ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ :ಧರ್ಮದ ಮೇಲೆ ಪರಿಪೂರ್ಣ ವಿಶ್ವಾಸ ಇಟ್ಟುಕೊಂಡರೆ ಮಾತ್ರ ಪರಲೋಕದಲ್ಲಿ ರಕ್ಷಣೆ ಸಾಧ್ಯ. ವ್ಯಾಪಾರ, ಹಣ ಸಂಪಾದಣೆ, ವ್ಯವಹಾರ ಇಹಲೋಕಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಪರಲೋಕಕ್ಕೆ ಅಲ್ಲ. ಶಾಂತಿ ಸೌಹಾರ್ದತೆಯಿಂದ ಇದ್ದುಕೊಂಡು ಇಸ್ಲಾಂ ಬೋಧಿಸಿದ ಮಾರ್ಗವನ್ನು ಅನುಕರಣೆ ಮಾಡಿ ಅಲ್ಲಾಹನಲ್ಲಿ ವಿಶ್ವಾಸ ಇಟ್ಟುಕೊಂಡಲ್ಲಿ ರಕ್ಷಣೆ ಸಿಗಬಹುದು ಎಂದು ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಹೇಳಿದರು. ಅವರು ಉಚ್ಚಿಲದಲ್ಲಿ ಅಸ್ಸಯ್ಯಿದ್ ಶರೀಫ್ ಅಲ್ ಅರಬ್ಬಿ ವಲಿಯುಲ್ಲಾಹಿಯವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಸ್ವರ್ಗಕ್ಕೆ ಹೋಗಲು ಪರಿಶ್ರಮ ಬಹಳಷ್ಟು ಪಡೆಯಬೇಕು. ನರಕಕ್ಕೆ ಹೋಗಲು ಪರಿಶ್ರಮ ಬೇಡ. ಧಾರ್ಮಿಕ ಕ್ಷೇತ್ರದಲ್ಲಿ ಸಿಗುವ ವಿವಿಧ ಬಿರುದುಗಳು, ಎಸ್‍ಎಸ್‍ಎಫ್, ಎಸ್‍ಕೆ ಎಸ್‍ಎಸ್‍ಎಫ್, ವಿವಿಧ ಸಂಘಟನೆಗಳು ಇಹಲೋಕಕ್ಕೆ ಮಾತ್ರ ಸೀಮಿತ. ಪರಲೋಕದ ರಕ್ಷಣೆಗೆ ಈ ಸಂಘಟನೆ ನೆರವಿಗೆ ಬರುವುದಿಲ್ಲ ಎಂದರು. ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಮಾತು ತಪ್ಪಿದರೆ ಶಾಂತಿ ಹದಗೆಟ್ಟು ಹೋಗಬಹುದು. ಮಾತಿನಿಂದ ರಕ್ಷಣೆ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮೀನುಗಾರಿಕೆ ನಡೆಸುತ್ತಿರುವಾಗ ಬೋಟ್ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಮೊಗವೀರಪಟ್ಣ ನಿವಾಸಿ ರಾಜ್ಯ ಪ್ರಶಸ್ತಿ ಪುರಸ್ಕøತ ಜೀವರಕ್ಷಕ ಈಜುಗಾರ ಜಯಂತ ಸಾಲಿಯಾನ್(48) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಿಂಗಳ ಹಿಂದೆ ತನ್ನದೇ ಪಾಲುದಾರಿಕೆಯ ಬೋಟ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‍ನಲ್ಲಿದ್ದ ಕಂಬ ತುಂಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಉಸ್ತಾದ್ ದಿ.ವೀರಪ್ಪ ಪುತ್ರನ್ ಅವರ ಪುತ್ರರಾಗಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು. ಬ್ರದರ್ಸ್ ಸ್ಪೋರ್ಟ್ ಕ್ಲಬ್, ಶ್ರೀ ಮಾರುತಿ ವ್ಯಾಯಾಮ ಶಾಲೆಯ ಸಕ್ರೀಯರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಾದಿಯರಿಗೆ ಗುಣಾತ್ಮಾಕ ಮತ್ತು ವಿವೇಚನಾಯುಕ್ತ ಸಂಶೋಧನೆಗಳ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ಬೆಂಗಳೂರಿ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜ್ಯೂಕೇಶನ್ ಆಂಡ್ ರಿಸರ್ಚ್‍ನ ಪ್ರಾಂಶುಪಾಲೆ ಡಾ. ಜಾದವ್ ಸೊನಾಲಿ ತಾರಚಂದ್ ಅಭಿಪ್ರಾಯಪಟ್ಟರು. ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ವಿಂಶತಿ ಭವನದಲ್ಲಿ ಗುರವಾರ ಜರುಗಿದ ಸಂಶೋಧನೆಯ ಸಂಸ್ಕøತಿ ಹಾಗೂ ಆರೋಗ್ಯದ ಮಾಹಿತಿ ಮತ್ತು ಸಾಕ್ಷಿ ಪ್ರತಿಕ್ರಿಯೆ ಕುರಿತು ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ದಾದಿಯರು ವೈದ್ಯಶಾಸ್ತ್ರದ ಎಲ್ಲಾ ವಿಭಾಗಗಳ ಪರಿಣತಿಯನ್ನು ಹೊಂದಿರುತ್ತಾರೆ. ಆದುದರಿಂದಾಗಿ ತಮ್ಮ ಸ್ವಂತ ವೃತ್ತಿಯ ಜ್ಞಾನದಿಂದ ಹೊರಬಾಗುತ್ತಿದ್ದಾರೆ. ರೋಗಿಗಳ ಶುಶ್ರೂಷೆಯೇ ತಮ್ಮ ಕರ್ತವ್ಯದ ಉದ್ದೇಶವಾಗಿರುವುದರಿಂದ ಅದರ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುವುದರ ಅಗತ್ಯವಿದೆ. ದಾದಿಯರು ಅನ್ವೇಷಕರಲ್ಲ ಆದರೆ ಸಂಶೋಧನೆಯಲ್ಲಿ ಪ್ರವರ್ತಕರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಎ.ಬಿ ಶೆಟ್ಟಿ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಸ್.ಕೃಷ್ಣನಾಯಕ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಮತಯಾಚನೆ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ ಬೆಲ್ಲ ಮತ್ತು ನೀರು ನೀಡುವ ಜನರು ಅದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಕಲ್ಲು ಮತ್ತು ಇಡಿಸೂಡಿ ಹಿಡಿದು ಓಡಿಸುತ್ತಿದ್ದಾರೆ. ಅದಕ್ಕಾಗಿ ಅವರು ರೋಡ್ ಷೋಗಳನ್ನೇ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಅವರು ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ಸಂಜೆ ಜರಗಿದ ಸೋಮೇಶ್ವರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿದರು. ಕಳೆದ 10 ದಿನಗಳಿಂದ ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಮತದಾರ ನೀಡಿದ್ದಾನೆ. ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರ ಮಾಡಿರುವ ಆಶೀರ್ವಾದ ಜಿಲ್ಲೆಯ ಮತದಾರ ಮಾಡಲಿದ್ದಾನೆ. ನಾಲ್ಕು ಕ್ಷೇತ್ರಗಳಲ್ಲಿ ಸಚಿವ ಖಾದರ್ ವಿರುದ್ಧ ಅಲ್ಪಸಂಖ್ಯಾತರು ಕೈಜೋಡಿಸಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ಜಿಲ್ಲಾ ಪಂಚಾಯಿತಿ ಬಿಜೆಪಿ ಆಡಳಿತದಲ್ಲಿರುವ ಮೂಲಕ ನಿರ್ಮಲ ಪ್ರಶಸ್ತಿ ಪಡೆದುಕೊಂಡು ದೇಶದಲ್ಲೇ ಹೆಸರನ್ನು ಗಳಿಸಿ ಕಳಂಕ ರಹಿತವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಅಲ್ಪಸಂಖ್ಯಾತರಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಟೂರಿಸ್ಟ್ ವಾಹನ ಅಪಘಾತಕ್ಕೀಡಾಗಿ ವೃದ್ಧೆಯೊಬ್ಬರು ಮಗಳ ಎದುರಲ್ಲೇ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೊಲ್ಯ ಸಾರಸ್ವತಿಕುಮೇರು ನಿವಾಸಿ ದಿ. ಮೋಹನ್ ಪೂಜಾರಿ ಎಂಬವರ ಪತ್ನಿ ನಾಗಮ್ಮ (70) ಮೃತರು. ಒಂಭತ್ತುಕೆರೆಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗಮ್ಮ ಮಗಳನ್ನು ಕಾಸರಗೋಡು ಕಡೆಗೆ ಬಿಡಲೆಂದು ಕೊಲ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟುವ ಸಂದರ್ಭ ಕೇರಳ ಕಡೆಯಿಂದ ಬರುತ್ತಿದ್ದ ಟೂರಿಸ್ಟ್ ವಾಹನ ಢಿಕ್ಕಿ ಹೊಡೆದು, ಅವರ ಮೇಲೆಯೇ ಚಲಿಸಿತ್ತು. ಪರಿಣಾಮ ನಾಗಮ್ಮ ಅವರ ದೇಹ ಛಿದ್ರಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗಮ್ಮ ಅವರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಉಳ್ಳಾಲದ ಸಮ್ಮರ್ ಸ್ಯಾಂಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಸೀಮಂತ ಕಾರ್ಯಕ್ರಮಕ್ಕೆ ರಜೆಯನ್ನು ಪಡೆದಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ದಾಟುವಾಗ ನಾಗಮ್ಮ ಅವರ ಮಗಳ ಕೈಯನ್ನೇ ಹಿಡಿದು ದಾಟುತ್ತಿದ್ದರು. ಆದರೆ ಅಪಘಾತವೂ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಮುನ್ನೂರು ತಾಲೂಕು ಪಂಚಾಯಿತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಪಿಎಂ ಅಭ್ಯರ್ಥಿಯಲ್ಲೇ ತಿಳಿಯದೆ ಮತಯಾಚಿಸಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಬಳಿಕ ತಬ್ಬಿಬಾದ ಪ್ರಸಂಗ ಕುತ್ತಾರು ಪದವಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಸೋಮೇಶ್ವರ ಹಾಗೂ ಕೊಣಾಜೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ಅದಕ್ಕೆ ಮೆರುಗು ನೀಡಿ ಮತಯಾಚಿಸುವ ಸಲುವಾಗಿ ಪೂಜಾರಿ ಕುತ್ತಾರು ಜಂಕ್ಷನ್ ಹಾಗೂ ಬೆಳ್ಮ ತಾ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುವ ಸಂದರ್ಭ ಅದೇ ಪ್ರದೇಶದಲ್ಲಿ ಸಿಪಿಎಂ ಅಭ್ಯರ್ಥಿ ಹಾಗೂ ಹಾಲಿ ಮುನ್ನೂರು ಪಂಚಾಯಿತಿ ಸದಸ್ಯೆ ಶಶಿಕಲಾ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಪೂಜಾರಿ ಅವರು ಎದುರಾದಾಗ ಶಶಿಕಲಾ ಅವರ ಕೈಗೂ ಭಿತ್ತಿಪತ್ರವನ್ನು ನೀಡಿ ` ಬಡವರ ಪಾಲಿನ ಪಕ್ಷ ಕಾಂಗ್ರೆಸ್, ಅದನ್ನು ಗೆಲ್ಲಿಸಿದರೆ ಮಾತ್ರ ನೀವು ಶಾಂತಿಯಿಂದ ಬದುಕಲು ಸಾಧ್ಯ. ಹಾಗೆ ಮಾತನ್ನು ಮುಂದುವರಿಸುತ್ತಿದ್ದಂತೆ ಶಶಿಕಲಾ ಅವರು ಅಭ್ಯರ್ಥಿ ಎಂದು ಹೇಳಲು ಮುಂದಾಗುವಾಗ `ಒಮ್ಮೆ ನಿಲ್ಲಿ’ ಎಂದು ಮಾತನ್ನು ನಿಲ್ಲಿಸುತ್ತಿದ್ದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು :ಜಿಲ್ಲೆಯ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯವರು ನಡೆಸಿರುವ ಅಭಿವೃದ್ಧಿ ಹೀನ ಕೆಲಸಗಳಿಂದ , ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಭೇರಿ ಬಾರಿಸಲಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಧುರೀಣ ಹಾಗೂ ಮಾಜಿ ಕೇಂದ್ರ ಸಚಿವ.ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ. ಸೋಮೇಶ್ವರ ಹಾಗೂ ಕೊಣಾಜೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ಅದಕ್ಕೆ ಮೆರುಗು ನೀಡಿ ಮತಯಾಚಿಸುವ ಸಲುವಾಗಿ ಪೂಜಾರಿ ಕುತ್ತಾರು ಜಂಕ್ಷನ್ ಹಾಗೂ ಬೆಳ್ಮ ತಾ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುವ ಸಂದರ್ಭ ಮಾತನಾಡಿದರು. ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪಟಾಕಿ ಬಿಡುವ ಪರಿಸ್ಥಿಯಲ್ಲಿ ಯಾವ ಪಕ್ಷದವರೂ ಇಲ್ಲ. ಬಿಜೆಪಿಗೆ ಎರಡು ಹಿಂದೆ ಇದ್ದುದೇ ಸಿಕ್ಕಿದೆ. ಕಾಂಗ್ರೆಸ್‍ಗೂ ಅದೇ ಸಿಕ್ಕಿದೆ. ದಿಕ್ಸೂಚಿ ವಾತಾವರಣ ಕಾಣಿಸುತ್ತದೆ. ವಿಧಾನಸಭೆಯಲ್ಲಿ ಅದೇ ಕಾಂಗ್ರೆಸ್‍ನ ಸಂಖ್ಯೆ ಅಷ್ಟೇ ಇದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಸರಕಾರವೇ ಬರುತ್ತದೆ. ಇದು ಸ್ಪಷ್ಟ. ಜನತಾದಳದ ಯಾವ ಅಭ್ಯರ್ಥಿಗಳು ಗೆಲುವು…
ಕೋಸ್ಟಲ್ ವುಡ್ ಸಿನೆಮಾ ರಂಗದಲ್ಲಿ ಇದೀಗ ಡಿಫರೆಂಟ್ ಕಥೆಗಳನ್ನಾಧರಿಸಿದ ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂದರ ಮೇಲೊಂದರಂತೆ ಸಾಲು ಸಾಲು ಚಿತ್ರಗಳು ಬೆಳ್ಳಿ ತೆರೆಯಮೇಲೆ ಬರುತ್ತಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ವಿಭಿನ್ನ ಕಥೆಯನ್ನಾಧರಿಸಿದ ಹೊಸ ಚಿತ್ರ. ತಮಗೆ ಆಶ್ರಯವಾದ ವಸ್ತುವನ್ನು ಉಳಿಸುವ ಸಲುವಾಗಿ, ಆಟವೊಂದರಲ್ಲಿ ಗೆದ್ದು ಹಣ ಸಂಪಾದಿಸುವುದು, ಆ ವೇಳೆ ನಡೆಯುವ ಹೋರಾಟ ಎಲ್ಲವೂ ಟೋಟಲಿ ಡಿಫರೆಂಟ್ ಆಗಿ ಮೂಡಿಬಂದಿರುವುದು ಇತ್ತೀಚೆಗೆ ತೆರೆಕಂಡ ಕುಡ್ಲಕೆಫೆ ಸಿನೆಮಾದಲ್ಲಿ ರಂಜನ್ ಶೆಟ್ಟಿ ಹಾಗೂ ಸೂರ್ಯಮೆನನ್ ನಿರ್ದೇಶನದಲ್ಲಿ ಮೂಡಿಬಂದಿರುವ ಕುಡ್ಲಕೆಫೆ ವಿನೂತನವಾದ ಕಥೆಯನ್ನು ಆಧರಿಸಿದೆ. ಕರಾವಳಿಯಾದ್ಯಂತ 13 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಶಿರೋನಾಮಕ್ಕೂ ಚಿತ್ರದ ಕಥೆಗೆ ಏನು ಸಂಬಂಧ ಅನ್ನೋರು ಈ ಚಿತ್ರವನ್ನು ಒಮ್ಮೆ ನೋಡಲೇ ಬೇಕು. ಶಾಲಾ ದಿನಗಳಲ್ಲಿ ಒಂದಾಗಿ ಇರುತ್ತಿದ್ದ ಮೂವರು ಗೆಳೆಯರು. ತಮ್ಮ ಶಾಲಾ ದಿನಗಳಲ್ಲಿ ಸಮಯ ಕಳೆಯುತ್ತಿದ್ದ ನೆಚ್ಚಿನ ಅಡ್ಡ ಇನ್ನೇನು ಬೇರೆಯವರ ಪಾಲಾಗುತ್ತದೆ ಅನ್ನೋ ಸಂದರ್ಭದಲ್ಲಿ ಅದನ್ನು ಉಳಿಸಿಕೊಳ್ಳಲು ಸ್ನೇಹಿತರೆಲ್ಲ ಲಕ್ಷಾಂತರ ಹಣ ಒಟ್ಟುಗೂಡಿಸಲು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಳೆದ ಒಂದು ದಶಕಗಳಿಂದ ನಾದುರಸ್ತಿಯಲ್ಲಿರುವ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ನಾಗರಿಕರ ಬೇಡಿಕೆಯನ್ನು ಜನಪ್ರತಿನಿದಿಗಳು, ಸಚಿವರು ಕಡೆಗಣಿಸುತ್ತಿದ್ದು, ಇದರಿಂದ ಆಕ್ರೋಶಗೊಂಡ ನಾಗರಿಕರು ಅಡ್ಕರೆ ಪಡ್ಪು ನಾಗರಿಕ ಹಿತರಕ್ಷಣಾ ಸಮಿತಿಯ ಆಶ್ರಯದಲ್ಲಿ ಸೋಮವಾರ ರಾತ್ರಿಯೇ ಪ್ರತಿಭಟನೆ ನಡೆಸಿ ಚುನಾವಣಾ ಬಹಿಷ್ಕಾರ ಮಾಡಲು ನಿರ್ಧರಿಸಿದ ಘಟನೆ ದೇರಳಕಟ್ಟೆ ಸಮೀಪ ಅಡ್ಕರೆಪಡ್ಪುವಿನಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಕೊಣಾಜೆ ಗ್ರಾ.ಪಂ. ಮಾಜಿ ಸದಸ್ಯ ಉಸ್ಮಾನ್ ಅಡ್ಕರೆರವರು,ದೇರಳಕಟ್ಟೆಯಿಂದ ಬದ್ಯಾರ್, ಪ್ಯೊದೇಲ್, ಪೆಲತ್ತಡಿ, ಅಡ್ಕರೆ ಪಡ್ಪು ಮೂಲಕ ಕೊಣಾಜೆ ಕೊಣಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಒಂದು ದಶಕಗಳಿಂದ ಹದಗೆಟ್ಟು ಹೋಗಿದ್ದು, ಇದನ್ನು ದುರಸ್ತಿ ಮಾಡಲು ಸಂಬಂಧಪಟ್ಟ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಕೇವಲ ಭರವಸೆಗಳ ಮಾತುಗಳ ಮೂಲಕ ಇಲ್ಲಿನ ಜನರನ್ನು ವಂಚಿಸುವ ಕಾರ್ಯವನ್ನು ಇಲ್ಲಿನ ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳ ಪಡುವ ಅಡ್ಕರೆ ಪಡ್ಪು ಎಂಬ ಈ ಪ್ರದೇಶದಲ್ಲಿ ಶಾಲಾ ಕಾಲೇಜು, ಧಾರ್ಮಿಕ ಕೇಂದ್ರಗಳಿದ್ದು,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ವಿದ್ಯಾರ್ಥಿಗಳಿಗೆ ಜಾತಿಯಿಲ್ಲ, ಸಮುದಾಯವೇ ಜಾತಿ. ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಜಾತೀ ರಹಿತ, ವರ್ಗ ರಹಿತವಾಗಿ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅಗತ್ಯ ಇದೆ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರಘು ಹೇಳಿದ್ದಾರೆ. ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅಸಹಜ ಸಾವಿನ ಕುರಿತು ಉನ್ನತಮಟ್ಟದ ತನಿಖೆ ಹಾಗೂ ಹತ್ಯೆಗೆ ಕಾರಣರಾದವರನ್ನು ಬಂಧಿಸಲು ಒತ್ತಾಯಿಸಿ ಮತೀಯವಾದ ಅಳಿಯಲಿ, ಕ್ಯಾಂಪಸ್ ಡೆಮಾಕ್ರಸಿ ಉಳಿಯಲಿ ಎಂಬ ಧ್ಯೇಯ ವಾಕ್ಯದೊಂದಿಗೆ ರೋಹಿತ್ ವೇಮುಲ ಪರ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿಯ ವಿದ್ಯಾರ್ಥಿ, ಯುವಜನ, ಅಧ್ಯಾಪಕ ಮತ್ತು ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ರಾಜ್ಯವ್ಯಾಪಿ ವಿಶ್ವವಿದ್ಯಾಲಯ ಬಂದ್‍ನ ಅಂಗವಾಗಿ ಕೊಣಾಜೆ ವಿಶ್ವವಿದ್ಯಾಲಯದ ಮುಖ್ಯದ್ವಾರದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೇಲ್ಜಾತಿಗಳ ವಿದ್ಯಾರ್ಥಿಗಳಿಗೂ ಸಮಸ್ಯೆಗಳಾದಾಗ ಎಲ್ಲಾ ಜಾತಿಯವರು ವಿದ್ಯಾರ್ಥಿಗಳು ಸೇರಿ ಪ್ರತಿಭಟಿಸಬೇಕಾಗಿದೆ. ಈ ನಲೆಯಲ್ಲಿ ವಿಶ್ವವಿದ್ಯಾನಿಲಯ ಎಂಬ ಪರಿಕಲ್ಪನೆಯನ್ನು ಕಲ್ಪಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ವೇಮುಲ ಅವರ ಸಾವಿನ ಬಗೆಗಿನ…

