ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಚಾಲಕನ ಅತೀ ವೇಗದ ಅಜಾಗರೂಕತೆಯ ಚಾಲನೆಯಿಂದ ಆಟೋರಿಕ್ಷಾ ಪಲ್ಟಿ ಹೊಡೆದು ಒಂದೇ ಕುಟುಂಬದ ಆರು ಮಂದಿ ಆಸ್ಪತ್ರೆಗೆ ಸೇರಿದ ಘಟನೆ ಕುಂಪಲದಲ್ಲಿ ನಡೆದಿದೆ.
ಕುಂಪಲದ ಸುರಕ್ಷಾ ನಗರದ ಸಂಭಂಧಿಯ ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಬಸ್ಸಿಗಾಗಿ ಕಾಯುತ್ತಿದ್ದ ಆರು ಮಂದಿ ಸಂಭಂಧಿಗಳನ್ನು ರಿಕ್ಷಾ ಚಾಲಕನು ಕುಂಪಲ ಬಾಲಕೃಷ್ಣ ಮಂದಿರದ ಬಳಿ ಹತ್ತಿಸಿಕೊಂಡು ಕುಂಪಲ ಸರಕಾರಿ ಶಾಲೆ ಕಡೆಗೆ ಇಳಿಜಾರು ರಸ್ತೆಯಲ್ಲಿ ಅತೀ ವೇಗದಿಂದ ಚಲಾಯಿಸಿ ಕೊಂಡು ಬಂದು ತಿರುವಿನಲ್ಲಿ ಏಕಾಏಕಿ ತಿರುಗಿಸಿದಾಗ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ.ಪರಿಣಾಮ ರಿಕ್ಷಾದಲ್ಲಿದ್ದ ಮಾಡೂರು ನಿವಾಸಿಗಳಾದ ನಿಶಿತ್(16)ತಂದೆ ವಿಶ್ವನಾಥ್ (42) ಬಲ್ಲಾಳ್ ಭಾಗ್ ನಿವಾಸಿಗಳಾದ ಭಾಸ್ಕರ್ (45) ಪತ್ನಿ ವನಿತಾ (38) ಮಗಳು ವಿನಿಶಾ (16) ಮತ್ತು ಶಕ್ತಿನಗರದ ಹಿತೇಶ್ (14) ಗಾಯಗೊಂಡು ನರಳಾಡುತ್ತಿದ್ದರೆ,ರಿಕ್ಷಾ ಚಾಲಕ ಪರಾರಿಯಾಗಿದ್ದು ,ಸ್ಥಳೀಯರು ರಿಕ್ಷಾವನ್ನು ಮೇಲಕ್ಕೆತ್ತಿ ಗಾಯಾಲುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಗಾಯಗೊಂಡವರಲ್ಲಿ ನಿಶಿತ್ (16)ನ ಎಡಗಾಲು ಮುರಿತಕ್ಕೊಳಗಾಗಿ ಶಸ್ತ್ರಕ್ರಿಯೆ ನಡೆಸಲಾಗಿದೆ.ನಿಶಿತ್ ಮಂಗಳೂರಿನ ಕೆನರಾ ಕಾಲೇಜಿನ ಮಂಗಳೂರಿನ ಕೆನರಾ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ.
ಉಳ್ಳಾಲ ಠಾಣಾ ಪೋಲೀಸರು ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.




