Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಪಟ್ಟೋರಿ(ರಿ) ಕೊಣಾಜೆ ಇದರ ವಾರ್ಷಿಕ ಮಹಾಸಭೆಯು ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2016-17ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಗಂಗಾಧರ ಎಂ. ಪಟ್ಟೋರಿ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಮೋಹನ ಕಾಟುಕೋಡಿ ಅವರು ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕೊಣಾಜೆ, ರಘುರಾಮ ಕಾಜವ ಪಟ್ಟೋರಿ, ಗೌರವ ಸಲಹೆಗಾರರಾಗಿ ಬಂಟು ಕೆ, ಕರುಣಾಕರ ಕಾನ, ಶ್ರೀನಿವಾಸ ಕಾಜವ, ದಿವಾಕರ ಭಂಡಾರಿ, ರಾಮಕೃಷ್ಣ ಪಟ್ಟೋರಿ, ಉಪಾಧ್ಯಕ್ಷರಾಗಿ ಸದಾಶಿವ ಪಟ್ಟೋರಿ, ಹರೀಶ್ ನಡುಪದವು, ಜೊತೆಕಾರ್ಯದರ್ಶಿಗಳಾಗಿ ರಾಕೇಶ್ ಪಟ್ಟೋರಿ, ಯತೀನ್ ಮದಕ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಕಲಾಯಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಪಟ್ಟೋರಿ, ನವೀನ್ ಪಟ್ಟೋರಿ, ಲೆಕ್ಕ ಪರಿಶೋಧಕರಾಗಿ ಬಂಟು ಕೆ.ಕಾಟುಕೋಡಿ, ಮಾಧ್ಯಮ ಸಲಹೆಗಾರರಾಗಿ ಸತೀಶ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಮೋಹನ್ ಶಿರ್ಲಾಲ್ ಆಯ್ಕೆಯಾದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಇಸ್ಲಾಂ ಎಂದರೆ ಶಾಂತಿಯಂದರ್ಥ. ಅಶಾಂತಿಗೆ ಇಸ್ಲಾಂ ಪ್ರೋತ್ಸಾಹ ನೀಡುವುದಿಲ್ಲ. ಶಾಂತಿ ಸೌಹಾರ್ದತೆಯಿಂದ ಬದುಕು ನಮ್ಮದಾಗಬೇಕು ಎಂದು ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು. ಅವರು ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವತಿಯಿಂದ ಭಯೋತ್ಪಾದನೆ ವಿರುದ್ಧ ಜಿಹಾದ್ ಜನಾಂದೋಲನ ಕಾಲ್ನಾಡಿಗೆ ಜಾಥಾದ ಧ್ವಜ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಯೋತ್ಪಾದನೆ, ಉಗ್ರವಾದ ಇಸ್ಲಾಂ ವಿರೋಧಿ ಚಟುವಟಿಕೆಯಾಗಿದೆ. ಭಯೋತ್ಪಾದನೆಯನ್ನು ಎಲ್ಲಿಯೋ ಕಲಿಸಿಕೊಡಲಾಗುವುದಿಲ್ಲ. ಆದರೆ ನಿರ್ದಿಷ್ಟ ಸಂಘಟನೆಗಳು ಮುಸ್ಲಿಮರನ್ನು ಭಯೋತ್ಪಾದಕರ ದೃಷ್ಟಿಯಲ್ಲಿ ನೊಡುತ್ತಿರುವುದು ಖೇದಕೆ ಎಂದರು. ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂದೇಶ ಭಾಷಣ ಮಾಡಿದರು. ಮಾಜಿ. ತಾ.ಪಂ ಸದಸ್ಯ ಮುಹಮ್ಮದ್ ಮುಸ್ತಫ ಮಲಾರ್, ಎಸ್ಸೆಸ್ಸೆಫ್ ಕೊಣಜೆ ಸೆಕ್ಟರ್ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮದನಿ, ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಬಿ. ಖಾಲಿದ್, ಎಸ್.ಎಂ.ಎ ದೇರಳಕಟ್ಟೆ ಶಾಖಾಧ್ಯಕ್ಷ ಅಬ್ದುರ್ರಝಾಕ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಕ್ಕಳ ದೇಹ ಬೆಳವಣಿಗೆಯಾಗಬೇಕು ಎಂಬ ಆಸೆ ಎಲ್ಲಾ ತಾಯಂದಿರದ್ದು ಅದರೆ ಬೆಳವಣಿಗೆ ಜಾಸ್ತಿಯಾದರೆ ಯಾವ ಯಾವ ರೋಗಗಳು ಎದುರಾಗಬಹುದು ಎನ್ನುವುದನ್ನು ಯಾರೂ ಕೂಡಾ ಚಿಂತಿಸುವುದಿಲ್ಲ. ನಮ್ಮ ಊರಿನ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ನಡೆಸಿದರೆ ರೋಗ ಬರುವುದರ ಬಗ್ಗೆ ಮತ್ತಾವುದರ ಮುಂಜಾಗ್ರತೆಯ ಕುರಿತು ಮಾಹಿತಿ ನೀಡಿ, ರೋಗಿಗಳಿಗೆ ಔಷದಿ ವಿತರಣೆ ಮಾಡುವ ಮೂಲಕ ರೋಗಗಳನ್ನು ತಡೆಯಲು ಸಾಧ್ಯ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆ 21ನೇ ವಾರ್ಷಿಕ ಪ್ರಯುಕ್ತ 21 ಕಾರ್ಯಕ್ರಮಗಳ ಪೈಕಿ 15ನೇ ಕಾರ್ಯಕ್ರಮವಾದ ಸಾರ್ವಜನಿಕ ಉಚಿತ ಆರೋಗ್ಯ ಶಿಬಿರವು ದೇರಳಕಟ್ಟೆ ಕಣಚೂರು ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಣಚೂರು ಅಸ್ಪತ್ರೆ ಮತ್ತು ಸಂಶೋಧನಾ ಕೆಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ ಈ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ರೋಗಿಗಳಿಗೆ ಫೆಬ್ರವರಿ 21ರಿಂದ ಮಾರ್ಚ್ 31ರ ತನಕ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇರಾ:ಉಳ್ಳಾಲ ಸಾಹಿತ್ಯ ಪ್ರಕಾರದಲ್ಲಿ ಚುಟುಕು ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. ಜೀವನ ಉಲ್ಲಾಸ ದೊರೆಯುವುದಕ್ಕೆ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಕಾಣಿಕೆ ನೀಡಿದೆ. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ಮತ್ತು ಇಜಂಗಳು ಕಂಡುಬರುತ್ತಿದ್ದು ಅದು ಸಾಹಿತ್ಯದ ಏಳಿಗೆಯ ದೃಷ್ಟಿಯಿಂದ ಶೋಭೆ ತರುವಂತದ್ದಲ್ಲ ಎಂದು ಮಂಗಳೂರಿನ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಇರಾ ಶ್ರೀ ಸೋಮನಾಥೇಶ್ವರ ಕಲಾಮಂಟಪದ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಸಾಹಿತಿಗಳ ಚುಟುಕು ಕವಿಗಳ ಸಮ್ಮಿಲನ ಉದ್ಘಾಟಿಸಿ ಅವರು ಮಾತನಾಡಿದರು. ಸಾಮರಸ್ಯದ ಬಾಳ್ವೆಗೆ ಸಾಹಿತ್ಯ ಮತ್ತು ಸಾಂಸ್ಕ ೃತಿಕ ಪ್ರಕಾರಗಳಿಂದಾಗಿ ಹೊಸ ವೇದಿಕೆ ದೊರೆಯುತ್ತದೆ. ಆ ದಿಸೆಯಲ್ಲಿ ಚುಟುಕು ಸಾಹಿತ್ಯ ಸಾಮರಸ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸುತ್ತದೆ ಎಂದು ಹೇಳಿದರು. ಹಿರಿಯ ಸಾಹಿತಿ ಏರ್ಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಚುನಾವಣೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ನಿನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ. ಕೈರಂಗಳ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಗೋಪಾಲ ಬಂಗೇರ ಹಾಗೂ ಶ್ರೀಧರ್ ಅಡಪ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ವಿವರ: ಕೈರಂಗಳ ಭಾಗದಲ್ಲಿ ಚುನಾವಣೆ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಇಂದು ಗಲಾಟೆ ನಡೆದಿದೆ. ಮುಡಿಪು ಹೊಟೇಲೊಂದರಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭ , ಹೊಟೇಲಿನ ಮೇಲಿರುವ ಬಿಜೆಪಿ ಕಚೇರಿಯಲ್ಲಿದ್ದ ಸುಮಾರು 50 ಕ್ಕೂ ಅಧಿಕ ಕಾರ್ಯಕರ್ತರು ಕುರ್ಚಿ ಹಾಗೂ ಮರದ ಸೋಂಟೆಗಳಿಂದ ಕಾಂಗ್ರೆಸ್ ಪರ ಕೆಲಸ ಮಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆಂದು ಶ್ರೀಧರ್ ಹಾಗೂ ಗೋಪಾಲ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಚೇರಿಯಲ್ಲಿದ್ದ ಸಂದರ್ಭ ಪೂರ್ವ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಗೋಪಾಲ ಬಂಗೇರ, ಶ್ರೀಧರ ಅಡಪ, ನಾಗೇಶ್,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 136 ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಶನಿವಾರ ಬೆಳಗ್ಗಿನಿಂದ ಶಾಂತಿಯುತವಾಗಿ ನಡೆದಿದ್ದು, ಕೊಣಾಜೆಯ ಅಡ್ಕರೆ ಮತಗಟ್ಟೆ ಹೊರತುಪಡಿಸಿ ಉಳಿದ ಮತಗಟ್ಟೆಗಳಲ್ಲಿ ಸರಾಸರಿ 200 ರಿಂದ 220 ಮತದಾರರು ಮಧ್ಯಾಹ್ನದ ವೇಳೆಗೆ ತಮ್ಮ ಹಕ್ಕು ಚಲಾಯಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ಜಾರದಗುಡ್ಡೆಯ ಮತಗಟ್ಟೆ ಸಂಖ್ಯೆ 280 ರಲ್ಲಿ ಮತ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಷೇತ್ರದ ಉದ್ದಗಲಕ್ಕೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಶಾಂತಿಯ ನೆಮ್ಮದಿ ಸ್ವಾಭಿಮಾನದ ಜೀವನ ನಡೆಸಲು ಜನ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯಾಡಳಿತ ಊರಿಗೆ ಯೋಜನೆಗಳನ್ನು ತರುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಹಕ್ಕನ್ನು ಚಲಾಯಿಸುವುದರೊಂದಿಗೆ ಊರಿನ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು ಎಂದರು. ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ನೀರುಮಾರ್ಗದಲ್ಲಿ 11, ಕುರ್ನಾಡು 26, ಕೊಣಾಜೆ 34, ಪುದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕಿನ್ಯ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ 46ನೆಯ ವಾರ್ಷಿಕೋತ್ಸವ ಕಿನ್ಯ ದುರ್ಗಾಪುರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಪನ್ ಡಿ. ಮಾಧವ ಶೆಟ್ಟಿ ಮಾತನಾಡಿ ಯಕ್ಷ ಅಂದರೆ ಪೂಜೆ. ಗಾನವೆಂದರೆ ಕುಣಿತ. ಅಂತಹ ಅದ್ಭುತ ಕಲೆಯನ್ನು ಪೂಜಿಸುವುದು ಯಕ್ಷಗಾನದ ತತ್ವ ಎಂದರು. ಕಾರ್ಯಕ್ರಮದಲ್ಲಿ ಪಡ್ರೆ ಚಂದ್ರು, ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಈಶ್ವರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ತೊಕ್ಕೊಟ್ಟು ಭಗವತೀ ಬ್ಯಾಂಕಿನ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಎಸ್. ರಾಮ್‍ದಾಸ್, ಕಿನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಪೂಜಾರಿ ಉಪಸ್ಥಿತರಿದ್ದರು. ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಮಹಾಬಲ ಪೂಂಜ, ಗೌರವಾಧ್ಯಕ್ಷ ರಾಮಯ್ಯಕಿಲ್ಲೆ ಉಪಸ್ಥಿತರಿದ್ದರು. ಯುವಕ ಮಂಡಲದ ಸಂಚಾಲಕ ಬಾಬು ಶ್ರೀ ಶಾಸ್ತಾ ಕಿನ್ಯ ಸ್ವಾಗತಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಹಿರಿಯ ವಿದ್ವಾಂಸ ಕೃಷ್ಣಾಪುರದಲ್ಲಿ ಹದಿನೈದು ವರ್ಷಗಳ ಕಾಲ ಮತ್ತು ಉಳ್ಳಾಲ ಪ್ರದೇಶದ ಕೆಲ ಮಸೀದಿಗಳಲ್ಲಿ ಖತೀಬರಾಗಿ ಕಾರ್ಯನಿರ್ವಸಿದ ಇಬ್ರಾಹೀಂ ಮದನಿ (62) ಗುರುವಾರ ಮಧ್ಯಾಹ್ನ ಮುಕಚ್ಚೇರಿಯ ಸ್ವಗೃಹದಲ್ಲಿ ನಿಧನರಾದರು. ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ ಕೆ. ರಾಮಚಂದ್ರ ತೊಕ್ಕೊಟ್ಟು ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳಾದ ರಾಜೀವ ಮೆಂಡನ್, ವಿಠಲ ಶ್ರೀಯಾನ್, ಸುಂದರ ಅಮೀನ್, ಮೋನಪ್ಪ ಶ್ರೀಯಾನ್, ಜಯಾನಂದ ಅಂಚನ್, ದೇವದಾಸ್ ಶ್ರೀಯಾನ್ ಇವರ ಉಪಸ್ಥಿತಿಯಲ್ಲಿ 2016ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ವಿಶ್ವನಾಥ ಮೆಂಡನ್, ಕಾರ್ಯದರ್ಶಿಯಾಗಿ ಸತೀಶ್ ಭಟ್ನಗರ, ಕೋಶಾಧಿಕಾರಿಯಾಗಿ ರೋಹಿದಾಸ್ ಭಟ್ನಗರ, ಜೊತೆ ಕಾರ್ಯದರ್ಶಿಯಾಗಿ ಧರ್ಮರಾಜ, ದಿನೇಶ್ ನಾೈಕ್ ತೊಕ್ಕೊಟ್ಟು, ಲೆಕ್ಕಪರಿಶೋಧಕರಾಗಿ ಶಿವರಾಮ ಟಿ., ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಕುಂಪಲ, ಜೊತೆ ಕ್ರೀಡಾ ಕಾರ್ಯರ್ಶಿಯಾಗಿ ಕಿಶೋರ್ ಗಾಂಧಿನಗರ, ಪ್ರವೀಣ್ ಕೊಲ್ಯ ಸದ್ಯರಾಗಿ ರಮೇಶ್ ಮೆಂಡನ್, ನಾಗೇಶ್ ಶೆಟ್ಟಿ, ಪ್ರಕಾಶ್ ಕುಂಪಲ, ತರುಣ್ ಶೆಟ್ಟಿ ಕುಂಪಲ, ಶರತ್ ತೊಕ್ಕೊಟ್ಟು, ಪ್ರದೀಪ್ ಕಾಪಿಕಾಡ್, ಚಂದ್ರ ಮೆಂಡನ್, ನಾಗೇಶ್ ಕುಂಪಲ, ಕೃಷ್ಣಪ್ಪ ಮೆಂಡನ್ ಲೋಕೇಶ್ ಕುತ್ತಾರ್ ಇವರು ಆಯ್ಕೆಯಾದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಉಪ್ಪಿನಂಗಡಿ ನೀರಕಟ್ಟೆಯಲ್ಲಿ ಪತ್ತೆಯಾದ ಅನಾಥ ಕಾರು ಮತ್ತು ಅದರೊಳಗೆ ರಕ್ತದ ಕಲೆಗಳು ಕಂಡ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಟೂರಿಸ್ಟ್ ಕಾರು ಚಾಲಕ ಹಾಗೂ ಮಾಲೀಕ ವಿ.ಎ.ಇಸ್ಮಾಯಿಲ್ ಕುರಿತು ಕೊಣಾಜೆ ಠಾಣೆಯಲ್ಲಿ ಅವರ ಪತ್ನಿ ನೆಬೀಸಾ ಅವರು ನಾಪತ್ತೆ ದೂರು ದಾಖಲಿಸಿದ್ದಾರೆ. ಘಟನೆ ವಿವರ: ಫೆ.16 ರಂದು ಪಾವೂರು ಇನೋಳಿಯ ದೆಡಿಂಜೆ ಮನೆಯಿಂದ ಇಸ್ಮಾಯಿಲ್ ಅವರು ಬೆಳಿಗ್ಗೆ 8.00 ಗಂಟೆಗೆ ಕೆ.ಎ.20.ಸಿ 3198 ಟೂರಿಸ್ಟ್ ಕಾರಿನಲ್ಲಿ ಮಂಗಳೂರು ಕಡೆಗೆ ಹೊರಟಿದ್ದರು. ಮತ್ತೆ 10.00 ಗಂಟೆ ಸುಮಾರಿಗೆ ಪತ್ನಿ ನೆಬೀಸಾ ಅವರಿಗೆ ಕರೆ ಮಾಡಿ ತಕ್ಷಣ ರೂ. 75,000 ಹಣದೊಂದಿಗೆ ಅಸೈಗೋಳಿಗೆ ಬರಲು ತಿಳಿಸಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಇಸ್ಮಾಯಿಲ್ ಅವರು ಕರಾವಳಿ ಸೊಸೈಟಿಯಿಂದ ರೂ.1,75,000 ಹಣವನ್ನು ಪಡೆದು ಬಳಿಕ ಪತ್ನಿ ನೆಬೀಸಾ ಅವರಿಂದ ರೂ.75,000 ಹಣ ಸಹಿತ ಒಟ್ಟು 2,50,000 ನಗದಿನೊಂದಿಗೆ ಫರಂಗಿಪೇಟೆಗೆ ಹೋಗಲು ಇದೆ ಎಂದು ತಿಳಿಸಿ ಹೊರಟಿದ್ದರು. ಮತ್ತೆ ಸಂಜೆ 4.00 ಗಂಟೆಗೆ…

Read More