ಟಿ ಪಿಲಾರ್, ವಿಶ್ವ ಹಿಂದುಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷ ಹರಿದಾಸ್ ಮಾಡೂರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆ ರೋಟರಿ ಕ್ಲಬ್ ಮತ್ತು ಕೆಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವತಿಯಿಂದ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು. ರೋಟರಿಕ್ಲಬ್ ನಿರ್ದೇಶಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶದಲ್ಲಿ ಪೋಲಿಯೋ ನಿರ್ಮೂಲನಾ ಹಂತದಲ್ಲಿದ್ದರೂ ನೆರೆ ರಾಷ್ಟ್ರದಿಂದ ನಮ್ಮಲ್ಲಿಗೆ ಹರಡದಂತೆ ಮುನ್ನಚ್ಚೆರಿಕೆ ಕ್ರಮವಾಗಿ ನಮ್ಮಲ್ಲಿ ಲಸಿಕೆ ಹಾಕಲಾಗುವುದು. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ದೊಡ್ಡ ಬಸವ, ರೋಟರಿ ಕ್ಲಬ್ ದೇರಳಕಟ್ಟೆ ಅಧ್ಯಕ್ಷ ಡಿ.ಎನ್. ರಾಘವ, ನಿಯೋಜಿತ ಅಧ್ಯಕ್ಷ ಎನ್. ಟಿ. ರಾಮಕೃಷ್ಣ, ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ವಿದ್ಯಾರ್ಥಿ ಸಮೂಹ ನಮ್ಮ ಆಸ್ತಿಯಾಗಿದ್ದು ಅವರಿಂದಲೇ ನಡೆಯುವ ಜಾಗೃತಿ ಕಾರ್ಯಕ್ರಮಗಳು ಸಮಾಜವನ್ನು ಪರಿವರ್ತಿಸುವುದರಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಯೆನ್‍ಡ್ಯೂರೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸರ್ವೋ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಜಾಗತೀಕರಣದ ಪ್ರಭಾವದಿಂದ ತಂತ್ರe್ಞÁನ್ ಬಹಳಷ್ಟು ಮುಂದುವರಿದಿದ್ದರೂ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕ ೃತಿಕ ಹಾಗೂ ಬಹುಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಅಭದ್ರತೆ ಕಾಡುತ್ತಿದೆ. ಸುಭದ್ರ ಸ್ವಾಸ್ಥ ್ಯ ಸಮಾಜಕ್ಕೆ ಆರೋಗ್ಯವೂ ಮುಖ್ಯ. ಆ ನಿಟ್ಟಿನಲ್ಲಿ ಆರೋಗ್ಯದ ಕುರಿತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಯೇನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಮಹಮ್ಮದ್ ಕುಂಞ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಕೇಬಲ್ ಆಪರೇಟರ್‍ಗೆ ವಿದ್ಯುತ್ ತಗಲಿ ತಂತಿಯಿಂದ ಕೆಳಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ತೊಕ್ಕೊಟ್ಟು ಕೃಷ್ಣನಗರ ನಿವಾಸಿ ನಿಶಾಂತ್ (23) ಗಾಯಾಳು. ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯಿರುವ ವಿದ್ಯುತ್ ತಂತಿಗೆ ಹತ್ತಿ ಕೇಬಲ್ ಕಟ್ಟುತ್ತಿದ್ದ ಸಂದರ್ಭ ಹೈಟೆನ್ಶನ್ ನಲ್ಲಿದ್ದ ವಿದ್ಯುತ್ ಪ್ರವಹಿಸಿ ನಿಶಾಂತ್ ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಕೈಬೆರಳುಗಳೆಲ್ಲಾ ಸವೆಯುತ್ತದೆ, ಹಸಿವು ಆದರೂ ತಿನ್ನಲು ಆಗುವುದಿಲ್ಲ, ಜನರ ಕಣ್ಣಲ್ಲಿ ಅದು ಸ್ವರ್ಗ ಅನಿಸಿದರೂ ನಮ್ಮ ಪಾಲಿಗೆ ಅದು ಅಕ್ಷರಶ: ನರಕ.ಇದು ಇತ್ತೀಚೆಗೆ ಸಿಯಾಚೀನ್ ನಲ್ಲಿ ಮಂಜಿನಡಿ ಸಿಲುಕಿ ಮೃತಪಟ್ಟ ಯೋಧರಿಗೆ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಯೋಧರೊಬ್ಬರು ಹಂಚಿಕೊಂಡ ಅನುಭವದ ಮಾತು. ಇದು ಮಾಜಿ ಯೋಧ ಪಿಲಾರು ಪ್ರವೀಣ್ ಶೆಟ್ಟಿ ಅವರು 2003 ರಲ್ಲಿ ಭೂಸೇನೆಯಲ್ಲಿದ್ದ ವೇಳೆ ಸಿಯಾಚಿನ್‍ನಲ್ಲಿ ತಿಂಗಳುಗಳ ಕಾಲ ನಡೆಸಿದ ಕರ್ತವ್ಯದ ವೇಳೆ ಅನುಭವಿಸಿದ ಕ್ಷಣಗಳು. ಶೂನ್ಯ ತಾಪಮಾನದಲ್ಲಿ ಮಂಜಿನ ನಡುವಿನ ದಿನಗಳು, ಕೈ ಕಾಲುಗಳನ್ನು ಸವೆಸುತ್ತವೆ. ತಿಂಗಳ ಕಾಲ ಅಲ್ಲೇ ಇದ್ದು, ವಾತಾವರಣಕ್ಕೆ ಅನುಗುಣವಾದ ಕ್ರಮಗಳನ್ನು ಕೈಗೊಂಡದೇ ಇದ್ದಲ್ಲಿ ಅಡ್ಡ ಪರಿಣಾಮಗಳು ಆಗುತಿತ್ತು. ಅಲ್ಲಿ ತಿನ್ನುವಂತಹ ಹಣ್ಣುಗಳು ಬೆಳೆದರೂ ಹಸಿವಾದಾರೂ ತಿನ್ನಲು ಆಗುತ್ತಿರಲಿಲ್ಲ. ವಿರೋಧಿಗಳ ಜತೆ ಯುದ್ಧ ಮಾಡಲು ಇರದಿದ್ದರೂ, ಚೀನಾ ದೇಶದ ವಿರೋಧಿಗಳ ಚಲನ ವಲನಗಳ ಬಗ್ಗೆ ನಿಗಾ ಇಡುವುದು ಸಿಯಾಚಿನ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಕ್ಕಳ ಹೆರಿಗೆ ವಿಚಾರದಲ್ಲಿ ವಿಶೇಷ ಕಾರ್ಯಕ್ರಮವನ್ನು ಕಣಚೂರು ಆಸ್ಪತ್ರೆ ಹಮ್ಮಿಕೊಂಡಿದ್ದು, ಕಣಚೂರು ಶಿಶು ಭವಿಷ್ಯ ನಿಧಿಯನ್ನು ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಂದಿರಿಗೆ ನೀಡಲಾಗುವುದು ಎಂದು ಕಣಚೂರು ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಅಭಿಪ್ರಾಯಪಟ್ಟರು. ರೆಂಜಾಡಿಯ ಎಸ್ ಎಸ್ ಎಫ್ ಬೆಳ್ಮ ಶಾಖೆ ಮತ್ತು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಭಾನುವಾರ ರೆಂಜಾಡಿ ಶಾಲಾ ವಠಾರದಲ್ಲಿ ಜರಗಿದ 21ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ಶಿಬಿರದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಣಚೂರು ಆಸ್ಪತ್ರೆ ಕಳೆದ ಹಲವು ಸಮಯದಿಂದ ಸ್ಕ್ಯಾನಿಂಗ್ ನಿಂದ ಹಿಡಿದು ಉಚಿತ ಶುಶ್ರೂಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾರ್ಚ್ ತಿಂಗಳವರೆಗೆ ಕಾರ್ಯಕ್ರಮ ಇರುವುದರಿಂದ ಎಲ್ಲರೂ ಇದನ್ನು ವಿನಿಯೋಗಿಸಬೇಕು ಎಂದರು. ಬೆಳ್ಮ ಕೇಂದ್ರ ಮಸೀದಿಯ ಪಿ.ಎ.ಉಸ್ಮಾನ್ ಮದನಿ ದುಆ ನೆರವೇರಿಸಿದರು. ಕಣಚೂರು ಆಸ್ಪತ್ರೆ ಚೇರ್ ಮೆನ್ ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೆ.ಸಿರೋಡು: ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸಹಾಯ ಮಾಡುವಂತಹ ಮನೋಭಾವ ಹುಟ್ಟಿಕೊಂಡಾಗ ಜೀವನ ಅರ್ಥಪೂರ್ಣವಾಗುತ್ತದೆ. ತೀಯ ಸಮಾಜದಿಂದ ನಡೆದಿರುವ ಕಾರ್ಯಕ್ರಮ ಸಮಾಜಕ್ಕೆ ಮಾರ್ಗದರ್ಶನ ನೀಡಿದಂತಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೀಯ ಸಮಾಜ ಉಳ್ಳಾಲ ವಲಯದ ಪದಾಧಿಕಾರಿಗಳು ಹಾಗೂ ದಾನಿಗಳ ನೆರವಿನಿಂದ ರೂ.ನಾಲ್ಕು ಲಕ್ಷ ವೆಚ್ಚದಲ್ಲಿ ತಲಪಾಡಿ ಕೆ.ಸಿರೋಡು ಸಮೀಪದ ಕಾಟುಂಗರೆಗುಡ್ಡೆಯಲ್ಲಿ ಆರ್ಥಿಕವಾಗಿ ಹಿಂದುಳಿದ ದೇವಕಿ ಬೆಳ್ಚಾಡ್ತಿ ಅವರಿಗೆ ನಿರ್ಮಿಸಿದ ಮನೆಯ ಗೃಹಪ್ರವೇಶ ಮತ್ತು ಕೀಲಿ ಕೈ ಹಸ್ತಾಂತರ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು. ಒಬ್ಬರು ಇನ್ನೊಬ್ಬರ ಕಷ್ಟದಲ್ಲಿ ಫಾಲ್ಗೊಳ್ಳುವುದು ಸಮಾಜಕ್ಕೆ ಪೂರಕ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ಉಳ್ಳಾಲ ವಲಯದ ತೀಯ ಸಮಾಜದ ಕಾರ್ಯ ಶ್ಲಾಘನೀಯವಾದುದು ಎಂದರು. ಭಾರತೀಯ ತೀಯ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ದಾಮೋದರ್ ಉಳ್ಳಾಲ್ , ರಾಘವ ಗುರಿಕಾರ, ಚಂದ್ರಕಾಂತ್, ಅಬೂಬಕರ್ ಹಾಜಿ, ರವೀಂದ್ರ ಉಳ್ಳಾಲ್, ಸತೀಶ್ ಕುಂಪಲ, ಸುರೇಶ ಭಟ್ನಗರ ಮೊದಲಾದವರು…

